6
1 ದೇವರೊಡನೆ ದುಡಿಯುತ್ತಿರುವ ನಾವು ನಿಮ್ಮಲ್ಲಿ ವಿಜ್ಞಾಪಿಸುವುದೆನೆಂದರೆ; ದೇವರಿಂದ ಪಡೆದ ಕೃಪೆಯನ್ನು ವ್ಯರ್ಥಮಾಡಬೇಡಿರಿ. 2 *ಯೆಶಾ 49:8; ಲೂಕ 4:19“ಸುಪ್ರಸನ್ನತೆಯ ಕಾಲದಲ್ಲಿ ನಿನ್ನ ಮನವಿಯನ್ನು ಕೇಳಿದೆನು, ರಕ್ಷಣೆಯ ದಿನದಲ್ಲಿ ನಿನಗೆ ಸಹಾಯ ಮಾಡಿದೆನು” ಎಂದು ದೇವರು ಹೇಳುತ್ತಾನಲ್ಲಾ. ನೋಡಿ, †ಯೆಶಾ 55:6; ಇಬ್ರಿ. 3:13ಈಗಲೇ ಆ ಸುಪ್ರಸನ್ನತೆಯ ಕಾಲವು; ಇಂದೇ ಆ ರಕ್ಷಣೆಯ ದಿನ. 3 ನಮ್ಮ ಸೇವೆಯು ಯಾರ ಮುಂದೆಯೂ ಅವಹೇಳನಕ್ಕೆ ಗುರಿಯಾಗದಂತೆ, ನಾವು ಯಾರಿಗೂ ಅಡ್ಡಿಯನ್ನು ಒಡ್ಡಲಿಲ್ಲ. 4 ಬದಲಾಗಿ, ಎಲ್ಲಾ ವಿಷಯಗಳಲ್ಲಿ ದೇವರ ಸೇವಕರೆಂದು ನಮ್ಮ ಸೇವೆಯನ್ನು ಸಮ್ಮತ ಮಾಡಿಕೊಂಡು, ನಾವು ‡ಅ. ಕೃ. 9:16ಸಂಕಟದಲ್ಲಿಯೂ, §2 ಕೊರಿ 12:10ಕೊರತೆಗಳಲ್ಲಿಯೂ, ಇಕ್ಕಟ್ಟುಗಳಲ್ಲಿಯೂ, *2 ಕೊರಿ 11:23-27; ಅ. ಕೃ. 16:23ಪೆಟ್ಟುಗಳಲ್ಲಿಯೂ, 5 ದೊಂಬಿ, ಕಲಹ, ಸೆರೆಮನೆ, ಶಿಕ್ಷೆ ಇವುಗಳನ್ನು ಅನುಭವಿಸಿದ್ದೇವೆ. ಮೈಮುರಿದು ಕೆಲಸ ಮಾಡಿದ್ದೇವೆ. ನಿದ್ದೆಗೆಟ್ಟು ಬಳಲಿದ್ದೇವೆ; ಹಸಿವಿನಲ್ಲಿ ಸೊರಗಿದ್ದೇವೆ; †ಅ. ಕೃ. 17:5ಈ ಎಲ್ಲಾ ವಿಷಯಗಳಲ್ಲಿ ಬಹು ಸಮಾಧಾನವನ್ನು ತೋರಿಸಿದ್ದೇವೆ. 6 ‡1 ಥೆಸ. 2:10ಶುದ್ಧಮನಸ್ಸು, §2 ಕೊರಿ 11:6ಜ್ಞಾನ, ದೀರ್ಘಶಾಂತಿ, ದಯೆ, *ರೋಮಾ. 15:19; 1 ಥೆಸ. 1:5ಪವಿತ್ರಾತ್ಮ, †ರೋಮಾ. 12:9ನಿಷ್ಕಪಟವಾದ ಪ್ರೀತಿ, 7 ‡ಎಫೆ 1:13; ಕೊಲೊ 1:5ಸತ್ಯವಾಕ್ಯ, ದೇವರ ಮಹತ್ವ ಇವುಗಳಿಂದ ಕೂಡಿದವರಾಗಿ, §2 ಕೊರಿ 10:4; ಎಫೆ 6:11-17ಎಡಬಲಗೈಗಳಲ್ಲಿ ನೀತಿಯೆಂಬ ಆಯುಧಗಳನ್ನು ಧರಿಸಿಕೊಂಡಿದ್ದೇವೆ. 8 ನಾವು ಮಾನ ಮತ್ತು *ರೋಮಾ. 3:8ಅವಮಾನ, ಕೀರ್ತಿ ಮತ್ತು ಅಪಕೀರ್ತಿಗಳಲ್ಲಿಯೂ ಸೇವೆಮಾಡಿದ್ದೇವೆ. ಸತ್ಯವಂತರಾದರೂ ಮೋಸಗಾರರೆನಿಸಿಕೊಂಡಿದ್ದೇವೆ. 