2
ತುಮಾರ ಖ್ಹಾಜೇಬಿ, ಲವೊದಿಕೀಯವಾಳನ ಖ್ಹಾಜೇಬಿ ಶೊಂತ್‍ಥೀಬಿ ಮಳಾಕೊಂತೆ ಇವ್ಣಖ್ಹಾಜೆಥೀಬಿ ಮೇ ಕೆತ್ರೆ ಲಡುಕರೂಸ್ ಕರಿ ಬೋಲಾನು ತುಮೆ ಮಾಲುಮ್ ಕರಿರಾಕ್ಣು ಕರಿ ಮೇ ಆಖ್ಹ್‌ಕರುಸ್. ಕಿಮ್‌ಕತೊ ಇವ್ಣ ದಿಲ್ನ ಪ್ಯಾರ್‌ಥಿ ಲೀರಾಖಿನ್ ಹುಮ್ಮಖ್ಹ್‌ಹುಯಿನ್ ಮಳ್‌ಣುಕರಿ ಛಾ಼ತೆ ಪೂರ ಅಕ್ಕಲ್‍ಥಿ ಬಾ ದೇವ್ನ ಮಾಯ್ನನ ಕತೊ ಕ್ರಿಸ್ತನ ಮಾಲುಮ್‌ ಕರಿಲ್ಯವಾಥಿಸ್ ಹುಯಿರ‍್ಹುಸ್. ಕ್ರಿಸ್ತಸ್ ಕೀಲಿ ಹುಯಿರ‍್ಹೊಸ್ ಗ್ಯಾನ್, ಅಕ್ಕಲ್ ಅಜು಼ ಖ್ಹಾರು ಧನ್‌ದೌಲತ್‌ ಇನಾಮಸ್ ಲಪ್ಯುಸ್. ಕೋಣ್‌ಬಿ ತುಮುನ ಇವ್ಣ ಪೊಖ್ಹ್‌ಲಾವನಿ ವಾತೆಥೀಬಿ ಝೂ಼ಟಿ ವಾತೆಥಿ ಠಗಾವ್ಣುನಾ ಕರಿ ಆ ವಾತೆಖ್ಹಾರಿ ತುಮುನ ಬೋಲಿರಾಖ್ಯೊಸ್. ಮೇ ಶರೀರ್‌ಮ ತುಮಾರಕನ ನಾರ‍್ಹಯೊತೋಬಿ ಮಾರೊ ಆತ್ಮಥಿ ತುಮಾರಿ ಜೋ಼ಡ್ಮ ರ‍್ಹೀನ್. ತುಮೆ ಬರೋಬರ್‌ಥಿ ಚಾ಼ಲಿಲ್ಯಾವನುಬಿ ಅಜು಼ ಕ್ರಿಸ್ತಮ ತುಮಾರಿ ವಿಶ್ವಾಸ್ ಘಟ್‍ಛಾ಼ ಕರಿ ದೇಖಿನ್ ಮನ ಖುಷಿಹುವಸ್.
ಕ್ರಿಸ್ತಮ ಭರ್‌ಪೂರ್‌ನು ಜಿವ್ಣು
ಇನಾಖ್ಹಾಜೆ ತುಮೆ ಕ್ರಿಸ್ತಯೇಸುನ ಪ್ರಭುಕರಿ ಸ್ವೀಕಾರ್ ಕರಿಲಿದಾತೆ ತಿಮ್ಮಸ್ ಇನಾಮ ರ‍್ಹೀನ್ ಜಿವ್ಣು ಕರೊ. ಇನಾಮಸ್ ಘಣು ಜ಼ಡ್‌ಗಾಠಿನ್, ಇನಾಮ ಭಂದೈಜೈ಼ನ್ ಅಜು಼ ತುಮುನ ಬೊಲಾಯುತೆ ಭೋದನ್ನಿ ಪರಕ್ಮಸ್ ಕ್ರಿಸ್ತನಿ ವಿಶ್ವಾಸ್ಮ ಘಟ್‌ಭೀರಿನ್ ಘಣೇಥಿ ಧನ್ಯವಾದ್ ಕರಾವಾಳ ಹುಯಿ‍ರ‍್ಹೆವೊ. ಗಲ್ತಿನು ಅಜು಼ ಫಾಯಿದೊಕೊಂತೆ ಬೋಧನೆತು ಕೋಣ್‌ಬಿ ತುಮೂನ ಕಬ್‌ಜಾ಼ಮ ನಾಕರಿಲೇವ್ಣುತೆ ಹೊಷಾರ್‌ಥಿ ರ‍್ಹವೊ. ಆ ಅಖ್ಖು ಅದ್ಮಿವೋನ ಪದತ್ತಿನ ಅಜು಼ ಲೋಕ್‌ನಹೋಣುತೆ ಬೋಧನೆಮಾಸ್ ಛಾ಼ ಪಣ್ಕಿ ಕ್ರಿಸ್ತಾನಕಾಹೆ. ಶನಕತೊ ದೇವ್ನು ಹರೇಕ್ ಭರ್‌ಪೂರ್‌ನು ಜಿವ್ಣು ಕ್ರಿಸ್ತನ ಶರೀರ್‌ಮ ಜಿವಿರ‍್ಹೂಸ್, 10 ಯೋಸ್ ಅಖ್ಖಾಸ್ ರಾಜ಼್‌ನಾಬಿ, ಅದಿಕಾರ್‌ನಾಬಿ ಮುಡ್‌ಕ್ಯು ಹುಯಿರ‍್ಹೋಸ್ತೆ ಖ್ಹಾಜೆ. ತುಮೆ ಇನಾಮ ರ‍್ಹೀನಸ್ ಅಖ್ಖಾಸ್ನ ಲೀಲ್ಯಾವವಾಳ ಹುಯಿರ‍್ಹಾಸ್. 11 ದೇವ್ನೆ ಇನಾಮ ತುಮುನ ಅದ್ಮಿನ ಹಾತೇಥಿ ಕರಾನ ಕೊಹುವಾನಿತೆ ಖ್ಹತ್ನಾನ ಕರಿರಾಖ್ಯೊಸ್. ಕ್ರಿಸ್ತನು ಖ್ಹತ್ನ ಶರೀರ್‌ನು ಪಾಪ್ನ ಸ್ವಭಾವ್‌ನ ಕಾಡಿನಾಖಸ್‌. 12 ತುಮೆ ಬ್ಯಾಪ್ತಿಸ್ಮಥಿ ಕ್ರಿಸ್ತನಿ ಜೋ಼ಡ್ಮ ಗಡೈಗಯ, ಅಜು಼ ಇನ ಮರ‍್ಯಾಹುಯಾಮಾಥು ಉಠಾಡ್ಯೋತೆ ದೇವ್ನಿ ಶಕತ್ಮ ವಿಶ್ವಾಸ್ ಕರ‍್ಯಾತೆ ಇನಖ್ಹಾಜೆ ತುಮೆ ಇನಿ ಜೋ಼ಡ್ಮ ಉಠೀನ್ ಆಯ. 13 ತುಮೆ ತುಮಾರ ಪಾಪ್‌ಥಿಬಿ ಅಜು಼ ಶರೀರ್‌ನ ಆಖ್ಹ್‌ಥಿ ಛುಟ್ಕಾರ್ ಕೊಹುಯಾನಿತೆ ಇನಖ್ಹಾಜೆ ಆತ್ಮೀಕ್ ಪರಕ್ಮ ಮರಿರ‍್ಹಾವಳ ಹುಯಿರ‍್ಹಾಸ್ ಕತೋಬಿ ದೇವ್ ಕ್ರಿಸ್ತಥಿ ತುಮುನ ಜೂತುಕರ‍್ಯೊ.ಅಜು಼ ಅಪ್ಣಿ ಖ್ಹಾರೀಸ್‍ ಪಾಪ್ನ ಮಾಪ್ ಕರ‍್ಯೊ. 14 ಅಪ್ಣಪರ್ ಗಲತ್‌ನಾಖ್ಯೂತೆ ಹುಕುಮ್‌ನಿ ರೂಪ್ಮಥೂತೆ ಲೀಖಾಪಟ್ನ ದೇವ್ನೆ ನೂಛಿನಾಖಿನ್ ಇನ ಶಿಲ್‌ಬೆಪರ್ ಠೋಕೈನ್ ಕೊಂತೆ ತಿಮ್ ಕರ‍್ಯೊ. 15 ದೇವ್ ಇನ ವಿರೋದ್ ಹುಯಿರ‍್ಹುಥೂತೆ ರಾಜ್‍಼ನಾಬಿ, ಅದಿಕಾರ್‌ನಾಬಿ, ಯೋ ಅಖ್ಖಾನ ಬಿಣ್‍ ಖಪ್ಫನ್‌ವಾಳ ಬಣೈನ್ ಶಿಲ್‌ಬೇನು ಜೀತ್ಮ ಯೋ ಅಖ್ಖಾನ ಹಿಡಿ ಜಗತ್ನ ಖ್ಹಾಮ್ಣೆ ವತಾಳ್ಯೊ. 16 ಅಮ್‍ರ‍್ಹವಾಪರ್ ಖಾಣಪಾಣಿನಿ ಬಾರೇಮಾಬಿ ಪೂಜ಼, ಅಮಾಖ್ಹ್, ಸಬ್ಬತ್ ಕರಿ ಅನಿಬಾರೇಮ ಕೋಣ್‌ಬಿ ತುಮುನ ಗಲ್ತಿವಾಳಕರಿ ತೀರ್ಪ್‌ ನಾಕರ‍್ನು. 17 ಆ ಅಖ್ಖು ಅಗಾಡಿ ಅವ್ಣುಥೂತೆ ಕಾಮ್ನಿ ಛಾ಼ಯ ಹುಯಿರುಸ್, ಕತೋಬಿ ಯೋ ಅಖ್ಖಾನು ಖ್ಹಾಚು಼ರೂಪ್ ಕ್ರಿಸ್ತಸ್. 18 ಥೋಡುಜ಼ಣು ದೇವ್ನದೂತರ‍್ನ ಆರಾಧನೆಮಾಬಿ ದಿಲ್‍ಲಗಾಡಿರ‍್ಹವಾಳ ಹುಯಿನ್, ಹಮುನ ದರ್ಶನಹುಯುಕರಿ ಬಡೈಮಾರಿಲೀನ್, ಜಗತ್‌ನು ಅಕ್ಕಲ್‌ಥಿ ಕಾಯಿಸ್‌ಕೊಂತೆ ಫುಲಿರ‍್ಹವಾಳನ ತುಮಾರು ಮಳಿರ‍್ಹೂತೆ ಇನಾಮ್ನ ಛಿನೈಲಾವನಿತರ ನಕೊ ಕರ್ಶು. 19 ಶನಕತೊ ಅಥ್ರಾನವಾಳು ಕ್ರಿಸ್ತಕರಿ ಬೋಲಾನು ಮುಡ್‌ಕ್ಯಾನ ಜೋ಼ಡ್ಮ ಸಂಬಂದ್ ಕಾಡಿಲ್ಯಾವಾಳು ಹುಯಿರ‍್ಹೇಸ್. ಯೋ ಮುಡ್‍ಕೇಥಿಸ್ ಶರೀರ್ ಖ್ಹಾರೂಸ್ ಕೀಲ್, ನ್ಹಾರ್‌ನ ಹೋಣುತೆ ಶಕತ್ನದೀನ್ ಅಜು಼ ಎಕ್ಟುಹುಯಿನ್ ಶರೀರ್ ಬಣ್ಯು. ಯೋ ದೇವ್ ದೇಸ್ತೆ ಬರ್ಗಥ್ಥಿ ಭಡ್ತುಹುಯಿನ್ ಆವಸ್.
ಮರಾನು ಜಿವಾನು ಕ್ರಿಸ್ತನಿ ಜೋ಼ಡ್ಮಾಸ್
20 ಏಕ್‌ಬಾರ್ ತುಮೆ ಕ್ರಿಸ್ತನಿ ಜೋ಼ಡ್ಮ ಜಗತ್ನ ಆತ್ಮಮ ಮರ‍್ಹೀರ ಉಶೇತೊ, ಅಜೂ಼ಬಿ ಜಗತ್‍ವಾಳನಿತರಸ್ ಬಚಿನ್ ತುಮೆ ಶನ ಜಿವ್ಣುಕರುಕರಸ್? ಅಮ್ನಿ ಹುಕುಮ್‌ನಲೀನ್ ಶನ ಚಾ಼ಲವಾಳ ಹುಯಿರ‍್ಹಾಸ್? 21 “ಆ ನಕೊ ಛೀಮ್! ಯೋ ನಕೊ ಲಜ಼ತ್‍ದೇಕ್! ಇನ ನಕೊಧರ್! ಕರಿ ಬೋಲಾನು ಶನ? ಅಮ್ನಿ ನಿಯಮ್ನ ಚ಼ಲವಾನು ಶನ? 22 ಜಗತ್ನ ಬಾರೇನು ಆ ನಿಯಮ್‌ಖ್ಹಾರು, ಶಿಕಾನುಖ್ಹಾರು ಉಪಯೋಗ್ ಕರೀನ್ ಭಿರ್ಕಾಯೇತೆ ರಾಛ಼ನಿ ಪರಕ್ಮ ಛಾ಼. ಯೋ ಖ್ಹಾರು ಅದ್ಮೆವ್‌ನು ಹುಕುಮ್ ಅಜು಼ ಬೋಧನ್ನಸ್ ಪಣ್ಕಿ ದೇವ್ನು ಕಾಹೆ. 23 ಅಮ್ನು ಶಿಕಾನುಖ್ಹಾರು ಅದ್ಮಿನು ಸೋಚ್‌ನಿತರ ದೆಖೈಲಾವಥಿಬಿ, ಶಾಂಧಾರ್‌ನಿತರಬಿ ಅಜು಼ ಇವ್ಣ ಶರೀರ್‌ನ ನಿಶತ್ ಕರಿಲ್ಯಾವನು ಅಕ್ಕಲ್‌ನುಕರಿ ದೆಖಾವಸ್. ಕತೋಬಿ ಯೋ ಶರೀರ್‌ನು ಆಖ್ಹ್‌ನ ಖ್ಹಮಾಳಿಲ್ಯಾವಥಿ ಶನೂಬಿ ಫಾಯಿದೊ ಕೊಹುವಾನಿ.