120
ಮೋಸಗಾರರ ಮಧ್ಯದಲ್ಲಿ ವಾಸಿಸುವವನ ಪ್ರಾರ್ಥನೆ
ಯಾತ್ರಾಗೀತೆ.
1 ನನ್ನ ಇಕ್ಕಟ್ಟಿನಲ್ಲಿ ಯೆಹೋವನಿಗೆ ಮೊರೆಯಿಟ್ಟೆನು;
ಆತನು ಸದುತ್ತರವನ್ನು ದಯಪಾಲಿಸಿದನು.
2 ಯೆಹೋವನೇ, ಸುಳ್ಳು ಬಾಯಿಯೂ,
ವಂಚಿಸುವ ನಾಲಿಗೆ ಉಳ್ಳವರಿಂದ ನನ್ನನ್ನು ಬಿಡಿಸು.
3 ವಂಚಿಸುವ ನಾಲಿಗೆಯೇ, ದೇವರು ನಿನಗೇನು ಕೊಡಬೇಕು?
ಯಾವ ಹೆಚ್ಚಿನ ಶಿಕ್ಷೆಯನ್ನು ಒದಗಿಸಬೇಕು?
4 ಶೂರನ*ಶೂರನ ಬಲಿಷ್ಠನ. ಹದವಾದ ಬಾಣಗಳನ್ನೂ,
ಜಾಲಿಯ ಕೆಂಡಗಳನ್ನೂ ನಿನಗೆ ಕೊಡುವರು.
5 ಅಯ್ಯೋ, ನಾನು ಮೇಷೆಕಿನವರಲ್ಲಿ†ಮೇಷೆಕಿನವರಲ್ಲಿ ಮೇಷೆಕ್ ಕಪ್ಪು ಸಮುದ್ರ ಮತ್ತು ಕ್ಯಾಸ್ಪಿಯನ್ ಸಮುದ್ರದ ನಡುವೆಯಿರುವ ಪ್ರದೇಶವಾಗಿದೆ, ಕೇದಾರನಿಂದ ಬಹಳ ದೂರವಿದೆ. ಕೇದಾರ್ ಮರುಭೂಮಿ ಪ್ರದೇಶವಾಗಿದ್ದು, ಬುಡಕಟ್ಟು ಜನಾಂಗದವರು ಸಿರಿಯಾದಲ್ಲಿನ ದಕ್ಷಿಣದ ದಮಸ್ಕದಲ್ಲಿ ವಾಸಿಸುತ್ತಿದ್ದರು. ಆ ಪ್ರದೇಶಗಳ ಜನರು ಬಹಳ ಹಿಂಸಾತ್ಮಕರಾಗಿದ್ದರು. ತಂಗಬೇಕಲ್ಲಾ!
ಕೇದಾರಿನವರ ಪಾಳೆಯಗಳಲ್ಲಿ ವಾಸಿಸಬೇಕಾಯಿತಲ್ಲಾ!
6 ಸಮಾಧಾನವನ್ನು ದ್ವೇಷಿಸುವವರೊಳಗೆ,
ಇದ್ದು ಇದ್ದು ಸಾಕಾಯಿತು.
7 ನಾನು ಸಮಾಧಾನಪ್ರಿಯನು;
ಅವರೋ, ನಾನು ಮಾತನಾಡಿದರೆ ಯುದ್ಧಕ್ಕೆ ಬರುತ್ತಾರೆ.