ಮತ್ತಾಯನು
ಗ್ರಂಥಕರ್ತೃತ್ವ
ಈ ಪುಸ್ತಕದ ಗ್ರಂಥಕರ್ತನು ಮತ್ತಾಯನು, ಅವನು ಸುಂಕ ವಸೂಲಿಗಾರನಾಗಿದ್ದನು, ಯೇಸುವನ್ನು ಹಿಂಬಾಲಿಸಲು ತನ್ನ ಕೆಲಸ ಬಿಟ್ಟಂಥವನಾಗಿದ್ದನು (9:9,13). ಮಾರ್ಕನು ಮತ್ತು ಲೂಕನು ತಮ್ಮ ಪುಸ್ತಕಗಳಲ್ಲಿ ಅವನನ್ನು ಲೇವಿ ಎಂದು ಉಲ್ಲೇಖಿಸುತ್ತಾರೆ. ಕರ್ತನ ದಾನ ಎಂಬುದು ಅವನ ಹೆಸರಿನ ಅರ್ಥ, ಆರಂಭಿಕ ಸಭೆಯ ಪಾದ್ರಿಗಳು 12 ಮಂದಿ ಅಪೊಸ್ತಲರಲ್ಲಿ ಒಬ್ಬನಾದ ಮತ್ತಾಯನನ್ನು ಈ ಪುಸ್ತಕದ ಗ್ರಂಥಕರ್ತನೆಂದು ಒಮ್ಮತವಾಗಿ ಒಪ್ಪಿಕೊಂಡಿದ್ದಾರೆ. ಮತ್ತಾಯನು ಯೇಸುವಿನ ಸೇವೆಯಲ್ಲಿ ನಡೆದ ಘಟನೆಗಳ ಪ್ರತ್ಯಕ್ಷದರ್ಶಿಯಾಗಿದ್ದಾನೆ. ಇತರ ಸುವಾರ್ತೆಯ ಕಥನದೊಂದಿಗೆ ಮತ್ತಾಯನ ಸುವಾರ್ತೆಯ ತುಲನಾತ್ಮಕ ಅಧ್ಯಯನವು ಕ್ರಿಸ್ತನ ಅಪೊಸ್ತಲಿಕ ಸಾಕ್ಷಿಯು ವಿಂಗಡಿಸಲ್ಪಟ್ಟಿಲ್ಲ ಎಂಬುದನ್ನು ಸಾಬೀತುಪಡಿಸುತ್ತದೆ.
ಬರೆದ ದಿನಾಂಕ ಮತ್ತು ಸ್ಥಳ
ಸರಿಸುಮಾರು ಕ್ರಿ.ಶ. 50-70 ರ ನಡುವೆ ಬರೆಯಲ್ಪಟ್ಟಿದೆ.
ಮತ್ತಾಯ ಸುವಾರ್ತೆಯ ಯೆಹೂದ್ಯ ಲಕ್ಷಣವನ್ನು ಪರಿಗಣಿಸುವುದಾದರೆ, ಅದು ಪ್ಯಾಲೆಸ್ಟೈನ್ ಅಥವಾ ಸಿರಿಯಾದಲ್ಲಿ ಬರೆಯಲ್ಪಟ್ಟಿರಬಹುದು, ಅಂತಿಯೋಕ್ಯದಲ್ಲಿ ಬರೆಯಲು ಪ್ರಾರಂಭವಾಗಿರಬಹುದು ಎಂದು ಅನೇಕರು ಭಾವಿಸುತ್ತಾರೆ.
ಸ್ವೀಕೃತದಾರರು
ಆತನ ಸುವಾರ್ತೆಯು ಗ್ರೀಕ್ನಲ್ಲಿ ಬರೆದಿರುವ ಕಾರಣ, ಮತ್ತಾಯನು ಗ್ರೀಕ್ ಭಾಷಿಕರಾದ ಯೆಹೂದ್ಯ ಸಮುದಾಯದಿಂದ ಬಂದಂಥ ಓದುಗರ ಕಡೆಗೆ ಒಲವನ್ನು ತೋರಿರಬಹುದು. ಅನೇಕ ಅಂಶಗಳು ಯೆಹೂದ್ಯ ಓದುಗರ ಬಗ್ಗೆ ಸೂಚಿಸುತ್ತವೆ: ಹಳೇ ಒಡಂಬಡಿಕೆಯ ವಿಷಯಗಳ ನೆರವೇರಿಕೆಯು ಮತ್ತಾಯನ ಆಸಕ್ತಿಯ ವಿಷಯವಾಗಿತ್ತು; ಅಬ್ರಹಾಮನಿಂದ ಯೇಸುವಿನವರೆಗೆ ಇರುವ ವಂಶಾವಳಿಯ ರಚನೆ (1:1-17); ಯೆಹೂದ್ಯ ಪರಿಭಾಷೆಯ ಬಳಕೆ (ಉದಾಹರಣೆಗೆ, ಪರಲೋಕ ರಾಜ್ಯ, ಪರಲೋಕವು ದೇವರ ನಾಮವನ್ನು ಉಪಯೋಗಿಸುವುದಕ್ಕಿರುವ ಯೆಹೂದ್ಯರ ಅನಿಚ್ಛೆಯನ್ನು ಬಹಿರಂಗಪಡಿಸುತ್ತದೆ ಮತ್ತು ಯೇಸುವನ್ನು ದಾವೀದ ಕುಮಾರನೆಂದು ಒತ್ತಿಹೇಳುತ್ತಿರುವುದು, 1:1; 9:27; 12:23; 15:22; 30:31; 21:9,15; 22:41,45). ಮತ್ತಾಯನು ಯೆಹೂದ್ಯ ಸಮುದಾಯದ ಕಡೆಗೆ ಕೇಂದ್ರೀಕರಿಸಿದ್ದಾನೆ ಎಂಬುದನ್ನು ಸೂಚಿಸುತ್ತದೆ.
ಉದ್ದೇಶ
ಈ ಸುವಾರ್ತೆಯನ್ನು ಬರೆಯುವಾಗ, ಯೇಸು ಮೆಸ್ಸೀಯನೆಂದು ಯೆಹೂದ್ಯ ಓದುಗರಿಗೆ ದೃಢೀಪಡಿಸುವುದು ಮತ್ತಾಯನ ಉದ್ದೇಶವಾಗಿತ್ತು. ದೇವರ ರಾಜ್ಯವನ್ನು ಮಾನವಕುಲದೆಡೆಗೆ ತರುವುದನ್ನು ದೃಢಪಡಿಸುವುದು ಇದರಲ್ಲಿನ ಉದ್ದೇಶವಾಗಿದೆ. ಯೇಸು ಹಳೆಯ ಒಡಂಬಡಿಕೆಯ ಪ್ರವಾದನೆಯನ್ನು ಮತ್ತು ನಿರೀಕ್ಷೆಗಳನ್ನು ನೆರವೇರಿಸುವ ಅರಸನೆಂದು ಅವನು ಒತ್ತಿಹೇಳುತ್ತಿದ್ದಾನೆ (ಮತ್ತಾ 1:1; 16:16; 20:28).
ಮುಖ್ಯಾಂಶ
ಯೇಸು ಯೆಹೂದ್ಯರ ಅರಸನು
ಪರಿವಿಡಿ
1. ಯೇಸುವಿನ ಜನನ — 1:1-2:23
2. ಗಲಿಲಾಯದಲ್ಲಿನ ಯೇಸುವಿನ ಸೇವೆ — 3:1-18:35
3. ಯೂದಾಯದಲ್ಲಿನ ಯೇಸುವಿನ ಸೇವೆ — 19:1-20:34
4. ಯೂದಾಯದಲ್ಲಿನ ಕಡೆಯ ದಿನಗಳು — 21:1-27:66
5. ಸಮಾಪ್ತಿಯ ಸಂಗತಿಗಳು — 28:1-20
1
ಯೇಸು ಕ್ರಿಸ್ತನ ವಂಶಾವಳಿ
ಅಬ್ರಹಾಮನ ಮಗನಾದ ದಾವೀದನ ಕುಮಾರನಾದ ಯೇಸು ಕ್ರಿಸ್ತನ ವಂಶಾವಳಿ.
ಅಬ್ರಹಾಮನ ಮಗನು ಇಸಾಕನು. ಇಸಾಕನ ಮಗನು ಯಾಕೋಬನು. ಯಾಕೋಬನ ಮಗನು ಯೆಹೂದನು, ಅವನ ಅಣ್ಣತಮ್ಮಂದಿರು ಯೆಹೂದನ ಮಕ್ಕಳು. ಯೆಹೂದನಿಗೆ ತಾಮಾರಳಲ್ಲಿ ಪೆರೆಚನು, ಜೆರಹನು ಹುಟ್ಟಿದರು. ಪೆರೆಚನ ಮಗನು ಹೆಚ್ರೋನನು. ಹೆಚ್ರೋನನ ಮಗನು ಅರಾಮನು. ಅರಾಮನ ಮಗನು ಅಮ್ಮಿನಾದಾಬನು. ಅಮ್ಮಿನಾದಾಬನ ಮಗನು ನಹಶೋನನು. ನಹಶೋನನ ಮಗನು ಸಲ್ಮೋನನು. *ಲೂಕ 3:28-38ಸಲ್ಮೋನನ ಮಗನಾದ ಬೋವಜನು ರಾಹಾಬಳಲ್ಲಿ ಹುಟ್ಟಿದವನು. ಬೋವಜನ ಮಗನು ರೂತ. 4:21-22ಓಬೇದನು ರೂತಳಲ್ಲಿ ರೂತ. 