10
ಧರ್ಮಶಾಸ್ತ್ರವು ಮುಂದೆ ಬರಬೇಕಾಗಿದ್ದ ಉತ್ತಮ ಸಂಗತಿಗಳ *ಇಬ್ರಿ. 8:5; ಕೊಲೊ 2:17:ಛಾಯೆಯೇ ಹೊರತು ಅವುಗಳ ನಿಜ ಸ್ವರೂಪವಲ್ಲ. ಆದ್ದರಿಂದ ಆ ಧರ್ಮಶಾಸ್ತ್ರವು ಪ್ರತಿ ವರ್ಷವೂ ಯಾವಾಗಲೂ ಅರ್ಪಿತವಾಗುವ ಒಂದೇ ವಿಧವಾದ ಯಜ್ಞಗಳನ್ನು ಅರ್ಪಿಸಿ, ದೇವರ ಸಮೀಪಕ್ಕೆ ಬರುವವರನ್ನು ಇಬ್ರಿ. 9:9:ಎಂದಿಗೂ ಪರಿಪೂರ್ಣತೆಗೆ ತರಲಾರದು. ತಂದಿದ್ದ ಪಕ್ಷದಲ್ಲಿ ಯಜ್ಞಗಳ ನಿಂತು ಹೋಗುತ್ತಿದ್ದವು, ಏಕೆಂದರೆ ಆರಾಧನೆ ಮಾಡುವವರು ಒಂದು ಸಾರಿ ಶುದ್ಧೀಕರಿಸಲ್ಪಟ್ಟ ಮೇಲೆ, ಅವರಿಗೆ ಪಾಪದ ಪ್ರಜ್ಞೆ ಎಂದಿಗೂ ಕಾಡುತ್ತಿರಲಿಲ್ಲ. ಈಗಲಾದರೋ ಆ ಯಜ್ಞಗಳಿಂದ ಪ್ರತಿ ವರ್ಷದಲ್ಲಿಯೂ ಇಬ್ರಿ. 9:7; ಯಾಜ 16:21:ಪಾಪಗಳ ಜ್ಞಾಪಕವಾಗುವುದುಂಟು, ಯಾಕೆಂದರೆ §ವ. 11. ಯೆಶಾ 1:11-15; ಮೀಕ. 6:6-8:ಹೋರಿಗಳ ಮತ್ತು ಕುರಿಗಳ ರಕ್ತದಿಂದ ಪಾಪಗಳನ್ನು ಪರಿಹಾರಮಾಡುವುದು ಅಸಾಧ್ಯವಾಗಿದೆ. ಆದ್ದರಿಂದ ಕ್ರಿಸ್ತನು ಭೂಲೋಕದೊಳಗೆ ಬರುವಾಗ,
*ಕೀರ್ತ 40. 6-8 “(ದೇವರೇ,) ಯಜ್ಞಗಳೂ ಕಾಣಿಕೆಗಳೂ ನಿನಗೆ ಇಷ್ಟವಾಗಿರಲಿಲ್ಲ,
ಆದರೆ ನನಗೆ ಒಂದು ದೇಹವನ್ನು ಸಿದ್ಧಮಾಡಿಕೊಟ್ಟಿರುವೆ,
ಸರ್ವಾಂಗಹೋಮಗಳಲ್ಲಿಯೂ ಪಾಪಪರಿಹಾರಕ ಯಜ್ಞಗಳಲ್ಲಿಯೂ ನೀನು ಸಂತೋಷಪಡುವುದಿಲ್ಲ.
ಆಗ ನಾನು, ಇಗೋ, ದೇವರೇ, ಗ್ರಂಥದ ಸುರುಳಿಯಲ್ಲಿ ನನ್ನನ್ನು ಕುರಿತು ಬರೆದಿರುವ ಪ್ರಕಾರ
ನಿನ್ನ ಚಿತ್ತವನ್ನು ನೆರವೇರಿಸುವುದಕ್ಕೆ ಬಂದಿದ್ದೇನೆ” ಎಂದು ಹೇಳಿದೆನು.
