110
ಯೆಹೋವನಿಂದ ಆರಿಸಲ್ಪಟ್ಟ ಚೀಯೋನಿನ ಅರಸ
ದಾವೀದನ ಕೀರ್ತನೆ.
ಕೀರ್ತ 2; 21
ಯೆಹೋವನು ನನ್ನ ಒಡೆಯನಿಗೆ,
“ನಾನು ನಿನ್ನ ವಿರೋಧಿಗಳನ್ನು ನಿನ್ನ ಪಾದಪೀಠವಾಗುವಂತೆ ಮಾಡುವ ತನಕ,
ನನ್ನ ಬಲಗಡೆಯಲ್ಲಿ ಕುಳಿತುಕೊಂಡಿರು” ಎಂದು ನುಡಿದನು.
ಯೆಹೋವನು ನಿನ್ನ ರಾಜದಂಡದ ಆಳ್ವಿಕೆಯನ್ನು
ಚೀಯೋನಿನ ಹೊರಗೂ ಹಬ್ಬಿಸುವನು;
ನಿನ್ನ ವೈರಿಗಳ ಮಧ್ಯದಲ್ಲಿ ದೊರೆತನ ಮಾಡು.
ನೀನು ಸೈನ್ಯವನ್ನು ಕೂಡಿಸುವ ದಿನದಲ್ಲಿ,
ನಿನ್ನ ಪ್ರಜೆಗಳು ಸಂತೋಷದಿಂದ ತಾವಾಗಿಯೇ ಸೇರಿಕೊಳ್ಳುವರು.
ಪರಿಶುದ್ಧ ವಸ್ತ್ರಭೂಷಿತರಾದ ನಿನ್ನ ಯುವ ಸೈನಿಕರು,
ಉದಯಕಾಲದ ಇಬ್ಬನಿಯಂತಿರುವರು.
“ನೀನು ಸದಾಕಾಲವೂ *ಮೆಲ್ಕಿಜೆದೇಕನ ತರಹ ಯಾಜಕನಾಗಿರುವೆ” ಎಂದು
ಯೆಹೋವನು ಆಣೆಯಿಟ್ಟು ನುಡಿದಿದ್ದಾನೆ;
ಪಶ್ಚಾತ್ತಾಪಡುವುದಿಲ್ಲ.
ನಿನ್ನ ಬಲಗಡೆಯಲ್ಲಿರುವ ಕರ್ತನು ತನ್ನ ಕೋಪದ ದಿನದಲ್ಲಿ
ರಾಜರನ್ನು ಖಂಡಿಸುವನು.
ಆತನು ಜನಾಂಗಗಳಲ್ಲಿ ನ್ಯಾಯಸ್ಥಾಪಿಸುವಾಗ,
ವಿಸ್ತಾರವಾದ ರಣರಂಗದಲ್ಲಿ ಶತ್ರುಗಳ ಶಿರಸ್ಸನ್ನು ಛೇದಿಸಿ,
ಹೆಣಗಳಿಂದ ಅದನ್ನು ತುಂಬಿಸುವನು.
ಒಡೆಯನು ದಾರಿಯಲ್ಲಿ ಹಳ್ಳದ ನೀರನ್ನು ಕುಡಿದು ತಲೆಯೆತ್ತುವನು.
* 110:4 110:4 ಇಬ್ರಿಯ 5:6, 6:20, 7:17,21 ಗಳನ್ನು ನೋಡಿರಿ.