14
ಕುರಿಮರಿಯು ಮತ್ತು ಆತನ ಜನರು
ಆನಂತರ ನಾನು ನೋಡಲಾಗಿ *ಪ್ರಕ 5:6:ಯಜ್ಞದ ಕುರಿಮರಿಯಾದಾತನು ಕೀರ್ತ 2:6; ಇಬ್ರಿ. 12:22:ಚೀಯೋನ್ ಪರ್ವತದ ಮೇಲೆ ನಿಂತಿರುವುದನ್ನು ಕಂಡೆನು. ಆತನ ಜೊತೆಯಲ್ಲಿ ಪ್ರಕ 7:4:ಒಂದು ಲಕ್ಷದ ನಲವತ್ತನಾಲ್ಕು ಸಾವಿರ ಮಂದಿ ಇದ್ದರು. §ಪ್ರಕ 7:3:ಅವರ ಹಣೆಯ ಮೇಲೆ ಆತನ ಹೆಸರೂ ಆತನ ತಂದೆಯ ಹೆಸರೂ ಬರೆಯಲ್ಪಟ್ಟಿದ್ದವು. ಇದಲ್ಲದೆ ಪರಲೋಕದಿಂದ *ಪ್ರಕ 1:15:ಜಲಪ್ರವಾಹದ ಘೋಷದಂತೆಯೂ ಪ್ರಕ 6:1; 19:6:ದೊಡ್ಡ ಗುಡುಗಿನ ಶಬ್ದದಂತೆಯೂ ಇದ್ದ ಮಹಾಶಬ್ದವನ್ನು ಕೇಳಿದೆನು. ನಾನು ಕೇಳಿದ ಆ ಶಬ್ದವು ಪ್ರಕ 5:8; 15:2:ವೀಣೆಗಳನ್ನು§ತ್ರಿಕೋನಾಕಾರದ ಒಂದು ಬಗೆಯ ತಂತಿ ವಾದ್ಯ ನುಡಿಸಿಕೊಂಡು ಹಾಡುತ್ತಿರುವ ವೀಣೆಗಾರರ ಶಬ್ದದಂತಿತ್ತು. ಅವರು ಸಿಂಹಾಸನದ ಮುಂದೆಯೂ ಆ ನಾಲ್ಕು ಜೀವಿಗಳ ಮತ್ತು ಹಿರಿಯರ ಮುಂದೆಯೂ *ಪ್ರಕ 5:9:ಹೊಸ ಹಾಡನ್ನು ಹಾಡಿದರು. ಭೂಲೋಕದಿಂದ ಕೊಂಡುಕೊಳ್ಳಲ್ಪಟ್ಟ ಆ ಒಂದು ಲಕ್ಷದ ನಲವತ್ತನಾಲ್ಕು ಸಾವಿರ ಜನರ ಹೊರತು ಪ್ರಕ 2:17; 19:12:ಬೇರೆ ಯಾರೂ ಆ ಹಾಡನ್ನು ಕಲಿಯಲಾರರು. ಇವರು ತಮ್ಮ ಶೀಲವನ್ನು ಶುದ್ಧವಾಗಿ ಇಟ್ಟುಕೊಂಡವರು ಅಥವಾ ಶೀಲವನ್ನುಳಿಸಿಕೊಂಡವರು. ಕನ್ಯೆಯರಂತೆ §2 ಕೊರಿ 11:2:ಕಳಂಕರಹಿತರು, ಸ್ತ್ರೀ ಸಹವಾಸದಿಂದ ಮಲಿನರಾಗದವರು. ಯಜ್ಞದ ಕುರಿಮರಿಯಾದಾತನು ಎಲ್ಲಿ ಹೋದರೂ ಇವರು ಆತನನ್ನು ಹಿಂಬಾಲಿಸುವರು. ಇವರು ಮನುಷ್ಯರೊಳಗಿಂದ ಸ್ವಕೀಯ ಜನರಾಗಿ ಕೊಂಡುಕೊಳ್ಳಲ್ಪಟ್ಟು ದೇವರಿಗೂ ಯಜ್ಞದ ಕುರಿಯಾದಾತನಿಗೂ *ಅರಣ್ಯ 18:12; ಯಾಕೋಬ 1:18:ಪ್ರಥಮಫಲದಂತಾದರು. ಇವರ ಬಾಯಲ್ಲಿ ಸುಳ್ಳು ಇರಲೇ ಇಲ್ಲ. ಇವರು ಯೂದ. 24:ನಿರ್ದೋಷಿಗಳಾಗಿದ್ದಾರೆ.
