ಕೀರ್ತನೆ 130
ಯಾತ್ರಾ ಗೀತೆ.
1 ಯೆಹೋವ ದೇವರೇ, ಅಂತರಾಳದಿಂದ ನಿಮಗೆ ಮೊರೆಯಿಡುತ್ತೇನೆ.
2 ಯೆಹೋವ ದೇವರೇ, ನನ್ನ ಧ್ವನಿಯನ್ನು ಕೇಳಿರಿ.
ನನ್ನ ಕೂಗಿಗೆ ಕರುಣೆ ತೋರಿಸಿ,
ನಿಮ್ಮ ಕಿವಿಗಳು ನನ್ನ ವಿಜ್ಞಾಪನೆಗಳನ್ನು ಆಲೈಸಲಿ.
3 ಯೆಹೋವ ದೇವರೇ, ನೀವು ಪಾಪಗಳನ್ನು ಎಣಿಸಿದರೆ,
ನಿಮ್ಮ ಮುಂದೆ ಯಾರು ನಿಲ್ಲುವರು?
4 ಆದರೆ ನಿಮ್ಮಲ್ಲಿ ಕ್ಷಮಾಪಣೆ ಉಂಟು.
ನಾವು ನಿಮ್ಮನ್ನು ಭಯಭಕ್ತಿಯಿಂದ ಸೇವೆಮಾಡುವಂತೆ ನಿಮ್ಮ ಕ್ಷಮಾಪಣೆಯಿದೆ.
5 ಯೆಹೋವ ದೇವರನ್ನು ನಿರೀಕ್ಷಿಸುತ್ತೇನೆ, ನನ್ನ ಅಂತರಾಳವು ಸಹ ನಿರೀಕ್ಷಿಸುತ್ತದೆ;
ನಾನು ದೇವರ ವಾಕ್ಯದಲ್ಲಿ ನಿರೀಕ್ಷೆ ಇಟ್ಟಿದ್ದೇನೆ.
6 ಉದಯಕ್ಕಾಗಿ ಕಾವಲುಗಾರ ಕಾದಿರುತ್ತಾರೆ.
ನಾನು ಆ ಕಾವಲುಗಾರರು ಕಾದಿರುವುದಕ್ಕಿಂತ ಹೆಚ್ಚಾಗಿಯೇ
ಯೆಹೋವ ದೇವರಿಗಾಗಿ ನಿರೀಕ್ಷಿಸುತ್ತಿದ್ದೇನೆ.
7 ಇಸ್ರಾಯೇಲು ಯೆಹೋವ ದೇವರಲ್ಲಿ ನಿರೀಕ್ಷಿಸಲಿ,
ಏಕೆಂದರೆ ಯೆಹೋವ ದೇವರ ಬಳಿಯಲ್ಲಿ ಒಂಡಬಡಿಕೆಯ ಪ್ರೀತಿ ಇರುತ್ತದೆ,
ಸಂಪೂರ್ಣ ವಿಮೋಚನೆಯೂ ಇರುತ್ತದೆ.
8 ದೇವರು ಇಸ್ರಾಯೇಲನ್ನು ಅವರ
ಎಲ್ಲಾ ಅಕ್ರಮಗಳಿಂದ ವಿಮೋಚಿಸುವರು.