ಪ್ರಕಟಣೆ
ಗ್ರಂಥಕರ್ತೃತ್ವ
ಕರ್ತನು ದೇವದೂತನ ಮೂಲಕ ಹೇಳಿರುವಂಥದ್ದನು ಬರೆದಿರುವವನು ನಾನೇ ಎಂದು ಅಪೊಸ್ತಲನಾದ ಯೋಹಾನನು ತನ್ನನ್ನು ಹೆಸರಿಸಿಕೊಳ್ಳುತ್ತಾನೆ. ಆದಿಸಭೆಯ ಆರಂಭಿಕ ಬರಹಗಾರರಾದ ಜಸ್ಟಿನ್ ಮಾರ್ಟಿರ್, ಐರೆನಿಯಸ್, ಹಿಪ್ಪೊಲೈಟಸ್, ಟೆರ್ಟುಲಿಯನ್, ಅಲೆಕ್ಸಾಂಡ್ರಿಯಾದ ಕ್ಲೆಮೆಂಟ್ ಮತ್ತು ಮ್ಯುರಿಟೋರಿಯನ್ ಎಂಬವರೆಲ್ಲರು ಅಪೊಸ್ತಲನಾದ ಯೋಹಾನನು ಪ್ರಕಟಣೆಯ ಪುಸ್ತಕದ ಗ್ರಂಥಕರ್ತನಾಗಿದ್ದಾನೆಂದು ನಂಬುತ್ತಾರೆ. ಪ್ರಕಟಣೆಯನ್ನು ಹಿಂಸೆಯಲ್ಲಿರುವವರಿಗೆ ನಿರೀಕ್ಷೆಯನ್ನು (ದೇವರ ಅಂತಿಮ ವಿಜಯದಲ್ಲಿ) ಶ್ರುತಪಡಿಸಲು, ಸಾಂಕೇತಿಕ ಅಲಂಕಾರವನ್ನು ಬಳಸುವ ಒಂದು ರೀತಿಯ ಯೆಹೂದ್ಯ ಸಾಹಿತ್ಯವಾದ ‘ಅಪೋಕ್ಯಾಲಿಪ್ಟಿಕ್’ (ಭವಿಷ್ಯದ್ದರ್ಶನ) ರೂಪದಲ್ಲಿ ಬರೆಯಲಾಗಿದೆ.
ಬರೆದ ದಿನಾಂಕ ಮತ್ತು ಸ್ಥಳ
ಸರಿಸುಮಾರು ಕ್ರಿ.ಶ. 95-96 ರ ನಡುವೆ ಬರೆಯಲ್ಪಟ್ಟಿದೆ.
ಯೋಹಾನನು ಈ ಪ್ರವಾದನೆಯನ್ನು ಪಡೆದುಕೊಂಡಾಗ ಏಜಿಯನ್ ಸಮುದ್ರದ ದ್ವೀಪವಾದ ಪತ್ಮೊಸ್ ದ್ವೀಪದಲ್ಲಿದ್ದನು ಎಂದು ಅವನು ಸೂಚಿಸುತ್ತಾನೆ (1:9).
ಸ್ವೀಕೃತದಾರರು
ಈ ಪ್ರವಾದನೆಯನ್ನು ಆಸ್ಯ ಸೀಮೆಯಲ್ಲಿರುವ ಏಳು ಸಭೆಗಳಿಗೆ ನಿರ್ದೇಶಿಸಲಾಗಿದೆ ಎಂದು ಯೋಹಾನನು ಹೇಳುತ್ತಾನೆ (1:4).
ಉದ್ದೇಶ
ಯೇಸು ಕ್ರಿಸ್ತನನ್ನು (1:1), ಆತನ ವ್ಯಕ್ತಿತ್ವವನ್ನು, ಆತನ ಶಕ್ತಿಯನ್ನು ಪ್ರಕಟಿಸುವುದು ಮತ್ತು ಶೀಘ್ರದಲ್ಲೇ ಏನು ಸಂಭವಿಸುತ್ತದೆಂದು ಆತನ ಸೇವಕರಿಗೆ ಪ್ರಕಟಿಸುವುದು ಪ್ರಕಟಣೆಯ ಉದ್ದೇಶವಾಗಿದೆ. ಇದು ಲೋಕವು ಖಂಡಿತವಾಗಿ ನಾಶವಾಗುತ್ತದೆ ಮತ್ತು ನ್ಯಾಯತೀರ್ಪು ಖಚಿತವಾಗಿಯೂ ಇದೆ ಎಂಬ ಅಂತಿಮ ಎಚ್ಚರಿಕೆಯಾಗಿದೆ. ಇದು ನಮಗೆ ಪರಲೋಕದ ಮತ್ತು ತಮ್ಮ ನಿಲುವಂಗಿಯನ್ನು ಶುಭ್ರವಾಗಿಟ್ಟುಕೊಂಡಿರುವವರಿಗಾಗಿ ಕಾಯುತ್ತಿರುವ ಸಕಲ ಮಹಿಮೆಗಳ ಮಿನುಗುನೋಟವನ್ನು ತೋರಿಸುತ್ತದೆ. ಪ್ರಕಟಣೆಯು ಮಹಾ ಉಪದ್ರವದ ಸಕಲ ಸಂಕಟಗಳಿಂದ ಹಿಡಿದು ಅವಿಶ್ವಾಸಿಗಳೆಲ್ಲರೂ ನಿತ್ಯವಾಗಿ ಅನುಭವಿಸುವಂಥ ಅಂತಿಮ ಬೆಂಕಿಯವರೆಗಿರುವ ವಿಷಯಗಳನ್ನು ನಮಗೆ ವಿವರಿಸುತ್ತದೆ. ಈ ಪುಸ್ತಕವು ಸೈತಾನನ ಪತನವನ್ನು ಮತ್ತು ಅವನು ಹಾಗೂ ಅವನ ದೂತರು ಹೊಂದತಕ್ಕ ದಂಡನೆಯನ್ನು ಪುನರುಚ್ಚರಿಸುತ್ತದೆ.
ಮುಖ್ಯಾಂಶ
ಅನಾವರಣ
ಪರಿವಿಡಿ
1. ಕ್ರಿಸ್ತನ ಪ್ರಕಟನೆ ಮತ್ತು ಯೇಸುವಿನ ಸಾಕ್ಷಿ — 1:1-8
2. ನೀನು ನೋಡಿದಂಥ ವಿಷಯಗಳು — 1:9-20
3. ಏಳು ಸ್ಥಳೀಯ ಸಭೆಗಳು — 2:1-3:22
4. ಮುಂದೆ ಸಂಭವಿಸಲಿರುವ ವಿಷಯಗಳು — 4:1-22:5
5. ಕರ್ತನ ಅಂತಿಮ ಎಚ್ಚರಿಕೆ ಮತ್ತು ಅಪೊಸ್ತಲನ ಅಂತಿಮ ಪ್ರಾರ್ಥನೆ — 22:6-21
1
ಪೀಠಿಕೆ
ಯೇಸು ಕ್ರಿಸ್ತನ ಪ್ರಕಟನೆಯು, ಆತನು * ಪ್ರಕ 22:6:ಬೇಗನೆ ಸಂಭವಿಸಬೇಕಾಗಿರುವ ಸಂಗತಿಗಳನ್ನು ತನ್ನ ದಾಸರಿಗೆ ತೋರಿಸುವುದಕ್ಕಾಗಿ ದೇವರಿಂದ ಈ ಪ್ರಕಟಣೆಯನ್ನು ಹೊಂದಿದನು. ಇದಲ್ಲದೆ ಆತನು ತನ್ನ ದೂತನನ್ನು ಕಳುಹಿಸಿ ಪ್ರಕ 22:16:ಅವನ ಮೂಲಕ ಆ ಸಂಗತಿಗಳನ್ನು ತನ್ನ ದಾಸನಾದ ಯೋಹಾನನಿಗೆ ತಿಳಿಸಿದನು. ಯೋಹಾನನು ಯೋಹಾ 19:35:ದೇವರ ವಾಕ್ಯದ ಕುರಿತಾಗಿಯೂ § ಅಥವಾ, ಯೇಸು ಕ್ರಿಸ್ತನ ವಿಷಯವಾದ. ಪ್ರಕ 6:9; 12:17; 19:10:ಯೇಸು ಕ್ರಿಸ್ತನು ಹೇಳಿದ ಸಾಕ್ಷಿಯ ವಿಷಯವಾಗಿಯೂ * ಪ್ರಕ 1:11, 19:ತಾನು ಕಂಡದ್ದನ್ನೆಲ್ಲಾ ತಿಳಿಸುವವನಾಗಿ ಸಾಕ್ಷಿಕೊಟ್ಟನು. ಪ್ರಕ 22:7; ಲೂಕ 11:28; 1 ಯೋಹಾ 2:3:ಈ ಪ್ರವಾದನಾ ವಾಕ್ಯಗಳನ್ನು ಓದುವವನೂ, ಕೇಳುವವರೂ ಮತ್ತು ಇದರಲ್ಲಿ ಬರೆದಿರುವುದನ್ನು ಕೈಕೊಂಡು ನಡೆಯುವವರೂ ಧನ್ಯರು. ಪ್ರಕ 22:10; 1 ಯೋಹಾ 2:18; ರೋಮಾ. 13:11ಏಕೆಂದರೆ ಅವು ನೆರವೇರುವ ಕಾಲವು ಸಮೀಪವಾಗಿದೆ.
