18
ಬಾಬೆಲಿನ ಪತನವು
ಇದಾದ ನಂತರ ಮಹಾ ಅಧಿಕಾರವುಳ್ಳ * 18:1 ಪ್ರಕ 17 1, 7:ಮತ್ತೊಬ್ಬ ದೇವದೂತನು ಪರಲೋಕದಿಂದ ಇಳಿದುಬರುವುದನ್ನು ಕಂಡೆನು. 18:1 ಯೆಹೆ. 43:2:ಅವನ ತೇಜಸ್ಸಿನ ಪ್ರಭಾವದಿಂದ ಭೂಮಿಯು ಪ್ರಕಾಶವಾಯಿತು. ಅವನು ಬಲವಾದ ಧ್ವನಿಯಿಂದ ಕೂಗುತ್ತಾ “ಬಿದ್ದಳು, ಬಿದ್ದಳು, 18:2 ಯೆಶಾ 21:9; ಪ್ರಕ 14:8:ಬಾಬೆಲ್ ಎಂಬ ಮಹಾನಗರಿಯು ಬಿದ್ದಳು! ಅವಳು § 18:2 ಯೆರೆ 50:39; 51:37; ಚೆಫ. 2:14,15:ದೆವ್ವಗಳ ವಾಸಸ್ಥಾನವೂ, ಎಲ್ಲಾ ದುರಾತ್ಮಗಳಿಗೂ, * 18:2 ಯೆಶಾ 14:23:ಅಶುದ್ಧವಾದ ಹಾಗೂ ಅಸಹ್ಯವಾದ ಸಕಲ ವಿಧವಾದ ಪಕ್ಷಿಗಳಿಗೂ ಗೂಡೂ ಆದಳು. ಎಲ್ಲಾ ದೇಶಗಳವರೂ 18:3 ಪ್ರಕ 14:8:ಅವಳ ಜಾರತ್ವವೆಂಬ ಕ್ರೌರ್ಯದ ದ್ರಾಕ್ಷಾರಸವನ್ನು ಕುಡಿದರು. 18:3 ಅಥವಾ, ಅವಳ ದುಷ್ಕರ್ಮವನ್ನು ನೋಡಿರಿ. ಪ್ರಕ 17:2:ಅವಳೊಂದಿಗೆ ಭೂಲೋಕದ ರಾಜರು ವ್ಯಭಿಚಾರ ಮಾಡಿದರು. ಅವಳ § 18:3 ಪ್ರಕ 18:11, 15:ಭೋಗವಿಲಾಸದಿಂದ ಭೂಲೋಕದ ವರ್ತಕರು ಐಶ್ವರ್ಯವಂತರಾದರು” ಎಂದು ಹೇಳಿದನು.
ಪರಲೋಕದಿಂದ ಹೇಳುವ ಮತ್ತೊಂದು ಧ್ವನಿಯನ್ನು ಕೇಳಿದೆನು,
“ನನ್ನ ಜನರೇ, * 18:4 ಯೆಶಾ 48:20; ಯೆರೆ 51:6, 45; 2 ಕೊರಿ 6:17:ಅವಳನ್ನು ಬಿಟ್ಟು ಬನ್ನಿರಿ,
ಏಕೆಂದರೆ ಅವಳ ಪಾಪಗಳಲ್ಲಿ ನೀವೂ ಪಾಲುಗಾರರಾಗಬಾರದು.
ಅವಳಿಗೆ ಆಗುವ ಉಪದ್ರವಗಳು ನಿಮ್ಮನ್ನು ಬಾಧಿಸಬಾರದು.
18:5 ಎಜ್ರ. 9:6; ಯೋನ. 1:2:ಅವಳ ಪಾಪಗಳು ಒಂದಕ್ಕೊಂದು ಸೇರಿ ಆಕಾಶದ ಎತ್ತರಕ್ಕೆ ಬೆಳೆದಿವೆ.
