134
ಸಂಧ್ಯಾಸೇವಕರಿಗೆ ಎಚ್ಚರಿಕೆ
ಯಾತ್ರಾಗೀತೆ.
ರಾತ್ರಿಯಲ್ಲಿ ಯೆಹೋವನ ಮಂದಿರದಲ್ಲಿರುವ ಆತನ ಸರ್ವಸೇವಕರೇ,
ಬನ್ನಿರಿ, ಯೆಹೋವನನ್ನು ಕೊಂಡಾಡಿರಿ.
ಮಹಾಪರಿಶುದ್ಧ ಸ್ಥಳದ ಕಡೆಗೆ ಕೈಯೆತ್ತಿ,
ಯೆಹೋವನನ್ನು ಕೊಂಡಾಡಿರಿ.
ಭೂಮ್ಯಾಕಾಶಗಳನ್ನು ಉಂಟುಮಾಡಿದ ಯೆಹೋವನು,
ಚೀಯೋನಿನೊಳಗಿಂದ ನಿನ್ನನ್ನು ಆಶೀರ್ವದಿಸಲಿ.