2 ತಿಮೊಥೆಯನಿಗೆ
ಗ್ರಂಥಕರ್ತೃತ್ವ
ರೋಮಾಪುರದ ಸೆರೆಮನೆಯಿಂದ ಪೌಲನು ಬಿಡುಗಡೆಯಾದ ನಂತರ ಮತ್ತು ನಾಲ್ಕನೇ ಮಿಷನರಿ ಪ್ರಯಾಣದಲ್ಲಿ ಅವನು 1 ತಿಮೊಥೆಯನ ಪತ್ರಿಕೆಯನ್ನು ಬರೆದ ನಂತರ, ಮತ್ತೆ ಪೌಲನನ್ನು ನೀರೋ ಚಕ್ರವರ್ತಿಯ ಆಳ್ವಿಕೆಯಡಿಯಲ್ಲಿ ಸೆರೆಮನೆಗೆ ಹಾಕಲಾಯಿತು. ಈ ಸಮಯದಲ್ಲಿ ಅವನು 2 ತಿಮೊಥೆಯನ ಪತ್ರಿಕೆಯನ್ನು ಬರೆದನು. ಅವನು ಮೊದಲ ಬಾರಿ ಸೆರೆಮನೆಯಲ್ಲಿದ್ದಾಗ, ಅವನು ‘ಬಾಡಿಗೆ ಮನೆ’ ಯಲ್ಲಿ (ಅ.ಪೊ. 28:30) ವಾಸವಾಗಿದ್ದ ಸ್ಥಿತಿಗೂ ಇದಕ್ಕೂ ವ್ಯತ್ಯಾಸವಿದೆ, ಈಗ ಅವನು ಸಾಮಾನ್ಯ ಅಪರಾಧಿಯಂತೆ ಸಂಕೋಲೆಯಿಂದ ಬಂಧಿಸಲ್ಪಟ್ಟವನಾಗಿ (1:16; 2:9), ಶೀತಲ ಕಾರಾಗೃಹದಲ್ಲಿ ಬಳಲುತ್ತಿದ್ದಾನೆ (4:13). ತನ್ನ ಕೆಲಸವು ಮುಗಿದಿದೆ ಮತ್ತು ತನ್ನ ಜೀವನದ ಅಂತ್ಯವು ಸಮೀಪವಾಗಿದೆ ಎಂದು ಪೌಲನಿಗೆ ತಿಳಿದಿತ್ತು (4: 6-8).
ಬರೆದ ದಿನಾಂಕ ಮತ್ತು ಸ್ಥಳ
ಸರಿಸುಮಾರು ಕ್ರಿ.ಶ. 66-67 ರ ನಡುವೆ ಬರೆಯಲ್ಪಟ್ಟಿದೆ.
ಪೌಲನು ರೋಮಾಪುರದಲ್ಲಿ ತನ್ನ ಎರಡನೆಯ ಸೆರೆವಾಸದಲ್ಲಿದ್ದುಕೊಂಡು, ತನ್ನ ರಕ್ತಸಾಕ್ಷಿಯ ಮರಣಕ್ಕಾಗಿ ಕಾಯುತ್ತಿರುವಾಗ ಅವನು ಈ ಪತ್ರಿಕೆಯನ್ನು ಬರೆದನು.
ಸ್ವೀಕೃತದಾರರು
ತಿಮೊಥೆಯು ಎರಡನೆಯ ತಿಮೊಥೆಯನ ಪತ್ರಿಕೆಯ ಪ್ರಾಥಮಿಕ ಓದುಗನಾಗಿದ್ದಾನೆ, ಆದರೆ ಖಂಡಿತವಾಗಿ ಅವನು ಸಭೆಯೊಂದಿಗೆ ಇದರ ವಿಷಯವನ್ನು ಹಂಚಿಕೊಂಡನು.
ಉದ್ದೇಶ
ತಿಮೊಥೆಯನಿಗೆ ಅಂತಿಮ ಪ್ರೋತ್ಸಾಹವನ್ನು ನೀಡಲು ಮತ್ತು ಪೌಲನು ಅವನಿಗೆ ವಹಿಸಿಕೊಟ್ಟ ಕಾರ್ಯಭಾರವನ್ನು ಧೈರ್ಯದಿಂದ (1:3-14), ಶ್ರದ್ಧೆಯಿಂದ (2:1-26), ಮತ್ತು ನಿಷ್ಠೆಯಿಂದ (3:14-17; 4:1-8) ಮುಂದುವರಿಸುವಂತೆ ಪ್ರೇರೇಪಿಸಲು ಬರೆದನು.
ಮುಖ್ಯಾಂಶ
ನಂಬಿಗಸ್ತವಾದ ಸೇವೆಗಾಗಿ ನಿಯೋಗ
ಪರಿವಿಡಿ
1. ಸೇವೆಗೆ ಪ್ರೇರಣೆ — 1:1-18
2. ಸೇವೆಯಲ್ಲಿರಬೇಕಾದ ಮಾದರಿ — 2:1-26
3. ಸುಳ್ಳು ಬೋಧನೆಯ ವಿರುದ್ಧ ಎಚ್ಚರಿಕೆ — 3:1-17
4. ಪ್ರೋತ್ಸಾಹದ ಮಾತುಗಳು ಮತ್ತು ಆಶೀರ್ವಾದಗಳು — 4:1-22
1
ಪೀಠಿಕೆ
ಕ್ರಿಸ್ತಯೇಸುವಿನಲ್ಲಿರುವ * 1:1 ತೀತ. 1:2; ಇಬ್ರಿ. 9:15ಜೀವ ವಾಗ್ದಾನವನ್ನು ತಿಳಿಯಪಡಿಸುವುದಕ್ಕೋಸ್ಕರ 1:1 1 ಕೊರಿ 1:1ದೇವರ ಚಿತ್ತಾನುಸಾರವಾಗಿ ಕ್ರಿಸ್ತಯೇಸುವಿನ 1:1 2 ಕೊರಿ 1:1ಅಪೊಸ್ತಲನಾದ ಪೌಲನು, § 1:2 1 ಕೊರಿ 4:17, 2 ತಿಮೊ. 2:1; ಅ. ಕೃ. 16:1ತನ್ನ ಪ್ರಿಯ ಕುಮಾರನಾದ ತಿಮೊಥೆಯನಿಗೆ ಬರೆಯುವುದೇನಂದರೆ, * 1:2 1 ತಿಮೊ. 1:2ತಂದೆಯಾದ ದೇವರಿಂದಲೂ ನಮ್ಮ ಕರ್ತನಾದ ಕ್ರಿಸ್ತಯೇಸುವಿನಿಂದಲೂ ನಿನಗೆ ಕೃಪೆಯೂ, ಕರುಣೆಯೂ, ಶಾಂತಿಯೂ ಆಗಲಿ.
ತಿಮೊಥೆಯನು ಸುವಾರ್ತಾಸೇವೆಯಲ್ಲಿ ನಂಬಿಗಸ್ತನಾಗಿರಬೇಕೆಂದು ಬೋಧನೆ
1:3 ರೋಮಾ. 1:9ನಾನು ಹಗಲಿರುಳು ನನ್ನ ಪ್ರಾರ್ಥನೆಗಳಲ್ಲಿ ನಿನ್ನನ್ನು ತಪ್ಪದೆ ಜ್ಞಾಪಿಸಿಕೊಳ್ಳುತ್ತೇನೆ. ಇದಲ್ಲದೆ 1:3 ಅ. ಕೃ. 22:3; 24:14ನಾನು ಪೂರ್ವಿಕರ ಭಕ್ತಿಮಾರ್ಗವನ್ನೇ ಅನುಸರಿಸಿ. § 1:3 1 ತಿಮೊ. 3:9; ಅ. ಕೃ. 23:1ಶುದ್ಧ ಮನಸ್ಸಾಕ್ಷಿಯಿಂದ ಸೇವಿಸುವ ದೇವರಿಗೆ ನಿನ್ನ ವಿಷಯವಾಗಿ * 1:3 ರೋಮಾ. 1:8ಸ್ತೋತ್ರಸಲ್ಲಿಸುತ್ತೇನೆ. ನಾನು 1:4 ಅ. ಕೃ. 20:37ನಿನ್ನ ಕಣ್ಣೀರನ್ನು ನೆನಪಿಗೆ ತಂದು 1:4 ಫಿಲಿ. 1:8ನಿನ್ನನ್ನು ನೋಡಿ ಸಂತೋಷಭರಿತನಾಗಬೇಕೆಂದು ಬಯಸುತ್ತೇನೆ. ನಿನ್ನಲ್ಲಿರುವ § 1:5 1 ತಿಮೊ. 1:5 ಯಥಾರ್ಥವಾದ ನಂಬಿಕೆಯು ನನ್ನ ನೆನಪಿಗೆ ಬಂದಿತು. ಆ ನಂಬಿಕೆಯು ನಿನ್ನ ಅಜ್ಜಿಯಾದ ಲೋವಿಯಳಲ್ಲಿಯೂ * 1:5 ಅ. ಕೃ. 16:1; 1 ತಿಮೊ. 3:15ನಿನ್ನ ತಾಯಿಯಾದ ಯೂನೀಕೆಯಲ್ಲಿಯೂ ವಾಸವಾಗಿತ್ತು. ಹಾಗೆಯೇ ಅದು ನಿನ್ನಲ್ಲಿಯೂ ವಾಸವಾಗಿದೆ ಎಂದು ದೃಢವಾಗಿ ನಂಬಿದ್ದೇನೆ.