18:5 ಪ್ರಕ 16:19:ದೇವರು ಅವಳ ದುಷ್ಟಕೃತ್ಯಗಳನ್ನು ಜ್ಞಾಪಿಸಿಕೊಂಡಿದ್ದಾನೆ.
§ 18:6 ಕೀರ್ತ 48:20; ಯೆರೆ 51:6, 45; 2 ಕೊರಿ 6 17:ಇತರರಿಗೆ ಅವಳು ಕೊಟ್ಟಿದ್ದಕ್ಕೆ ಸರಿಯಾಗಿ ಅವಳಿಗೆ ಹಿಂದಕ್ಕೆ ಕೊಡಿರಿ.
ಅವಳ ಕೃತ್ಯಗಳಿಗೆ ಪ್ರತಿಯಾಗಿ * 18:6 ಯೆರೆ 16:18:ಅವಳಿಗೆ ಎರಡರಷ್ಟು ಕೊಡಿರಿ.
ಅವಳು ಕಲಸಿಕೊಟ್ಟ 18:6 ಪ್ರಕ 14:10; 16:19; 17:4:ಪಾತ್ರೆಯಲ್ಲಿ ಅವಳಿಗೆ ಎರಡರಷ್ಟು ಕಲಸಿ ಕೊಡಿರಿ.
18:7 ಯೆಹೆ. 28:2-8:ಅವಳು ಎಷ್ಟರ ಮಟ್ಟಿಗೆ ತನ್ನನ್ನು ಘನಪಡಿಸಿಕೊಂಡು ಸುಖಭೋಗವನ್ನು ಅನುಭವಿಸಿದಳೋ
ಅದಕ್ಕೆ ತಕ್ಕಂತೆ ನೀವು ಅವಳಿಗೆ ಯಾತನೆಯನ್ನೂ ದುಃಖವನ್ನೂ ಕೊಡಿರಿ,
ಏಕೆಂದರೆ ಅವಳು ತನ್ನ ಹೃದಯದಲ್ಲಿ,
§ 18:7 ಯೆಶಾ 47:7, 8; ಚೆಫ. 2:15:‘ನಾನು ರಾಣಿಯಾಗಿ ಕುಳಿತುಕೊಂಡಿದ್ದೇನೆ,
ನಾನು ವಿಧವೆಯಲ್ಲ,
ದುಃಖವನ್ನು ಎಂದೆಂದಿಗೂ ಕಾಣುವುದೇ ಇಲ್ಲ’ ಎಂದು ಹೇಳಿಕೊಂಡಿದ್ದಾಳೆ.
ಆದ್ದರಿಂದ ಉಪದ್ರವಗಳು ಮರಣ, ಗೋಳಾಟ ಮತ್ತು ಕ್ಷಾಮಗಳು
* 18:8 ಯೆಶಾ 47 9; ಪ್ರಕ 18:10:ಒಂದೇ ದಿನದಲ್ಲಿ ಅವಳಿಗೆ ಸಂಭವಿಸುವವು.
ಅವಳಿಗೆ ತೀರ್ಪುಕೊಡುವ 18:8 ಯೆರೆ 50. 34:ಕರ್ತನಾದ ದೇವರು ಶಕ್ತನಾಗಿರುವುದರಿಂದ
18:8 ಪ್ರಕ 17:16:ಅವಳು ಬೆಂಕಿಯಿಂದ ನಾಶವಾಗುವಳು.
9-10 § 18:9-10 ಪ್ರಕ 17:2; 18:3:ಅವಳೊಂದಿಗೆ ಜಾರತ್ವಮಾಡಿ ಭೋಗಿಗಳಾದ ಭೂರಾಜರು ಅವಳ * 18:9-10 ಪ್ರಕ 18:18; 19:3; ಆದಿ 19:28:ದಹನದಿಂದೇರುವ ಹೊಗೆಯನ್ನು ನೋಡಿ ಭಯಪಟ್ಟು ಅವಳಿಗಾಗಿ 18:9-10 ಪ್ರಕ 18:15, 17:ದೂರದಲ್ಲಿ ನಿಂತು ಅಳುತ್ತಾ 18:9-10 ಯೆರೆ 50. 