ಮತ್ತಾಯನು
ಬರೆದ ಸುವಾರ್ತೆ
1
ಯೇಸುಸ್ವಾಮಿಯ ವಂಶಾವಳಿ
ಕ್ರಿಸ್ತ ಯೇಸುವಿನ ವಂಶಾವಳಿಯ ದಾಖಲೆ. ಯೇಸು ದಾವೀದನ ವಂಶದವರು, ದಾವೀದನು ಅಬ್ರಹಾಮನ ವಂಶದವನು:
 
ಅಬ್ರಹಾಮನು ಇಸಾಕನ ತಂದೆ,
ಇಸಾಕನು ಯಾಕೋಬನ ತಂದೆ,
ಯಾಕೋಬನು ಯೂದ ಮತ್ತು ಅವನ ಅಣ್ಣ ತಮ್ಮಂದಿರ ತಂದೆ,
ಯೂದನು ಪೆರೆಸ ಮತ್ತು ಜೆರಹನ ತಂದೆ, ತಾಮಾರಳು ಇವರ ತಾಯಿ,
ಪೆರೆಸನು ಹೆಚ್ರೋನನ ತಂದೆ,
ಹೆಚ್ರೋನನು ಅರಾಮನ ತಂದೆ,
ಅರಾಮನು ಅಮ್ಮೀನಾದಾಬನ ತಂದೆ,
ಅಮ್ಮೀನಾದಾಬನು ನಹಶೋನನ ತಂದೆ,
ನಹಶೋನನು ಸಲ್ಮೋನನ ತಂದೆ,
ಸಲ್ಮೋನನು ಬೋವಜನ ತಂದೆ, ಬೋವಜನ ತಾಯಿ ರಾಹಾಬಳು,
ಬೋವಜನು ಓಬೇದನ ತಂದೆ, ಓಬೇದನ ತಾಯಿ ರೂತಳು,
ಓಬೇದನು ಇಷಯನ ತಂದೆ,
ಇಷಯನು ರಾಜನಾದ ದಾವೀದನ ತಂದೆ.
 
ದಾವೀದನು ಸೊಲೊಮೋನನ ತಂದೆ, ಇವನ ತಾಯಿ ಊರೀಯನ ಹೆಂಡತಿಯಾಗಿದ್ದವಳು,
ಸೊಲೊಮೋನನು ರೆಹಬ್ಬಾಮನ ತಂದೆ,
ರೆಹಬ್ಬಾಮನು ಅಬೀಯನ ತಂದೆ,
ಅಬೀಯನು ಆಸನ ತಂದೆ,
ಆಸನು ಯೆಹೋಷಾಫಾಟನ ತಂದೆ,
ಯೆಹೋಷಾಫಾಟನು ಯೆಹೋರಾಮನ ತಂದೆ,
ಯೆಹೋರಾಮನು ಉಜ್ಜೀಯನ ತಂದೆ,
ಉಜ್ಜೀಯನು ಯೋತಾಮನ ತಂದೆ,
ಯೋತಾಮನು ಆಹಾಜನ ತಂದೆ,
ಆಹಾಜನು ಹಿಜ್ಕೀಯನ ತಂದೆ,
10 ಹಿಜ್ಕೀಯನು ಮನಸ್ಸೆಯ ತಂದೆ,
ಮನಸ್ಸೆಯು ಆಮೋನನ ತಂದೆ,
ಆಮೋನನು ಯೋಷೀಯನ ತಂದೆ,
11 ಯೋಷೀಯನಿಗೆ ಯೆಕೊನ್ಯ*ಯೆಹೋಯಾಕೀನನು ಎಂದು ಸಹ ಕರೆಯಲಾಗುತ್ತಿತ್ತು. ಮತ್ತು ಅವನ ಸಹೋದರರು ಹುಟ್ಟಿದರು, ಈ ಸಮಯದಲ್ಲಿಯೇ ಯೆಹೂದ್ಯರನ್ನು ಬಾಬಿಲೋನಿಗೆ ಸೆರೆ ಒಯ್ದದ್ದು.
 
12 ಬಾಬಿಲೋನಿಗೆ ಸೆರೆಹೋದ ಮೇಲೆ:
ಯೆಕೊನ್ಯನು ಶೆಯಲ್ತೀಯೇಲನನ್ನು ಪಡೆದನು,
ಶೆಯಲ್ತೀಯೇಲನು ಜೆರುಬ್ಬಾಬೆಲನ ತಂದೆ,
13 ಜೆರುಬ್ಬಾಬೆಲನು ಅಬಿಹೂದನ ತಂದೆ,
ಅಬಿಹೂದನು ಎಲಿಯಕೀಮನ ತಂದೆ,
ಎಲಿಯಕೀಮನು ಅಜೋರನ ತಂದೆ,
14 ಅಜೋರನು ಸದೋಕನ ತಂದೆ,
ಸದೋಕನು ಅಖೀಮನ ತಂದೆ,
ಅಖೀಮನು ಎಲಿಹೂದನ ತಂದೆ,
15 ಎಲಿಹೂದನು ಎಲಿಯಾಜರನ ತಂದೆ,
ಎಲಿಯಾಜರನು ಮತ್ತಾನನ ತಂದೆ,
ಮತ್ತಾನನು ಯಾಕೋಬನ ತಂದೆ,
16 ಯಾಕೋಬನು ಯೋಸೇಫನ ತಂದೆ, ಯೋಸೇಫನು ಮರಿಯಳ ಪತಿ, ಮರಿಯಳು ಕ್ರಿಸ್ತ ಎಂದು ಕರೆಯಲಾದ, ಯೇಸುಸ್ವಾಮಿಯ ತಾಯಿ.
 
17 ಈ ರೀತಿಯಲ್ಲಿ ಅಬ್ರಹಾಮನಿಂದ ದಾವೀದನವರೆಗೆ ಹದಿನಾಲ್ಕು ತಲೆಮಾರುಗಳು, ದಾವೀದನಿಂದ ಬಾಬಿಲೋನಿಗೆ ಸೆರೆ ಹೋಗುವವರೆಗೆ ಹದಿನಾಲ್ಕು ತಲೆಮಾರುಗಳು, ಬಾಬಿಲೋನಿಗೆ ಸೆರೆಹೋದ ದಿನದಿಂದ ಕ್ರಿಸ್ತರವರೆಗೆ ಹದಿನಾಲ್ಕು ತಲೆಮಾರುಗಳು.
ಕ್ರಿಸ್ತ ಯೇಸುವಿನ ಜನನ
18 ಕ್ರಿಸ್ತ ಯೇಸುವಿನ ಜನನದ ವಿವರ: ಯೇಸುವಿನ ತಾಯಿ ಮರಿಯಳನ್ನು ಯೋಸೇಫನಿಗೆ ನಿಶ್ಚಯ ಮಾಡಿದ್ದರು, ಆದರೆ ಅವರಿಬ್ಬರು ಕೂಡಿಬಾಳುವುದಕ್ಕಿಂತ ಮುಂಚೆಯೇ, ಮರಿಯಳು ಪವಿತ್ರಾತ್ಮರಿಂದ ಗರ್ಭಧರಿಸಿರುವುದು ತಿಳಿದುಬಂತು. 19 ಯೋಸೇಫನು ನೀತಿವಂತನಾಗಿದ್ದರಿಂದ, ಆಕೆಯನ್ನು ಬಹಿರಂಗವಾಗಿ ಅವಮಾನ ಮಾಡುವುದಕ್ಕೆ ಮನಸ್ಸಿಲ್ಲದೆ, ಆಕೆಯನ್ನು ರಹಸ್ಯವಾಗಿ ಬಿಟ್ಟು ಬಿಡಬೇಕೆಂದಿದ್ದನು.
20 ಅವನು ಹೀಗೆ ಯೋಚಿಸುತ್ತಿದ್ದಾಗ, ಕರ್ತನ ದೂತನು ಕನಸಿನಲ್ಲಿ ಅವನಿಗೆ ಪ್ರತ್ಯಕ್ಷನಾಗಿ, “ದಾವೀದನ ವಂಶದ ಯೋಸೇಫನೇ, ಮರಿಯಳನ್ನು ನಿನ್ನ ಹೆಂಡತಿಯನ್ನಾಗಿ ಸ್ವೀಕರಿಸಲು ಅಂಜಬೇಡ. ಆಕೆ ಗರ್ಭವತಿಯಾಗಿರುವುದು ಪವಿತ್ರಾತ್ಮರಿಂದಲೇ. 21 ಅವಳು ಒಬ್ಬ ಮಗನನ್ನು ಹೆರುವಳು, ನೀನು ಆತನಿಗೆ, ‘ಯೇಸುಯೇಸು ಎಂಬುದು ಗ್ರೀಕ್ ರೂಪವಾದ ಯೆಹೋಶುವಾ ಇದರ ಅರ್ಥ ಯೆಹೋವ ದೇವರು ರಕ್ಷಿಸುವರು’ ಎಂದು ಹೆಸರಿಡಬೇಕು. ಏಕೆಂದರೆ ಅವರೇ ತಮ್ಮ ಜನರನ್ನು ಅವರ ಪಾಪಗಳಿಂದ ರಕ್ಷಿಸುವರು,” ಎಂದು ಹೇಳಿದನು.
22 ದೇವರು ತಮ್ಮ ಪ್ರವಾದಿಯ ಮುಖಾಂತರ ಹೇಳಿದ ಈ ಮಾತು ನೆರವೇರುವಂತೆ ಇದೆಲ್ಲಾ ನಡೆಯಿತು: 23 “ಇಗೋ ಒಬ್ಬ ಕನ್ನಿಕೆಯು ಗರ್ಭಿಣಿಯಾಗಿ ಮಗನನ್ನು ಹೆರುವಳು, ಆ ಮಗುವಿಗೆ, ‘ಇಮ್ಮಾನುಯೇಲ್’ಯೆಶಾಯ 7:14 ಎಂದು ಹೆಸರಿಡುವರು.” ಈ ಹೆಸರಿನ ಅರ್ಥ, “ದೇವರು ನಮ್ಮ ಸಂಗಡ ಇದ್ದಾರೆ,” ಎಂಬುದು.
24 ಯೋಸೇಫನು ನಿದ್ದೆಯಿಂದ ಎದ್ದ ಮೇಲೆ, ಕರ್ತನ ದೂತನು ಆಜ್ಞಾಪಿಸಿದಂತೆ ಮರಿಯಳನ್ನು ತನ್ನ ಹೆಂಡತಿಯನ್ನಾಗಿ ಸ್ವೀಕರಿಸಿಕೊಂಡನು. 25 ಆದರೆ ಅವಳು ಮಗನನ್ನು ಹೆರುವತನಕ ಯೋಸೇಫನು ಆಕೆಯೊಂದಿಗೆ ದಾಂಪತ್ಯ ಜೀವನ ಮಾಡಲಿಲ್ಲ. ಯೋಸೇಫನು ಆ ಮಗುವಿಗೆ “ಯೇಸು” ಎಂದು ಹೆಸರಿಟ್ಟನು.

*1:11 ಯೆಹೋಯಾಕೀನನು ಎಂದು ಸಹ ಕರೆಯಲಾಗುತ್ತಿತ್ತು.

1:21 ಯೇಸು ಎಂಬುದು ಗ್ರೀಕ್ ರೂಪವಾದ ಯೆಹೋಶುವಾ ಇದರ ಅರ್ಥ ಯೆಹೋವ ದೇವರು ರಕ್ಷಿಸುವರು

1:23 ಯೆಶಾಯ 7:14