9 ನಾವು ಪ್ರಸಿದ್ಧರಾಗಿದ್ದರೂ ಅಪರಿಚಿತರೆನ್ನಿಸಿಕೊಂಡು ಸೇವೆ ಮಾಡಿದ್ದೇವೆ. †2 ಕೊರಿ 4:10ಸಾಯುವವರಾಗಿ ತೋರಿದರೂ, ಬದುಕಿದ್ದೇವೆ! ನೋಡಿ, ಶಿಕ್ಷೆಗೆ ಗುರಿಯಾದರೂ ಕೊಲ್ಲಲ್ಪಡದವರಾಗಿದ್ದೇವೆ, 10 ‡ಯೋಹಾ 16:22; 2 ಕೊರಿ 7:4ದುಃಖಪಡುವವರಾಗಿದ್ದರೂ ಸೇವೆಯಲ್ಲಿ ಯಾವಾಗಲೂ ಸಂತೋಷಪಡುತ್ತೇವೆ, §2 ಕೊರಿ 8:9; ಜ್ಞಾ. 13:7ಬಡವರಾಗಿದ್ದರೂ ಅನೇಕರನ್ನು ಐಶ್ವರ್ಯವಂತರಾಗಿ ಮಾಡಿದ್ದೇವೆ; *ಅ. ಕೃ. 3:6ಏನೂ ಇಲ್ಲದವರಾಗಿದ್ದರೂ ಎಲ್ಲಾ ಹೊಂದಿದವರಾಗಿದ್ದೇವೆ.
11 ಕೊರಿಂಥದವರೇ, ಬಿಚ್ಚುಮನದಿಂದಲೂ ತೆರೆದ ಹೃದಯದಿಂದಲೂ ನಾವು ನಿಮ್ಮೊಡನೆ ಮಾತನಾಡಿದ್ದೇವೆ. 12 ನಮ್ಮಲ್ಲಿ ಸಂಕುಚಿತ ಭಾವನೆಯೇನೂ ಇಲ್ಲ. ಇದು ಇರುವುದಾದರೆ ನಿಮ್ಮಲ್ಲೇ. 13 ಆದ್ದರಿಂದ ಮಕ್ಕಳಿಗೆ ಹೇಳುವಂತೆ ಹೇಳುತ್ತಿದ್ದೇವೆ; ನಾವು ನಿಮ್ಮನ್ನು ಪೂರ್ಣ ಹೃದಯದಿಂದ ಪ್ರೀತಿಸಿದಂತೆ, ನೀವು ನಮ್ಮನ್ನು ಪೂರ್ಣ ಹೃದಯದಿಂದ ಪ್ರೀತಿಸಿರಿ.
ಕ್ರೈಸ್ತರು ಅನ್ಯಜನಗಳ ಅನ್ಯೋನ್ಯತೆಯಲ್ಲಿ ಕೆಡಬಾರದು
14 ನೀವು ಕ್ರಿಸ್ತ ನಂಬಿಕೆಯಿಲ್ಲದವರೊಂದಿಗೆ ಸೇರಿ †ಧರ್ಮೋ 7:3; ಯೋಹಾ 23:12; ಎಜ್ರ. 9:2; ನೆಹೆ 13:25ಇಜ್ಜೋಡಿಯಾಗಬೇಡಿರಿ. ಧರ್ಮಕ್ಕೂ, ‡ಎಫೆ 5:7,11; 1 ಯೋಹಾ 1:6ಅಧರ್ಮಕ್ಕೂ ಸಹವಾಸವೇನು? 15 §ಅ. ಕೃ. 26:18ಬೆಳಕಿಗೂ, ಕತ್ತಲೆಗೂ ಅನ್ಯೋನ್ಯತೆಯೇನು? *1 ಕೊರಿ 10:21ಕ್ರಿಸ್ತನಿಗೂ ಸೈತಾನನಿಗೂ ಒಪ್ಪಂದವೇನು? ವಿಶ್ವಾಸಿಗೂ ಅವಿಶ್ವಾಸಿಗೂ ಪಾಲುಗಾರಿಕೆಯೇನು? 16 ದೇವ ಮಂದಿರಕ್ಕೂ, ವಿಗ್ರಹಗಳಿಗೂ ಒಪ್ಪಿಗೆಯೇನು? †ಎಫೆ 2:22; 1 ಕೊರಿ 3:16ನಾವು ದೇವರೇ ಹೇಳಿರುವಂತೆ ಜೀವಸ್ವರೂಪನಾದ ದೇವರ ಮಂದಿರವಾಗಿದ್ದೇವಲ್ಲಾ, ‡ಯಾಜ 26:11,12; ವಿಮೋ 29:45; ಪ್ರಕ 2:1; 21:3“ನಾನು ಅವರಲ್ಲಿ ವಾಸಮಾಡುವೆನು, ಅವರ ನಡುವೆಯೇ ನಾ ತಿರುಗಾಡುವೆನು §ವಿಮೋ 6:7; ಯೆರೆ 31:33; ಯೆಹೆ. 