ಎಫೆಸದವರಿಗೆ
ಗ್ರಂಥಕರ್ತೃತ್ವ
ಎಫೆಸ 1:1, ಅಪೊಸ್ತಲನಾದ ಪೌಲನನ್ನು ಎಫೆಸ ಪುಸ್ತಕದ ಗ್ರಂಥಕರ್ತನೆಂದು ಗುರುತಿಸುತ್ತದೆ. ಎಫೆಸದವರಿಗೆ ಬರೆದ ಪತ್ರಿಕೆಯನ್ನು ಪೌಲನು ಬರೆದಿದ್ದಾನೆಂದು ಸಭೆಯ ಆರಂಭಿಕ ದಿನಗಳಿಂದಲೂ ಪರಿಗಣಿಸಲಾಗಿದೆ ಮತ್ತು ಆದಿ ಅಪೊಸ್ತಲಿಕ ಪಾದ್ರಿಗಳಾದ ರೋಮಾದ ಕ್ಲೆಮೆಂಟ್, ಇಗ್ನೇಷಿಯಸ್, ಹೆರ್ಮಸ್, ಮತ್ತು ಪೋಲಿಕಾರ್ಪ್ ಅದರ ಕುರಿತು ಉಲ್ಲೇಖಿಸಿದ್ದಾರೆ.
ಬರೆದ ದಿನಾಂಕ ಮತ್ತು ಸ್ಥಳ
ಸರಿಸುಮಾರು ಕ್ರಿ.ಶ. 60 ರಲ್ಲಿ ಬರೆಯಲ್ಪಟ್ಟಿದೆ.
ಪೌಲನು ರೋಮಾಪುರದಲ್ಲಿ ಸೆರೆಮನೆಯಲ್ಲಿರುವಾಗ ಇದನ್ನು ಅವನು ಬರೆದಿದ್ದಾನೆ.
ಸ್ವೀಕೃತದಾರರು
ಎಫೆಸದ ಸಭೆಯವರು ಪ್ರಾಥಮಿಕ ಸ್ವೀಕೃತದಾರರಾಗಿದ್ದರು. ಪೌಲನು ತನ್ನ ಉದ್ದೇಶಿತ ಓದುಗರು ಅನ್ಯಜನರು ಎಂಬ ಸ್ಪಷ್ಟವಾದ ಸೂಚನೆಗಳನ್ನು ನೀಡಿದ್ದಾನೆ. ಎಫೆ 2:11-13 ರಲ್ಲಿ, ತನ್ನ ಓದುಗರು “ಜನ್ಮತಃ ಅನ್ಯಜನರು” ಎಂದು ಅವನು ಸ್ಪಷ್ಟವಾಗಿ ಹೇಳುತ್ತಾನೆ (2:11), ಆದ್ದರಿಂದ “ವಾಗ್ದಾನಕ್ಕೆ ಸಂಬಂಧವಾದ ಒಡಂಬಡಿಕೆಗಳಲ್ಲಿ ಪರಕೀಯರು” (2:12) ಎಂದು ಯೆಹೂದ್ಯರಿಂದ ಪರಿಗಣಿಸಲ್ಪಟ್ಟಿದ್ದಾರೆ. ಅದೇ ರೀತಿಯಲ್ಲಿ, ಎಫೆ 3:1 ರಲ್ಲಿ, ಪೌಲನು ತನ್ನ ಉದ್ದೇಶಿತ ಓದುಗರಿಗೆ “ಅನ್ಯಜನರಾಗಿರುವ ನಿಮ್ಮ ನಿಮಿತ್ತವಾಗಿ” ಸೆರೆಯಾಳಾಗಿದ್ದೇನೆ ಎಂದು ತಿಳಿಸುತ್ತಾನೆ.
ಉದ್ದೇಶ
ಕ್ರಿಸ್ತನ ರೀತಿಯ ಪರಿಪಕ್ವತೆಗಾಗಿ ಬಯಸುವಂಥವರೆಲ್ಲರು ಈ ಪತ್ರಿಕೆಯನ್ನು ಸ್ವೀಕರಿಸುತ್ತಾರೆಂದು ಪೌಲನು ಉದ್ದೇಶಿಸಿದ್ದನು. ದೇವರ ನಿಜವಾದ ಮಕ್ಕಳಾಗಿ ಬೆಳೆಯಲು ಬೇಕಾದ ಶಿಸ್ತನ್ನು ಎಫೆಸ ಪುಸ್ತಕದಲ್ಲಿ ಲಗತ್ತಿಸಿದ್ದಾನೆ. ಇದಲ್ಲದೆ, ಎಫೆಸ ಪತ್ರಿಕೆಯಲ್ಲಿರುವ ಅಧ್ಯಯನವು ವಿಶ್ವಾಸಿಯನ್ನು ಬಲಪಡಿಸಲು ಮತ್ತು ಸ್ಥಿರಪಡಿಸಲು ಸಹಾಯ ಮಾಡುತ್ತದೆ, ಆದ್ದರಿಂದ ದೇವರು ನೀಡಿರುವ ಉದ್ದೇಶವನ್ನು ಮತ್ತು ಕರೆಯುವಿಕೆಯನ್ನು ಅವನು ನೆರವೇರಿಸುವನು. ಎಫೆಸದ ವಿಶ್ವಾಸಿಗಳು ತಮ್ಮ ಕ್ರೈಸ್ತ ನಂಬಿಕೆಯಲ್ಲಿ ಬಲಗೊಳ್ಳಬೇಕೆಂದು ಪೌಲನು ಇಚ್ಛಿಸಿದನು, ಆದ್ದರಿಂದ ಅವನು ಸಭೆಯ ಸ್ವರೂಪವನ್ನು ಮತ್ತು ಉದ್ದೇಶವನ್ನು ವಿವರಿಸಿದನು. ಪೌಲನು ಅನ್ಯಜನರಿಂದ ಬಂದ ತನ್ನ ಕ್ರೈಸ್ತ ಓದುಗರಿಗೆ ಪರಿಚಿತರಾಗಿದ್ದ ಅವರ ಹಿಂದಿನ ಧರ್ಮಗಳಲ್ಲಿದ್ದ, ತಲೆ, ದೇಹ, ಪೂರ್ಣತೆ, ಮರ್ಮ, ಯುಗ, ಆಧಿಪತಿ, ಎಂಬ ಇತ್ಯಾದಿ ಪದಗಳನ್ನು ಎಫೆಸ ಪತ್ರಿಕೆಯಲ್ಲಿ ಬಳಸಿದ್ದಾನೆ. ಕ್ರಿಸ್ತನು ದೇವತೆಗಳ ಮತ್ತು ಆಧ್ಯಾತ್ಮಿಕ ಜೀವಿಗಳ ವರ್ಗಕ್ಕಿಂತ ಅತಿ ಉನ್ನತನಾಗಿ ಮತ್ತು ಶ್ರೇಷ್ಠನಾಗಿ ಇದ್ದಾನೆ ಎಂದು ತನ್ನ ಓದುಗರಿಗೆ ತೋರಿಸಿಕೊಡಲು ಅವನು ಈ ಪದಗಳನ್ನು ಬಳಸಿದನು.
ಮುಖ್ಯಾಂಶ
ಕ್ರಿಸ್ತನಲ್ಲಿರುವ ಆಶೀರ್ವಾದಗಳು
ಪರಿವಿಡಿ
1. ಸಭೆಯ ಸದಸ್ಯರಿಗಾಗಿರುವ ಸಿದ್ಧಾಂತಗಳು — 1:1-3:21
2. ಸಭೆಯ ಸದಸ್ಯರ ಕರ್ತವ್ಯಗಳು — 4:1-6:24
1
ಪೀಠಿಕೆ
*ದೇವರ ಚಿತ್ತಾನುಸಾರವಾಗಿ ಕ್ರಿಸ್ತ ಯೇಸುವಿನ ಅಪೊಸ್ತಲನಾದ ಪೌಲನು ಎಫೆಸದಲ್ಲಿರುವ ದೇವಜನರಿಗೂ ಕ್ರಿಸ್ತ ಯೇಸುವಿನಲ್ಲಿ §ನಂಬಿಕೆಯಿಟ್ಟಿರುವವರಿಗೂ ಬರೆಯುವುದೇನಂದರೆ, *ನಮ್ಮ ತಂದೆಯಾದ ದೇವರಿಂದಲೂ ಕರ್ತನಾದ ಯೇಸು ಕ್ರಿಸ್ತನಿಂದಲೂ ನಿಮಗೆ ಕೃಪೆಯು ಶಾಂತಿಯೂ ಉಂಟಾಗಲಿ.
ಕ್ರಿಸ್ತನಲ್ಲಿರುವ ಆತ್ಮೀಕ ಆಶೀರ್ವಾದಗಳು
ನಮ್ಮ ಕರ್ತನಾದ ಯೇಸುಕ್ರಿಸ್ತನ ದೇವರೂ ತಂದೆಯೂ ಆಗಿರುವಾತನಿಗೆ ಸ್ತೋತ್ರವಾಗಲಿ, ಆತನು ಪರಲೋಕದಲ್ಲಿನ ಸಕಲ ಆತ್ಮೀಕ ಆಶೀರ್ವಾದಗಳನ್ನು ನಮಗೆ ಕ್ರಿಸ್ತನಲ್ಲಿ ಅನುಗ್ರಹಿಸಿದ್ದಾನೆ. ನಾವು ಆತನ ಸನ್ನಿಧಿಯಲ್ಲಿ §ಪರಿಶುದ್ಧರೂ ದೋಷವಿಲ್ಲದವರೂ ಆಗಿರಬೇಕೆಂದು, ಜಗತ್ತು ಸೃಷ್ಟಿಯಾಗುವುದಕ್ಕಿಂತ ಮೊದಲೇ ದೇವರು *ಕ್ರಿಸ್ತನಲ್ಲಿ ನಮ್ಮನ್ನು ಆರಿಸಿಕೊಂಡನು. ದೇವರು ತನ್ನ ದಯಾಪೂರ್ವಕವಾದ ಚಿತ್ತಕ್ಕನುಸಾರವಾಗಿ ಯೇಸು ಕ್ರಿಸ್ತನ ಮೂಲಕ ನಮ್ಮನ್ನು ತನ್ನ ಮಕ್ಕಳನ್ನಾಗಿ ಅಂಗೀಕರಿಸಲು ಪ್ರೀತಿಯಿಂದ §ಮೊದಲೇ ಸಂಕಲ್ಪಮಾಡಿದ್ದನು. ತನ್ನ ಪ್ರಿಯನಲ್ಲಿಯೇ ನಮಗೆ ಉಚಿತವಾಗಿ ಅನುಗ್ರಹಿಸಿರುವ ತನ್ನ ಮಹಿಮೆಯುಳ್ಳ ಕೃಪೆಯ ಸ್ತುತಿಗಾಗಿ ಇದೆಲ್ಲಾವನ್ನು ಮಾಡಿದನು. ಯೇಸುಕ್ರಿಸ್ತನು ನಮಗೋಸ್ಕರ ಸುರಿಸಿದ *ರಕ್ತದ ಮೂಲಕ ನಮಗೆ ಆತನ ಕೃಪೆಯ ಐಶ್ವರ್ಯಕ್ಕನುಸಾರವಾಗಿ ಪಾಪ ಕ್ಷಮಾಪಣೆಯೆಂಬ ವಿಮೋಚನೆಯು ಉಂಟಾಯಿತು. ಈ ಕೃಪೆಯನ್ನು ಆತನು §ಎಲ್ಲಾ ಜ್ಞಾನ ವಿವೇಕಗಳೊಂದಿಗೆ ನಮಗೆ ಹೇರಳವಾಗಿ ಸುರಿಸಿದ್ದಾನೆ. ದೇವರು ಆತನಲ್ಲಿ ಮೊದಲೇ ನಿರ್ಣಯಿಸಿಕೊಂಡಿದ್ದ ಕೃಪೆಯುಳ್ಳ ಸಂಕಲ್ಪದ ಪ್ರಕಾರ ತನ್ನ ಚಿತ್ತದ ರಹಸ್ಯವನ್ನು ನಮಗೆ ತಿಳಿಯಪಡಿಸಿದ್ದಾನೆ. 10 ಕಾಲವು ಪರಿಪೂರ್ಣವಾದಾಗ, ಆತನು *ಭೂಪರಲೋಕಗಳಲ್ಲಿರುವ ಸಮಸ್ತವನ್ನು ಕ್ರಿಸ್ತನಲ್ಲಿ ಒಂದುಗೂಡಿಸುವುದೇ ಆ ಸಂಕಲ್ಪವಾಗಿತ್ತು.
11 ಇದಲ್ಲದೆ ತನ್ನ ಚಿತ್ತದ ಉದ್ದೇಶಕ್ಕನುಸಾರವಾಗಿ ಎಲ್ಲಾ ಕಾರ್ಯಗಳನ್ನು ನಡೆಸುವಾತನು ತನ್ನ ಸಂಕಲ್ಪದ ಪ್ರಕಾರ ಮೊದಲೇ ನೇಮಿಸಲ್ಪಟ್ಟವರಾದ ನಮ್ಮನ್ನು ಕ್ರಿಸ್ತನಲ್ಲಿ ತನ್ನ ಸ್ವಕೀಯ ಜನರನ್ನಾಗಿ ಅರಿಸಿಕೊಂಡನು. 12 ಕ್ರಿಸ್ತನಲ್ಲಿ ಮೊಟ್ಟ ಮೊದಲು ನಿರೀಕ್ಷೆಯನ್ನಿಟ್ಟ ನಾವು ಆತನ ಮಹಿಮೆಯನ್ನು ಸ್ತುತಿಸುವವರಾಗಿರಬೇಕೆಂದು ಹೀಗೆ ಮಾಡಿದನು.
13 ನೀವು ಸಹ ನಿಮ್ಮ ರಕ್ಷಣಾ §ಸುವಾರ್ತೆಯ ಸತ್ಯವಾಕ್ಯವನ್ನು ಕೇಳಿ, ಕ್ರಿಸ್ತನಲ್ಲಿ ನಂಬಿಕೆಯಿಟ್ಟು, *ವಾಗ್ದಾನಮಾಡಲ್ಪಟ್ಟ ಪವಿತ್ರಾತ್ಮನಿಂದ ಮುದ್ರೆಯನ್ನು ಹೊಂದಿದ್ದೀರಿ. 14  ದೇವರು ತನ್ನ ಸ್ವಕೀಯ ಜನರಿಗೆ ವಿಮೋಚನೆಯುಂಟಾಗುತ್ತದೆ ಎಂಬುದಕ್ಕೆ §ಪವಿತ್ರಾತ್ಮನು *ನಮ್ಮ ಬಾಧ್ಯತೆಗೆ ಸಂಚಕಾರವಾಗಿದ್ದಾನೆ. ಈ ಕಾರಣ ದೇವರಿಗೆ ಮಹಿಮೆಯನ್ನು ಸಲ್ಲಿಸೋಣ.
ಕೃತಜ್ಞತೆಯೂ ಪ್ರಾರ್ಥನೆಯೂ
15 ಹೀಗಿರಲಾಗಿ §ಕರ್ತನಾದ ಯೇಸುವಿನಲ್ಲಿ ನೀವು ಇಟ್ಟಿರುವ ನಂಬಿಕೆಯನ್ನು ಮತ್ತು ದೇವಜನರೆಲ್ಲರಿಗೆ ನೀವು ತೋರಿಸುವ ಪ್ರೀತಿಯ ವಿಷಯವನ್ನು ಕೇಳಿ, 16  *ನಾನು ನಿಮಗೋಸ್ಕರ ನನ್ನ ಪ್ರಾರ್ಥನೆಗಳಲ್ಲಿ ವಿಜ್ಞಾಪನೆ ಮಾಡುವಾಗ ದೇವರಿಗೆ ಎಡೆಬಿಡದೆ ಸ್ತೋತ್ರ ಮಾಡುತ್ತೇನೆ. 17  ನಮ್ಮ ಕರ್ತನಾದ ಯೇಸು ಕ್ರಿಸ್ತನ ದೇವರೂ ಮಹಿಮಾಸ್ವರೂಪನಾದ ತಂದೆಯೂ ಆಗಿರುವಾತನು ತನ್ನ ವಿಷಯವಾಗಿ ಪೂರ್ಣವಾದ ತಿಳಿವಳಿಕೆಯನ್ನು ಕೊಟ್ಟು, ಜ್ಞಾನ ಮತ್ತು ಪ್ರಕಟಣೆಗಳ ಆತ್ಮವನ್ನು ನಿಮಗೆ ದಯಪಾಲಿಸಬೇಕೆಂದು ಪ್ರಾರ್ಥಿಸುತ್ತೇನೆ. 18  §ಆತನೇ ನಿಮ್ಮ ಮನೋನೇತ್ರಗಳನ್ನು ಬೆಳಗಿಸಿ, ಆತನ ಕರೆಯ ನಿರೀಕ್ಷೆಯು ಎಂಥದೆಂಬುದನ್ನೂ ಮತ್ತು *ದೇವಜನರಲ್ಲಿರುವ ಆತನ ಸ್ವತ್ತಿನ ಮಹಿಮಾತಿಶಯವು ಎಂಥದೆಂಬುದನ್ನೂ, 19 ಮತ್ತು ನಂಬುವವರಾದ ನಮ್ಮಲ್ಲಿ ಕಾರ್ಯ ಸಾಧಿಸುವ ಆತನ ಪರಾಕ್ರಮ ಶಕ್ತಿಯ ಅಪಾರವಾದ ಮಹತ್ವವು ಎಂಥದೆಂಬುದನ್ನೂ ನೀವು ತಿಳಿಯುವಂತೆ ದೇವರು ನಿಮಗೆ ಅನುಗ್ರಹಿಸಲಿ. 20 ಈ ಪರಾಕ್ರಮ ಶಕ್ತಿಯಿಂದಲೇ ದೇವರು ಕ್ರಿಸ್ತನನ್ನು ಮರಣದಿಂದ ಎಬ್ಬಿಸಿ, ಸಕಲ ರಾಜತ್ವ, ಅಧಿಕಾರ, ಅಧಿಪತ್ಯ ಮತ್ತು ಪ್ರಭುತ್ವಗಳ ಮೇಲೆಯೂ 21 ಈ ಲೋಕದಲ್ಲಿ ಮಾತ್ರವಲ್ಲದೆ ಮುಂಬರುವ ಲೋಕದಲ್ಲಿಯೂ ಹೆಸರುಗೊಂಡವರೆಲ್ಲರ ಎಲ್ಲಾ ನಾಮಗಳ ಮೇಲೆಯೂ ಪರಲೋಕದಲ್ಲಿ ಆತನನ್ನು ತನ್ನ ಬಲಗಡೆಯಲ್ಲಿ ಕುಳ್ಳಿರಿಸಿಕೊಂಡನು. 22 ಇದಲ್ಲದೆ §ದೇವರು ಸಮಸ್ತವನ್ನೂ ಯೇಸುಕ್ರಿಸ್ತನ ಪಾದದ ಕೆಳಗೆ ಅಧೀನಮಾಡಿ, *ಸಭೆಗಾಗಿ ಎಲ್ಲಾದರ ಮೇಲೆ ಆತನನ್ನು ಶಿರಸ್ಸಾಗಿ ನೇಮಿಸಿದನು. 23  ಸಭೆಯು ಕ್ರಿಸ್ತನ ದೇಹವಾಗಿದೆ, ಎಲ್ಲವನ್ನೂ ಎಲ್ಲಾ ವಿಧದಲ್ಲೂ ಪೂರೈಸುವಾತನಿಂದ ಅದು ಸಂಪೂರ್ಣತೆಯುಳ್ಳದ್ದಾಗಿದೆ.
* 1:1 1:1 1 ಕೊರಿ 1:1 ನೋಡಿರಿ 1:1 1:1 ಕೊರಿ 1:1 ನೋಡಿರಿ 1:1 1:1 ಕೆಲವು ಪ್ರತಿಗಳಲ್ಲಿ ಎಫೆಸದಲ್ಲಿರುವ ಎಂಬ ಪದ ಇಲ್ಲ; ಕೊಲೊ 4:16 ನೋಡಿರಿ. § 1:1 1:1 ಕೊಲೊ 1:2: * 1:2 1:2 ರೋಮಾ. 1:7 ನೋಡಿರಿ. 1:3 1:3 ರೋಮಾ. 15:6 ನೋಡಿರಿ. 1:3 1:3 ಎಫೆ 1:20; 2:6; 3:10: § 1:4 1:4 ಎಫೆ 5:27; ಕೊಲೊ 1:22; 1 ಥೆಸ. 4:7: * 1:4 1:4 ಎಫೆ 2:10; 2 ಥೆಸ. 2:13; 1 ಪೇತ್ರ 1:2: 1:5 1:5 ಎಫೆ 1:12,14 1:5 1:5 ರೋಮಾ. 8 15: § 1:5 1:5 ಎಫೆ 1:9,11; ರೋಮಾ. 8:29,30. * 1:7 1:7 ಅ. ಕೃ. 20:28: 1:7 1:7 ಕೊಲೊ 1:14; ಅ. ಕೃ. 2:38: 1:7 1:7 ರೋಮಾ. 3:24; 1 ಕೊರಿ 1:30. § 1:8 1:8 ರೋಮಾ. 16:25: * 1:10 1:10 ಕೊಲೊ 1:16, 20: 1:10 1:10 ಕ್ರಿಸ್ತನ ಅಧಿಪತ್ಯಕ್ಕೆ ಅಥವಾ ಪ್ರಭುತ್ವಕ್ಕೆ ಅಧೀನಪಡಿಸಬೇಕೆಂದಿದ್ದನು. 1:11 1:11 ಎಫೆ 1:5; 3:11; ರೋಮ. 8:28: § 1:13 1:13 ಕೊಲೊ 1:7: * 1:13 1:13 ಅ. ಕೃ. 1:4: 1:13 1:13 ಎಫೆ 4:30. 1:14 1:14 1 ಪೇತ್ರ. 2:9; ತೀತ. 2:14: § 1:14 1:14 ಕೆಲವು ಪ್ರತಿಗಳಲ್ಲಿ, ಪವಿತ್ರಾತ್ಮವರವು ನಮ್ಮ ಬಾಧ್ಯತೆಗೆ ಸಂಚಕಾರವಾಗಿದೆ ಎಂದು ಬರೆದಿದೆ. * 1:14 1:14 ಅ. ಕೃ. 20:32; ಎಫೆ 1:18; 2 ಕೊರಿ 1:22; ಎಫೆ 4:30. 1:14 1:14 ಮುಂಚಿತವಾಗಿ ಕೊಟ್ಟ ಹಣ ಅಥವಾ ಕಳುಹಿಸಿದ ಸಹಾಯಕ, ಮುಂಚಿತವಾಗಿ ಗೊತ್ತುಮಾಡಿದ ವ್ಯವಸ್ಥೆ ಅಥವಾ ಜಮೀನುದಾರ. 1:14 1:14 ಎಫೆ 1:6, 12: § 1:15 1:15 ಕೊಲೊ 1:4; ಫಿಲೆ. 5: * 1:16 1:16 ಕೊಲೊ 1:9: 1:17 1:17 ರೋಮಾ. 15:6: 1:17 1:17 ಕೊಲೊ 1:9, 10: § 1:18 1:18 ಅ. ಕೃ. 26:18: * 1:18 1:18 ಎಫೆ 3:8,16, 17; 1:7; ಕೊಲೊ 1:27; 1:20 1:20 ಎಫೆ 4:10; ಕೊರಿ 15:24; ಯೋಹಾ 3:31: 1:21 1:21 ಫಿಲಿ. 2:9 § 1:22 1:22 ಕೀರ್ತ 8:6; 1 ಕೊರಿ 15:27 * 1:22 1:22 ಎಫೆ 4:15; 5:23; ಕೊಲೊ 1:18; 2:10,19. 1:23 1:23 ಎಫೆ 4:12,16; 5:30; ಕೊಲೊ 1:18. 1 ಕೊರಿ 12:27: 1:23 1:23 ಅಥವಾ, ಅದು ಆತನನ್ನು ಪರಿಪೂರ್ಣ ಮಾಡುತ್ತದೆ; ಮತ್ತು ಆತನ ದೊರೆತನವು ಅದರ ಎಲ್ಲಾ ಭಾಗಗಳಲ್ಲಿ ಪರಿಪೂರ್ಣವಾಗಿದೆ. ಎಫೆ 3:19; 4:10; ಕೊಲೊ 3:11: