9
ಐದನೆಯ ದೇವದೂತನು ತುತ್ತೂರಿಯನ್ನೂದಿದಾಗ ಆಕಾಶದಿಂದ ಭೂಮಿಗೆ ಬಿದ್ದ *ಅಥವಾ, ನಕ್ಷತ್ರದವನೊಬ್ಬನನ್ನು; ಪ್ರಕ 8:10; ಯೆಶಾ 14:12; ಲೂಕ 10:18; ಪ್ರಕ 12:9:ಒಂದು ನಕ್ಷತ್ರವನ್ನು ಕಂಡೆನು. ಅವನಿಗೆ ಪ್ರಕ 9:2, 11; 11:7; 17:8; 20:1, 3. ಅಧೋಲೋಕವೆಂಬ ಅಭಿಪ್ರಾಯವುಳ್ಳ ಮೂಲದಲ್ಲಿನ ಪದವು ಲೂಕ 8:31; ರೋಮಾ. 10:7 ಈ ವಚನಗಳಲ್ಲಿಯೂ ಉಪಯೋಗಿಸಲ್ಪಟ್ಟಿದೆ. ಅಧೋಲೋಕಕ್ಕೆ ಹೋಗುವ ಅಗಾಧ ಸ್ಥಳ, ಅಂಧಕಾರದ ಸ್ಥಳ. ಕೂಪದ §ಪ್ರಕ 1:18:ಬೀಗದ ಕೈ ಕೊಡಲ್ಪಟ್ಟಿತು. ಅವನು ಅಧೋಲೋಕದ ಕೂಪವನ್ನು ತೆರೆಯಲು ಕೂಪದಿಂದ ಬಂದ ಹೊಗೆ ದೊಡ್ಡ ಕುಲುಮೆಯ *ಯೆಶಾ 34:10:ಹೊಗೆಯಂತೆ ಏರಿತು. ಕೂಪದ ಹೊಗೆಯಿಂದ ಸೂರ್ಯನೂ ಆಕಾಶವೂ ಕಪ್ಪಾಗಿ ಹೋದವು. ಹೊಗೆಯೊಳಗಿಂದ ವಿಮೋ 10:4, 5, 12, 15; ಯೋವೇ. 2:2:ಮಿಡತೆಗಳು ಭೂಮಿಯ ಮೇಲೆ ಹೊರಟುಬಂದವು. ಭೂಮಿಯಲ್ಲಿರುವ ಚೇಳುಗಳಿಗಿರುವಂಥ ಶಕ್ತಿಯನ್ನು ಅವುಗಳಿಗೆ ಕೊಡಲಾಯಿತು. ಪ್ರಕ 8:7:ಭೂಮಿಯ ಮೇಲಿರುವ ಹುಲ್ಲನ್ನಾಗಲಿ ಯಾವ ಹಣ್ಣು ತರಕಾರಿಗಳನ್ನಾಗಲಿ, ಮರವನ್ನಾಗಲಿ ನಾಶಮಾಡದೆ, §ಪ್ರಕ 7:2, 3; ಯೆಹೆ. 9:4:ಹಣೆಯ ಮೇಲೆ ದೇವರ ಮುದ್ರೆಯಿಲ್ಲದವರಾದ ಮನುಷ್ಯರನ್ನು ಮಾತ್ರ ನಾಶಮಾಡಬಹುದೆಂದು ಅವುಗಳಿಗೆ ಅಪ್ಪಣೆಯಾಯಿತು. ಅವರನ್ನು ಕೊಲ್ಲದೆ *ವ. 10:ಐದು ತಿಂಗಳುಗಳವರೆಗೂ ಹಿಂಸಿಸುವುದಕ್ಕೆ ಅಧಿಕಾರವು ದೊರೆಯಿತು. ಅವರಿಗುಂಟಾದ ಯಾತನೆಯು ಮನುಷ್ಯನಿಗೆ ಚೇಳು ಕಡಿತದಿಂದುಂಟಾಗುವ ಯಾತನೆಗೆ ಸಮಾನವಾಗಿತ್ತು. ಆ ಕಾಲದಲ್ಲಿ ಯೋಬ. 3:21; 7:15, 16; ಯೆರೆ 8:3:ಮನುಷ್ಯರು ಮರಣವನ್ನು ಬಯಸುವರು, ಆದರೆ ಅದು ಪ್ರಾಪ್ತವಾಗುವುದಿಲ್ಲ. ಸಾಯಬೇಕೆಂದು ಕೋರುವರು, ಪ್ರಕ 6:16:ಆದರೆ ಮೃತ್ಯುವು ಅವರನ್ನು ಬಿಟ್ಟು ಓಡಿಹೋಗುವುದು.
