133
ಐಕಮತ್ಯವು ಶ್ರೇಷ್ಠವಾದುದು
ಯಾತ್ರಾಗೀತೆ; ದಾವೀದನದು.
ಆಹಾ, ಸಹೋದರರು ಒಂದಾಗಿರುವುದು,
ಎಷ್ಟೋ ಒಳ್ಳೆಯದು, ಎಷ್ಟೋ ರಮ್ಯವಾದದ್ದು!
ಅದು ಆರೋನನ ತಲೆಯ ಮೇಲೆ ಹಾಕಲ್ಪಟ್ಟು,
ಅವನ ಗಡ್ಡದ ಮೇಲೆಯೂ,
ಅವನ ಅಂಗಿಗಳ ಕೊರಳ ಪಟ್ಟಿಯವರೆಗೂ ಹರಿದು ಬರುವ ಶ್ರೇಷ್ಠ ತೈಲದಂತೆಯೂ,
ಹೆರ್ಮೋನ್ ಪರ್ವತದಲ್ಲಿ ಹುಟ್ಟಿ,
ಚೀಯೋನ್ ಪರ್ವತದ ಮೇಲೆ ಬೀಳುವ ಮಂಜಿನಂತೆಯೂ ಇದೆ.
ಅಲ್ಲಿ ಆಶೀರ್ವಾದವೂ, ಜೀವವೂ ಸದಾಕಾಲ ಇರಬೇಕೆಂದು,
ಯೆಹೋವನು ಆಜ್ಞಾಪಿಸಿದ್ದಾನೆ.