25
ದೇವಾಲಯದ ಸಂಗೀತ ಮಂಡಳಿ
1 ಆಮೇಲೆ ದಾವೀದನು ಮತ್ತು ಗುಡಾರದ ಸೇವೆ ಸಲ್ಲಿಸುತ್ತಿದ್ದ ಪ್ರಧಾನರು ಆಸಾಫ್ಯ, ಹೇಮಾನ್ಯ ಮತ್ತು ಯೆದುತೂನ್ಯರ ಮಕ್ಕಳನ್ನು ಸೇವೆ ಮಾಡುವುದಕ್ಕೋಸ್ಕರ ಆಯ್ಕೆಮಾಡಿದರು. ಇವರು ಕಿನ್ನರಿ, ಸ್ವರಮಂಡಲ, ತಾಳ, ಇವುಗಳನ್ನು ನುಡಿಸುತ್ತಾ, ಪ್ರವಾದಿಸುತ್ತ, ಗಾಯನಮಾಡುತ್ತಿದ್ದರು. ಆ ಸೇವೆಯನ್ನು ಮಾಡತಕ್ಕ ಪುರುಷರ ಪಟ್ಟಿ,
2 ಆಸಾಫ್ಯರಲ್ಲಿ ಜಕ್ಕೂರ್, ಯೋಸೇಫ್, ನೆತನ್ಯ, ಅಶರೇಲ ಎಂಬವರು. ಇವರು ಅರಮನೆಯ ಗಾಯಕನಾದ ಆಸಾಫನ ಸಹಾಯಕರು.
3 ಯೆದುತೂನ್ಯರಲ್ಲಿ ಗೆದಲ್ಯ, ಚೆರೀ, ಯೆಶಾಯ, ಶಿಮ್ಮೀ, ಹಷಬ್ಯ, ಮತ್ತಿತ್ಯ ಇವರೇ. ಕಿನ್ನರಿಯನ್ನು ನುಡಿಸುತ್ತಾ ಪರವಶರಾಗಿ ಯೆಹೋವನ ಕೀರ್ತನೆ ಮಾಡುವ ತಮ್ಮ ತಂದೆಯಾದ ಯೆದುತೂನ್ಯನಿಗೆ ಈ ಆರು ಜನರೂ ಸಹಾಯಕರಾಗಿದ್ದರು.
4 ಹೇಮಾನ್ಯರಲ್ಲಿ ಬುಕ್ಕೀಯ, ಮತ್ತನ್ಯ, ಉಜ್ಜೀಯೇಲ್, ಶೆಬೂವೇಲ್, ಯೆರೀಮೋತ್, ಹನನ್ಯ, ಹನಾನೀ, ಎಲೀಯಾತ, ಗಿದ್ದಲ್ತಿ, ರೋಮಮ್ತಿಯೆಜೆರ್, ಯೊಷ್ಬೆಕಾಷ, ಮಲ್ಲೋತಿ, ಹೋತೀರ್ ಮತ್ತು ಮಹಜೀಯೋತ್.
5 ಇವರೆಲ್ಲರು ಅರಸನ ದರ್ಶಿಯಾದ ಹೇಮಾನನ ಮಕ್ಕಳು. ದೇವರು ಹೇಮಾನನಿಗೆ, “ನೀನು ಅಭಿವೃದ್ಧಿ ಹೊಂದುವಹಾಗೆ ಮಾಡುವೆನು” ಎಂಬುದಾಗಿ ವಾಗ್ದಾನ ಮಾಡಿದ್ದನು. ಅದರಂತೆಯೇ ಆತನು ಅವನಿಗೆ ಹದಿನಾಲ್ಕು ಗಂಡುಮಕ್ಕಳನ್ನೂ, ಮೂರು ಹೆಣ್ಣುಮಕ್ಕಳನ್ನೂ ದಯಪಾಲಿಸಿದನು.
6 ದೇವರಾದ ಯೆಹೋವನ ಆಲಯದಲ್ಲಿ ಆರಾಧನೆ ನಡೆಯುತ್ತಿರುವಾಗ ಇವರೆಲ್ಲರೂ ತಮ್ಮ ತಂದೆಯ ಕೈಕೆಳಗಿದ್ದುಕೊಂಡು ತಾಳ, ಸ್ವರಮಂಡಲ, ಕಿನ್ನರಿ ಇವುಗಳಿಂದ ಗಾಯನ ಮಾಡುತ್ತಿದ್ದರು. ಆಸಾಫ ಯೆದುತೂನ್ ಹೇಮಾನರು ಅರಸನ ಸೇವೆಯಲ್ಲಿದ್ದರು.
7 ಇವರು ಯೆಹೋವನ ಕೀರ್ತನೆಗಳನ್ನು ಕಲಿತ ಇವರ ಸಹೋದರರು ಒಟ್ಟು ಇನ್ನೂರ ಎಂಭತ್ತೆಂಟು ಜನರು. ಇವರೆಲ್ಲರೂ ಗಾಯಕ ಪ್ರವೀಣರಾಗಿದ್ದರು.
8 ಇವರಲ್ಲಿ ಹಿರಿಯರು, ಕಿರಿಯರು, ಗುರುಶಿಷ್ಯರೂ ಕೂಡಿಕೊಂಡು ಚೀಟಿನಿಂದ ತಮ್ಮ ಸೇವಾ ಕ್ರಮವನ್ನು ಗೊತ್ತುಮಾಡಿಕೊಂಡರು.
9 ಚೀಟಿನ ಪ್ರಕಾರವಾಗಿ,
ಮೊದಲನೆಯದಾಗಿ ಆಸಾಫ್ಯನಾದ ಯೋಸೇಫನು.
ಎರಡನೆಯವನು ಗೆದಲ್ಯ. ಇವನೂ ಇವನ ಸಹೋದರರೂ, ಮಕ್ಕಳು ಒಟ್ಟು ಹನ್ನೆರಡು ಜನರು.
10 ಮೂರನೆಯವನು ಜಕ್ಕೂರ್. ಇವನೂ, ಇವನ ಸಹೋದರರೂ ಮತ್ತು ಮಕ್ಕಳು ಒಟ್ಟು ಹನ್ನೆರಡು ಜನರು.
11 ನಾಲ್ಕನೆಯವನು ಇಚ್ರೀ. ಇವನೂ, ಇವನ ಸಹೋದರರೂ ಮತ್ತು ಮಕ್ಕಳು ಒಟ್ಟು ಹನ್ನೆರಡು ಜನರು.
12 ಐದನೆಯವನು ನೆತನ್ಯ. ಇವನೂ, ಇವನ ಸಹೋದರರೂ ಮತ್ತು ಮಕ್ಕಳು ಒಟ್ಟು ಹನ್ನೆರಡು ಜನರು.
13 ಆರನೆಯವನು ಬುಕ್ಕೀಯ. ಇವನೂ, ಇವನ ಸಹೋದರರೂ ಮತ್ತು ಮಕ್ಕಳು ಒಟ್ಟು ಹನ್ನೆರಡು ಜನರು.
14 ಏಳನೇಯವನು ಯೆಸರೇಲ. ಇವನೂ, ಇವನ ಸಹೋದರರೂ ಮತ್ತು ಮಕ್ಕಳು ಒಟ್ಟು ಹನ್ನೆರಡು ಜನರು.
15 ಎಂಟನೆಯವನು ಯೆಶಾಯ. ಇವನೂ, ಇವನ ಸಹೋದರರೂ ಮತ್ತು ಮಕ್ಕಳು ಒಟ್ಟು ಹನ್ನೆರಡು ಜನರು.
16 ಒಂಬತ್ತನೆಯದು ಮತ್ತನ್ಯ. ಇವನೂ, ಇವನ ಸಹೋದರರೂ ಮತ್ತು ಮಕ್ಕಳು ಒಟ್ಟು ಹನ್ನೆರಡು ಜನರು.
17 ಹತ್ತನೆಯವನು ಶಿಮ್ಮೀ. ಇವನೂ, ಇವನ ಸಹೋದರರೂ ಮತ್ತು ಮಕ್ಕಳು ಒಟ್ಟು ಹನ್ನೆರಡು ಜನರು.
18 ಹನ್ನೊಂದನೆಯವನು ಅಜರೇಲ್. ಇವನೂ, ಇವನ ಸಹೋದರರೂ ಮತ್ತು ಮಕ್ಕಳು ಒಟ್ಟು ಹನ್ನೆರಡು ಜನರು.
19 ಹನ್ನೆರಡನೆಯವನು ಹಷಬ್ಯ. ಇವನೂ ಇವನ ಸಹೋದರರೂ ಮಕ್ಕಳು ಒಟ್ಟು ಹನ್ನೆರಡು ಜನರು.
20 ಹದಿಮೂರನೆಯದು ಶೂಬಾಯೇಲ್. ಇವನೂ, ಇವನ ಸಹೋದರರೂ ಮತ್ತು ಮಕ್ಕಳು ಒಟ್ಟು ಹನ್ನೆರಡು ಜನರು.
21 ಹದಿನಾಲ್ಕನೆಯವನು ಮತ್ತಿತ್ಯ. ಇವನೂ, ಇವನ ಸಹೋದರರೂ ಮತ್ತು ಮಕ್ಕಳೂ ಒಟ್ಟು ಹನ್ನೆರಡು ಜನರು.
22 ಹದಿನೈದನೆಯವನು ಯೆರೆಮೋತ್. ಇವನೂ, ಇವನ ಸಹೋದರರೂ ಮತ್ತು ಮಕ್ಕಳು ಒಟ್ಟು ಹನ್ನೆರಡು ಜನರು.
23 ಹದಿನಾರನೆಯವನು ಹನನ್ಯ. ಇವನೂ, ಇವನ ಸಹೋದರರೂ ಮತ್ತು ಮಕ್ಕಳು ಒಟ್ಟು ಹನ್ನೆರಡು ಜನರು.
24 ಹದಿನೇಳನೆಯವನು ಯೊಷ್ಬೆಕಾಷ. ಇವನೂ, ಇವನ ಸಹೋದರರೂ ಮತ್ತು ಮಕ್ಕಳು ಒಟ್ಟು ಹನ್ನೆರಡು ಜನರು.
25 ಹದಿನೆಂಟನೆಯವನು ಹನಾನೀ. ಇವನೂ, ಇವನ ಸಹೋದರರೂ ಮತ್ತು ಮಕ್ಕಳು ಒಟ್ಟು ಹನ್ನೆರಡು ಜನರು.
26 ಹತ್ತೊಂಬತ್ತನೆಯವನು ಮಲ್ಲೋತಿ. ಇವನೂ, ಇವನ ಸಹೋದರರೂ ಮತ್ತು ಮಕ್ಕಳು ಒಟ್ಟು ಹನ್ನೆರಡು ಜನರು.
27 ಇಪ್ಪತ್ತನೆಯವನು ಎಲೀಯಾತ. ಇವನೂ, ಇವನ ಸಹೋದರರೂ ಮತ್ತು ಮಕ್ಕಳು ಒಟ್ಟು ಹನ್ನೆರಡು ಜನರು.
28 ಇಪ್ಪತ್ತೊಂದನೆಯವನು ಹೋತೀರ್. ಇವನೂ, ಇವನ ಸಹೋದರರೂ ಮತ್ತು ಮಕ್ಕಳು ಒಟ್ಟು ಹನ್ನೆರಡು ಜನರು.
29 ಇಪ್ಪತ್ತೆರಡನೆಯವನು ಗಿದ್ದಲ್ತಿ. ಇವನೂ, ಇವನ ಸಹೋದರರೂ ಮತ್ತು ಮಕ್ಕಳು ಒಟ್ಟು ಹನ್ನೆರಡು ಜನರು.
30 ಇಪ್ಪತ್ತಮೂರನೆಯವನು ಮಹಜೀಯೋತ್. ಇವನೂ, ಇವನ ಸಹೋದರರೂ ಮತ್ತು ಮಕ್ಕಳು ಒಟ್ಟು ಹನ್ನೆರಡು ಜನರು.
31 ಇಪ್ಪತ್ತನಾಲ್ಕನೆಯವನು ರೋಮಮ್ತಿಯೆಜೆರ್. ಇವನೂ, ಇವನ ಸಹೋದರರೂ ಮತ್ತು ಮಕ್ಕಳು ಒಟ್ಟು ಹನ್ನೆರಡು ಜನರು.