ಗಲಾತ್ಯದವರಿಗೆ
ಗ್ರಂಥಕರ್ತೃತ್ವ
ಅಪೊಸ್ತಲನಾದ ಪೌಲನು ಈ ಪತ್ರಿಕೆಯ ಗ್ರಂಥಕರ್ತನಾಗಿದ್ದಾನೆ, ಇದು ಆದಿ ಸಭೆಯ ಒಮ್ಮತದ ಅಭಿಮತವಾಗಿದೆ. ಪೌಲನು ಆಸ್ಯ ಸೀಮೆಗೆ ಹೋದ ತನ್ನ ಮೊದಲನೆಯ ಮಿಷನರಿ ಪ್ರಯಾಣದಲ್ಲಿ ಅವರಲ್ಲಿ ಸಭೆಗಳನ್ನು ಪ್ರಾರಂಭಿಸಿದ ನಂತರ ದಕ್ಷಿಣ ಗಲಾತ್ಯ ಸಭೆಗಳಿಗೆ ಇದನ್ನು ಬರೆದನು. ಗಲಾತ್ಯವು ರೋಮಾಪುರ ಅಥವಾ ಕೊರಿಂಥದಂತೆ ಒಂದು ಪಟ್ಟಣವಲ್ಲ, ಆದರೆ ಅನೇಕ ಪಟ್ಟಣಗಳು ಮತ್ತು ಹಲವಾರು ಸಭೆಗಳು ಇರುವ ರೋಮನ್ ಪ್ರಾಂತ್ಯವಾಗಿದೆ. ಪತ್ರಿಕೆಯಲ್ಲಿ ಗಲಾತ್ಯದವರು ಎಂದು ಸಂಬೋಧಿಸಿ ಹೇಳಿರುವಂಥವರು ಪೌಲನಿಂದ ರಕ್ಷಣೆಗೆ ಬಂದಂಥವರಾಗಿದ್ದಾರೆ.
ಬರೆದ ದಿನಾಂಕ ಮತ್ತು ಸ್ಥಳ
ಸರಿಸುಮಾರು ಕ್ರಿ.ಶ. 48 ರಲ್ಲಿ ಬರೆಯಲ್ಪಟ್ಟಿದೆ.
ಬಹುಶಃ ಪೌಲನು ಅಂತಿಯೋಕ್ಯದಿಂದ ಗಲಾತ್ಯದವರಿಗೆ ಈ ಪತ್ರಿಕೆಯನ್ನು ಬರೆದಿರಬಹುದು, ಏಕೆಂದರೆ ಇದು ಅವನ ನೆಲೆಬೀಡಾಗಿತ್ತು.
ಸ್ವೀಕೃತದಾರರು
ಗಲಾತ್ಯದವರಿಗೆ ಬರೆದ ಪತ್ರಿಕೆಯನ್ನು ಗಲಾತ್ಯದಲ್ಲಿರುವ ಸಭೆಗಳ ಸದಸ್ಯರಿಗೆ ಬರೆಯಲಾಗಿತ್ತು (ಗಲಾ. 1:1-2).
