3
ಮೋಶೆಗಿಂತ ಯೇಸು ಶ್ರೇಷ್ಠನು
ಆದ್ದರಿಂದ ಪರಿಶುದ್ಧರಾದ ಸಹೋದರರೇ, ಪರಲೋಕದ *ಎಫೆ 4:1; ಫಿಲಿ. 3:14; 2 ತಿಮೊ. 1:9:ಕರೆಯುವಿಕೆಗೆ ಪಾಲುಗಾರರಾಗಿರುವವರೇ, ನಾವು ಒಪ್ಪಿಕೊಂಡಿರುವ ಯೋಹಾ 20:21. ಅಥವಾ ದೇವಪ್ರೇಷಿತನೂ, ದೇವರಿಂದ ಕಳುಹಿಸಲ್ಪಟ್ಟವನು. ಅಪೊಸ್ತಲನೂ ಮತ್ತು ಮಹಾಯಾಜಕನೂ ಆಗಿರುವ ಯೇಸುವನ್ನು ಗಮನವಿಟ್ಟು ಯೋಚಿಸಿರಿ.
ಅರಣ್ಯ 12:7; ಇಬ್ರಿ. 5:5:ಮೋಶೆಯು ದೇವರ ಮನೆಯಲ್ಲೆಲ್ಲಾ ನಂಬಿಗಸ್ತನಾಗಿದ್ದಂತೆಯೇ, ಯೇಸುವೂ ತನ್ನನ್ನು ನೇಮಕ ಮಾಡಿರುವಾತನಿಗೆ ನಂಬಿಗಸ್ತನಾಗಿದ್ದಾನೆ. ಮನೆಗಿಂತ ಮನೆಕಟ್ಟಿದವನಿಗೆ ಹೆಚ್ಚಾದ ಗೌರವವಿರುವುದರಿಂದ ಮೋಶೆಗಿಂತ ಯೇಸು ಹೆಚ್ಚಾದ ಗೌರವಕ್ಕೆ ಯೋಗ್ಯನೆಂದೆಣಿಸಲ್ಪಟ್ಟಿದ್ದಾನೆ. ಪ್ರತಿಯೊಂದು ಮನೆಯನ್ನು ಯಾರೊಬ್ಬನು ಕಟ್ಟಿರುವನು, ಆದರೆ §ಎಫೆ 2:10; 3:9:ಸಮಸ್ತವನ್ನು ಕಟ್ಟಿದಾತನು ದೇವರೇ. ಮೋಶೆಯು ದೇವರ ಮನೆಯಲ್ಲೆಲ್ಲಾ ನಂಬಿಗಸ್ತನಾದ *ವಿಮೋ 14:31; ಧರ್ಮೋ 34:5; ಯೆಹೋ. 1:2; 8:31; ಕೀರ್ತ 105:26; ಪ್ರಕ 15:3:ಸೇವಕನಾಗಿದ್ದನು. ಅವನು ಮುಂದೆ ಪ್ರಕಟವಾಗಬೇಕಾಗಿದ್ದಂಥ ವಿಷಯಗಳಿಗೆ ಧರ್ಮೋ 18:15,18,19:ಸಾಕ್ಷಿಕೊಟ್ಟಿದ್ದಾನೇ. ಆದರೆ ಕ್ರಿಸ್ತನಾದರೋ ಇಬ್ರಿ. 1:2:ಮಗನಾಗಿ ದೇವರ ಮನೆಯ ಮೇಲೆ ಅಧಿಕಾರಿಯಾಗಿದ್ದಾನೆ. ನಾವು ನಮ್ಮ ಭರವಸೆಯನ್ನೂ, ನಿರೀಕ್ಷೆಯ ಮಹತ್ವವನ್ನೂ, §ಇಬ್ರಿ. 3:14; 6:11; ಮತ್ತಾ 10:22; ಪ್ರಕ 2:26:ಕಡೆ ತನಕ ಗಟ್ಟಿಯಾಗಿ ಹಿಡಿದುಕೊಂಡಿದ್ದರೆ *1 ಕೊರಿ 3:16; 6:19; 2 ಕೊರಿ 6:16; ಎಫೆ 2:21; 1 ತಿಮೊ. 3:15; 1 ಪೇತ್ರ 2:5:ನಾವೇ ದೇವರ ಮನೆಯಾಗಿರುತ್ತೇವೆ.
ದೇವರು ಮಕ್ಕಳಿಗಿರುವ ವಿಶ್ರಾಂತಿ
ಆದ್ದರಿಂದ ಪವಿತ್ರಾತ್ಮನು ಹೇಳುವ ಪ್ರಕಾರ,
ಕೀರ್ತ 95:7-11; ಇಬ್ರಿ. 3:15:ನೀವು ಈ ದಿನ ದೇವರ ಸ್ವರಕ್ಕೆ ಕಿವಿಗೊಡುವುದಾದರೆ,
ವಿಮೋ 17:7:ಇಸ್ರಾಯೇಲ್ಯರು ಅರಣ್ಯದಲ್ಲಿ, ದೇವರನ್ನು ಪರೀಕ್ಷಿಸಿದ ದಿನದಲ್ಲಿ ಹಠಮಾರಿಗಳಾದಂತೆ
ನಿಮ್ಮ ಹೃದಯಗಳನ್ನು ಕಠಿಣಮಾಡಿಕೊಳ್ಳಬೇಡಿರಿ.
ನಿಮ್ಮ ಹಿರಿಯರು ಮೊಂಡುತನದಿಂದ ನನ್ನನ್ನು ಪರೀಕ್ಷಿಸಿ,
§ವಿಮೋ 16:35; ಅರಣ್ಯ 14:33,34; ಅ. ಕೃ. 7:36,42:ನಲವತ್ತು ವರ್ಷ ನನ್ನ ಕೃತ್ಯಗಳನ್ನು ನೋಡಿದರು.