ಆಸ್ಯಸೀಮೆಯ ಏಳು ಸಭೆಗಳಿಗೆ ವಂದನೆಗಳು
ಆಸ್ಯಸೀಮೆಯಲ್ಲಿರುವ ಏಳು ಸಭೆಗಳಿಗೆ ಯೋಹಾನನು ಬರೆಯುವುದೇನಂದರೆ; § ವಿಮೋ 3:14:ಇರುವಾತನೂ, * ಯೋಹಾ 1:1:ಇದ್ದಾತನೂ, ಬರುವಾತನೂ ಆಗಿರುವಾತನಿಂದ ಪ್ರಕ 1:8; 4:8; ಇಬ್ರಿ. 13:8:ಮತ್ತು ಪ್ರಕ 3:1; 4:5; 5:6:ಆತನ ಸಿಂಹಾಸನದ ಮುಂದಿರುವ ಏಳು ಆತ್ಮಗಳಿಂದ ಮತ್ತು § ಪ್ರಕ 3:14; ಯೋಹಾ 18:37; 1 ತಿಮೊ. 6:13; ಯೆಶಾ 55:4:ನಂಬಿಗಸ್ತ ಸಾಕ್ಷಿಯೂ, * ಕೊಲೊ 1:18. ಕೀರ್ತ 89:27; ಅ. ಕೃ. 26:23; 1 ಕೊರಿ 15:20:ಸತ್ತವರೊಳಗಿಂದ ಮೊದಲು ಮೂಲ: ಹುಟ್ಟಿಬಂದವನೂ. ಎದ್ದುಬಂದಾತನೂ ಮತ್ತು ಪ್ರಕ 17:14; 19:16; ಕೀರ್ತ 89:27:ಭೂರಾಜರ ಅಧಿಪತಿಯೂ ಆಗಿರುವ ಯೇಸು ಕ್ರಿಸ್ತನಿಂದ ನಿಮಗೆ ಕೃಪೆಯೂ ಶಾಂತಿಯೂ ಆಗಲಿ. § ಯೋಹಾ 13:34; 15:9; ರೋಮಾ. 8:37:ನಮ್ಮನ್ನು ಪ್ರೀತಿಸುವಾತನೂ * 1 ಪೇತ್ರ. 1:18, 19:ತನ್ನ ಪವಿತ್ರವಾದ ರಕ್ತದ ಮೂಲಕ ನಮ್ಮನ್ನು ಪಾಪಗಳಿಂದ ಬಿಡಿಸಿದಾತನೂ, ನಮ್ಮನ್ನು ದೇವರ ಪ್ರಕ 5:10; 20:6; 1 ಪೇತ್ರ. 2:9; ವಿಮೋ 19:6:ರಾಜ್ಯವನ್ನಾಗಿಯೂ ರೋಮಾ. 15:6:ತನ್ನ ತಂದೆಯಾದ ದೇವರಿಗೆ ಯಾಜಕರನ್ನಾಗಿಯೂ ಮಾಡಿದಾತನಿಗೆ ಯುಗಯುಗಾಂತರಗಳಲ್ಲಿಯೂ § ರೋಮಾ. 11:36:ಮಹಿಮೆಯು * 1 ಪೇತ್ರ. 4:11:ಬಲವು ಉಂಟಾಗಲಿ. ಆಮೆನ್.
ನೋಡಿರಿ, ಆತನು ದಾನಿ. 7:13; ಮತ್ತಾ 13:41; 16:27; 24:30; 25:31; 26:64; ಯೋಹಾ 1:5 1; ಅ. ಕೃ. 1:16; 1 ಥೆಸ. 4:16; ಯೂದ 4:ಮೇಘಗಳೊಂದಿಗೆ ಬರುತ್ತಾನೆ, ಜೆಕ. 12:10; ಯೋಹಾ 19:37:ಎಲ್ಲರ ಕಣ್ಣುಗಳು ಆತನನ್ನು ನೋಡುವವು, ಆತನನ್ನು ಇರಿದವರು ಸಹ ಅದನ್ನು ಕಾಣುವರು, ಭೂಮಿಯಲ್ಲಿರುವ ಎಲ್ಲಾ ಕುಲದವರು ಆತನ ನಿಮಿತ್ತ ದುಃಖಿಸುವರು. ಹೌದು, ಹಾಗೆಯೇ ಆಗುವುದು. ಆಮೆನ್.
§ ಯೆಶಾ 41:4; 44:6; 48:12; ಪ್ರಕ 21:6; 22:13:“ನಾನೇ ಆದಿಯೂ ಅಂತ್ಯವೂ, * ವ. 4:ಇರುವಾತನೂ, ಇದ್ದಾತನೂ, ಬರುವಾತನೂ, ಸರ್ವಶಕ್ತನೂ” ಎಂದು ದೇವರಾದ ಕರ್ತನು ಹೇಳುತ್ತಾನೆ.
ಕ್ರಿಸ್ತನ ದರ್ಶನ
ನಿಮ್ಮ ಸಹೋದರನೂ ಯೇಸುವಿನ ನಿಮಿತ್ತ ಹಿಂಸೆಯಲ್ಲಿ, 2 ತಿಮೊ. 2:12:ರಾಜ್ಯದಲ್ಲಿ, ತಾಳ್ಮೆಯಲ್ಲಿ, ನಿಮ್ಮೊಂದಿಗೆ ಪಾಲುಗಾರನೂ ಆಗಿರುವ ಯೋಹಾನನೆಂಬ ನಾನು ವ. 2:ದೇವರ ವಾಕ್ಯಕ್ಕೋಸ್ಕರ ಯೇಸುವಿನ ವಿಷಯವಾಗಿ ಸಾಕ್ಷಿ ನೀಡಲು ಪತ್ಮೊಸ್ ಎಂಬ ದ್ವೀಪದಲ್ಲಿದ್ದೆನು. 10 ನಾನು § ಅ. ಕೃ. 20:7; 1 ಕೊರಿ 16:2:ಕರ್ತನ ದಿನದಲ್ಲಿ * ಪ್ರಕ 4:2; 17:3; 21:10. ಯೆಹೆ. 3:12; ಮತ್ತಾ 22:43; 2 ಕೊರಿ 12:2:ದೇವರಾತ್ಮವಶನಾಗಿರಲು, ನನ್ನ ಬೆನ್ನ ಹಿಂದೆ ಮಹಾಶಬ್ದವೊಂದು ಕೇಳಿಸಿತು. ಅದು ಪ್ರಕ 4:1:ತುತ್ತೂರಿಯ ನಾದದಂತಿತ್ತು. 11 ಅದು, ಪ್ರಕ 1:2, 19:“ನೀನು ನೋಡುವುದನ್ನು ಒಂದು ಪುಸ್ತಕದಲ್ಲಿ ಬರೆದು ಎಫೆಸ, ಸ್ಮುರ್ನ, ಪೆರ್ಗಮ, ಥುವತೈರ, ಸಾರ್ದಿಸ್, ಫಿಲದೆಲ್ಫಿಯ, ಲವೊದಿಕೀಯ, ಎಂಬೀ ಏಳು ಸಭೆಗಳಿಗೆ ಕಳುಹಿಸಬೇಕು” ಎಂದು ನುಡಿಯಿತು.
12 ನನ್ನ ಸಂಗಡ ಮಾತನಾಡುತ್ತಿದ್ದ ಶಬ್ದವು ಯಾರದೆಂದು ನೋಡುವುದಕ್ಕೆ ನಾನು ಹಿಂದಕ್ಕೆ ತಿರುಗಿದೆನು. ತಿರುಗಿದಾಗ § ವ. 20; ಪ್ರಕ 2:1; ವಿಮೋ 25:37; ಜೆಕ. 4:2; ಪ್ರಕ 11:4:ಏಳು ಚಿನ್ನದ ದೀಪಸ್ತಂಭಗಳನ್ನೂ 13 ಆ ದೀಪಸ್ತಂಭಗಳ ಮಧ್ಯದಲ್ಲಿ * ದಾನಿ. 7:13; 10:16; ಪ್ರಕ 14:14:ಮನುಷ್ಯಕುಮಾರನಂತೆ ಇರುವವನನ್ನೂ ಕಂಡೆನು. ವಿಮೋ 28:4; ದಾನಿ. 10:5:ಆತನು ನಿಲುವಂಗಿಯನ್ನು ಧರಿಸಿ ಪ್ರಕ 15:6:ಚಿನ್ನದ ಪಟ್ಟಿಯನ್ನು ಎದೆಗೆ ಕಟ್ಟಿಕೊಂಡಿದ್ದನು. 14  § ದಾನಿ. 7:9:ಆತನ ತಲೆಯ ಕೂದಲು ಬಿಳೀ ಉಣ್ಣೆಯಂತೆಯೂ ಹಿಮದಂತೆಯೂ ಬೆಳ್ಳಗಿತ್ತು. * ಪ್ರಕ 2:18; 19:12; ದಾನಿ. 