46:ಗೋಳಾಡುತ್ತಾ, ‘ಅಯ್ಯೋ ಅಯ್ಯೋ § 18:9-10 ಪ್ರಕ 14:8:ಮಹಾ ನಗರವಾದ ಬಾಬೆಲ್ ಪಟ್ಟಣವೇ, ಬಲಿಷ್ಠವಾದ ಬಾಬೆಲ್ ನಗರಿಯೇ ನಿನಗೆ ವಿಧಿಸಲ್ಪಟ್ಟ ದಂಡನೆಯು * 18:9-10 ಪ್ರಕ 18:17, 19; ವ. 8:ಒಂದೇ ತಾಸಿನಲ್ಲಿ ಬಂದಿತಲ್ಲಾ’ ಎಂದು ಶೋಕಿಸುವರು.
11 “ಇದಲ್ಲದೆ 18:11 ಪ್ರಕ 18:3, 15; ಯೆಹೆ. 27:36:ಭೂಮಿಯ ವರ್ತಕರು ಅವಳಿಗಾಗಿ ದುಃಖಿಸಿ ಗೋಳಾಡುತ್ತಾ, 12 ಚಿನ್ನ, ಬೆಳ್ಳಿ, ರತ್ನ, ಮುತ್ತು, ನಯವಾದ ನಾರುಮಡಿ, ಧೂಮ್ರವರ್ಣದ ವಸ್ತ್ರ, ರೇಷ್ಮೆ, ಕಡುಗೆಂಪು ಉಡುಪು ಸಕಲ ವಿಧವಾದ ಮರಮುಟ್ಟು ಮತ್ತು ದಂತದ ಸಾಮಾನುಗಳು, ಬೆಲೆಬಾಳುವ ಮರ, ತಾಮ್ರ, ಕಬ್ಬಿಣ, ಚಂದ್ರಕಾಂತ ಶಿಲೆ. ಸುಗಂಧ ಸರಕುಗಳಾದ 13 ಲವಂಗ, ಚಕ್ಕೆ, ಧೂಪ, ರಕ್ತಬೋಳ, ಸುಗಂಧತೈಲ, ದ್ರಾಕ್ಷಾರಸ, ಎಣ್ಣೆ, ನಯವಾದ ಹಿಟ್ಟು, ಗೋದಿ, ದನ, ಕುರಿ, ಕುದುರೆ, ರಥ, ಗುಲಾಮರು, ಮನುಷ್ಯಪ್ರಾಣಗಳು ಇವೇ ಮೊದಲಾದ ನಮ್ಮ ಸರಕುಗಳನ್ನು ಕೊಂಡುಕೊಳ್ಳುವವರು ಯಾರೂ ಇಲ್ಲವಲ್ಲಾ ಎಂದು ಗೋಳಾಡುವರು. 14 ‘ನೀನು ಬಯಸಿದ ನಿನ್ನ ಫಲಗಳು ನಿನ್ನನ್ನು ಬಿಟ್ಟು ಹೋದವು. ನಿನ್ನ ಎಲ್ಲಾ ವೈಭವವು ಹಾಗೂ ಶೋಭಾಯಮಾನವಾದ ಸೊಗಸುಗಳೆಲ್ಲ ನಿನ್ನಿಂದ ನಾಶವಾದವು. ಅವು ಇನ್ನು ಮೇಲೆ ನಿನಗೆ ಸಿಕ್ಕುವುದೇ ಇಲ್ಲ.’ 15  18:15 ಪ್ರಕ 18:3, 11:ಆ ಸರಕುಗಳನ್ನು ಮಾರಿ ಅವಳಿಂದ ಐಶ್ವರ್ಯವಂತರಾದ ವರ್ತಕರು § 18:15 ವ. 10:ದೂರದಲ್ಲಿ ನಿಂತು ಅವಳ ಯಾತನೆಯ ದೆಸೆಯಿಂದ ಭಯಪಟ್ಟು ದುಃಖಿಸಿ ಗೋಳಾಡುತ್ತಾ, 