10 ಆದ್ದರಿಂದ, ನಾನು ಈ ಸಂತತಿಯವರ ಮೇಲೆ ಬಹಳ ಬೇಸರಗೊಂಡು,
‘ಅವರು ಯಾವಾಗಲೂ ತಪ್ಪಿಹೋಗುವ ಹೃದಯವುಳ್ಳವರೂ,
ಅವರು ನನ್ನ ಮಾರ್ಗಗಳನ್ನು ತಿಳಿಯದವರೂ’ ಎಂದು ನಾನು ಹೇಳಿದೆ.
11 ಹೀಗಿರಲು ‘ಅವರು ನನ್ನ ವಿಶ್ರಾಂತಿಯಲ್ಲಿ ಸೇರುವುದೇ ಇಲ್ಲವೆಂದು
*ಇಬ್ರಿ. 4:3,5:ಕೋಪಗೊಂಡು ಪ್ರಮಾಣಮಾಡಿದೆನು.’ ”
12 ಸಹೋದರರೇ, ಮತ್ತಾ 16:16; 2 ಕೊರಿ 3:3; 1 ತಿಮೊ. 4:10:ಜೀವಸ್ವರೂಪನಾದ ದೇವರನ್ನು ತ್ಯಜಿಸಿ ಬಿಡುವ ಅಪನಂಬಿಕೆಯುಳ್ಳ ದುಷ್ಟ ಹೃದಯವು ನಿಮ್ಮೊಳಗೆ ಯಾವನಲ್ಲಿಯೂ ಇರದಂತೆ ಜಾಗರೂಕರಾಗಿ ನೋಡಿಕೊಳ್ಳಿರಿ. 13 ನಿಮ್ಮಲ್ಲಿ ಒಬ್ಬರಾದರೂ ಪಾಪದಲ್ಲಿ ಸಿಕ್ಕಿ ಯೆಶಾ 44:20; ರೋಮಾ. 7:11; ಎಫೆ 4:22:ಮೋಸಹೋಗಿ ಕಠಿಣರಾಗದಂತೆ, ‘ಇಂದು’ ಎಂದು ಕರೆಯಲ್ಪಡುವ ಅವಕಾಶ ಇನ್ನೂ ಇರುವಾಗಲೇ, ಪ್ರತಿದಿನವೂ ಒಬ್ಬರನ್ನೊಬ್ಬರು ಪ್ರೋತ್ಸಾಹಿಸಿರಿ. 14 ಮೊದಲಿನಿಂದಲೂ ಇರುವ ನಮ್ಮ ಭರವಸೆಯನ್ನು §ಇಬ್ರಿ. 3:6; 10:23; 1 ಕೊರಿ 15:2:ಅಂತ್ಯದ ವರೆಗೂ ದೃಢವಾಗಿ ಹಿಡಿದುಕೊಳ್ಳುವುದಾದರೆ *ಅಥವಾ, ನಮ್ಮ ಹಿರಿಯರು ಎದುರು ನೋಡುತ್ತಿದ್ದ ಕ್ರಿಸ್ತನಲ್ಲಿ. ನಾವು ಕ್ರಿಸ್ತನಲ್ಲಿ ಪಾಲುಗಾರರಾಗುತ್ತೇವೆ.
15 ಕೀರ್ತ 95:7-11; ಇಬ್ರಿ. 3:7; 4:7:ನೀವು ಈ ಹೊತ್ತು ದೇವರ ಸ್ವರವನ್ನು ಕೇಳುವುದಾದರೆ,
ಪೂರ್ವಿಕರು ಮೊಂಡುತನದಿಂದ ಮಾಡಿದಂತೆ,
ನಿಮ್ಮ ಹೃದಯಗಳನ್ನು ಕಠಿಣಮಾಡಿಕೊಳ್ಳಬೇಡಿರಿ.”
16 ಅರಣ್ಯ 14:2,23,24,30; ಧರ್ಮೋ 1:34-38:ಆತನು ನುಡಿದದ್ದನ್ನು ಕೇಳಿ ವಿರೋಧಿಸಿದವರು ಯಾರು? ಮೋಶೆಯ ಮೂಲಕ ಐಗುಪ್ತದೊಳಗಿಂದ ಹೊರಗೆ ಕರೆತರಲ್ಪಟ್ಟವರೆಲ್ಲರೂ ಅಲ್ಲವೇ? 17 ಮತ್ತು ದೇವರು ನಲವತ್ತು ವರ್ಷ ಯಾರ ಮೇಲೆ ಬಹಳವಾಗಿ ಕೋಪಗೊಂಡನು? ಪಾಪ ಮಾಡಿದವರ ಮೇಲೆ ಅಲ್ಲವೇ? §ಅರಣ್ಯ 14:29; 1 ಕೊರಿ 10:5:ಅವರ ಶವಗಳು ಅರಣ್ಯದಲ್ಲಿ ಬಿದ್ದುಹೋದವು. 18 ನನ್ನ ವಿಶ್ರಾಂತಿಯಲ್ಲಿ *ಧರ್ಮೋ 1:34,35; ಇಬ್ರಿ. 4:2:ನೀವು ಸೇರುವುದೇ ಇಲ್ಲವೆಂದು ಯಾರನ್ನು ಕುರಿತು ಆತನು ಪ್ರಮಾಣಮಾಡಿದನೂ? ಅವಿಧೇಯರನ್ನು ಕುರಿತಲ್ಲವೇ? 19 ಇಬ್ರಿ. 4:6; ಕೀರ್ತ 78:21; 106:24ಅವರು ವಿಶ್ರಾಂತಿಯಲ್ಲಿ ಸೇರಲಾರದೇ ಹೋದದ್ದು ಅವರ ಅಪನಂಬಿಕೆಯಿಂದಲೇ ಎಂದು ನಾವು ಅರಿತಿದ್ದೇವೆ.

*3:1 ಎಫೆ 4:1; ಫಿಲಿ. 3:14; 2 ತಿಮೊ. 1:9:

3:1 ಯೋಹಾ 20:21. ಅಥವಾ ದೇವಪ್ರೇಷಿತನೂ, ದೇವರಿಂದ ಕಳುಹಿಸಲ್ಪಟ್ಟವನು.

3:2 ಅರಣ್ಯ 12:7; ಇಬ್ರಿ. 5:5:

§3:4 ಎಫೆ 2:10; 3:9:

*3:5 ವಿಮೋ 14:31; ಧರ್ಮೋ 34:5; ಯೆಹೋ. 1:2; 8:31; ಕೀರ್ತ 105:26; ಪ್ರಕ 15:3:

3:5 ಧರ್ಮೋ 18:15,18,19:

3:6 ಇಬ್ರಿ. 1:2:

§3:6 ಇಬ್ರಿ. 3:14; 6:11; ಮತ್ತಾ 10:22; ಪ್ರಕ 2:26:

*3:6 1 ಕೊರಿ 3:16; 6:19; 2 ಕೊರಿ 6:16; ಎಫೆ 2:21; 1 ತಿಮೊ. 3:15; 1 ಪೇತ್ರ 2:5:

3:7 ಕೀರ್ತ 95:7-11; ಇಬ್ರಿ. 3:15:

3:8 ವಿಮೋ 17:7:

§3:9 ವಿಮೋ 16:35; ಅರಣ್ಯ 14:33,34; ಅ. ಕೃ. 7:36,42:

*3:11 ಇಬ್ರಿ. 4:3,5:

3:12 ಮತ್ತಾ 16:16; 2 ಕೊರಿ 3:3; 1 ತಿಮೊ. 4:10:

3:13 ಯೆಶಾ 44:20; ರೋಮಾ. 7:11; ಎಫೆ 4:22:

§3:14 ಇಬ್ರಿ. 3:6; 10:23; 1 ಕೊರಿ 15:2:

*3:14 ಅಥವಾ, ನಮ್ಮ ಹಿರಿಯರು ಎದುರು ನೋಡುತ್ತಿದ್ದ ಕ್ರಿಸ್ತನಲ್ಲಿ.

3:15 ಕೀರ್ತ 95:7-11; ಇಬ್ರಿ. 3:7; 4:7:

3:16 ಅರಣ್ಯ 14:2,23,24,30; ಧರ್ಮೋ 1:34-38:

§3:17 ಅರಣ್ಯ 14:29; 1 ಕೊರಿ 10:5:

*3:18 ಧರ್ಮೋ 1:34,35; ಇಬ್ರಿ. 4:2:

3:19 ಇಬ್ರಿ. 4:6; ಕೀರ್ತ 78:21; 106:24