2
ಇಸ್ರಾಯೇಲನ ಪುತ್ರರು
ಇಸ್ರಾಯೇಲನ ಪುತ್ರರು: ರೂಬೇನ್, ಸಿಮೆಯೋನ್, ಲೇವಿ, ಯೆಹೂದ, ಇಸ್ಸಾಕಾರ್, ಜೆಬುಲೂನ್, ದಾನ್, ಯೋಸೇಫ್, ಬೆನ್ಯಾಮೀನ್, ನಫ್ತಾಲಿ, ಗಾದ್ ಮತ್ತು ಆಶೇರ್.
ಯೆಹೂದ
ಹೆಚ್ರೋನನ ಪುತ್ರರಿಗೆ
ಯೆಹೂದನ ಪುತ್ರರು:
ಏರ್, ಓನಾನ್, ಶೇಲಹ. ಈ ಮೂವರು ಅವನಿಗೆ ಶೂನನ ಮಗಳಾದ ಕಾನಾನ್ ದೇಶದವಳಿಂದ ಹುಟ್ಟಿದರು.
ಯೆಹೂದನ ಚೊಚ್ಚಲಮಗನಾದ ಏರನು ಯೆಹೋವ ದೇವರ ಸಮ್ಮುಖದಲ್ಲಿ ಕೆಟ್ಟವನಾದ್ದರಿಂದ, ದೇವರು ಅವನನ್ನು ಮರಣಕ್ಕೆ ಒಪ್ಪಿಸಿದರು.
ಯೆಹೂದನ ಸೊಸೆ ತಾಮಾರಳು ಅವನಿಗೆ ಪೆರೆಚನನ್ನೂ, ಜೆರಹನನ್ನೂ ಹೆತ್ತಳು.
ಯೆಹೂದನ ಪುತ್ರರೆಲ್ಲರೂ ಐದು ಮಂದಿ.
 
ಪೆರೆಚನ ಪುತ್ರರು:
ಹೆಚ್ರೋನ್, ಹಾಮೂಲ್.
ಜೆರಹನ ಪುತ್ರರು:
ಜಿಮ್ರಿ, ಏತಾನ್, ಹೇಮಾನ್, ಕಲ್ಕೋಲ್ ಮತ್ತು ದಾರಾ*ದಾರಾ ಕೆಲವು ಪ್ರತಿಗಳಲ್ಲಿ ದಾರ್ದಾ, ಒಟ್ಟು ಐದು ಮಂದಿ.
ಕರ್ಮೀಯ ಪುತ್ರರು:
ಮೀಸಲಾಗಿಟ್ಟಿದ್ದ ವಸ್ತುಗಳನ್ನು ಕದ್ದುಕೊಂಡು ಇಸ್ರಾಯೇಲರನ್ನು ಆಪತ್ತಿಗೆ ಗುರಿಪಡಿಸಿದ ಆಕಾನನುಆಕಾನನು ಅಥವಾ ಆಕಾರ.
ಏತಾನನ ಮಗನು
ಅಜರ್ಯನು.
ಹೆಚ್ರೋನನಿಗೆ ಹುಟ್ಟಿದ ಪುತ್ರರು:
ಯೆರಹ್ಮೇಲ್, ರಾಮ್, ಕೆಲೂಬಾಯ್ಕೆಲೂಬಾಯ್ ಹೀಬ್ರೂ ಭಾಷೆಯಲ್ಲಿ ಕಾಲೇಬ್.
ಹೆಚ್ರೋನನ ಮಗ ರಾಮನಿಂದ
10 ರಾಮನು ಅಮ್ಮೀನಾದಾಬನ ತಂದೆಯಾಗಿದ್ದನು.
ಅಮ್ಮೀನಾದಾಬನು ಯೆಹೂದನ ಮಕ್ಕಳಿಗೆ ನಾಯಕನಾದ ನಹಶೋನನ ತಂದೆ.
11 ನಹಶೋನನು ಸಲ್ಮನನ ತಂದೆಯಾಗಿದ್ದನು,
ಸಲ್ಮನ ಬೋವಜನ ತಂದೆ,
12 ಬೋವಜನು ಓಬೇದನ ತಂದೆ,
ಓಬೇದನು ಇಷಯನ ತಂದೆ.
 
13 ಇಷಯನು ತನ್ನ
ಚೊಚ್ಚಲ ಮಗ ಎಲೀಯಾಬನನ್ನೂ, ಎರಡನೆಯವನಾದ ಅಬೀನಾದಾಬನನ್ನೂ,
ಮೂರನೆಯವನಾದ ಶಿಮ್ಮನನ್ನೂ, 14 ನಾಲ್ಕನೆಯವನಾದ ನೆತನೆಯೇಲನನ್ನೂ,
ಐದನೆಯವನಾದ ರದ್ದೈನನ್ನೂ, 15 ಆರನೆಯವನಾದ ಓಚೆಮನನ್ನೂ,
ಏಳನೆಯವನಾದ ದಾವೀದನಿಗೆ ತಂದೆಯಾಗಿದ್ದನು.
16 ಅವರ ಇಬ್ಬರು ಸಹೋದರಿಯರು ಚೆರೂಯಳು, ಅಬೀಗೈಲಳು.
ಚೆರೂಯಳ ಮೂವರು ಮಕ್ಕಳು ಅಬೀಷೈ, ಯೋವಾಬ್, ಅಸಾಯೇಲ್.
17 ಅಬೀಗೈಲಳು ಅಮಾಸನ ತಾಯಿ, ಅಮಾಸನ ತಂದೆಯು ಇಷ್ಮಾಯೇಲನ ವಂಶದ ಯೆತೆರನು.
ಹೆಚ್ರೋನನ ಮಗ ಕಾಲೇಬನು
18 ಹೆಚ್ರೋನನ ಮಗನಾದ ಕಾಲೇಬನು ಅಜೂಬಳಿಂದಲೂ ಯೆರ್ಯೋತಳಿಂದಲೂ ಮಕ್ಕಳನ್ನು ಪಡೆದನು. ಇವಳ ಪುತ್ರರು:
ಯೇಷೆರನು, ಶೋಬಾಬನು, ಅರ್ದೋನನು.
19 ಅಜೂಬಳ ಮರಣದ ನಂತರ, ಕಾಲೇಬನು ಎಫ್ರಾತಳನ್ನು ಮದುವೆಯಾದನು. ಅವಳು ಅವನಿಗೆ ಹೂರನನ್ನು ಹೆತ್ತಳು.
20 ಹೂರನು ಊರಿಯನ ತಂದೆ; ಊರಿಯನು ಬೆಚಲಯೇಲನ ತಂದೆ.
 
21 ತರುವಾಯ ಹೆಚ್ರೋನನು ಅರವತ್ತು ವರ್ಷದವನಾಗಿರುವಾಗ ಗಿಲ್ಯಾದನ ತಂದೆಯಾದ ಮಾಕೀರನ ಮಗಳನ್ನು ಮದುವೆಯಾದನು. ಅವಳು ಅವನಿಗೆ ಸೆಗೂಬ ಎಂಬ ಮಗನನ್ನು ಹೆತ್ತಳು.
22 ಸೆಗೂಬನು ಯಾಯೀರನ ತಂದೆ, ಇವನಿಗೆ ಗಿಲ್ಯಾದಿನ ದೇಶದಲ್ಲಿ ಇಪ್ಪತ್ತು ಮೂರು ಪಟ್ಟಣಗಳು ಇದ್ದವು.
23 ಇವನಿಗೆ ಗಿಲ್ಯಾದಿನ ದೇಶದಲ್ಲಿ ಅರುವತ್ತು ಪಟ್ಟಣಗಳು ಇದ್ದವು. ಇದಲ್ಲದೆ ಅವನು ಗೆಷೂರ್ಯರನ್ನೂ, ಅರಾಮ್ಯರನ್ನೂ, ಯಾಯೀರನ ಪಟ್ಟಣಗಳನ್ನೂ, ಕೆನಾತ್ ಮತ್ತು ಅದರ ಪಟ್ಟಣಗಳನ್ನೂ, ಒಟ್ಟು ಅರವತ್ತು ಪಟ್ಟಣಗಳನ್ನು ಗೆದ್ದುಕೊಂಡನು.
ಇವುಗಳೆಲ್ಲಾ ಗಿಲ್ಯಾದನ ತಂದೆಯಾದ ಮಾಕೀರನ ವಂಶದವರಿಗೆ ಇದ್ದವು.
24 ಹೆಚ್ರೋನನು ಕಾಲೇಬ್ ಎಫ್ರಾತದಲ್ಲಿ ಸತ್ತ ತರುವಾಯ ಹೆಚ್ರೋನನ ಹೆಂಡತಿಯಾದ ಅಬೀಯಳು ಅವನಿಗೆ ಅಷ್ಹೂರನನ್ನು ಹೆತ್ತಳು. ಇವನು ತೆಕೋವನ ತಂದೆಯು.
ಹೆಚ್ರೋನನ ಮಗನಾದ ಯೆರಹ್ಮೇಲನು
25 ಹೆಚ್ರೋನನ ಚೊಚ್ಚಲ ಮಗ ಯೆರಹ್ಮೇಲನ ಪುತ್ರರು:
ಚೊಚ್ಚಲ ಮಗ ರಾಮ ಮತ್ತು ಬೂನ, ಓರೆನ, ಓಚೆಮ, ಅಹೀಯ. 26 ಈ ಯೆರಹ್ಮೇಲನಿಗೆ ಮತ್ತೊಬ್ಬ ಹೆಂಡತಿ ಇದ್ದಳು. ಅವಳ ಹೆಸರು ಅಟಾರಳು; ಅವಳು ಓನಾಮನ ತಾಯಿ.
27 ಯೆರಹ್ಮೇಲನ ಚೊಚ್ಚಲಮಗನಾದ ರಾಮನ ಪುತ್ರರು:
ಮಾಚ್, ಯಾಮೀನ್, ಏಕೆರ್.
28 ಓನಾಮನ ಪುತ್ರರು:
ಶಮ್ಮಾಯ, ಯಾದ;
ಶಮ್ಮಾಯನ ಪುತ್ರರು:
ನಾದಾಬನು, ಅಬಿಷೂರನು. 29 ಅಬಿಷೂರನ ಹೆಂಡತಿಯ ಹೆಸರು ಅಬೀಹೈಲ; ಅವಳು ಅವನಿಗೆ ಅಹ್ಬಾನನನ್ನೂ, ಮೋಲೀದನನ್ನೂ ಹೆತ್ತಳು.
30 ನಾದಾಬನ ಪುತ್ರರು
ಸೆಲೆದ್, ಅಪ್ಪಯಿಮ್; ಸೆಲೆದನು ಮಕ್ಕಳಿಲ್ಲದೆ ಸತ್ತನು.
31 ಅಪ್ಪಯಿಮ್ ಇವನ ಪುತ್ರರು:
ಇಷ್ಷೀಯು; ಇಷ್ಷೀಯನ ಮಗನು ಶೇಷಾನನು; ಶೇಷಾನನ ಮಗನು; ಅಹ್ಲಾಯಿಯನು;
32 ಶಮ್ಮಾಯನ ಸಹೋದರನಾದ ಯಾದನ ಪುತ್ರರು:
ಯೆತೆರನ ಮತ್ತು ಯೋನಾತಾನ್. ಯೆತೆರನು ಮಕ್ಕಳಿಲ್ಲದೆ ಸತ್ತನು;
33 ಯೋನಾತಾನನ ಪುತ್ರರು:
ಪೆಲೆತನು, ಜಾಜನು.
ಇವರೇ ಯೆರಹ್ಮೇಲನ ವಂಶಜರು.
 
34 ಶೇಷಾನನಿಗೆ ಪುತ್ರರಿರಲಿಲ್ಲ. ಪುತ್ರಿಯರಿದ್ದರು.
ಶೇಷಾನನಿಗೆ ಯರ್ಹನೆಂಬ ಹೆಸರುಳ್ಳ ಈಜಿಪ್ಟಿನವನಾದ ಸೇವಕನಿದ್ದನು. 35 ಶೇಷಾನನು ತನ್ನ ಪುತ್ರಿಯನ್ನು ತನ್ನ ಸೇವಕ ಯರ್ಹನಿಗೆ ಮದುವೆಮಾಡಿಕೊಟ್ಟನು. ಅವಳು ಅವನಿಗೆ ಅತ್ತೈಯನ್ನು ಹೆತ್ತಳು.
36 ಅತ್ತೈ ನಾತಾನನ ತಂದೆ;
ನಾತಾನನು ಜಾಬಾದನ ತಂದೆ.
37 ಜಾಬಾದನು ಎಫ್ಲಾಲನನ್ನು ಪಡೆದನು;
ಎಫ್ಲಾನನು ಓಬೇದನನ್ನು ಪಡೆದನು.
38 ಓಬೇದನು ಯೇಹುವನ್ನು ಪಡೆದನು;
ಯೇಹುವು ಅಜರ್ಯನನ್ನು ಪಡೆದನು.
39 ಅಜರ್ಯನು ಹೆಲೆಚನನ್ನು ಪಡೆದನು;
ಹೆಲೆಚನು ಎಲ್ಲಾಸನನ್ನು ಪಡೆದನು.
40 ಎಲ್ಲಾಸನು ಸಿಸ್ಮೈಯನ್ನು ಪಡೆದನು;
ಸಿಸ್ಮೈಯು ಶಲ್ಲೂಮನನ್ನು ಪಡೆದನು.
41 ಶಲ್ಲೂಮನು ಯೆಕಮ್ಯಾಹನ ತಂದೆ;
ಯೆಕಮ್ಯಾಹನು ಎಲೀಷಾಮನ ತಂದೆ.
ಕಾಲೇಬನ ಗೋತ್ರಗಳು
42 ಯೆರಹ್ಮೇಲನ ಸಹೋದರನಾದ ಕಾಲೇಬನ ಪುತ್ರರು:
ಅವನ ಚೊಚ್ಚಲ ಮಗನು ಮೇಷನು; ಇವನು ಜೀಫ್ಯನಿಗೆ ತಂದೆಯಾಗಿದ್ದನು.
ಹೆಬ್ರೋನನ ತಂದೆಯಾದ ಮಾರೇಷನಿಗೆ ಮಕ್ಕಳು ಜನಿಸಿದರು.
43 ಹೆಬ್ರೋನನ ಪುತ್ರರು:
ಕೋರಹನು, ತಪ್ಪೂಹನು, ರೆಕೆಮನು, ಶೆಮನು.
44 ಶೆಮನು ರಹಮ್ಯನ ತಂದೆ
ರಹಮ್ಯನು ಯೊರ್ಕೆಯಾಮನ ತಂದೆ.
ರೆಕೆಮನು ಶಮ್ಮಾಯನನ್ನು ಪಡೆದನು.
45 ಶಮ್ಮಾಯಿಯ ಮಗನು ಮಾವೋನ್ಯನು;
ಈ ಮಾವೋನ್ಯನು ಬೇತ್ ಚೂರನಿಗೆ ತಂದೆಯಾಗಿದ್ದನು.
46 ಕಾಲೇಬನ ಉಪಪತ್ನಿಯಾದ ಏಫಾಳು
ಹಾರಾನ್, ಮೋಚ, ಗಾಜೇಜ ಎಂಬುವರನ್ನು ಹೆತ್ತಳು.
ಹಾರಾನನು ಗಾಜೇಜನ ತಂದೆ.
47 ಯಾದೈಯ ಪುತ್ರರು:
ರೆಗೆಮ್, ಯೋತಾಮ್, ಗೇಷಾನ್, ಪೆಲಟ್, ಏಫ್, ಶಾಫ್.
48 ಕಾಲೇಬನ ಇನ್ನೊಬ್ಬ ಉಪಪತ್ನಿಯಾದ ಮಾಕಳು
ಶೇಬರ್, ತಿರ್ಹನ ಎಂಬುವರನ್ನು ಹೆತ್ತಳು.
49 ಇವಳಲ್ಲಿ ಮದ್ಮನ್ನದವರ ಮೂಲಪುರುಷನಾದ ಶಾಫ್,
ಮಕ್‌ಬೇನ ಮತ್ತು ಗಿಬೆಯ ಊರುಗಳವರ ಮೂಲಪುರುಷನಾದ ಶೆವ ಇವರು ಹುಟ್ಟಿದರು.
ಕಾಲೇಬನ ಮಗಳು ಅಕ್ಸಾ.
50 ಇನ್ನುಳಿದ ಕಾಲೇಬನ ವಂಶಜರು:
 
ಕಾಲೇಬನಿಗೆ ಅವನ ಹೆಂಡತಿ ಎಫ್ರಾತಳಿಂದ ಜನಿಸಿದ ಚೊಚ್ಚಲ ಮಗನ ಹೆಸರು ಹೂರ್.
ಹೂರನ ಮಗ ಶೋಬಾಲ್ ಕಿರ್ಯತ್ ಯಾರೀಮ್ ಪಟ್ಟಣವನ್ನೂ, 51 ಅವನ ಇನ್ನೊಬ್ಬ ಮಗ ಸಲ್ಮ ಬೇತ್ಲೆಹೇಮನ್ನೂ, ಅವನ ಮೂರನೆಯ ಮಗ ಹಾರೇಫ್, ಬೇತ್ಗಾದೇರ್ ಪಟ್ಟಣವನ್ನೂ ಕಟ್ಟಿಸಿದರು.
52 ಕಿರ್ಯತ್ ಯಾರೀಮ್ ಪಟ್ಟಣದ ಸ್ಥಾಪಕ ಶೋಬಾಲನು
ಹಾರೋಯೆ ಜನರ, ಮಾನಹತಿಯರ ಅರ್ಧದಷ್ಟು ಜನರ, 53 ಹಾಗೂ ಕಿರ್ಯತ್ ಯಾರೀಮನವರ ಗೋತ್ರಗಳು: ಯೆತೆರಿಯರು, ಪೂತ್ಯರು, ಶುಮಾತ್ಯರು, ಮಿಷ್ರಾಗ್ಯರು, ಇವರಿಂದ ಚೊರ್‍ರಾತ್ಯರೂ, ಎಷ್ಟಾವೋಲ್ಯರೂ ಹುಟ್ಟಿದರು.
54 ಸಲ್ಮನ ವಂಶಜರು:
ಬೇತ್ಲೆಹೇಮ್, ನೆಟೋಫಾ, ಅಟರೋತ್ ಬೇತ್ಯೋವಾಬ್ ಊರುಗಳವರೂ, ಚೊರ್ಗದಲ್ಲಿ ವಾಸಿಸುವ ಮಾನಹತಿಯರಲ್ಲಿ ಅರ್ಧ ಜನರೂ ಉತ್ಪತ್ತಿಯಾದರು. 55 ಯಾಬೇಚಿನಲ್ಲಿ ವಾಸಿಸುವ ಬರಹಗಾರರ ಕುಟುಂಬದವರಾದ ತಿರ್ರಾತ್ಯರು, ಶಿಮೆಯಾತ್ಯರು, ಸೂಕಾತ್ಯರು ಇವರು ರೇಕಾಬನ ಮನೆಯವರ ಮೂಲ ಪುರುಷನಾಗಿರುವ ಹಮ್ಮತನಿಂದ ಉತ್ಪನ್ನರಾದ ಕೇನ್ಯರು.

*2:6 ದಾರಾ ಕೆಲವು ಪ್ರತಿಗಳಲ್ಲಿ ದಾರ್ದಾ

2:7 ಆಕಾನನು ಅಥವಾ ಆಕಾರ

2:9 ಕೆಲೂಬಾಯ್ ಹೀಬ್ರೂ ಭಾಷೆಯಲ್ಲಿ ಕಾಲೇಬ್