16 ‘ಅಯ್ಯೋ ಅಯ್ಯೋ ನಯವಾದ ನಾರುಮಡಿಯನ್ನೂ, ಧೂಮ್ರವರ್ಣದ ವಸ್ತ್ರಗಳನ್ನೂ, ಕಡುಗೆಂಪು ಉಡುಪನ್ನೂ ಧರಿಸಿಕೊಂಡು, ಚಿನ್ನ, ರತ್ನ, ಮುತ್ತು * 18:16 ಪ್ರಕ 17:4:ಇವುಗಳಿಂದ ತನ್ನನ್ನು ಅಲಂಕರಿಸಿಕೊಂಡಿದ್ದ ಈ ಮಹಾಪಟ್ಟಣಕ್ಕೆ ಎಂಥ ದುರ್ಗತಿ ಸಂಭವಿಸಿತು.’ 17 ಅಷ್ಟು ಐಶ್ವರ್ಯವು 18:17 ಪ್ರಕ 18:10, 19:ಒಂದೇ ಗಳಿಗೆಯಲ್ಲಿ ನಾಶವಾಯಿತಲ್ಲಾ ಎಂದು ಪರಿತಪಿಸುವರು. ಇದಲ್ಲದೆ 18:17 ಯೆಹೆ. 27:28, 29:ಹಡಗುಗಳ ಯಜಮಾನರೂ, ಪಯಣಿಗರೂ, ನಾವಿಕರೂ ಸಮುದ್ರದಿಂದ ತಮ್ಮ ಜೀವನವನ್ನುಮಾಡುತ್ತಿದ್ದವರೆಲ್ಲರೂ ದೂರದಲ್ಲಿ ನಿಂತು, 18  § 18:18 ವ. 9:ಅವಳ ದಹನದ ಹೊಗೆಯನ್ನು ನೋಡಿ * 18:18 ಯೆಹೆ. 27:30, 32; ಪ್ರಕ 13:4:‘ಈ ಮಹಾ ಪಟ್ಟಣಕ್ಕೆ ಸಮಾನವಾದದ್ದು ಯಾವುದು?’ ಎಂದು ಮೊರೆಯಿಡುವರು. 19 ಅನಂತರ ಅವರು 18:19 ಯೆಹೋ. 7:6; ಯೋಬ. 2:12:ತಮ್ಮ ತಲೆಗಳ ಮೇಲೆ ಮಣ್ಣನ್ನು ಸುರಿದುಕೊಂಡು, ‘ಅಯ್ಯೋ ಅಯ್ಯೋ ಸಮುದ್ರದ ಮೇಲೆ ಹಡಗುಗಳನ್ನು ಹೊಂದಿದವರೆಲ್ಲರೂ 18:19 ಪ್ರಕ 18:3, 15:ಅವಳ ಅಮೂಲ್ಯ ದ್ರವ್ಯಗಳಿಂದಲೇ ಐಶ್ವರ್ಯವಂತರಾದರಲ್ಲಾ, § 18:19 ಪ್ರಕ 18:10, 17:ಇವಳು ಒಂದೇ ಗಳಿಗೆಯಲ್ಲಿ ಹಾಳಾದಳಲ್ಲಾ’ ” ಎಂದು ಗೋಳಾಡುತ್ತಾ ದುಃಖಿಸುವರು. 20  * 18:20 ಧರ್ಮೋ 32:43; ಯೆರೆ 51:48; ಪ್ರಕ 12:12:ಪರಲೋಕವೇ, ದೇವಜನರೇ, ಅಪೊಸ್ತಲರೇ, 18:20 ಲೂಕ 11:49, 50. ಪ್ರವಾದಿಗಳೇ ಅವಳ ನಿಮಿತ್ತ ಜಯಘೋಷಮಾಡಿರಿ. ಏಕೆಂದರೆ 18:20 ಪ್ರಕ 19:2:ಇವಳು ನಿಮಗೆ ಮಾಡಿದ ಅನ್ಯಾಯಕ್ಕೆ ಸರಿಯಾಗಿ ದೇವರು ಇವಳಿಗೆ ಪ್ರತಿದಂಡನೆಯನ್ನು ಮಾಡಿದ್ದಾನೆ.