ಆದಕಾರಣ ನಾನು ನಿನ್ನ ತಲೆಯ ಮೇಲೆ ಹಸ್ತವನ್ನಿಟ್ಟದರ ಮೂಲಕ ನಿನಗೆ ದೊರಕಿದ 1:6 1 ತಿಮೊ. 4:14, 1 ಥೆಸ. 5:19ದೇವರ ಕೃಪಾವರವನ್ನು ಪ್ರಜ್ವಲಿಸುವಂತೆ ಮಾಡಬೇಕೆಂದು ನಿನ್ನನ್ನು ಜ್ಞಾಪಿಸುತ್ತಿದ್ದೇನೆ. ದೇವರು ನಮಗೆ ಕೊಟ್ಟಿರುವ ಆತ್ಮವು 1:7 ಲೂಕ 24:49; ಅ. ಕೃ. 1:8ಬಲ, ಪ್ರೀತಿ, ಸಂಯಮಗಳ ಆತ್ಮವೇ ಹೊರತು § 1:7 ರೋಮಾ. 8:15; ಯೋಹಾ 14:27; ಪ್ರಕ 21:8ಹೇಡಿತನದ ಆತ್ಮವಲ್ಲ.
ಆದ್ದರಿಂದ ನೀನು ನಮ್ಮ ಕರ್ತನನ್ನು ಕುರಿತು ಹೇಳುವ * 1:8 1 ಕೊರಿ 1:6ಸಾಕ್ಷಿಯ ವಿಷಯದಲ್ಲಾಗಲಿ ಆತನ 1:8 2 ತಿಮೊ. 1:16; ಎಫೆ 3:1ಸೆರೆಯವನಾದ ನನ್ನ ವಿಷಯದಲ್ಲಾಗಲಿ 1:8 ರೋಮಾ. 1:16; ಇಬ್ರಿ. 11:16; 1 ಯೋಹಾ 2:28ನಾಚಿಕೆ ಪಡದೆ, ದೇವರ ಬಲವನ್ನು ಆಶ್ರಯಿಸಿ ನನ್ನೊಂದಿಗೆ § 1:8 2 ತಿಮೊ. 2:3,9; 4:5ಸುವಾರ್ತೆಗೋಸ್ಕರ ಕಷ್ಟವನ್ನನುಭವಿಸು. * 1:9 ತೀತ. 3:5, ರೋಮಾ. 3:27ಆತನು ನಮ್ಮಲ್ಲಿರುವ ಸುಕೃತ್ಯಗಳನ್ನು ನೋಡಿದ್ದರಿಂದಲ್ಲ, 1:9 ಇಬ್ರಿ. 3:11; ರೋಮಾ. 8:28ತನ್ನ ಸಂಕಲ್ಪವನ್ನು ಅನುಸರಿಸಿ ಕೃಪೆಯಿಂದಲೇ 1:9 1 ತಿಮೊ. 1:1; ತೀತ. 3:4ನಮ್ಮನ್ನು ರಕ್ಷಿಸಿ ಪರಿಶುದ್ಧರಾಗುವುದಕ್ಕೆ ಕರೆದನು. ಆತನು § 1:9 ತೀತ. 1:2, ರೋಮಾ. 16:25; ಎಫೆ 1:4ಅನಾದಿಕಾಲದಲ್ಲಿ ಆ ಕೃಪೆಯನ್ನು ಕ್ರಿಸ್ತ ಯೇಸುವಿನಲ್ಲಿ ನಮಗೆ ಅನುಗ್ರಹಿಸಿ, 10 ಈಗ ನಮ್ಮ ರಕ್ಷಕನಾದ ಕ್ರಿಸ್ತ ಯೇಸುವಿನ * 1:10 2 ಥೆಸ. 2:8ಪ್ರತ್ಯಕ್ಷತೆಯ ಮೂಲಕ ಅದನ್ನು ಪ್ರಕಟಪಡಿಸಿದ್ದಾನೆ. 1:10 1 ಕೊರಿ 15:26, 54, 55; ಇಬ್ರಿ. 2:14,15ಈತನು ಮರಣವನ್ನು ನಿರ್ಮೂಲಗೊಳಿಸಿ ಸುವಾರ್ತೆಯ ಮೂಲಕ ಜೀವವನ್ನೂ ಅಮರತ್ವವನ್ನೂ ಬೆಳಕಿಗೆ ತಂದಿದ್ದಾನೆ.
11  1:11 1 ತಿಮೊ. 2:7ಆ ಸುವಾರ್ತೆಗೋಸ್ಕರ ನಾನು ಪ್ರಚಾರಕನಾಗಿಯೂ, ಅಪೊಸ್ತಲನಾಗಿಯೂ ಮತ್ತು ಬೋಧಕನಾಗಿಯೂ ನೇಮಿಸಲ್ಪಟ್ಟೆನು. 12  § 1:12 2 ತಿಮೊ. 2:9ಅದರ ನಿಮಿತ್ತದಿಂದಲೇ ಈ ಕಷ್ಟಗಳನ್ನು ಅನುಭವಿಸುತ್ತಾ ಇದ್ದೇನೆ. ಆದರೂ ನಾನು ನಾಚಿಕೆಪಡುವುದಿಲ್ಲ. * 1:12 1 ಪೇತ್ರ 4:19ನಾನು ನಂಬಿರುವಾತನನ್ನು ಬಲ್ಲೆನು. ಆತನು ನನಗೆ ಒಪ್ಪಿಸಿಕೊಟ್ಟಿರುವುದನ್ನು 1:12 ನಾನು ಆತನಆತನು 1:12 2 ತಿಮೊ. 1:18; 4:8; 1 ಕೊರಿ 3:13ಆ ದಿನದವರೆಗೆ ಕಾಪಾಡುವುದಕ್ಕೆ ಶಕ್ತನಾಗಿದ್ದಾನೆಂದು ದೃಢವಾಗಿ ನಂಬಿದ್ದೇನೆ. 13 ನೀನು § 1:13 1 ತಿಮೊ. 1:14ಕ್ರಿಸ್ತ ಯೇಸುವಿನಲ್ಲಿ ನಂಬಿಕೆಯೂ ಪ್ರೀತಿಯೂ ಉಳ್ಳವನಾಗಿ, ನನ್ನಿಂದ ಕೇಳಿದ * 1:13 1 ತಿಮೊ. 1:10ಸ್ವಸ್ಥಬೋಧನಾ ವಾಕ್ಯಗಳನ್ನು ಮಾದರಿಯಾಗಿಟ್ಟುಕೊಂಡು ಅನುಸರಿಸು. 14  1:14 1 ತಿಮೊ. 6:20ನಿನ್ನ ವಶಕ್ಕೆ ಒಪ್ಪಿಸಿಕೊಟ್ಟಿರುವ ಒಳ್ಳೆಯ ವಿಷಯವನ್ನು 1:14 ರೋಮ. 8:9ನಮ್ಮಲ್ಲಿ ವಾಸವಾಗಿರುವ ಪವಿತ್ರಾತ್ಮನ ಮೂಲಕವಾಗಿ ಕಾಪಾಡಿಕೋ.
15  § 1:15 ಅ. ಕೃ. 19:10ಆಸ್ಯಸೀಮೆಯಲ್ಲಿರುವವರೆಲ್ಲರೂ ನನ್ನನ್ನು ಕೈಬಿಟ್ಟರೆಂಬುದನ್ನು ನೀನು ಬಲ್ಲೆ. ಅವರಲ್ಲಿ ಪುಗೇಲನೂ ಹೆರ್ಮೊಗೇನನೂ ಸೇರಿದ್ದಾರೆ. 16  * 1:16 2 ತಿಮೊ. 4:19ಒನೇಸಿಪೊರನ ಮನೆಯವರಿಗೆ ಕರ್ತನು ಕರುಣೆಯನ್ನು ತೋರಿಸಲಿ, ಅವನು ಹಲವುಬಾರಿ ನನ್ನನ್ನು ಉಪಚರಿಸಿದನು. 1:16 ವ. 8; ಅ. ಕೃ. 28:20ನನ್ನ ಬೇಡಿಗಳಿಗೆ ನಾಚಿಕೆಪಡದೆ, 17 ರೋಮಾಪುರಕ್ಕೆ ಬಂದಕೂಡಲೆ 1:17 ಮತ್ತಾ 25:36-40ಬಹು ಆಸಕ್ತಿಯಿಂದ ವಿಚಾರಿಸಿ ನನ್ನನ್ನು ಹುಡುಕಿ ಕಂಡುಕೊಂಡನು. 18 ಅವನು ಆ ದಿನದಲ್ಲಿ ಕರ್ತನಿಂದ ಕರುಣೆಯನ್ನು ಹೊಂದುವಂತೆ ಕರ್ತನು ಅವನಿಗೆ ಅನುಗ್ರಹಿಸಲಿ. ಎಫೆಸದಲ್ಲಿ ಅವನು ನನಗೆ ಎಷ್ಟೋ ಉಪಚಾರಮಾಡಿದನೆಂಬದು ನಿನಗೆ ಚೆನ್ನಾಗಿ ಗೊತ್ತಿದೆ.

*1:1 1:1 ತೀತ. 1:2; ಇಬ್ರಿ. 9:15

1:1 1:1 1 ಕೊರಿ 1:1

1:1 1:1 2 ಕೊರಿ 1:1

§1:2 1:2 1 ಕೊರಿ 4:17, 2 ತಿಮೊ. 2:1; ಅ. ಕೃ. 16:1

*1:2 1:2 1 ತಿಮೊ. 1:2

1:3 1:3 ರೋಮಾ. 1:9

1:3 1:3 ಅ. ಕೃ. 22:3; 24:14

§1:3 1:3 1 ತಿಮೊ. 3:9; ಅ. ಕೃ. 23:1

*1:3 1:3 ರೋಮಾ. 1:8

1:4 1:4 ಅ. ಕೃ. 20:37

1:4 1:4 ಫಿಲಿ. 1:8

§1:5 1:5 1 ತಿಮೊ. 1:5

*1:5 1:5 ಅ. ಕೃ. 16:1; 1 ತಿಮೊ. 3:15

1:6 1:6 1 ತಿಮೊ. 4:14, 1 ಥೆಸ. 5:19

1:7 1:7 ಲೂಕ 24:49; ಅ. ಕೃ. 1:8

§1:7 1:7 ರೋಮಾ. 8:15; ಯೋಹಾ 14:27; ಪ್ರಕ 21:8

*1:8 1:8 1 ಕೊರಿ 1:6

1:8 1:8 2 ತಿಮೊ. 1:16; ಎಫೆ 3:1

1:8 1:8 ರೋಮಾ. 1:16; ಇಬ್ರಿ. 11:16; 1 ಯೋಹಾ 2:28

§1:8 1:8 2 ತಿಮೊ. 2:3,9; 4:5

*1:9 1:9 ತೀತ. 3:5, ರೋಮಾ. 3:27

1:9 1:9 ಇಬ್ರಿ. 3:11; ರೋಮಾ. 8:28

1:9 1:9 1 ತಿಮೊ. 1:1; ತೀತ. 3:4

§1:9 1:9 ತೀತ. 1:2, ರೋಮಾ. 16:25; ಎಫೆ 1:4

*1:10 1:10 2 ಥೆಸ. 2:8

1:10 1:10 1 ಕೊರಿ 15:26, 54, 55; ಇಬ್ರಿ. 2:14,15

1:11 1:11 1 ತಿಮೊ. 2:7

§1:12 1:12 2 ತಿಮೊ. 2:9

*1:12 1:12 1 ಪೇತ್ರ 4:19

1:12 1:12 ನಾನು ಆತನ

1:12 1:12 2 ತಿಮೊ. 1:18; 4:8; 1 ಕೊರಿ 3:13

§1:13 1:13 1 ತಿಮೊ. 1:14

*1:13 1:13 1 ತಿಮೊ. 1:10

1:14 1:14 1 ತಿಮೊ. 6:20

1:14 1:14 ರೋಮ. 8:9

§1:15 1:15 ಅ. ಕೃ. 19:10

*1:16 1:16 2 ತಿಮೊ. 4:19

1:16 1:16 ವ. 8; ಅ. ಕೃ. 28:20

1:17 1:17 ಮತ್ತಾ 25:36-40