ಧರ್ಮಶಾಸ್ತ್ರದ ಪ್ರಕಾರ ಅರ್ಪಿಸಲ್ಪಟ್ಟ ಯಜ್ಞಗಳು, “ಸರ್ವಾಂಗಹೋಮಗಳು ಮತ್ತು ಪಾಪಪರಿಹಾರಕ ಯಜ್ಞಗಳು ನಿನಗೆ ಇಷ್ಟವಾಗಿರಲಿಲ್ಲ. ನೀನು ಅವುಗಳಲ್ಲಿ ಸಂತೋಷಪಡುವುದಿಲ್ಲ” ಎಂದು ಹೇಳಿದ್ದಾನೆ. ತರುವಾಯ ಆತನು ವ. 7:“ಇಗೋ, ನಿನ್ನ ಚಿತ್ತವನ್ನು ನೆರವೇರಿಸುವುದಕ್ಕೆ ಬಂದಿದ್ದೇನೆ” ಎಂದು ಹೇಳಿದ್ದಾನೆ. ಆತನು ಎರಡನೆಯದನ್ನು ಸ್ಥಾಪಿಸುವುದಕ್ಕಾಗಿ ಮೊದಲನೆಯದನ್ನು ತೆಗೆದುಬಿಡುತ್ತಾನೆ. 10 ಯೇಸು ಕ್ರಿಸ್ತನು ಇಬ್ರಿ. 7:27; 9:12:ಒಂದೇ ಸಾರಿ §ಮತ್ತಾ 26:26; ಮಾರ್ಕ 14:22; ಲೂಕ 22:19; 1 ಕೊರಿ 11:24:ದೇಹ ಸಮರ್ಪಣೆ ಮಾಡಿ ದೇವರ ಚಿತ್ತವನ್ನು ನೆರವೇರಿಸಿದ್ದರಿಂದಲೇ *ಇಬ್ರಿ. 10:5; 2:11; 13:12:ನಾವು ಶುದ್ಧೀಕರಿಸಲ್ಪಟ್ಟವರಾಗಿರುವೆವು.
11 ಇದಲ್ಲದೆ ಪ್ರತಿಯೊಬ್ಬ ಯಾಜಕನು ಅರಣ್ಯ 28:3:ಪ್ರತಿದಿನ ಸೇವೆಮಾಡುತ್ತಾ, ಇಬ್ರಿ. 9:9; 10:1, 4:ಎಂದಿಗೂ ಪಾಪಗಳನ್ನು ತೆಗೆದು ಹಾಕಲಾರದಂಥ, ಒಂದೇ ವಿಧವಾದ ಯಜ್ಞಗಳನ್ನು ಪದೇ ಪದೇ ಸಮರ್ಪಿಸುತ್ತಾ ನಿಂತುಕೊಂಡಿರುವನು. 12 ಆದರೆ ಕ್ರಿಸ್ತನು ಪಾಪಗಳಿಗೋಸ್ಕರ ಸದಾಕಾಲಕ್ಕೂ ಒಂದೇ ಯಜ್ಞವನ್ನು ಸಮರ್ಪಿಸಿದ ಮೇಲೆ §ಇಬ್ರಿ. 1:3; ಮಾರ್ಕ 16:19:ದೇವರ ಬಲಗಡೆಯಲ್ಲಿ ಕುಳಿತುಕೊಂಡನು. 13 *ಕೀರ್ತ 110:1; ಇಬ್ರಿ. 1:13. 1 ಕೊರಿ 15:25-28:ಅಂದಿನಿಂದ ತನ್ನ ವಿರೋಧಿಗಳು ತನ್ನ ಪಾದಪೀಠವಾಗಿ ಮಾಡಲ್ಪಡುವ ತನಕ ಆತನು ಕಾಯುತ್ತಿರುವನು. 14 ಆತನು ಶುದ್ಧೀಕರಿಸಲ್ಪಡುವವರನ್ನು ಒಂದೇ ಸಮರ್ಪಣೆಯಿಂದ ನಿರಂತರವಾಗಿ ವ. 1:ಪರಿಪೂರ್ಣರನ್ನಾಗಿ ಮಾಡಿದ್ದಾನೆ.