21 ಆಗ § 18:21 ಪ್ರಕ 5:2; 10:1:ಬಲಿಷ್ಠನಾದ ಒಬ್ಬ ದೇವದೂತನು ದೊಡ್ಡ ಬೀಸುವ ಕಲ್ಲಿನಂತಿರುವ * 18:21 ಯೆರೆ 51:63, 64:ಒಂದು ಕಲ್ಲನ್ನು ತೆಗೆದುಕೊಂಡು ಸಮುದ್ರದೊಳಗೆ ಬಿಸಾಡಿ, 18:21 ವ. 10:“ಮಹಾಪಟ್ಟಣವಾದ ಬಾಬೆಲನ್ನು ಹೀಗೆ ಹಿಂಸಾಚಾರದಿಂದ ಬಿಸಾಡುವನು. ಅದು ಇನ್ನೆಂದಿಗೂ ಕಾಣಿಸುವುದಿಲ್ಲ. 22 ಬಾಬೆಲೇ ನಿನ್ನಲ್ಲಿ 18:22 ಯೆಶಾ 14:11; 24:8; ಯೆಹೆ. 26:13:ವೀಣೆಗಾರರೂ, ವಾದ್ಯಗಾರರೂ, ಕೊಳಲು ಊದುವವರೂ, ತುತ್ತೂರಿಯವರೂ ಮೊದಲಾದವರ ಧ್ವನಿಯೂ ಇನ್ನೆಂದಿಗೂ ಕೇಳಿಸುವುದಿಲ್ಲ. ಯಾವುದೇ ವಿಧವಾದ ಕಸಬುಗಾರನೂ ನಿನ್ನಲ್ಲಿ ಇನ್ನೆಂದಿಗೂ ಕಾಣ ಸಿಕ್ಕುವುದಿಲ್ಲ. § 18:22 ಪ್ರಸಂಗಿ. 12:4; ಯೆರೆ 25:10:ಬೀಸುವ ಕಲ್ಲಿನ ಶಬ್ದವು ನಿನ್ನಲ್ಲಿ ಇನ್ನೆಂದಿಗೂ ಕೇಳಿಸದು. 23 ದೀಪದ ಬೆಳಕು ನಿನ್ನಲ್ಲಿ ಇನ್ನೆಂದಿಗೂ ಪ್ರಕಾಶಿಸದು. * 18:23 ಯೆರೆ 7:34; 16:9; 33:11:ವಧೂವರರ ಸ್ವರವು ನಿನ್ನಲ್ಲಿ ಇನ್ನೆಂದಿಗೂ ಕೇಳಿಬರದು. 18:23 ಯೆಶಾ 23:8:ನಿನ್ನ ವರ್ತಕರು ಭೂಮಿಯ ಮೇಲೆ ಪ್ರಭುಗಳಾಗಿದ್ದರಲ್ಲವೇ. 18:23 ನಹೂ. 3:4:ನಿನ್ನ ಮಾಟದ ಶಕ್ತಿಯಿಂದ ಎಲ್ಲಾ ದೇಶದವರು ವಂಚಿಸಲ್ಪಟ್ಟರು.
24 § 18:24 ಪ್ರಕ 17:6; ಮತ್ತಾ 23:35, 36:ಪ್ರವಾದಿಗಳ, ದೇವಜನರ ರಕ್ತವು ಮತ್ತು ಭೂಮಿಯ ಮೇಲೆ ಕೊಲ್ಲಲ್ಪಟ್ಟವರೆಲ್ಲರ ರಕ್ತವೂ * 18:24 ಮೂಲ: ಅವಳಲ್ಲಿ. ಅವಳಲ್ಲಿಯೇ ಸಿಕ್ಕಿತಲ್ಲಾ” ಎಂದು ಹೇಳಿದನು.

*18:1 18:1 ಪ್ರಕ 17 1, 7:

18:1 18:1 ಯೆಹೆ. 43:2:

18:2 18:2 ಯೆಶಾ 21:9; ಪ್ರಕ 14:8:

§18:2 18:2 ಯೆರೆ 50:39; 51:37; ಚೆಫ. 2:14,15:

*18:2 18:2 ಯೆಶಾ 14:23:

18:3 18:3 ಪ್ರಕ 14:8:

18:3 18:3 ಅಥವಾ, ಅವಳ ದುಷ್ಕರ್ಮವನ್ನು ನೋಡಿರಿ. ಪ್ರಕ 17:2:

§18:3 18:3 ಪ್ರಕ 18:11, 15:

*18:4 18:4 ಯೆಶಾ 48:20; ಯೆರೆ 51:6, 45; 2 ಕೊರಿ 6:17:

18:5 18:5 ಎಜ್ರ. 9:6; ಯೋನ. 1:2:

18:5 18:5 ಪ್ರಕ 16:19:

§18:6 18:6 ಕೀರ್ತ 48:20; ಯೆರೆ 51:6, 45; 2 ಕೊರಿ 6 17:

*18:6 18:6 ಯೆರೆ 16:18:

18:6 18:6 ಪ್ರಕ 14:10; 16:19; 17:4:

18:7 18:7 ಯೆಹೆ. 28:2-8:

§18:7 18:7 ಯೆಶಾ 47:7, 8; ಚೆಫ. 2:15:

*18:8 18:8 ಯೆಶಾ 47 9; ಪ್ರಕ 18:10:

18:8 18:8 ಯೆರೆ 50. 34:

18:8 18:8 ಪ್ರಕ 17:16:

§18:9-10 18:9-10 ಪ್ರಕ 17:2; 18:3:

*18:9-10 18:9-10 ಪ್ರಕ 18:18; 19:3; ಆದಿ 19:28:

18:9-10 18:9-10 ಪ್ರಕ 18:15, 17:

18:9-10 18:9-10 ಯೆರೆ 50. 46:

§18:9-10 18:9-10 ಪ್ರಕ 14:8:

*18:9-10 18:9-10 ಪ್ರಕ 18:17, 19; ವ. 8:

18:11 18:11 ಪ್ರಕ 18:3, 15; ಯೆಹೆ. 27:36:

18:15 18:15 ಪ್ರಕ 18:3, 11:

§18:15 18:15 ವ. 10:

*18:16 18:16 ಪ್ರಕ 17:4:

18:17 18:17 ಪ್ರಕ 18:10, 19:

18:17 18:17 ಯೆಹೆ. 27:28, 29:

§18:18 18:18 ವ. 9:

*18:18 18:18 ಯೆಹೆ. 27:30, 32; ಪ್ರಕ 13:4:

18:19 18:19 ಯೆಹೋ. 7:6; ಯೋಬ. 2:12:

18:19 18:19 ಪ್ರಕ 18:3, 15:

§18:19 18:19 ಪ್ರಕ 18:10, 17:

*18:20 18:20 ಧರ್ಮೋ 32:43; ಯೆರೆ 51:48; ಪ್ರಕ 12:12:

18:20 18:20 ಲೂಕ 11:49, 50.

18:20 18:20 ಪ್ರಕ 19:2:

§18:21 18:21 ಪ್ರಕ 5:2; 10:1:

*18:21 18:21 ಯೆರೆ 51:63, 64:

18:21 18:21 ವ. 10:

18:22 18:22 ಯೆಶಾ 14:11; 24:8; ಯೆಹೆ. 26:13:

§18:22 18:22 ಪ್ರಸಂಗಿ. 12:4; ಯೆರೆ 25:10:

*18:23 18:23 ಯೆರೆ 7:34; 16:9; 33:11:

18:23 18:23 ಯೆಶಾ 23:8:

18:23 18:23 ನಹೂ. 3:4:

§18:24 18:24 ಪ್ರಕ 17:6; ಮತ್ತಾ 23:35, 36:

*18:24 18:24 ಮೂಲ: ಅವಳಲ್ಲಿ.