12
ದೇವ್ ಆಮ್ಚಾ ಬಾ
ತ್ಯಚಿ ಸಾಟಿ ಯವ್ಡೆ ಸಾಕ್ಷಿಚಾ಼ ಮೊಟಾ ಹಿಂಡ್ ಡಂಗಾಚೆ ಗತ್ ಆಮ್ಚೆ ಸರ್ಬವ್ತಾ ಹುತಾ ಮನ್ಹುನ್ ಆಮಾನಾ ಆಡ್ವ ಯತ್ಯಾಲ ಸಗ್ಳ ವಜ಼, ಸರಳ್ ಕುಡುನ್ ಗೆತ್ಯಾಲ ಪಾಪಬಿ ಆಮಿ ಕಾಡುನ್ ಥಿವುನ್, ಆಮ್ಚಿಪ ಇಸ್ವಾಸ್ ದೆನಾರಾ ತ್ಯ ಸರ್ವ ಕರ್ನಾರಾ ಜಾ಼ಲ್ಯಾಲ್ಯಾ ಯೇಸುವ ನದಾರ್ ಥಿವುನ್ ಆಮಾನಾ ತರಿವಲ್ಯಾಲ ಪಳ್ನ ಥಂಡಫನಾನಿ ಪಳುಯಾ. ತ್ಯನಿ ಆಪ್ಲೆ ಮೊರ‍್ಹ ತೆವಲ್ಯಾಲ್ಯಾ ಸಂತೋಶಾ ಸಾಟಿ ಲಾಜ಼ಚಿ ನಕ್ವಾಟ್ ಕರುನ್ ಶಿಲಬೆಚ಼ ಮರಾನ್ ಸುಸ್ವುನ್ ಗಿವ್ಹುನ್, ದೇವಾಚಾ ಸಿಂಹಾಸಾನಾಚೆ ಉಜ಼ವ್ಯಾಂಗ್ನಿ ಬಸಲ್ಯಾ.
ತುಮಿ ಮನಾಲಾ ದುಕ್ ವ್ಹವುನ್ ಬೇಜಾರ್ ವ್ಹಯಾಚೆ ಆಂದಿ ಯೇಸುಚೆ ಗುಶ್ಟಿತ್ ಯವಜಾ಼. ತ್ಯನಿ ಪಾಪಿಂಚಿಪ್ನಿ ಕ್ಯವ್ಡಾಕಿ ತರಾಸ್ ಸುಸಿವ್ಲಾ. ತುಮಿ ಪಾಪಾಚೆ ಆಡ್ವಿ ಲಡ್‌ತ್ಯಾಲ್ಯಾಸ್ ಲಾಗುನ್ ರಗಾತ್ ಪಾಡಿ ಪರತ್ ಲಡ್ಲಾ ನಾಹಿಸಾ ನವ್ಹ. ಪೊರಾನಾ ಸಾಂಗತ್ಯಾಚೆಗತ್ ತುಮಾನಾ ಸಾಂಗಲ್ಯಾಲ ಜಾ಼ಗ್ರುತಿಚಾ ಬೊಲ್ಯಾ ಇಸ್ರುನ್ ಗೆಲಾಸಾ ಕ್ಯಾ? ತ್ಯ ಕ್ಯಾ ಮಾಂಜೆ, “ಮಾಜಾ ಲೆಕಾ, ಪ್ರಬುಚೆ ಶಿಕ್ಷೆಚಾ಼ ಗಾಳ್ ಕರುನಕೊಸಾ. ತ್ಯನಿ ತುಲಾ ದಪಕ್ಯಾವ್ಲತ ಬೇಜಾರ್ ಕರುನಕೊಸಾ. ”
ಕಾ ಮಂಜೆ ಪ್ರಬು ಕುನಾಚಿ ಮಾಯಾ ಕರ್ತೊ ತ್ಯಾನಾ ಶಿಕ್ಷಾದೆತೊ. ಆಪ್ನು ಲೇಕಾಚೆಗತ್ ಗೆನಾರ‍್ಯಾ ಪರ್ತೆಕಾಲಾ ಮ್ಯಾರ್ತೊ ಮನ್ಹುನ್. ತುಮ್ಚಾ ಬರ್ವಶಾಸಾಟಿ, ತುಮಾನಾ ಶಿಕ್ಷಾವ್ಹತೆ ಮನ್ಹುನ್ ತ್ಯ ಸುಸ್ವುನ್ ಗೆವ್ಹಾ. ದೇವ್ ತುಮಾನಾ ಲೆಕ್ರ ಮನ್ಹುನ್ ಚಾ಼ಲಿವ್ತೊ. ಕಾ ಮಂಜೆ ಬಾಪ್ನಿ ಶಿಕ್ಷಾಗೆನಾರಾ ಲ್ಯೊಕ್ ಕುಟಹಾ? ಸಗಳ್ಯಾನಾ ವ್ಹಯಾವ್ಹಯಿ ಜಾ಼ಲ್ಯಾಲಿ ಶಿಕ್ಷಾ ತುಮಾನಾ ಜಾ಼ಲಿ ನಾಹಿತ ತುಮಿ ಬಳ್ ಜು಼ರಿನಿ ಜ಼ಲಾಮಲ್ಯಾಲಿ ಪೊರ ವ್ಹನಾರ್ ತ್ಯಚಿ ಪೊರ ನವ್ಹಸಾ. ಹ್ಯ ಯವ್ಡಸ್ ನವ್ಹ ಆಮಾನಾ ಸಿಕ್ಷಾದಿಲ್ಯಾಲ್ಯಾ ಹ್ಯಾ ಲೋಕಾತಲ್ಯಾ ಬಾಸನಾ ಮರ‍್ಯಾದ್ ದೆತಾವ್‌ ನವ್ಹ. ಆಮ್ಚಾ ಆತಮ್ಯಾನಾ ಬಾ ಜಾ಼ಲ್ಯಾಲ್ಯಾಚ ಆಮಿ ಆಜು಼ನ್ ಖುಬ್ ಐಕುನ್ ಜೀವ್ನಾ ಕರಾಯಾ ವ್ಹಯಿ ನವ್ಹ? 10 ಆಮ್ಚಾ ಹ್ಯಾ ಲೋಕಾತಲ ಬಾಸ ಮನಾಲಾ ಶಾರ್ಕ ದಿಸ್ಲ ತವಾ ಥೊಡ ದಿಸ್ ತ್ಯವ್ಡಿಸ್ ಶಿಕ್ಷಾ ದಿಲಿ. ಫನ್ ದೇವ್ ಆಪಲ್ಯಾ ಚಾ಼ಂಗಲ್ಯಾತ ಪವಿತ್ರಸಭಾವ ಆಮಿ ಮಿಳಾಯಾ ವ್ಹಯಿ ಮನ್ಹುನ್ ಆಮ್ಚಾ ಬರ‍್ಯಾಸಾಟಿ ಶಿಕ್ಷಾ ದೆತೊ. 11 ಕುಟ್ಲಿಬಿ ಶಿಕ್ಷಾ ಸಗ್ಳಾವ್ನಿ ಸಂತೋಶಾನಿ ದಿಸಾಚೆ ಆಂದಿ, ಕಸ್ಟಾಚಿ ಕಸಿ ದಿಸ್ತಿ. ಫನ್ ಶಿಕ್ಷಾ ಗೆನಾರ, ಮೊರ‍್ಹ ಸಮಾದಾನಾಚ಼ ನ್ಯಾಯಿಪನಾಚ಼ ಫಳ್ ಗೆತ್ಯಾತ.
ಚಾ಼ಂಗಲ್ಯಾ ಮಾರ್ಗಾವ ಚಾ಼ಲಾ
12 ಮನ್ಹುನ್ ಪಡಲ್ಯಾಲ ಹಾತ್ ಆನಿ ವಾಡತ್ಯಾಲ್ಯಾ ನಡಗ್ಯಾನಾ ಗಟ್ ಕರಾ. 13 ತುಮ್ಚಾ ಪಾಯಾನಾ ನಿಟ್ ವಾಟ್ ಕರಾ ಆಸ ಕೆಲಸಾತ ಥ್ಯೊಟಕ್ಯಾ ಗ್ಯಾಲತ್ಯಾಲಾ ಪ್ಯಾ ಮುರ್ಕಾಟಾಚೆ ಆಂದಿ ಬರಾ ವ್ಹನಾರ್
14 ಸಗಳ್ಯಾಂಚೆ ಸಂಗ ಸಮಾದಾನಾನಿ ಜೀವ್ನಾ ಕರಾಯಾ ಆನಿ ಚಾ಼ಂಗ್ಲ ವ್ಹಯಾ ಯತ್ನ ಕರಾ. ಪರಿಶುದ್ ನಸ್ತಾನಾ ಕೊನುಸ್ ಪ್ರಬುಲಾ ಬಗ್ನಾರ್ ನಾಹಿ. 15 ತುಮ್ಚಾತ್ ಕೊನ್ ತರಿ ದೇವಾಚೆ ಕ್ರುಪಾನಿ ಚು಼ಕುನ್ ಮಾಗಾರಾ ಪರ್ತುನ್ ಜಾ಼ವು ನಾಹಿ ಆಸ, ಕಸ್ಲಿಸ್ ಕಡು ಮುಳಿ ತುಮ್ಚಾತ್ ಫುಟುನ್ ಸಮಾಧಾನ್ ನಾಹಿಸಾ ಕರುನ್ ಖುಬ್ ಜನಾನಾ ಬುರ್ಸ ವ್ಹವುನಾಹಿ ಆಸ ಬಗಾ. 16 ಕೊನ್ತರಿ ವ್ಯಬಿಚಾರಿ ವ್ಹವುನಿ, ಏಸಾವಾಚೆಗತ್ ಸಂಸಾರಾತ್ಲಾ ವ್ಹವುನಿ ತುಮ್ಚಿಪ ರಾವ್ಹು ನಾಹಿ ಆಸಿ ಜಾ಼ಗ್ರುತ್ ಗೆವ್ಹಾ. ತ್ಯಾ ಏಸಾವಾನಿ ಯಕಾಸ್ ಜೆವ್ನಾ ಸಾಟಿ ಆಪ್ಲಾ ಪೈಲಾ ಹಾಕ್ ಇಕುನ್ ಶೊಡ್ಲಾ. 17 ನಂತರ್ ಆಪಲ್ಯಾ ಬಾಚಾ಼ ಆಶಿರ್ವಾದ್ ಹಾಕಾನಿ ಗಿಹ್ಯಾ ವ್ಹಯಿ ಮನ್ಹುನ್ ರಡತ್ ಮಾಗ್ಲ ತರಿ,ಪಸ್ಚಾತಾಪಾಲಾ ಮಾರ್ಗ ನಸ್ತಾನಾ ಸುಡುನ್ ದಿಲ್ಯಾಲಾ ಮನ್ಹುನ್ ತುಮಾನಾ ಠಾವ ಹಾ.
18 ತುಮಿ ಜಾ಼ತ್ಯಾಲ್ಯಾ ಆನಿ ಇಸ್ತು ಲಾಗಲ್ಯಾಲ್ಯಾ ಸೀನಾಯಿ ಕನ್ಯಾಲಾ, ಕಾಳೊಕ್, ಢಗ್, ವಾರಮ್ಯೊಡ್, 19 ತುತುರಿಚಾ಼ ಆವಾಜ಼್, ಬುಲಿಚಾ಼ ಆವಾಜ಼್ ಹ್ಯಂಚಿಪ ತುಮಿ ಆಲ್ಯಾಲಿ ನವ್ಹ. ತ್ಯೊ ಆವಾಜ಼್ ಐಕಯ್ಲಾಲಿ ಆನಿ ಕಂದಿಸ್ ತ್ಯೊ ಆವಾಜ಼್ ಆಪ್ಲಿ ಸಂಗ ಬೊಲಾಚಾ಼ ನಕೊ ಮನ್ಹುನ್ ಮಾಕತ್ಯಾತ. 20 ಕಾ ಮಂಜೆ, “ಯಾಕ್ ಜ಼ನಾವಾರ್ ಕನ್ಯಾಪ ಗೆಲತ ತ್ಯಲಾ ದೊಂಡ್ಯಾನಿ ಮಾರುನ್ ಟಾಕಾಯಾ ವ್ಹಯಿ ಮನ್ಹುನ್” ವಿಧಿ ತ್ಯನಾ ಸುಸ್ವುನ್ ಗಿಹ್ಯಾ ಜಾ಼ಲ ನಾಹಿ. 21 ಯವ್ಡಸ್ ನವ್ಹ ತ್ಯ ದಿಸ್ನ ಖುಬ್ ಭ್ಯಾಚ಼ ಮನ್ಹುನ್ ಮೊಶೆ, “ತೀ ಬಿಹುನ್, ವಾಡ್ತ್ಯೊ” ಮನ್ಹುನ್ ಸಾಂಗ್ಲ.
22 ಫನ್ ತುಮಿ ಚೀಯೋನ್ ಗುಡ್ಯಾವಬಿ, ಜೀತ್ಯಾ ದೇವಾಚಿ ಪ್ಯಾಟ್ ಜಾ಼ಲ್ಯಾಲೆ ಸ್ವರ್ಗಾಚೆ ಯೆರುಸಲೇಮತ್ಬಿ, ಸಂತೋಸಾಚಾ ಉಮೆದಿಚಾ ಮೆಳ್ಯಾತ್ ಮಿಸಾಳ್ಯಾಲ್ಯಾ ಕುಠಿನಿ ದೇವ್ ದುತಾಪ್ನಿ, 23 ಸ್ವರ್ಗಾತ್ ನಾವ್ ದಾಕಲ್ ಜಾ಼ಲ್ಯಾಲ್ಯಾ ಪೈಲ್ಯಾ ಮುಲಾಚೆ ಸಬೆತ್, ಸಗಳ್ಯಾಂಚಾ಼ ನ್ಯಾಯಿ ಕರ್ನಾರ‍್ಯಾ ದೇವಾಚೆ ಮೊರ‍್ಹ, ಸರ್ವ ನ್ಯಾಯಿಚಾ ಆತಮ್ಯಾಪ್ನಿ, 24 ನವ್ಯಾ ಕರಾರಾಚೆ ಮದಲ್ಯಾ ಯೇಸುಪ, ಹೇಬೆಲಾಚಾ ರಕ್ತಾವ್ನಿ ಚಾ಼ಂಗ್ಲ ಕರುನ್ ಬೊಲತ್ಯಾಲ ಸಿಪಡಲ್ಯಾಲ್ಯಾ ರಕ್ತಾಪ ಆಲ್ಯಾಸಾ.
25 ಬೋಲತ್ಯಾಲ್ಯಾಲಾ ತುಮಿ ನಕಾರ್ ಕರುನಾಹಿ ಆಸ ಬಗಾ. ಕಾ ಮಂಜೆ ದರ್ತಿವ ಬೊಲ್ಯಾಲ್ಯಾಚಿ ನಕಾರ್ ಕರ್ನಾರಿ ಶಿಕ್ಷಾತ್ನಿ ಚು಼ಕ್ವುನ್ ಗಿಹ್ಯಾ ಜಾ಼ಲ ನಾಹಿತ, ಸ್ವರ್ಗಾತ್ನಿ ಬಗತ್ಯಾಲ್ಯಾಲಾ ಸುಡುನ್ ದುರ್ ಆಮಿ ಗೆಲ್ಯಾವ ಶಿಕ್ಷಾತ್ನಿ ಕಸ ಚು಼ಕ್ವುನ್ ಗೆನಾರ್? 26 ತ್ಯಚಾ಼ ಆವಾಜ಼್ ಆಲಾತವಾ ದರ್ತಿ ಹಾಲ್ಲಿ. ಆತಾತರಿ ತ್ಯೊ, “ಆನಿ ಯಗ್ದಾ ಮಿ ದರ್ತಿ ತ್ಯವ್ಡಿಸ್ ನವ್ಹ ಸ್ವರ್ಗಬಿ ಹಾಲಿವ್ನಾರ್” ಮನ್ಹುನ್ ಸಬ್ದ ದಿಲ್ಯಾ. 27 “ಆನಿ ಯಗ್ದಾ,” ಮನ್ಯಾಚಿ ಹಿ ಬುಲಿ ಯವಜಾ಼, ಹಾಲಿವಲ್ಯಾಲಿ ಸಾಮ್ನ ಹಾತಾನಿ ಕೆಲ್ಯಾಲಿ ಮನ್ಹುನ್ ಕಾಡುನ್ ಟಾಕಾಯಾ ಯತ್ಯಾತ ತ್ಯ ಠಾವ ಹಾ. ತವಾ, ಹಾಲಾಚೆ ಆಂದಿ ಆಸಲ್ಯಾಲಿ ಸಾಮ್ನ ಘಟ್ ಉಬಿ ರಾನ್ಹಾರ್
28 ಮನ್ಹುನ್ ಕುನಿಸ್ ಹಾಲಿವಲ್ಯಾ ನಸಲ್ಯಾಲ ರಾಜ್ ಗೆನಾರಿ ಆಮಿ ದಯಾ ಆಸ್ನಾರಿ ವ್ಹವುನ್, ತ್ಯಲಾ ಕರ್ತ್ಯಾಲಿ ಆರಾದನಾ ಬಕ್ತಿನಿ ಆನಿ ಭ್ಯಾನಿ ಕರುಯಾ. 29 ಕಾ ಮಂಜೆ ಆಮಚಾ಼ ದೇವ್ ಜಾಳತ್ಯಾಲಾ ಇಸ್ತು ಜಾ಼ಲ್ಯಾ.