ಮೂವರು ದೇವದೂತರ ಸಂದೇಶಗಳು
ಮತ್ತೊಬ್ಬ ದೇವದೂತನು ಪ್ರಕ 8:13:ಆಕಾಶಮಧ್ಯದಲ್ಲಿ ಹಾರಾಡುತ್ತಿರುವುದನ್ನು ಕಂಡೆನು. ಭೂನಿವಾಸಿಗಳಾಗಿರುವ ಸಕಲ ಜನಾಂಗ, ಕುಲ, ಭಾಷೆ, ಜನಗಳೆಲ್ಲರಿಗೆ ಸಾರಿಹೇಳುವುದಕ್ಕಾಗಿ ನಿತ್ಯವಾದ ಶುಭವರ್ತಮಾನವು ಆತನಲ್ಲಿತ್ತು. ಆ ದೂತನು, “ನೀವೆಲ್ಲರೂ ದೇವರಿಗೆ ಭಯಪಟ್ಟು ಆತನಿಗೆ ಮಹಿಮೆಯನ್ನು ಸಲ್ಲಿಸಿರಿ. ಏಕೆಂದರೆ ಆತನು ನ್ಯಾಯತೀರ್ಪು ಮಾಡುವ ಸಮಯವು ಬಂದಿದೆ. ಭೂಲೋಕ ಪರಲೋಕಗಳನ್ನೂ, ಸಮುದ್ರವನ್ನೂ, §ಪ್ರಕ 8:10; 16:4:ನೀರಿನ ಬುಗ್ಗೆಗಳನ್ನೂ *ನೆಹೆ 9:6; ಪ್ರಕ 4:11:ಉಂಟುಮಾಡಿದಾತನನ್ನು ಆರಾಧಿಸಿರಿ” ಎಂದು ಮಹಾಧ್ವನಿಯಿಂದ ಹೇಳಿದನು.
ಅವನ ಹಿಂದೆ ಎರಡನೆಯ ದೇವದೂತನು ಬಂದು, ಯೆಶಾ 21:9; ಯೆರೆ 51:8; ಪ್ರಕ 18:2:“ಬಿದ್ದಳು! ಬಿದ್ದಳು! ದಾನಿ. 4:30; ಪ್ರಕ 16:19; 17:5; 18:10:ಬಾಬೆಲೆಂಬ ಮಹಾನಗರಿಯು ಬಿದ್ದಳು, ಆಕೆಯು ಸಕಲ ಜನಾಂಗಗಳಿಗೆ §ಅಥವಾ. ಜಾರತ್ವದಿಂದಾಗುವ ದೇವರ ರೌದ್ರವೆಂಬ. ಪ್ರಕ 18:3:ತನ್ನ ಅತಿ ಜಾರತ್ವವೆಂಬ ದ್ರಾಕ್ಷಾರಸವನ್ನು *ಯೆರೆ 51:7:ಕುಡಿಸಿದಳು” ಎಂದು ಹೇಳಿದನು.
ಅವನ ಹಿಂದೆ ಮೂರನೆಯ ದೇವದೂತನು ಬಂದು, “ಯಾವನಾದರೂ ಯಾವುದೇ ಪ್ರಕ 13:15:ಮೃಗವನ್ನೂ ಅದರ ವಿಗ್ರಹವನ್ನೂ ಆರಾಧಿಸಿ ಪ್ರಕ 13:16:ತನ್ನ ಹಣೆಯ ಮೇಲಾಗಲಿ ಕೈಯ ಮೇಲಾಗಲಿ ಅದರ ಗುರುತು ಹಾಕಿಸಿಕೊಂಡಿದ್ದರೆ, 10 ಅವನೂ ಸಹ §ಪ್ರಕ 18:6:ದೇವರ ಕೋಪವೆಂಬ ಪಾತ್ರೆಯಲ್ಲಿ ಏನೂ ಬೆರಸದೇ ಹಾಕಿದ *ಪ್ರಕ 16:19; ಯೋಬ. 21:20ದೇವರ ರೌದ್ರವೆಂಬ ದ್ರಾಕ್ಷಾರಸವನ್ನು ಕುಡಿಯುವನು. ಪರಿಶುದ್ಧ ದೇವದೂತರ ಮುಂದೆಯೂ ಯಜ್ಞದ ಕುರಿಮರಿಯಾದಾತನ ಮುಂದೆಯೂ ಪ್ರಕ 20:10:ಬೆಂಕಿಯಿಂದಲೂ ಗಂಧಕದಿಂದಲೂ ಯಾತನೆಪಡುವನು. 11 ಯೆಶಾ 34:10; ಆದಿ 19:28; 18:18; 19:3:ಅಂಥವರ ಯಾತನೆಯ ಹೊಗೆಯು ಯುಗಯುಗಾಂತರಗಳಲ್ಲಿಯೂ ಏರುತ್ತಾ ಹೋಗುತ್ತದೆ, §ಪ್ರಕ 13:15:ಮೃಗವನ್ನು ಮತ್ತು ಅದರ ವಿಗ್ರಹವನ್ನು ಆರಾಧಿಸುವವರಾಗಲಿ, ಅದರ ಹೆಸರಿನ ಗುರುತನ್ನು ಹೊಂದಿದವರಾಗಲಿ *ಪ್ರಕ 4:8:ಹಗಲೂ ರಾತ್ರಿ ವಿಶ್ರಾಂತಿಯಿಲ್ಲದೆ ಇರುವರು” ಎಂದು ಮಹಾಶಬ್ದದಿಂದ ಹೇಳಿದನು. 12 ಪ್ರಕ 12:17:ಇದರಲ್ಲಿ ದೇವರ ಆಜ್ಞೆಗಳನ್ನೂ, ಯೇಸುವಿನ ಬಗ್ಗೆ ನಂಬಿಕೆಯನ್ನೂ ಕೈಕೊಂಡು ನಡೆಯುತ್ತಿರುವ ಪ್ರಕ 13:10:ದೇವಜನರ ತಾಳ್ಮೆಯು ಇಲ್ಲಿ ತೋರಿಬರಬೇಕಾಗಿದೆ.
13 ಪರಲೋಕದಿಂದ ಒಂದು ಧ್ವನಿಯು ನನಗೆ ಕೇಳಿಸಿತು. ಅದು, “ಇಂದಿನಿಂದ §1 ಕೊರಿ 15:18; 1 ಥೆಸ. 4:16:ಕರ್ತನ ಭಕ್ತರಾಗಿ ಸಾಯುವವರು *ಪ್ರಕ 20:6; ಪ್ರಸಂಗಿ 4:2:ಧನ್ಯರು ಎಂಬುದಾಗಿ ಬರೆ” ಎಂದು ನನಗೆ ಹೇಳಿತು. ಅದಕ್ಕೆ ಆತ್ಮನು, “ಹೌದು, ಅವರು ಧನ್ಯರೇ. ಪ್ರಕ 6:11:ಅವರು ತಮ್ಮ ಶ್ರಮೆಗಳಿಂದ ಮುಕ್ತರಾಗಿ ವಿಶ್ರಮಿಸಿಕೊಳ್ಳುತ್ತಾರೆ ಮತ್ತು ಅವರ ಸುಕೃತ್ಯಗಳು ಅವರನ್ನು ಹಿಂಬಾಲಿಸುತ್ತವೆ” ಎಂದು ಹೇಳುತ್ತಾನೆ.
ಭೂಲೋಕದ ಸುಗ್ಗಿಕಾಲವನ್ನು ಕುರಿತದ್ದು
14 ಆಗ ನಾನು ನೋಡಲಾಗಿ ಇಗೋ, ಒಂದು ಬಿಳಿ ಮೇಘವು ಕಾಣಿಸಿತು. ಆ ಮೇಘದ ಮೇಲೆ ದಾನಿ. 7:13; ಪ್ರಕ 1:13ಮನುಷ್ಯಕುಮಾರನಂತಿದ್ದ ಒಬ್ಬಾತನು ಕುಳಿತಿರುವುದನ್ನು ಕಂಡೆನು. §ಪ್ರಕ 6:2:ಆತನ ತಲೆಯ ಮೇಲೆ ಚಿನ್ನದ ಕಿರೀಟವೂ, ಆತನ ಕೈಯಲ್ಲಿ ಹರಿತವಾದ ಕುಡುಗೋಲೂ ಇದ್ದವು. 15 ಆಗ ಮತ್ತೊಬ್ಬ ದೂತನು *ಪ್ರಕ 15:6:ದೇವಾಲಯದೊಳಗಿನಿಂದ ಬಂದು ಮೇಘದ ಮೇಲೆ ಕುಳಿತಿದ್ದಾತನಿಗೆ, ಯೆರೆ 51:33:“ಭೂಮಿಯ ಪೈರು ಮಾಗಿದೆ, ಕೊಯ್ಯುವ ಕಾಲ ಬಂದಿದೆ. ವ. 18; ಯೋವೇ. 3:13; ಮಾರ್ಕ 4:29; ಮತ್ತಾ 13:39:ನಿನ್ನ ಕುಡುಗೋಲನ್ನು ಹಾಕಿ ಪೈರನ್ನು ಕೊಯ್ಯಿ” ಎಂದು ಮಹಾಧ್ವನಿಯಿಂದ ಕೂಗಿದನು. 16 ಮೇಘದ ಮೇಲೆ ಕುಳಿತಿದ್ದಾತನು ತನ್ನ ಕುಡುಗೋಲನ್ನು ಭೂಮಿಯ ಮೇಲೆ ಹಾಕಿದನು. ಆಗ ಭೂಮಿಯ ಪೈರು ಕೊಯ್ಯಲ್ಪಟ್ಟಿತು.
17 ಮತ್ತೊಬ್ಬ ದೇವದೂತನು ಪರಲೋಕದಲ್ಲಿರುವ ದೇವಾಲಯದೊಳಗಿನಿಂದ ಬಂದನು. ಅವನ ಬಳಿಯೂ ಹರಿತವಾದ ಕುಡುಗೋಲು ಇತ್ತು. 18 ತರುವಾಯ §ಪ್ರಕ 16:8:ಬೆಂಕಿಯ ಮೇಲೆ ಅಧಿಕಾರ ಹೊಂದಿದ್ದ ಇನ್ನೊಬ್ಬ ದೂತನು ಯಜ್ಞವೇದಿಯ ಬಳಿಯಿಂದ ಬಂದು, ಆ ಹರಿತವಾದ ಕುಡುಗೋಲಿನವನಿಗೆ, “ನಿನ್ನ ಹರಿತವಾದ ಕುಡುಗೋಲನ್ನು ಹಾಕಿ ಭೂಮಿಯ ದ್ರಾಕ್ಷಿಗೊಂಚಲುಗಳನ್ನು ಕೊಯ್ಯಿ. *ಯೋವೇ. 3:13:ಅದರ ಹಣ್ಣುಗಳು ಪೂರಾ ಮಾಗಿವೆ” ಎಂದು ಮಹಾಧ್ವನಿಯಿಂದ ಕೂಗಿದನು. 19 ಆಗ ಆ ದೂತನು ತನ್ನ ಕುಡುಗೋಲಿನಿಂದ ಭೂಮಿಯ ಮೇಲಿನ ದ್ರಾಕ್ಷಿಬಳ್ಳಿಯಲ್ಲಿದ್ದ ದ್ರಾಕ್ಷಿಹಣ್ಣನ್ನು ಕೊಯ್ದು ಕೂಡಿಸಿ, ಯೆಶಾ 63:2, 3; ಪ್ರಲಾ 1:15; ಪ್ರಕ 19:15:ದೇವರ ರೌದ್ರವೆಂಬ ದ್ರಾಕ್ಷಿಯ ದೊಡ್ಡ ಆಲೆಗೆ ಹಾಕಿದನು. 20 ಆಗ ಆಲೆಯನ್ನು ಇಬ್ರಿ. 13:12:ಪಟ್ಟಣದ ಹೊರಗೆ ತೆಗೆದುಕೊಂಡು ಹೋಗಿ ತುಳಿದರು. ಆ ಆಲೆಯೊಳಗಿಂದ ರಕ್ತವು ಹೊರಟು ಕುದುರೆಗಳ ಕಡಿವಾಣಗಳನ್ನು ಮುಟ್ಟುವಷ್ಟು ಮೇಲಕ್ಕೆ ಬಂದು §ಮೂಲ: ಸಾವಿರದ ಆರುನೂರು ಸ್ತಾದ್ಯ.ಮುನ್ನೂರು ಕಿಲೋಮೀಟರಿನಷ್ಟು ದೂರ ಹರಿಯಿತು.

*14:1 ಪ್ರಕ 5:6:

14:1 ಕೀರ್ತ 2:6; ಇಬ್ರಿ. 12:22:

14:1 ಪ್ರಕ 7:4:

§14:1 ಪ್ರಕ 7:3:

*14:2 ಪ್ರಕ 1:15:

14:2 ಪ್ರಕ 6:1; 19:6:

14:2 ಪ್ರಕ 5:8; 15:2:

§14:2 ತ್ರಿಕೋನಾಕಾರದ ಒಂದು ಬಗೆಯ ತಂತಿ ವಾದ್ಯ

*14:3 ಪ್ರಕ 5:9:

14:3 ಪ್ರಕ 2:17; 19:12:

14:4 ತಮ್ಮ ಶೀಲವನ್ನು ಶುದ್ಧವಾಗಿ ಇಟ್ಟುಕೊಂಡವರು ಅಥವಾ ಶೀಲವನ್ನುಳಿಸಿಕೊಂಡವರು.

§14:4 2 ಕೊರಿ 11:2:

*14:4 ಅರಣ್ಯ 18:12; ಯಾಕೋಬ 1:18:

14:5 ಯೂದ. 24:

14:6 ಪ್ರಕ 8:13:

§14:7 ಪ್ರಕ 8:10; 16:4:

*14:7 ನೆಹೆ 9:6; ಪ್ರಕ 4:11:

14:8 ಯೆಶಾ 21:9; ಯೆರೆ 51:8; ಪ್ರಕ 18:2:

14:8 ದಾನಿ. 4:30; ಪ್ರಕ 16:19; 17:5; 18:10:

§14:8 ಅಥವಾ. ಜಾರತ್ವದಿಂದಾಗುವ ದೇವರ ರೌದ್ರವೆಂಬ. ಪ್ರಕ 18:3:

*14:8 ಯೆರೆ 51:7:

14:9 ಪ್ರಕ 13:15:

14:9 ಪ್ರಕ 13:16:

§14:10 ಪ್ರಕ 18:6:

*14:10 ಪ್ರಕ 16:19; ಯೋಬ. 21:20

14:10 ಪ್ರಕ 20:10:

14:11 ಯೆಶಾ 34:10; ಆದಿ 19:28; 18:18; 19:3:

§14:11 ಪ್ರಕ 13:15:

*14:11 ಪ್ರಕ 4:8:

14:12 ಪ್ರಕ 12:17:

14:12 ಪ್ರಕ 13:10:

§14:13 1 ಕೊರಿ 15:18; 1 ಥೆಸ. 4:16:

*14:13 ಪ್ರಕ 20:6; ಪ್ರಸಂಗಿ 4:2:

14:13 ಪ್ರಕ 6:11:

14:14 ದಾನಿ. 7:13; ಪ್ರಕ 1:13

§14:14 ಪ್ರಕ 6:2:

*14:15 ಪ್ರಕ 15:6:

14:15 ಯೆರೆ 51:33:

14:15 ವ. 18; ಯೋವೇ. 3:13; ಮಾರ್ಕ 4:29; ಮತ್ತಾ 13:39:

§14:18 ಪ್ರಕ 16:8:

*14:18 ಯೋವೇ. 3:13:

14:19 ಯೆಶಾ 63:2, 3; ಪ್ರಲಾ 1:15; ಪ್ರಕ 19:15:

14:20 ಇಬ್ರಿ. 13:12:

§14:20 ಮೂಲ: ಸಾವಿರದ ಆರುನೂರು ಸ್ತಾದ್ಯ.