10:6:ಆತನ ಕಣ್ಣುಗಳು ಬೆಂಕಿಯ ಜ್ವಾಲೆಯಂತೆಯೂ, 15  ಯೆಹೆ. 1:7; ದಾನಿ. 10:6:ಆತನ ಪಾದಗಳು ಕುಲುಮೆಯಲ್ಲಿ ಕಾಯಿಸಿದ ತಾಮ್ರದಂತೆಯೂ, ಯೆಹೆ. 1:24; 43:2; ಪ್ರಕ 14:2; 19:6:ಆತನ ಧ್ವನಿಯು ಜಲಪ್ರವಾಹದ ಘೋಷದಂತೆಯೂ ಇದ್ದವು. 16  § ವ. 20; ಪ್ರಕ 2:1; 3:1:ಆತನ ಬಲಗೈಯಲ್ಲಿ ಏಳು ನಕ್ಷತ್ರಗಳಿದ್ದವು, * ಪ್ರಕ 19:15; ಯೆಶಾ 49:2; ಎಫೆ 6:17; ಇಬ್ರಿ. 4:12; ಪ್ರಕ 2:12, 16:ಆತನ ಬಾಯೊಳಗಿಂದ ಹದವಾದ ಇಬ್ಬಾಯಿ ಕತ್ತಿಯು ಹೊರಡುತ್ತಿತ್ತು. ಮತ್ತಾ 17:2:ಆತನ ಮುಖವು ಪ್ರಬಲವಾಗಿ ಪ್ರಕಾಶಿಸುವ ಸೂರ್ಯನಂತಿತ್ತು. 17 ನಾನು ಆತನನ್ನು ಕಂಡಾಗ ಸತ್ತವನ ಹಾಗೆ ಆತನ ಪಾದಗಳ ಮುಂದೆ ಬಿದ್ದೆನು. ಯೆಹೆ. 1:28; ದಾನಿ. 8:17, 18; 10:9, 10, 15; ಮತ್ತಾ 17:6, 7:ಆತನು ತನ್ನ ಬಲಗೈಯನ್ನು ನನ್ನ ಮೇಲಿಟ್ಟು, § ಮತ್ತಾ 17:7:“ಹೆದರಬೇಡ,* ಯೆಶಾ 41:4; 44:6; 48:12; ಪ್ರಕ 2:8; 22:13:ನಾನು ಮೊದಲನೆಯವನೂ, ಕಡೆಯವನೂ, 18  ಸದಾ ಜೀವಿಸುವವನೂ ಆಗಿದ್ದೇನೆ. ರೋಮಾ. 6:9; 14:9:ಸತ್ತವನಾಗಿದ್ದೆನು, ಆದರೆ ಇಗೋ ಯುಗಯುಗಾಂತರಕ್ಕೂ ಜೀವಿಸುವವನಾಗಿದ್ದೇನೆ. ಪ್ರಕ 9:1; 20:1:ಮೃತ್ಯುವಿನ ಮತ್ತು ಪಾತಾಳದ ಬೀಗದ ಕೈಗಳು ನನ್ನಲ್ಲಿ ಇವೆ. 19  ಆದ್ದರಿಂದ§ ಪ್ರಕ 1:2, 11, 12-16ನೀನು ಕಂಡವುಗಳನ್ನೂ ಈಗ ನಡೆಯುತ್ತಿರುವವುಗಳನ್ನೂ ಮುಂದೆ ಆಗಬೇಕಾದವುಗಳನ್ನೂ ಬರೆ. 20  ನನ್ನ ಬಲಗೈಯಲ್ಲಿ ನೀನು ಕಂಡ ಏಳು ನಕ್ಷತ್ರಗಳ ಮತ್ತು ಏಳು ಚಿನ್ನದ ದೀಪಸ್ತಂಭಗಳ ಗೂಢಾರ್ಥವನ್ನು ವಿವರಿಸುತ್ತೇನೆ. ಆ ಏಳು ನಕ್ಷತ್ರಗಳು ಅಂದರೆ ಏಳು ಸಭೆಗಳ* ಪ್ರಕ 7:1; 9:11; 14:18; 16:5:ದೂತರು, ಆ ಏಳು ದೀಪಸ್ತಂಭಗಳು ಅಂದರೆ ಮತ್ತಾ 5:14, 15:ಆ ಏಳು ಸಭೆಗಳು.”