15 ಪವಿತ್ರಾತ್ಮನು ಸಹ ನಮಗೆ ಸಾಕ್ಷಿಕೊಡುವಾತನಾಗಿ,
16 ಯೆರೆ 31:33; ಇಬ್ರಿ. 8:10; ರೋಮಾ. 11:27:“ಆ ದಿನಗಳು ಬಂದ ಮೇಲೆ
ನಾನು ಅವರ ಸಂಗಡ ಮಾಡಿಕೊಳ್ಳುವ ಒಡಂಬಡಿಕೆಯು ಹೀಗಿರುವುದು,
ನನ್ನ ಆಜ್ಞೆಗಳನ್ನು ಅವರ ಹೃದಯಗಳಲ್ಲಿ ಇಡುವೆನು,
ಅವರ ಮನಸ್ಸಿನಲ್ಲಿ ಅವುಗಳನ್ನು ಬರೆಯುವೆನು ಎಂದು ಕರ್ತನು ನುಡಿಯುತ್ತಾನೆ.”
ಎಂಬುದಾಗಿ ಹೇಳಿದ ತರುವಾಯ ಇನ್ನು, 17 §ಯೆರೆ 31:34; ಇಬ್ರಿ. 8:12:“ಅವರ ಪಾಪಗಳನ್ನೂ ಅವರ ದುಷ್ಕೃತ್ಯಗಳನ್ನೂ ನನ್ನ ನೆನಪಿಗೆ ಎಂದಿಗೂ ತಂದುಕೊಳ್ಳುವುದಿಲ್ಲ.” ಎಂದು ಹೇಳುತ್ತಾನೆ. 18 ಪಾಪ ಕ್ಷಮಾಪಣೆಯಾದಲ್ಲಿ ಇನ್ನೂ ಅವುಗಳ ವಿಷಯದಲ್ಲಿ ಯಜ್ಞಗಳನ್ನು ಸಮರ್ಪಣೆಮಾಡುವಂಥ ಅವಶ್ಯಕತೆ ಇಲ್ಲ.
ಯೇಸುವಿನ ಮೂಲಕ ದೇವಸನ್ನಿಧಾನವನ್ನು ಯೋಗ್ಯರಾಗಿ ಸೇರೋಣ
19-20 *ಇಬ್ರಿ. 9:8; ಯೋಹಾ 10:9; 14:6.ಹೀಗಿರುವಲ್ಲಿ ಸಹೋದರರೇ, ಯೇಸು ತನ್ನ ರಕ್ತದಿಂದ ಇಬ್ರಿ. 9:3:ಆತನ ದೇಹವೆಂಬ ಪರದೆಯ ಮೂಲಕ ನಮಗೆ ಹೊಸದಾದ ಸಜೀವ ಮಾರ್ಗವನ್ನು ತೆರೆದಿಟ್ಟಿದ್ದಾನೆ. ಅದರ ಮೂಲಕ ಅತಿ ಇಬ್ರಿ. 4:16:ಪರಿಶುದ್ಧ ಸ್ಥಳವನ್ನು ಪ್ರವೇಶಿಸಲು ನಮಗೆ ಭರವಸೆ ದೊರೆತಿದೆ. 21 ಮತ್ತು §ಜೆಕ. 6:11-13; ಇಬ್ರಿ. 2:17; 4:14:ದೇವರ ಮನೆತನದ ಮೇಲೆ ಅಧಿಕಾರವಿರುವ ಶ್ರೇಷ್ಠ ಯಾಜಕನು ನಮಗಿದ್ದಾನೆ. 22 ಆದಕಾರಣ ಕೆಟ್ಟ ಮನಸ್ಸಾಕ್ಷಿಯನ್ನು ಪ್ರೋಕ್ಷಿಸಿ ಶುದ್ಧೀಕರಿಸಿಕೊಂಡು, *ಇಬ್ರಿ. 9:14:ತಿಳಿನೀರಿನಿಂದ ತೊಳೆದ ದೇಹದಿಂದಲೂ, ಯೆಹೆ. 36:25; ಇಬ್ರಿ. 12:24. 2 ಕೊರಿ 7:1; 1 ಪೇತ್ರ 1:2:ಯಥಾರ್ಥಹೃದಯದಿಂದಲೂ, ನಂಬಿಕೆಯ ಪೂರ್ಣನಿಶ್ಚಯದಿಂದಲೂ ದೇವರ ಸಮೀಪಕ್ಕೆ ಬರೋಣ. 23 ನಾವು ನಮ್ಮ ನಿರೀಕ್ಷೆಯನ್ನು ಕುರಿತು ಮಾಡಿದ ಇಬ್ರಿ. 4:14:ಅರಿಕೆಯನ್ನು ನಿಶ್ಚಂಚಲದಿಂದ ಬಿಗಿಯಾಗಿ ಹಿಡಿಯೋಣ, ಯಾಕೆಂದರೆ §ಇಬ್ರಿ. 11:11; 1 ಕೊರಿ 1:9:ವಾಗ್ದಾನ ಮಾಡಿದಾತನು ನಂಬಿಗಸ್ತನು. 24 ನಾವು ಪರಸ್ಪರ ಹಿತಚಿಂತಕರಾಗಿದ್ದು ಪ್ರೀತಿಸುತ್ತಿರಬೇಕೆಂತಲೂ ಸತ್ಕಾರ್ಯಮಾಡಬೇಕೆಂತಲೂ *ಇಬ್ರಿ. 3:13:ಒಬ್ಬರನ್ನೊಬ್ಬರು ಹುರಿದುಂಬಿಸೋಣ. 25 ಅ. ಕೃ. 2:42:ಸಭೆಯಾಗಿ ಸೇರುವ ರೂಢಿಯನ್ನು ಕೆಲವರು ಬಿಟ್ಟಂತೆ ನಾವು ಬಿಟ್ಟು ಬಿಡದೆ, ರೋಮಾ. 13:11-13; ಯಾಕೋಬ 5:8:ಆ ದಿನವು ಸಮೀಪಿಸುತ್ತಾ ಬರುತ್ತದೆಂದು ನೀವು ತಿಳಿದುಕೊಂಡಿರುವುದರಿಂದ ಒಬ್ಬರನ್ನೊಬ್ಬರು ಮತ್ತಷ್ಟು ಹೆಚ್ಚಾಗಿಯೇ ಪ್ರೋತ್ಸಾಹಿಸುತ್ತಿರೋಣ.
26 ನಾವು §ಇಬ್ರಿ. 6:4; 2 ಪೇತ್ರ. 2:20, 21:ಸತ್ಯದ ಪರಿಜ್ಞಾನವನ್ನು ಹೊಂದಿದ ಮೇಲೂ *ಅರಣ್ಯ 15:30; ಧರ್ಮೋ 17:12:ಬೇಕೆಂದು ಪಾಪಮಾಡಿದರೆ ಇಬ್ರಿ. 6:6; 1 ಯೋಹಾ 5:16:ಪಾಪಪರಿಹಾರಕ್ಕಾಗಿ ಇನ್ನಾವ ಯಜ್ಞವೂ ಉಳಿದಿರುವುದಿಲ್ಲ. 27 ಬದಲಿಗೆ, ಅತ್ಯಂತ ಇಬ್ರಿ. 2:3; 12:25:ಭಯಂಕರವಾದ ನ್ಯಾಯತೀರ್ಪಿನ ನಿರೀಕ್ಷೆ ಹಾಗೂ §ಯೆಶಾ 26:11; ಚೆಫ. 1:18; 3:8. 2 ಥೆಸ. 1:8:ದೇವರ ವಿರೋಧಿಗಳನ್ನು ದಹಿಸುವ ಕೋಪಾಗ್ನಿಯೂ ಮಾತ್ರ ಇರುವವು. 28 *ಧರ್ಮೋ 17:2-6:ಮೋಶೆಯ ಧರ್ಮಶಾಸ್ತ್ರವನ್ನು ತಿರಸ್ಕಾರ ಮಾಡಿದವನಿಗೆ ಅರಣ್ಯ 35:30. ಇಬ್ಬರ ಇಲ್ಲವೆ ಮೂವರ ಸಾಕ್ಷ್ಯಧಾರದ ಮೇಲೆ ಕರುಣೆಯಿಲ್ಲದೆ ಮರಣದಂಡನೆ ಆಗುತ್ತಿತಷ್ಟೆ. 29 ಹೀಗಿರುವಲ್ಲಿ, ಇಬ್ರಿ. 6:6:ದೇವಕುಮಾರನನ್ನು ತುಳಿದು, §ಇಬ್ರಿ. 9:13, 14:ತನ್ನನ್ನು ಶುದ್ಧೀಕರಿಸಿದ *ಇಬ್ರಿ. 13:20; ಜೆಕ. 9:11:ಒಡಂಬಡಿಕೆಯ ರಕ್ತವನ್ನು ಮೂಲ. ಸಾಧಾರಣವೆಂದೆಣಿಸಿ. ಅಶುದ್ಧವೆಂದೆಣಿಸಿ, ಮೂಲ. ಕೃಪೆಯ ಆತ್ಮನನ್ನು. ದೇವರ ಕೃಪಾವರವಾಗಿರುವ ಆತ್ಮನನ್ನು §ಮತ್ತಾ 12:31, 32; ಎಫೆ 4:30. ತಿರಸ್ಕರಿಸುವವನೋ, ಇನೆಂಥ ಕ್ರೂರದಂಡನೆಗೆ ಗುರಿ ಆಗುತ್ತಾನೆಂದು ನೀವೇ ಯೋಚಿಸಿನೋಡಿ? 30 *ಧರ್ಮೋ 32:35; ರೋಮಾ. 12:19:“ಮುಯ್ಯಿಗೆ ಮುಯ್ಯಿ ತೀರಿಸುವುದು ನನ್ನ ಕೆಲಸ, ನಾನೇ ಪ್ರತಿಫಲವನ್ನು ಕೊಡುವೆನೆಂದು” ಹೇಳಿದಾತನನ್ನು ಬಲ್ಲೆವು. ಇದಲ್ಲದೆ ಧರ್ಮೋ 32:36; ಕೀರ್ತ 50. 4:“ಕರ್ತನು ತನ್ನ ಜನರಿಗೆ ನ್ಯಾಯ ತೀರಿಸುವನು” ಎಂದು ಹೇಳಿಯದೆ. 31 ಯೆಶಾ 33:14; ಲೂಕ 12:5:ಜೀವಸ್ವರೂಪನಾದ ದೇವರ ಕೈಯಲ್ಲಿ ಸಿಕ್ಕಿಬೀಳುವುದು ಎಷ್ಟೋ ಭಯಂಕರವಾದದ್ದು.
32 ಹೀಗಿರಲಾಗಿ §ಇಬ್ರಿ. 6:4:ನೀವು ಜ್ಞಾನಪ್ರಕಾಶವನ್ನು ಹೊಂದಿದ ಮೇಲೆ *ಫಿಲಿ. 1:30. ಕಷ್ಟಾನುಭವವೆಂಬ ಬಹು ಹೋರಾಟವನ್ನು ಸಹಿಸಿಕೊಂಡ ಹಿಂದಿನ ದಿನಗಳನ್ನು ನೆನಪಿಗೆ ತಂದುಕೊಳ್ಳಿರಿ. 33 ಕೆಲವು ಸಾರಿ ನೀವು ನಿಂದೆಗಳನ್ನೂ, ಸಂಕಟಗಳನ್ನೂ, ಅನುಭವಿಸಿ 1 ಕೊರಿ 4:9:ಹಾಸ್ಯಕ್ಕೆ ಗುರಿಯಾದಿರಿ. ಇಬ್ರಿ. 13:3; ಮತ್ತಾ 25:36; 2 ತಿಮೊ. 1:16:ಕೆಲವು ಸಾರಿ ಅಂಥವುಗಳನ್ನು ಅನುಭವಿಸಿದವರಲ್ಲಿ ಪಾಲುಗಾರರಾಗಿದ್ದು ಕಷ್ಟಾನುಭವಿಗಳಾದಿರಿ. 34 ನೀವು ಸೆರೆಯವರಿಗೆ ಅನುತಾಪ ತೋರಿಸಿ, ನಿಮಗೋಸ್ಕರವಾಗಿ §1 ಪೇತ್ರ. 1:14:ಉತ್ತಮವಾಗಿಯೂ, ಸ್ಥಿರವಾಗಿಯೂ ಇರುವ ಆಸ್ತಿಯುಂಟೆಂದು ಚೆನ್ನಾಗಿ ಅರಿತುಕೊಂಡು, ನಿಮ್ಮ ಸೊತ್ತನ್ನು ಸುಲುಕೊಳ್ಳುವವರಿಗೆ *ಮತ್ತಾ 5:12:ಸಂತೋಷದಿಂದ ಬಿಟ್ಟು ಕೊಟ್ಟಿದ್ದೀರಿ. 35 ಆದ್ದರಿಂದ ನಿಮ್ಮ ಧೈರ್ಯವನ್ನು ಬಿಟ್ಟುಬಿಡಬೇಡಿರಿ. ಅದಕ್ಕೆ ಇಬ್ರಿ. 2:2; 11:26:ಮಹಾ ಪ್ರತಿಫಲ ಉಂಟು. 36 ನೀವು ಇಬ್ರಿ. 13:21:ದೇವರ ಚಿತ್ತವನ್ನು ನೆರವೇರಿಸಿದ ಮೇಲೆ §ಇಬ್ರಿ. 11:39:ವಾಗ್ದಾನವನ್ನು ಹೊಂದಬೇಕಾದರೆ *ಇಬ್ರಿ. 12:1-7; ಲೂಕ 21:19; ರೋಮಾ. 2:7; 12:12; ಮತ್ತಾ 10:22:ನಿಮಗೆ ತಾಳ್ಮೆಯು ಅವಶ್ಯವಾಗಿದೆ.
37 ಹಬ 2:3, 4:“ಬರುವಾತನು ಹಗ್ಗಾ. 2:6; ಲೂಕ 18:8:ಇನ್ನು ಸ್ವಲ್ಪ ಕಾಲದಲ್ಲಿ
ಬರುವನು ತಡಮಾಡುವುದಿಲ್ಲ.
38 ಆದರೆ ನನ್ನವನಾಗಿರುವ §ರೋಮಾ. 1:17; ಗಲಾ. 3:11:ನೀತಿವಂತನು ನಂಬಿಕೆಯಿಂದಲೇ ಬದುಕುವನು,
ಅವನು ಅದರಿಂದ ಹಿಂಜರಿದರೆ ಅವನಲ್ಲಿ ನನಗೆ ಮೆಚ್ಚಿಕೆಯಿರುವುದಿಲ್ಲ.”
39 ನಾವಾದರೋ ಹಿಂಜರಿದವರಾಗಿ ನಾಶವಾಗುವವರಲ್ಲ, ನಂಬುವವರಾಗಿ ಆತ್ಮರಕ್ಷಣೆಯನ್ನು ಹೊಂದುವವರಾಗಿದ್ದೇವೆ.