§ಯೋವೇ. 2:4-7:ಆ ಮಿಡತೆಗಳ ರೂಪವು ಯುದ್ಧಕ್ಕೆ ಸನ್ನದ್ಧವಾಗಿರುವ ಕುದುರೆಗಳ ರೂಪದಂತೆ ಇತ್ತು. *ನಹೂ. 3:17:ಅವುಗಳ ತಲೆಯ ಮೇಲೆ ಚಿನ್ನದ ಕಿರೀಟಗಳಂತೆಯೂ, ದಾನಿ. 7:8:ಅವುಗಳ ಮುಖಗಳು ಮನುಷ್ಯರ ಮುಖಗಳಂತೆಯೂ ಇದ್ದವು. ಅವುಗಳ ಕೂದಲು ಸ್ತ್ರೀಯರ ಕೂದಲಿನಂತೆಯೂ ಯೋವೇ. 1:6:ಹಲ್ಲುಗಳು ಸಿಂಹದ ಹಲ್ಲುಗಳಂತೆಯೂ ಇದ್ದವು. ಅವುಗಳಿಗೆ ಉಕ್ಕಿನ ಕವಚಗಳಂತಿದ್ದ ಕವಚಗಳು ಇದ್ದವು. §ಯೋವೇ. 2:5:ಅವುಗಳ ರೆಕ್ಕೆಗಳ ಶಬ್ದವು ಯುದ್ಧಕ್ಕೆ ಓಡುವ ರಥಾಶ್ವಗಳ ಶಬ್ದದಂತೆ ಇತ್ತು. 10 ಚೇಳಿಗಿರುವಂತೆ ಅವುಗಳಿಗೆ ಬಾಲಗಳೂ, ಕೊಂಡಿಗಳೂ ಇದ್ದವು. ಮನುಷ್ಯರನ್ನು *ವ. 5:ಐದು ತಿಂಗಳುಗಳವರೆಗೂ ಪೀಡಿಸುವ ಸಾಮರ್ಥ್ಯವು ಅವುಗಳ ಬಾಲಗಳಲ್ಲಿಯೇ ಇರುವುದು. 11 ಅಧೋಲೋಕದ ಅಧಿಕಾರಿಯಾದ ದೂತನೇ ಅವುಗಳನ್ನಾಳುವ ಅರಸನು. ಅವನಿಗೆ ಇಬ್ರಿಯ ಭಾಷೆಯಲ್ಲಿ ಯೋಬ. 26:6:ಅಬದ್ದೋನನೆಂತಲೂ, ಗ್ರೀಕ್ ಭಾಷೆಯಲ್ಲಿ ಅಂದರೆ, ನಾಶ ಮಾಡುವವನು, ಸಂಹಾರಕನು. ಅಪೊಲ್ಲುವೋನನೆಂತಲೂ ಹೆಸರುಂಟು.
12 §ಪ್ರಕ 8:13; 11:14:ಮೊದಲನೆಯ ವಿಪತ್ತು ಕಳೆದು ಹೋಯಿತು. ಇಗೋ, ಇನ್ನೂ ಎರಡು ವಿಪತ್ತುಗಳು ಅದರ ಬೆನ್ನಹಿಂದೆಯೇ ಬಂದವು.
13 ಆರನೆಯ ದೇವದೂತನು ತುತ್ತೂರಿಯನ್ನೂದಿದಾಗ ದೇವರ ಸಮ್ಮುಖದಲ್ಲಿರುವ ಚಿನ್ನದ ಯಜ್ಞವೇದಿಯ *ವಿಮೋ 30:3. ಪಾಠಾಂತರ: ನಾಲ್ಕು ಕೊಂಬುಗಳಿಂದ. ಕೊಂಬುಗಳಿಂದ ಹೊರಟ ಒಂದು ಧ್ವನಿಯನ್ನು ಕೇಳಿದೆನು. 14 ಅದು ತುತ್ತೂರಿಯನ್ನು ಹಿಡಿದಿದ್ದ ಆರನೆಯ ದೇವದೂತನಿಗೆ, ಪ್ರಕ 16:12:“ಯೂಫ್ರೆಟಿಸ್ ಎಂಬ ಮಹಾ ನದಿಯ ಬಳಿಯಲ್ಲಿ ಕಟ್ಟಿಹಾಕಿರುವ ಪ್ರಕ 7:1:ನಾಲ್ಕು ಮಂದಿ ದೇವದೂತರನ್ನು ಬಿಚ್ಚಿಬಿಡು” ಎಂದು ಹೇಳಿತು. 15 ಆಗ §ಪ್ರಕ 8:7:ಮನುಷ್ಯರೊಳಗೆ ಮೂರರಲ್ಲಿ ಒಂದು ಭಾಗದ ಜನರನ್ನು ಸಂಹಾರಮಾಡುವುದಕ್ಕಾಗಿ ಗಂಟೆ, ದಿನ, ತಿಂಗಳು, ವರ್ಷ ಎಲ್ಲವನ್ನೂ ನಿಗದಿಮಾಡಲಾಗಿತ್ತು. ಅದಕ್ಕೆ ಸಿದ್ಧರಿದ್ದ ಆ ನಾಲ್ಕು ಮಂದಿ ದೇವದೂತರನ್ನು ಬಿಡುಗಡೆ ಮಾಡಲಾಯಿತು. 16 ಕುದುರೆ ದಂಡಿನವರ ಸಂಖ್ಯೆಯು *ಕೀರ್ತ 68:17; ದಾನಿ. 7:10:ಇಪ್ಪತ್ತು ಕೋಟಿ ಎಂದು ಪ್ರಕ 7:4:ನನಗೆ ಕೇಳಿಸಿತು. 17 ನಾನು ದರ್ಶನದಲ್ಲಿ ಕಂಡ ಕುದುರೆಗಳ ಮತ್ತು ಸವಾರರ ವಿವರಣೆ ಹೇಗಿತ್ತೆಂದರೆ, ಸವಾರರ ಕವಚಗಳ ಬಣ್ಣವು ಬೆಂಕಿ, ಹೊಗೆ, ಗಂಧಕ ಇವುಗಳ ಬಣ್ಣದ ಹಾಗಿತ್ತು ಕುದುರೆಗಳ ತಲೆಗಳು 1ಪೂರ್ವ 12:8; ಯೆಶಾ 5:28, 29:ಸಿಂಹಗಳ ತಲೆಗಳಂತಿದ್ದವು. 18 ಅವುಗಳ ಬಾಯಿಂದ ಹೊರಟ ಆ ಬೆಂಕಿ, ಹೊಗೆ, ಗಂಧಕ ಎಂಬ ಮೂರು ಉಪದ್ರವಗಳಿಂದ §ಪ್ರಕ 8:7:ಮನುಷ್ಯರೊಳಗೆ ಮೂರರಲ್ಲಿ ಒಂದು ಭಾಗವು ಹತವಾಯಿತು. 19 ಆ ಕುದುರೆಗಳ ಸಾಮರ್ಥ್ಯವು ಅವುಗಳ ಬಾಯಲ್ಲಿಯೂ ಬಾಲಗಳಲ್ಲಿಯೂ ಇದ್ದವು. ಅವುಗಳ ಬಾಲಗಳು ತಲೆಗಳುಳ್ಳವುಗಳಾಗಿ ಸರ್ಪಗಳ ಹಾಗೆ ಇದ್ದವು. ಅವುಗಳಿಂದಲೇ ಕೇಡನ್ನುಂಟುಮಾಡುವುದು. 20 ಉಪದ್ರವಗಳಿಂದ ಸಾಯದೆ ಉಳಿದ ಜನರು *ಧರ್ಮೋ 31:29; ಯೆರೆ 1:16; 25:14:ತಾವೇ ಮಾಡಿಕೊಂಡ ವಿಗ್ರಹಗಳನ್ನು ಬಿಟ್ಟು ಪ್ರಕ 2:21:ದೇವರ ಕಡೆಗೆ ತಿರುಗಲಿಲ್ಲ. ಅವರು ಭೂತ, ಪ್ರೇತಗಳ1 ಕೊರಿ 10:20: ಪೂಜೆಯನ್ನೂ §ಕೀರ್ತ 115:4-7; 135:15-17; ದಾನಿ. 5:4, 23:ಬಂಗಾರ, ಬೆಳ್ಳಿ, ತಾಮ್ರ, ಕಲ್ಲು, ಮರ ಮೊದಲಾದವುಗಳಿಂದ ಮಾಡಲ್ಪಟ್ಟ ನೋಡಲಾರದೆ, ಕೇಳಲಾರದೆ, ನಡೆಯಲಾರದೆ ಇರುವ ವಿಗ್ರಹಗಳ ಪೂಜೆಯನ್ನೂ ಬಿಡಲಿಲ್ಲ. 21 ಇದಲ್ಲದೆ ತಾವು ನಡೆಸುತ್ತಿದ್ದ ಕೊಲೆ, *ಪ್ರಕ 21:8; 22:15; ಗಲಾ. 5:20:ಮಾಟ, ಜಾರತ್ವ, ಕಳ್ಳತನ ಇವುಗಳೊಳಗೆ ಒಂದನ್ನೂ ಬಿಡದೆ ಮಾನಸಾಂತರಪಡಲಿಲ್ಲ.

*9:1 ಅಥವಾ, ನಕ್ಷತ್ರದವನೊಬ್ಬನನ್ನು; ಪ್ರಕ 8:10; ಯೆಶಾ 14:12; ಲೂಕ 10:18; ಪ್ರಕ 12:9:

9:1 ಪ್ರಕ 9:2, 11; 11:7; 17:8; 20:1, 3. ಅಧೋಲೋಕವೆಂಬ ಅಭಿಪ್ರಾಯವುಳ್ಳ ಮೂಲದಲ್ಲಿನ ಪದವು ಲೂಕ 8:31; ರೋಮಾ. 10:7 ಈ ವಚನಗಳಲ್ಲಿಯೂ ಉಪಯೋಗಿಸಲ್ಪಟ್ಟಿದೆ.

9:1 ಅಗಾಧ ಸ್ಥಳ, ಅಂಧಕಾರದ ಸ್ಥಳ.

§9:1 ಪ್ರಕ 1:18:

*9:2 ಯೆಶಾ 34:10:

9:3 ವಿಮೋ 10:4, 5, 12, 15; ಯೋವೇ. 2:2:

9:4 ಪ್ರಕ 8:7:

§9:4 ಪ್ರಕ 7:2, 3; ಯೆಹೆ. 9:4:

*9:5 ವ. 10:

9:6 ಯೋಬ. 3:21; 7:15, 16; ಯೆರೆ 8:3:

9:6 ಪ್ರಕ 6:16:

§9:7 ಯೋವೇ. 2:4-7:

*9:7 ನಹೂ. 3:17:

9:7 ದಾನಿ. 7:8:

9:8 ಯೋವೇ. 1:6:

§9:9 ಯೋವೇ. 2:5:

*9:10 ವ. 5:

9:11 ಯೋಬ. 26:6:

9:11 ಅಂದರೆ, ನಾಶ ಮಾಡುವವನು, ಸಂಹಾರಕನು.

§9:12 ಪ್ರಕ 8:13; 11:14:

*9:13 ವಿಮೋ 30:3. ಪಾಠಾಂತರ: ನಾಲ್ಕು ಕೊಂಬುಗಳಿಂದ.

9:14 ಪ್ರಕ 16:12:

9:14 ಪ್ರಕ 7:1:

§9:15 ಪ್ರಕ 8:7:

*9:16 ಕೀರ್ತ 68:17; ದಾನಿ. 7:10:

9:16 ಪ್ರಕ 7:4:

9:17 1ಪೂರ್ವ 12:8; ಯೆಶಾ 5:28, 29:

§9:18 ಪ್ರಕ 8:7:

*9:20 ಧರ್ಮೋ 31:29; ಯೆರೆ 1:16; 25:14:

9:20 ಪ್ರಕ 2:21:

9:20 1 ಕೊರಿ 10:20:

§9:20 ಕೀರ್ತ 115:4-7; 135:15-17; ದಾನಿ. 5:4, 23:

*9:21 ಪ್ರಕ 21:8; 22:15; ಗಲಾ. 5:20: