ಕೀರ್ತನೆ 100
ಕೀರ್ತನೆ. ಕೃತಜ್ಞತೆಯ ಗೀತೆ.
1 ಸಮಸ್ತ ಭೂಮಿಯೇ, ಯೆಹೋವ ದೇವರಿಗೆ ಜಯಧ್ವನಿ ಮಾಡಿರಿ.
2 ಸಂತೋಷದಿಂದ ಯೆಹೋವ ದೇವರನ್ನು ಆರಾಧಿಸಿರಿ;
ಆನಂದದಿಂದ ಹಾಡುತ್ತಾ ಅವರ ಮುಂದೆ ಬನ್ನಿರಿ.
3 ಯೆಹೋವ ದೇವರೇ ದೇವರೆಂದು ತಿಳುಕೊಳ್ಳಿರಿ;
ಅವರೇ ನಮ್ಮನ್ನು ಉಂಟುಮಾಡಿದ್ದಾರೆ;
ನಾವು ಅವರ ಜನರೂ, ಅವರು ಮೇಯಿಸುವ ಕುರಿ ಮಂದೆಯೂ ಆಗಿದ್ದೇವೆ.
4 ಕೃತಜ್ಞತೆಯಿಂದ ಅವರ ಬಾಗಿಲುಗಳಿಗೂ,
ಕೃತಜ್ಞತಾ ಸ್ತೋತ್ರದಿಂದ ಅವರ ಅಂಗಳಗಳಿಗೂ ಬನ್ನಿರಿ;
ಅವರನ್ನು ಕೊಂಡಾಡಿರಿ, ಅವರ ಹೆಸರನ್ನು ಸ್ತುತಿಸಿರಿ.
5 ಯೆಹೋವ ದೇವರು ಒಳ್ಳೆಯವರು, ಅವರ ಕರುಣೆಯು ಯುಗಯುಗಕ್ಕೂ ಇರುವುದು.
ಅವರ ಸತ್ಯತೆಯು ತಲತಲಾಂತರಕ್ಕೂ ಮುಂದುವರಿಯುವುದು.