*1:1 ಪ್ರಕ 22:6:

1:1 ಪ್ರಕ 22:16:

1:2 ಯೋಹಾ 19:35:

§1:2 ಅಥವಾ, ಯೇಸು ಕ್ರಿಸ್ತನ ವಿಷಯವಾದ. ಪ್ರಕ 6:9; 12:17; 19:10:

*1:2 ಪ್ರಕ 1:11, 19:

1:3 ಪ್ರಕ 22:7; ಲೂಕ 11:28; 1 ಯೋಹಾ 2:3:

1:3 ಪ್ರಕ 22:10; 1 ಯೋಹಾ 2:18; ರೋಮಾ. 13:11

§1:4 ವಿಮೋ 3:14:

*1:4 ಯೋಹಾ 1:1:

1:4 ಪ್ರಕ 1:8; 4:8; ಇಬ್ರಿ. 13:8:

1:4 ಪ್ರಕ 3:1; 4:5; 5:6:

§1:5 ಪ್ರಕ 3:14; ಯೋಹಾ 18:37; 1 ತಿಮೊ. 6:13; ಯೆಶಾ 55:4:

*1:5 ಕೊಲೊ 1:18. ಕೀರ್ತ 89:27; ಅ. ಕೃ. 26:23; 1 ಕೊರಿ 15:20:

1:5 ಮೂಲ: ಹುಟ್ಟಿಬಂದವನೂ.

1:5 ಪ್ರಕ 17:14; 19:16; ಕೀರ್ತ 89:27:

§1:5 ಯೋಹಾ 13:34; 15:9; ರೋಮಾ. 8:37:

*1:5 1 ಪೇತ್ರ. 1:18, 19:

1:6 ಪ್ರಕ 5:10; 20:6; 1 ಪೇತ್ರ. 2:9; ವಿಮೋ 19:6:

1:6 ರೋಮಾ. 15:6:

§1:6 ರೋಮಾ. 11:36:

*1:6 1 ಪೇತ್ರ. 4:11:

1:7 ದಾನಿ. 7:13; ಮತ್ತಾ 13:41; 16:27; 24:30; 25:31; 26:64; ಯೋಹಾ 1:5 1; ಅ. ಕೃ. 1:16; 1 ಥೆಸ. 4:16; ಯೂದ 4:

1:7 ಜೆಕ. 12:10; ಯೋಹಾ 19:37:

§1:8 ಯೆಶಾ 41:4; 44:6; 48:12; ಪ್ರಕ 21:6; 22:13:

*1:8 ವ. 4:

1:9 2 ತಿಮೊ. 2:12:

1:9 ವ. 2:

§1:10 ಅ. ಕೃ. 20:7; 1 ಕೊರಿ 16:2:

*1:10 ಪ್ರಕ 4:2; 17:3; 21:10. ಯೆಹೆ. 3:12; ಮತ್ತಾ 22:43; 2 ಕೊರಿ 12:2:

1:10 ಪ್ರಕ 4:1:

1:11 ಪ್ರಕ 1:2, 19:

§1:12 ವ. 20; ಪ್ರಕ 2:1; ವಿಮೋ 25:37; ಜೆಕ. 4:2; ಪ್ರಕ 11:4:

*1:13 ದಾನಿ. 7:13; 10:16; ಪ್ರಕ 14:14:

1:13 ವಿಮೋ 28:4; ದಾನಿ. 10:5:

1:13 ಪ್ರಕ 15:6:

§1:14 ದಾನಿ. 7:9:

*1:14 ಪ್ರಕ 2:18; 19:12; ದಾನಿ. 10:6:

1:15 ಯೆಹೆ. 1:7; ದಾನಿ. 10:6:

1:15 ಯೆಹೆ. 1:24; 43:2; ಪ್ರಕ 14:2; 19:6:

§1:16 ವ. 20; ಪ್ರಕ 2:1; 3:1:

*1:16 ಪ್ರಕ 19:15; ಯೆಶಾ 49:2; ಎಫೆ 6:17; ಇಬ್ರಿ. 4:12; ಪ್ರಕ 2:12, 16:

1:16 ಮತ್ತಾ 17:2:

1:17 ಯೆಹೆ. 1:28; ದಾನಿ. 8:17, 18; 10:9, 10, 15; ಮತ್ತಾ 17:6, 7:

§1:17 ಮತ್ತಾ 17:7:

*1:17 ಯೆಶಾ 41:4; 44:6; 48:12; ಪ್ರಕ 2:8; 22:13:

1:18 ರೋಮಾ. 6:9; 14:9:

1:18 ಪ್ರಕ 9:1; 20:1:

§1:19 ಪ್ರಕ 1:2, 11, 12-16

*1:20 ಪ್ರಕ 7:1; 9:11; 14:18; 16:5:

1:20 ಮತ್ತಾ 5:14, 15: