24
ಯೆಹೋವನ ಸನ್ನಿಧಿಯಲ್ಲಿ ಸೇರತಕ್ಕವರು
ದಾವೀದನ ಕೀರ್ತನೆ.
ಭೂಮಿಯೂ ಅದರಲ್ಲಿರುವ ಸಮಸ್ತವೂ ಯೆಹೋವನದು;
ಲೋಕವೂ ಮತ್ತು ಅದರ ನಿವಾಸಿಗಳೂ ಆತನವೇ.
ಆತನೇ ಅದರ ಅಸ್ತಿವಾರವನ್ನು ಸಾಗರದ ಮೇಲೆ ಹಾಕಿದವನು;
ಅದನ್ನು ಜಲರಾಶಿಗಳ ಮೇಲೆ ಸ್ಥಿರಪಡಿಸಿದವನು ಆತನೇ.
ಯೆಹೋವನ ಪರ್ವತವನ್ನು*ಪರ್ವತವನ್ನು ಇದು ದೇವಾಲಯವನ್ನು ಕಟ್ಟಿದ ಪರ್ವತವಾಗಿದೆ. ಚೀಯೋನ್ ಪರ್ವತಾರೋಹಣವನ್ನು ಮಾಡುವ ಮತ್ತು ದೇವಾಲಯವನ್ನು ಪ್ರವೇಶಿಸುವ ಉದ್ದೇಶವೇನೆಂದರೆ ಯೆಹೋವನನ್ನು ಆರಾಧಿಸಲು ಹೋಗುವುದಾಗಿದೆ. ಹತ್ತತಕ್ಕವನು ಯಾರು?
ಆತನ ಪವಿತ್ರಸ್ಥಾನದಲ್ಲಿ ಅಥವಾ ನಿಲ್ಲುವುದಕ್ಕೆ.ಪ್ರವೇಶಿಸುವುದಕ್ಕೆ ಎಂಥವನು ಯೋಗ್ಯನು?
ಯಾರು ಅಯೋಗ್ಯಕಾರ್ಯಗಳಲ್ಲಿ ಮನಸ್ಸಿಡದೆ,
ಮೋಸ ಪ್ರಮಾಣಮಾಡದೆ,
ಶುದ್ಧಹಸ್ತವೂ, ನಿರ್ಮಲಮನಸ್ಸೂ ಉಳ್ಳವನಾಗಿದ್ದಾನೋ,
ಅವನೇ ಯೆಹೋವನಿಂದ ಶುಭವನ್ನು ಹೊಂದುವನು;
ತನ್ನ ರಕ್ಷಕನಾದ ದೇವರಿಂದ ನೀತಿಫಲವನ್ನು ಪಡೆಯುವನು.
ಇಂಥವರೇ ಆತನ ದರ್ಶನವನ್ನು ಬಯಸುವವರು.
ಯಾಕೋಬ್ಯರ ದೇವರೇ, ನಿನ್ನ ಸಾನ್ನಿಧ್ಯವನ್ನು ಸೇರುವವರು ಇಂಥವರೇ.
ಸೆಲಾ
ದ್ವಾರಗಳೇ, ಉನ್ನತವಾಗಿರ್ರಿ!
ಪುರಾತನವಾದ ಕದಗಳೇ ತೆರೆದುಕೊಂಡಿರ್ರಿ!
ಮಹಾಮಹಿಮೆಯುಳ್ಳ ಅರಸನು ಆಗಮಿಸುತ್ತಾನೆ.
ಮಹಾಮಹಿಮೆಯುಳ್ಳ ಈ ಅರಸನು ಯಾರು?
ಮಹಾ ಬಲಿಷ್ಠನೂ, ವಿಶೇಷ ಪರಾಕ್ರಮಿಯೂ ಆಗಿರುವ ಯೆಹೋವ,
ಯುದ್ಧವೀರನಾಗಿರುವ ಯೆಹೋವ.
ದ್ವಾರಗಳೇ, ಉನ್ನತವಾಗಿರ್ರಿ!
ಪುರಾತನವಾದ ಕದಗಳೇ, ತೆರೆದುಕೊಂಡಿರ್ರಿ!
ಮಹಾಮಹಿಮೆಯುಳ್ಳ ಅರಸನು ಆಗಮಿಸುತ್ತಾನೆ.
10 ಮಹಾಮಹಿಮೆಯುಳ್ಳ ಈ ಅರಸನು ಯಾರು?
ಸೇನಾಧೀಶ್ವರನಾದ ಯೆಹೋವನೇ,
ಮಹಾಮಹಿಮೆಯುಳ್ಳ ಅರಸನು ಈತನೇ.
ಸೆಲಾ.

*24:3 ಪರ್ವತವನ್ನು ಇದು ದೇವಾಲಯವನ್ನು ಕಟ್ಟಿದ ಪರ್ವತವಾಗಿದೆ. ಚೀಯೋನ್ ಪರ್ವತಾರೋಹಣವನ್ನು ಮಾಡುವ ಮತ್ತು ದೇವಾಲಯವನ್ನು ಪ್ರವೇಶಿಸುವ ಉದ್ದೇಶವೇನೆಂದರೆ ಯೆಹೋವನನ್ನು ಆರಾಧಿಸಲು ಹೋಗುವುದಾಗಿದೆ.

24:3 ಅಥವಾ ನಿಲ್ಲುವುದಕ್ಕೆ.