4:21-22ಹುಟ್ಟಿದವನು. ಓಬೇದನ ಮಗನು ಇಷಯನು. ಇಷಯನ ಮಗನು ಅರಸನಾದ ದಾವೀದನು. §2 ಸಮು 12:24ದಾವೀದನ ಮಗನಾದ ಸೊಲೊಮೋನನು ಊರೀಯನ ಹೆಂಡತಿಯಲ್ಲಿ ಹುಟ್ಟಿದವನು. ಸೊಲೊಮೋನನ ಮಗನು ರೆಹಬ್ಬಾಮನು. ರೆಹಬ್ಬಾಮನ ಮಗನು ಅಬೀಯನು. ಅಬೀಯನ ಮಗನು ಆಸನು. ಆಸನ ಮಗನು ಯೆಹೋಷಾಫಾಟನು. ಯೆಹೋಷಾಫಾಟನ ಮಗನು ಯೆಹೋರಾಮನು. ಯೆಹೋರಾಮನ ಮಗನು ಉಜ್ಜೀಯನು. ಉಜ್ಜೀಯನ ಮಗನು ಯೋತಾಮನು. ಯೋತಾಮನ ಮಗನು ಆಹಾಜನನು. ಆಹಾಜನ ಮಗನು ಹಿಜ್ಕೀಯನು. 10 ಹಿಜ್ಕೀಯನ ಮಗನು ಮನಸ್ಸೆಯನು. ಮನಸ್ಸೆಯ ಮಗನು ಆಮೋನನು. 11 ಆಮೋನ ಮಗನು ಯೋಷೀಯನು. *2 ಅರಸು. 24:14, 15; 25-11ಬಾಬಿಲೋನಿಗೆ ಸೆರೆಹೋದ ಸಮಯದಲ್ಲಿ ಯೋಷೀಯನಿಗೆ ಯೆಕೊನ್ಯನು, ಅವನ ಅಣ್ಣತಮ್ಮಂದಿರು ಹುಟ್ಟಿದರು. 12 ಬಾಬಿಲೋನಿಗೆ ಸೆರೆಹೋದ ಮೇಲೆ ಯೆಕೊನ್ಯನು ಶೆಯಲ್ತಿಯೇಲನನ್ನು ಪಡೆದನು. ಶೆಯಲ್ತಿಯೇಲನ ಮಗನು ಜೆರುಬ್ಬಾಬೆಲನು 13 ಜೆರುಬ್ಬಾಬೆಲನ ಮಗನು ಅಬಿಹೂದನು. ಅಬಿಹೂದನ ಮಗನು ಎಲ್ಯಕೀಮನು. ಎಲ್ಯಕೀಮನ ಮಗನು ಅಜೋರನು. 14 ಅಜೋರನ ಮಗನು ಸದೋಕನು. ಸದೋಕನ ಮಗನು ಅಖೀಮನು. ಅಖೀಮನ ಮಗನು ಎಲಿಹೂದನು. 15 ಎಲಿಹೂದನ ಮಗನು ಎಲಿಯಾಜರನು. ಎಲಿಯಾಜರನ ಮಗನು ಮತ್ತಾನನು. ಮತ್ತಾನನ ಮಗನು ಯಾಕೋಬನು. 16 ಯಾಕೋಬನ ಮಗನು ಯೋಸೇಫನು. ಯೋಸೇಫನು ಮರಿಯಳ ಗಂಡನು. ಈ ಮರಿಯಳಿಂದಲೇ ಕ್ರಿಸ್ತನೆಂಬ ಯೇಸು ಹುಟ್ಟಿದನು.
17 ಅಬ್ರಹಾಮನಿಂದ ದಾವೀದನ ವರೆಗೂ ಒಟ್ಟು ಹದಿನಾಲ್ಕು ತಲೆಮಾರುಗಳು, ದಾವೀದನಿಂದ ಬಾಬಿಲೋನಿನ ದಾಸತ್ವಕ್ಕೆ ಹೋಗುವವರೆಗೂ ಹದಿನಾಲ್ಕು ತಲೆಮಾರುಗಳು, ಬಾಬಿಲೋನಿನ ದಾಸತ್ವದ ದಿನದಿಂದ ಕ್ರಿಸ್ತನವರೆಗೆ ಹದಿನಾಲ್ಕು ತಲೆಮಾರುಗಳು.
ಯೇಸು ಕ್ರಿಸ್ತನ ಜನನವು
18 ಯೇಸು ಕ್ರಿಸ್ತನ ಜನನವು ಹೇಗಾಯಿತಂದರೆ, ಲೂಕ 1:27,35ಆತನ ತಾಯಿಯಾದ ಮರಿಯಳಿಗೂ ಯೋಸೇಫನಿಗೂ ನಿಶ್ಚಿತಾರ್ಥವಾಗಿತ್ತು. ಅವರಿಬ್ಬರೂ ಮದುವೆಯಾಗಿ ಕೂಡಿಬಾಳುವುದಕ್ಕಿಂತ ಮೊದಲೇ ಮರಿಯಳು ಪವಿತ್ರಾತ್ಮನ ಶಕ್ತಿಯಿಂದ ಗರ್ಭಧರಿಸಿದ್ದು ತಿಳಿದುಬಂತು. 19 ಆದರೆ ಆಕೆಯ ಗಂಡನಾದ ಯೋಸೇಫನು ನೀತಿವಂತನಾಗಿದ್ದ ಕಾರಣ ಮರಿಯಳನ್ನು ಬಯಲಿಗೆ ತಂದು ಅವಮಾನಕ್ಕೆ ಗುರಿಮಾಡದೆ ನಿಶ್ಚಿತಾರ್ಥವನ್ನು ರಹಸ್ಯವಾಗಿ ಮುರಿದುಬಿಡಬೇಕೆಂದು ಆಲೋಚಿಸಿದ್ದನು. 20 ಅವನು ಇದನ್ನು ಕುರಿತು ಆಲೋಚಿಸುತ್ತಿರುವಾಗ, ದೇವದೂತನು ಅವನಿಗೆ ಕನಸಿನಲ್ಲಿ ಕಾಣಿಸಿಕೊಂಡು, “ದಾವೀದನ ಮಗನಾದ ಯೋಸೇಫನೇ, ನೀನು ಮರಿಯಳನ್ನು ಹೆಂಡತಿಯಾಗಿ ಸೇರಿಸಿಕೊಳ್ಳುವುದಕ್ಕೆ ಅಂಜಬೇಡ. ಆಕೆ ಗರ್ಭವತಿಯಾದದ್ದು ಪವಿತ್ರಾತ್ಮನಿಂದಲೇ. 21 ಲೂಕ 1:31ಆಕೆಯು ಒಬ್ಬ ಮಗನನ್ನು ಹೆರುವಳು; ನೀನು ಆತನಿಗೆ ‘ಯೇಸು’ ಎಂದು ಹೆಸರಿಡಬೇಕು; ಏಕೆಂದರೆ ಆತನೇ ತನ್ನ ಜನರನ್ನು ಅವರ ಪಾಪಗಳಿಂದ ಬಿಡಿಸಿ ರಕ್ಷಿಸುವನು,” ಅಂದನು. 22 ಕರ್ತನು ಪ್ರವಾದಿಯ ಮುಖಾಂತರ ಹೇಳಿದ ಮಾತು ನೆರವೇರುವಂತೆ ಇದೆಲ್ಲಾ ನಡೆಯಿತು; ಆ ಮಾತು ಏನೆಂದರೆ,
23 §ಯೆಶಾ 7:14 “ಇಗೋ, ಒಬ್ಬ ಕನ್ನಿಕೆಯು ಗರ್ಭಿಣಿಯಾಗಿ ಮಗನನ್ನು ಹೆರುವಳು;
ಆತನಿಗೆ ಇಮ್ಮಾನುವೇಲ್ ಎಂದು ಹೆಸರಿಡುವರು.
‘ದೇವರು ನಮ್ಮ ಕೂಡ ಇದ್ದಾನೆಂದು’ ಈ ಹೆಸರಿನ ಅರ್ಥ.”
24 ಆಗ ಯೋಸೇಫನು ಎಚ್ಚೆತ್ತು ದೇವದೂತನು ಅಪ್ಪಣೆಕೊಟ್ಟ ಪ್ರಕಾರ ಮರಿಯಳನ್ನು ಹೆಂಡತಿಯನ್ನಾಗಿ ಸ್ವೀಕರಿಸಿಕೊಂಡನು. 25 ಆದರೆ ಆಕೆಯು ಗಂಡು ಮಗುವಿಗೆ ಜನ್ಮನೀಡುವವರೆಗೂ ಆಕೆಯೊಡನೆ ಶರೀರ ಸಂಬಂಧವಿಲ್ಲದೆ ಇದ್ದನು. ಮತ್ತು ಯೋಸೇಫನು ಆ ಮಗುವಿಗೆ ‘ಯೇಸು’ ಎಂದು ಹೆಸರಿಟ್ಟನು.

*1:5 ಲೂಕ 3:28-38

1:5 ರೂತ. 4:21-22

1:5 ರೂತ. 4:21-22

§1:6 2 ಸಮು 12:24

*1:11 2 ಅರಸು. 24:14, 15; 25-11

1:18 ಲೂಕ 1:27,35

1:21 ಲೂಕ 1:31

§1:23 ಯೆಶಾ 7:14