ಉದ್ದೇಶ
ಯೆಹೂದ್ಯರ ಸುಳ್ಳು ಸುವಾರ್ತೆಯನ್ನು ಅಂದರೆ ಯೆಹೂದ್ಯ ಕ್ರೈಸ್ತರು ರಕ್ಷಣೆಗಾಗಿ ಸುನ್ನತಿಯು ಅಗತ್ಯವಿದೆ ಎಂದು ಹೇಳುತ್ತಿದ್ದ ಸುವಾರ್ತೆಯನ್ನು ಖಂಡಿಸುವುದು ಮತ್ತು ಅವರ ರಕ್ಷಣೆಗೆ ಬೇಕಾದ ನಿಜವಾದ ಆಧಾರವನ್ನು ಗಲಾತ್ಯದವರಿಗೆ ನೆನಪಿಸುವುದು ಈ ಪತ್ರಿಕೆಯ ಉದ್ದೇಶವಾಗಿತ್ತು. ಪೌಲನು ತನ್ನ ಅಪೊಸ್ತಲ ಅಧಿಕಾರವನ್ನು ಸ್ಪಷ್ಟವಾಗಿ ಸ್ಥಾಪಿಸಿ ಪ್ರತಿಕ್ರಿಯಿಸಿದನು ಮತ್ತು ಅದರಿಂದ ಅವನು ಸಾರಿದ ಸುವಾರ್ತೆಯನ್ನು ಪುಷ್ಟೀಕರಿಸಿದನು. ನಂಬಿಕೆಯ ಮೂಲಕ ಕೃಪೆಯಿಂದ ಮಾತ್ರವೇ ಜನರು ನೀತಿಕರಿಸಲ್ಪಟ್ಟಿದ್ದಾರೆ ಮತ್ತು ಅವರು ತಮ್ಮ ಹೊಸ ಜೀವನವನ್ನು ಆತ್ಮನ ಸ್ವಾತಂತ್ರ್ಯದಲ್ಲಿ ನಂಬಿಕೆಯಿಂದ ಮಾತ್ರವೇ ಜೀವಿಸಬೇಕು.
ಮುಖ್ಯಾಂಶ
ಕ್ರಿಸ್ತನಲ್ಲಿರುವ ಸ್ವಾತಂತ್ರ್ಯ
ಪರಿವಿಡಿ
1. ಪೀಠಿಕೆ — 1:1-10
2. ಸುವಾರ್ತೆಯ ದೃಢೀಕರಣ — 1:11-2:21
3. ನಂಬಿಕೆಯಿಂದ ನೀತಿಕರಣ — 3:1-4:31
4. ನಂಬಿಕೆಯ ಮತ್ತು ಸ್ವಾತಂತ್ರ್ಯ ಜೀವನದ ಅಭ್ಯಾಸ — 5:1-6:18
1
ವಂದನೆಯೂ ದೇವರ ಸ್ತೋತ್ರವೂ
*ಮನುಷ್ಯರಿಂದಾಗಲಿ ಮನುಷ್ಯರ ಮುಖಾಂತರದಿಂದಾಗಲಿ ಅಪೊಸ್ತಲನಾಗಿರದೆ ಯೇಸು ಕ್ರಿಸ್ತನ ಮುಖಾಂತರವೂ ಮತ್ತು ಆತನನ್ನು ಸತ್ತವರೊಳಗಿಂದ ಎಬ್ಬಿಸಿದ ತಂದೆಯಾದ ದೇವರಿಂದಲೂ ಅಪೊಸ್ತಲೋದ್ಯೋಗವನ್ನು ಹೊಂದಿದ ಪೌಲನೆಂಬ ನಾನು ಹಾಗೂ ನನ್ನ ಜೊತೆಯಲ್ಲಿರುವ ಎಲ್ಲಾ ಸಹೋದರರೂ §ಗಲಾತ್ಯದಲ್ಲಿರುವ ಸಭೆಗಳಿಗೆ ಬರೆಯುವುದೇನೆಂದರೆ, *ತಂದೆಯಾದ ದೇವರಿಂದಲೂ ನಮ್ಮ ಕರ್ತನಾದ ಯೇಸು ಕ್ರಿಸ್ತನಿಂದಲೂ ನಿಮಗೆ ಕೃಪೆಯೂ ಶಾಂತಿಯೂ ಆಗಲಿ.
ಆತನು ನಮ್ಮನ್ನು ಈಗಿನ ದುಷ್ಟ ಯುಗದಿಂದ ಬಿಡಿಸಬೇಕೆಂದು ನಮ್ಮ ತಂದೆಯಾದ ದೇವರ ಚಿತ್ತಕ್ಕನುಸಾರವಾಗಿ, §ನಮ್ಮ ಪಾಪಗಳ ದೆಸೆಯಿಂದ ತನ್ನನ್ನು ಮರಣಕ್ಕೆ ಒಪ್ಪಿಸಿಕೊಟ್ಟನು. ದೇವರಿಗೆ ಯುಗಯುಗಾಂತರಗಳಲ್ಲಿಯೂ ಮಹಿಮೆಯಾಗಲಿ. ಆಮೆನ್.
ಏಕೈಕ ಸುವಾರ್ತೆ
ಕ್ರಿಸ್ತನ ಕೃಪೆಯಿಂದ ನಿಮ್ಮನ್ನು ಕರೆದಾತನನ್ನು ಬಿಟ್ಟು, ಇಷ್ಟು ಬೇಗನೆ *ಬೇರೆ ಸುವಾರ್ತೆಯ ಕಡೆಗೆ ನೀವು ತಿರುಗಿದಿರೆಂದು ನಾನು ಆಶ್ಚರ್ಯಪಡುತ್ತೇನೆ. ವಾಸ್ತವವಾಗಿ ಬೇರೊಂದು ಸುವಾರ್ತೆ ಇಲ್ಲ, ಆದರೆ ಕೆಲವರು ನಿಮ್ಮಲ್ಲಿ ಬೇಧವನ್ನು ಹುಟ್ಟಿಸುತ್ತಾ ಕ್ರಿಸ್ತನ ಸುವಾರ್ತೆಯನ್ನು ಮಾರ್ಪಡಿಸುವುದಕ್ಕೆ ಪ್ರಯತ್ನಿಸುತ್ತಿದ್ದಾರೆ. ಆದರೂ ನಾವು ನಿಮಗೆ ಸಾರಿದ ಸುವಾರ್ತೆಗೆ ವಿರುದ್ಧವಾದದ್ದನ್ನು, ನಾವೇ ಆಗಲಿ ಅಥವಾ §ಪರಲೋಕದಿಂದ ಬಂದ ದೇವದೂತನೇ ಆಗಲಿ, ನಿಮಗೆ ಸಾರಿದರೆ ಅವನು *ಶಾಪಗ್ರಸ್ತನಾಗಲಿ. ನಾವು ಮೊದಲು ಹೇಳಿದಂತೆಯೇ ಈಗಲೂ ನಾನು ತಿರುಗಿ ಹೇಳುತ್ತೇನೆ. ನೀವು ಸ್ವೀಕರಿಸಿದ ಸುವಾರ್ತೆಗೆ ವಿರುದ್ಧವಾದದ್ದನ್ನು ಯಾವನಾದರೂ ನಿಮಗೆ ಸಾರಿದರೆ ಅವನು ಶಾಪಗ್ರಸ್ತನಾಗುವನು.
10 ನಾನೀಗ ಯಾರನ್ನು ಒಲಿಸಿಕೊಳ್ಳುತ್ತಾ ಇದ್ದೇನೆ? ಮನುಷ್ಯರನ್ನೋ? ದೇವರನ್ನೋ? ನಾನು ಮನುಷ್ಯರನ್ನು ಮೆಚ್ಚಿಸುವುದಕ್ಕೆ ಪ್ರಯತ್ನಿಸುತ್ತಾ ಇದ್ದೇನೋ? ಇನ್ನೂ ಮನುಷ್ಯರನ್ನು ಮೆಚ್ಚಿಸುವವನಾಗಿದ್ದರೆ ನಾನು ಕ್ರಿಸ್ತನ ಸೇವಕನಲ್ಲ.
ಪೌಲನು ಅಪೊಸ್ತಲನಾದ್ದದು ಹೇಗೆ
11 ಸಹೋದರರೇ, §ನಾನು ಸಾರಿದ ಸುವಾರ್ತೆಯಂತೂ ಕೇವಲ ಮನುಷ್ಯನಿಂದ ಬಂದದ್ದಲ್ಲವೆಂದು ನೀವು ತಿಳಿದುಕೊಳ್ಳಬೇಕೆಂದು ನಾನು ಬಯಸುತ್ತೇನೆ. 12  *ನಾನು ಅದನ್ನು ಮನುಷ್ಯನಿಂದ ಹೊಂದಲಿಲ್ಲ, ನನಗೆ ಯಾರೂ ಉಪದೇಶಿಸಲಿಲ್ಲ, ಬದಲಾಗಿ ಯೇಸು ಕ್ರಿಸ್ತನೇ ಅದನ್ನು ನನಗೆ ಪ್ರಕಟಪಡಿಸಿದನು. 13 ಹಿಂದೆ ನಾನು ಯೆಹೂದ್ಯ ಮತದಲ್ಲಿದ್ದಾಗ ನನ್ನ ನಡತೆ ಎಂಥದ್ದೆಂದು ನೀವು ಕೇಳಿದ್ದೀರಿ. §ನಾನು ದೇವರ ಸಭೆಯನ್ನು ಬಹಳವಾಗಿ ಹಿಂಸೆಪಡಿಸಿ ಹಾಳುಮಾಡುತ್ತಿದ್ದೆನು. 14 ಇದಲ್ಲದೆ ನಾನು ನನ್ನ ಪೂರ್ವಿಕರಿಂದ ಬಂದ ಸಂಪ್ರದಾಯಗಳ ಬಗ್ಗೆ ಬಹು ಅಭಿಮಾನವುಳ್ಳವನಾಗಿ, ನನ್ನ ಜನರೊಳಗೆ ಸಮಪ್ರಾಯದವರಾದ *ಅನೇಕರಿಗಿಂತ ಯೆಹೂದ್ಯ ಮತಾಚಾರದಲ್ಲಿ ಆಸಕ್ತನಾಗಿದ್ದೆನು.
15 ಆದರೆ ನಾನು ನನ್ನ ತಾಯಿಯ ಗರ್ಭದಲ್ಲಿದ್ದಾಗಲೇ ನನ್ನನ್ನು ಪ್ರತ್ಯೇಕಿಸಿ, ತನ್ನ ಕೃಪೆಯಿಂದ ಕರೆದ ದೇವರು, 16 ತನ್ನ ಮಗನನ್ನು ನನ್ನೊಳಗೆ ಪ್ರಕಟಪಡಿಸುವುದಕ್ಕೆ ಮತ್ತು §ಅನ್ಯಜನರಲ್ಲಿ ಆತನನ್ನು ನಾನು ಪ್ರಸಿದ್ಧಿಪಡಿಸುವವನಾಗಬೇಕೆಂದು ಇಚ್ಛಿಸಿದನು. ನಾನು ಕೂಡಲೇ ಮನುಷ್ಯರ ಆಲೋಚನೆಯನ್ನು ಕೇಳದೆ, 17 ಯೆರೂಸಲೇಮಿಗೆ ನನಗಿಂತ ಮೊದಲು ಅಪೊಸ್ತಲರಾಗಿದ್ದವರ ಬಳಿಗೂ ಹೋಗದೆ ಅರಬಸ್ಥಾನಕ್ಕೆ ಹೋಗಿ ತಿರುಗಿ ದಮಸ್ಕಕ್ಕೆ ಬಂದೆನು.
18  *ಮೂರು ವರ್ಷಗಳ ತರುವಾಯ ಕೇಫನ ಪರಿಚಯವನ್ನು ಮಾಡಿಕೊಳ್ಳಬೇಕೆಂದು ಯೆರೂಸಲೇಮಿಗೆ ಹೋಗಿ ಅವನ ಬಳಿಯಲ್ಲಿ ಹದಿನೈದು ದಿನಗಳು ಇದ್ದೆನು. 19 ಆದರೆ ಕರ್ತನ ಸಹೋದರನಾದ ಯಾಕೋಬನಲ್ಲದೆ ಅಪೊಸ್ತಲರಲ್ಲಿ ಬೇರೆ ಯಾರನ್ನೂ ನಾನು ಕಾಣಲಿಲ್ಲ. 20 ನಾನು ನಿಮಗೆ ಬರೆಯುವ ಸಂಗತಿಗಳು ಸುಳ್ಳಲ್ಲವೆಂಬುದಕ್ಕೆ ಇಗೋ, ದೇವರೇ ಸಾಕ್ಷೀ.
21  ಆ ಮೇಲೆ ಸಿರಿಯ ಮತ್ತು ಕಿಲಿಕ್ಯ ಪ್ರಾಂತ್ಯಗಳಿಗೆ ಹೋದೆನು. 22 ಆದರೆ ಕ್ರಿಸ್ತನಲ್ಲಿರುವ §ಯೂದಾಯದ ಸಭೆಗಳಿಗೆ ನನ್ನ ಪರಿಚಯವಿರಲಿಲ್ಲ. 23 “ಪೂರ್ವದಲ್ಲಿ ನಮ್ಮನ್ನು ಹಿಂಸೆಪಡಿಸಿದವನು, ತಾನು ಹಾಳು ಮಾಡುತ್ತಿದ್ದ ನಂಬಿಕೆಯನ್ನು ಈಗ ಸಾರುತ್ತಿದ್ದಾನೆ” ಎಂಬ ಸುದ್ದಿಯನ್ನು ಅವರು ಕೇಳಿ, 24 ನನ್ನ ಕುರಿತಾಗಿ ದೇವರನ್ನು ಕೊಂಡಾಡಿದರು.
* 1:1 1:1 ಗಲಾ. 1:11,12 1:1 1:1 ಅ. ಕೃ. 9:6; 20:24; 22:10,15,21; 26:16; 1 ತಿಮೊ. 1:1 1:1 1:1 ಅ. ಕೃ. 2:24 § 1:2 1:2 ಅ. ಕೃ. 14:21; 16:6; 1 ಕೊರಿ 16:1 * 1:3 1:3 1 ತಿಮೊ. 1:2 1:3 1:3 ರೋಮಾ. 1:7; ಕೊರಿ 1:3 1:4 1:4 ಎಫೆ 2:2; 1 ಯೋಹಾ 5:19 § 1:4 1:4 ಮತ್ತಾ 20:28; ರೋಮಾ. 4:25; 1 ಕೊರಿ 15:3 * 1:6 1:6 2 ಕೊರಿ 11:4; 1 ತಿಮೊ. 1:3 1:7 1:7 ಅ. ಕೃ. 4:12; 1 ಕೊರಿ 3:11 1:7 1:7 ಗಲಾ. 5:10 § 1:8 1:8 2 ಕೊರಿ 11:14 * 1:8 1:8 ರೋಮಾ. 9:3 1:9 1:9 ರೋಮಾ. 9:3 1:10 1:10 1 ಥೆಸ. 2:4 § 1:11 1:11 1 ಕೊರಿ 15:1-3 * 1:12 1:12 ಗಲಾ. 1:1; 1 ಕೊರಿ 11:3; 15:3 1:12 1:12 ಗಲಾ. 1:16; 1 ಕೊರಿ 2:10; 2 ಕೊರಿ 12:1 1:13 1:13 ಅ. ಕೃ. 26:4 § 1:13 1:13 ಅ. ಕೃ. 8:3 * 1:14 1:14 ಫಿಲಿ. 3:6 1:15 1:15 ಯೆಶಾ 49:1,; ಯೆರೆ 1:5 1:15 1:15 ಅ. ಕೃ. 13:2; ಮಾರ್ಕ 6:3; ರೋಮಾ. 1:1 § 1:16 1:16 ಗಲಾ. 2:9; ಅ. ಕೃ. 9:15 * 1:18 1:18 ಅ. ಕೃ. 9:22-27; 22:17 1:19 1:19 ಮತ್ತಾ 12:46; ಮಾರ್ಕ 6:3; ಅ. ಕೃ. 12:17 1:21 1:21 ಅ. ಕೃ. 9:30; 11:25, 26; 13:1 § 1:22 1:22 1 ಥೆಸ. 2:14