11:20; ಜೆಕ. 8:8 ಅವರಿಗೆ ನಾನೇ ದೇವರಾಗಿರುವೆನು, ಅವರು ನನಗೆ ಪ್ರಜೆಯಾಗಿರುವರು” ಎಂದು ಹೇಳಿದ್ದಾನೆ. 17 ಆದ್ದರಿಂದ, *ಯೆಶಾ 52:11“ಅನ್ಯಜನರನ್ನು ಬಿಟ್ಟು ಹೊರಬನ್ನಿರಿ ಅವರಿಂದ ಬೇರ್ಪಟ್ಟು ಬಾಳಿರಿ ಮಲಿನವಾದುದನ್ನು ಮುಟ್ಟದಿರಿ” ಎಂದು ಕರ್ತನು ಹೇಳುತ್ತಾನೆ. 18 ಇದಲ್ಲದೆ, †2 ಸಮು 7:8, 14; ಯೆಶಾ 43:6; ಹೋಶೇ. 1:10“ನಾನು ನಿಮ್ಮನ್ನು ಸ್ವೀಕರಿಸಿಕೊಂಡು ನಿಮಗೆ ತಂದೆಯಾಗಿರುವೆನು; ನೀವು ನನಗೆ ಕುಮಾರ, ಕುಮಾರಿಯರು ಆಗಿರುವಿರೆಂದು” ಸರ್ವಶಕ್ತನಾದ ಕರ್ತನು ಹೇಳುತ್ತಾನೆ.
*6:2 ಯೆಶಾ 49:8; ಲೂಕ 4:19
†6:2 ಯೆಶಾ 55:6; ಇಬ್ರಿ. 3:13
‡6:4 ಅ. ಕೃ. 9:16
§6:4 2 ಕೊರಿ 12:10
*6:4 2 ಕೊರಿ 11:23-27; ಅ. ಕೃ. 16:23
†6:5 ಅ. ಕೃ. 17:5
‡6:6 1 ಥೆಸ. 2:10
§6:6 2 ಕೊರಿ 11:6
*6:6 ರೋಮಾ. 15:19; 1 ಥೆಸ. 1:5
†6:6 ರೋಮಾ. 12:9
‡6:7 ಎಫೆ 1:13; ಕೊಲೊ 1:5
§6:7 2 ಕೊರಿ 10:4; ಎಫೆ 6:11-17
*6:8 ರೋಮಾ. 3:8
†6:9 2 ಕೊರಿ 4:10
‡6:10 ಯೋಹಾ 16:22; 2 ಕೊರಿ 7:4
§6:10 2 ಕೊರಿ 8:9; ಜ್ಞಾ. 13:7
*6:10 ಅ. ಕೃ. 3:6
†6:14 ಧರ್ಮೋ 7:3; ಯೋಹಾ 23:12; ಎಜ್ರ. 9:2; ನೆಹೆ 13:25
‡6:14 ಎಫೆ 5:7,11; 1 ಯೋಹಾ 1:6
§6:15 ಅ. ಕೃ. 26:18
*6:15 1 ಕೊರಿ 10:21
†6:16 ಎಫೆ 2:22; 1 ಕೊರಿ 3:16
‡6:16 ಯಾಜ 26:11,12; ವಿಮೋ 29:45; ಪ್ರಕ 2:1; 21:3
§6:16 ವಿಮೋ 6:7; ಯೆರೆ 31:33; ಯೆಹೆ. 11:20; ಜೆಕ. 8:8
*6:17 ಯೆಶಾ 52:11
†6:18 2 ಸಮು 7:8, 14; ಯೆಶಾ 43:6; ಹೋಶೇ. 1:10