*10:1 ಇಬ್ರಿ. 8:5; ಕೊಲೊ 2:17:

10:1 ಇಬ್ರಿ. 9:9:

10:3 ಇಬ್ರಿ. 9:7; ಯಾಜ 16:21:

§10:4 ವ. 11. ಯೆಶಾ 1:11-15; ಮೀಕ. 6:6-8:

*10:5 ಕೀರ್ತ 40. 6-8

10:9 ವ. 7:

10:10 ಇಬ್ರಿ. 7:27; 9:12:

§10:10 ಮತ್ತಾ 26:26; ಮಾರ್ಕ 14:22; ಲೂಕ 22:19; 1 ಕೊರಿ 11:24:

*10:10 ಇಬ್ರಿ. 10:5; 2:11; 13:12:

10:11 ಅರಣ್ಯ 28:3:

10:11 ಇಬ್ರಿ. 9:9; 10:1, 4:

§10:12 ಇಬ್ರಿ. 1:3; ಮಾರ್ಕ 16:19:

*10:13 ಕೀರ್ತ 110:1; ಇಬ್ರಿ. 1:13. 1 ಕೊರಿ 15:25-28:

10:14 ವ. 1:

10:16 ಯೆರೆ 31:33; ಇಬ್ರಿ. 8:10; ರೋಮಾ. 11:27:

§10:17 ಯೆರೆ 31:34; ಇಬ್ರಿ. 8:12:

*10:19-20 ಇಬ್ರಿ. 9:8; ಯೋಹಾ 10:9; 14:6.

10:19-20 ಇಬ್ರಿ. 9:3:

10:19-20 ಇಬ್ರಿ. 4:16:

§10:21 ಜೆಕ. 6:11-13; ಇಬ್ರಿ. 2:17; 4:14:

*10:22 ಇಬ್ರಿ. 9:14:

10:22 ಯೆಹೆ. 36:25; ಇಬ್ರಿ. 12:24. 2 ಕೊರಿ 7:1; 1 ಪೇತ್ರ 1:2:

10:23 ಇಬ್ರಿ. 4:14:

§10:23 ಇಬ್ರಿ. 11:11; 1 ಕೊರಿ 1:9:

*10:24 ಇಬ್ರಿ. 3:13:

10:25 ಅ. ಕೃ. 2:42:

10:25 ರೋಮಾ. 13:11-13; ಯಾಕೋಬ 5:8:

§10:26 ಇಬ್ರಿ. 6:4; 2 ಪೇತ್ರ. 2:20, 21:

*10:26 ಅರಣ್ಯ 15:30; ಧರ್ಮೋ 17:12:

10:26 ಇಬ್ರಿ. 6:6; 1 ಯೋಹಾ 5:16:

10:27 ಇಬ್ರಿ. 2:3; 12:25:

§10:27 ಯೆಶಾ 26:11; ಚೆಫ. 1:18; 3:8. 2 ಥೆಸ. 1:8:

*10:28 ಧರ್ಮೋ 17:2-6:

10:28 ಅರಣ್ಯ 35:30.

10:29 ಇಬ್ರಿ. 6:6:

§10:29 ಇಬ್ರಿ. 9:13, 14:

*10:29 ಇಬ್ರಿ. 13:20; ಜೆಕ. 9:11:

10:29 ಮೂಲ. ಸಾಧಾರಣವೆಂದೆಣಿಸಿ.

10:29 ಮೂಲ. ಕೃಪೆಯ ಆತ್ಮನನ್ನು.

§10:29 ಮತ್ತಾ 12:31, 32; ಎಫೆ 4:30.

*10:30 ಧರ್ಮೋ 32:35; ರೋಮಾ. 12:19:

10:30 ಧರ್ಮೋ 32:36; ಕೀರ್ತ 50. 4:

10:31 ಯೆಶಾ 33:14; ಲೂಕ 12:5:

§10:32 ಇಬ್ರಿ. 6:4:

*10:32 ಫಿಲಿ. 1:30.

10:33 1 ಕೊರಿ 4:9:

10:33 ಇಬ್ರಿ. 13:3; ಮತ್ತಾ 25:36; 2 ತಿಮೊ. 1:16:

§10:34 1 ಪೇತ್ರ. 1:14:

*10:34 ಮತ್ತಾ 5:12:

10:35 ಇಬ್ರಿ. 2:2; 11:26:

10:36 ಇಬ್ರಿ. 13:21:

§10:36 ಇಬ್ರಿ. 11:39:

*10:36 ಇಬ್ರಿ. 12:1-7; ಲೂಕ 21:19; ರೋಮಾ. 2:7; 12:12; ಮತ್ತಾ 10:22:

10:37 ಹಬ 2:3, 4:

10:37 ಹಗ್ಗಾ. 2:6; ಲೂಕ 18:8:

§10:38 ರೋಮಾ. 1:17; ಗಲಾ. 3:11: