82
ಸ್ತುತಿಗೀತೆ.
ರಚನೆಗಾರ: ಆಸಾಫ.
ದೇವಾದಿದೇವನು ತನ್ನ ಸಭೆಯಲ್ಲಿ*ದೇವಾದಿದೇವನು ತನ್ನ ಸಭೆಯಲ್ಲಿ ಇಲ್ಲಿ ಇದರರ್ಥ, ಇಸ್ರೇಲ್ ನಾಯಕರುಗಳ ಸಭೆಯಲ್ಲಿ ಎಂದಿರಬಹುದು. ಅನೇಕಸಲ, ನಾಯಕರನ್ನು ಮತ್ತು ರಾಜರುಗಳನ್ನು ದೇವರುಗಳೆಂದು ಕರೆಯಲಾಗಿದೆ. ನಿಂತುಕೊಂಡು
ದೇವರುಗಳಿಗೆ ನ್ಯಾಯತೀರ್ಪು ನೀಡುವನು.
ದೇವರು ಹೀಗೆನ್ನುತ್ತಾನೆ: “ಇನ್ನೆಷ್ಟರವರೆಗೆ ಅನ್ಯಾಯವಾಗಿ ತೀರ್ಪು ಕೊಡುತ್ತೀರಿ?
ಇನ್ನೆಷ್ಟರವರೆಗೆ ದುಷ್ಟರನ್ನು ದಂಡಿಸದೆ ಬಿಡುಗಡೆ ಮಾಡುತ್ತೀರಿ?”
 
“ಅನಾಥರ ಮತ್ತು ಬಡಜನರ ಪರವಾಗಿ ವಾದಿಸಿರಿ.
ಅನ್ಯಾಯಕ್ಕೆ ಒಳಗಾಗಿರುವ ಬಡವರ ಹಕ್ಕುಗಳನ್ನು ಸಂರಕ್ಷಿಸಿರಿ.
ಬಡವರಿಗೆ ಮತ್ತು ಅಸಹಾಯಕರಿಗೆ ಸಹಾಯ ಮಾಡಿರಿ.
ಅವರನ್ನು ದುಷ್ಟರಿಂದ ರಕ್ಷಿಸಿರಿ.
 
“ಅವರಿಗೆ ಏನೂ ಗೊತ್ತಿಲ್ಲ.
ಅವರಿಗೆ ಏನೂ ಅರ್ಥವಾಗುವುದಿಲ್ಲ!
ತಾವು ಮಾಡುತ್ತಿರುವುದೂ ಅವರಿಗೆ ತಿಳಿಯದು.
ಅವರ ಪ್ರಪಂಚವು ಅವರ ಸುತ್ತಲೂ ಕುಸಿದುಬೀಳುತ್ತಿದೆ!”
ನಾಯಕರಾದ ನಿಮಗೆ ನಾನು ಹೇಳುವುದೇನೆಂದರೆ:
“ನೀವು ದೇವರುಗಳು. ನೀವು ಮಹೋನ್ನತನಾದ ದೇವರ ಪುತ್ರರು.
ಆದರೆ ಎಲ್ಲಾ ಜನರಂತೆ ನೀವೂ ಸಾಯುವಿರಿ.
ಬೇರೆಲ್ಲಾ ನಾಯಕರುಗಳಂತೆಯೇ ನೀವು ಸಾಯುವಿರಿ.”
 
ದೇವರೇ ಎದ್ದೇಳು! ನೀನೇ ನ್ಯಾಯಾಧೀಶನಾಗಿರು!
ಎಲ್ಲಾ ಜನಾಂಗಗಳಿಗೆ ನೀನೇ ನಾಯಕನಾಗಿರು!
 

*82:1: ದೇವಾದಿದೇವನು ತನ್ನ ಸಭೆಯಲ್ಲಿ ಇಲ್ಲಿ ಇದರರ್ಥ, ಇಸ್ರೇಲ್ ನಾಯಕರುಗಳ ಸಭೆಯಲ್ಲಿ ಎಂದಿರಬಹುದು. ಅನೇಕಸಲ, ನಾಯಕರನ್ನು ಮತ್ತು ರಾಜರುಗಳನ್ನು ದೇವರುಗಳೆಂದು ಕರೆಯಲಾಗಿದೆ.