1 ಥೆಸಲೋನಿಕದವರಿಗೆ
ಗ್ರಂಥಕರ್ತೃತ್ವ
ಅಪೊಸ್ತಲನಾದ ಪೌಲನು ಈ ಪತ್ರಿಕೆಯ ಗ್ರಂಥಕರ್ತನೆಂದು ಎರಡು ಸಾರಿ ಗುರುತಿಸಿಕೊಂಡಿದ್ದಾನೆ (1:1; 2:18). ಸೀಲ ಮತ್ತು ತಿಮೊಥೆಯರು (3:2,6), ಎರಡನೆಯ ಮಿಷನರಿ ಪ್ರಯಾಣದಲ್ಲಿ ಈ ಸಭೆಯನ್ನು ಸ್ಥಾಪಿಸುವಾಗ ಪೌಲನ ಸಂಗಡಿಗರಾಗಿದ್ದರು (ಅ.ಕೃ. 17:1-9), ಅವನು ಅವರನ್ನು ಬಿಟ್ಟು ಬಂದ ಕೆಲವೇ ಕೆಲವು ತಿಂಗಳುಗಳೊಳಗೆ ಈ ಮೊದಲ ಪತ್ರಿಕೆಯನ್ನು ಬರೆದನು. ಥೆಸಲೋನಿಕದಲ್ಲಿನ ಪೌಲನ ಸೇವೆಯು ಯೆಹೂದ್ಯರನ್ನು ಮಾತ್ರವಲ್ಲದೆ ಅನ್ಯಜನರನ್ನು ಸಹ ಸ್ಪಷ್ಟವಾಗಿ ಸ್ಪರ್ಶಿಸಿತು. ಸಭೆಯಲ್ಲಿರುವ ಅನೇಕ ಅನ್ಯಜನರು ವಿಗ್ರಹಾರಾಧನೆಯಿಂದ ಹೊರಬಂದವರಾಗಿದ್ದರು, ಇದು ಆ ಸಮಯದಲ್ಲಿನ ಯೆಹೂದ್ಯರ ನಡುವೆ ಒಂದು ನಿರ್ದಿಷ್ಟ ಸಮಸ್ಯೆಯಾಗಿರಲಿಲ್ಲ (1 ಥೆಸ. 1:9).
ಬರೆದ ದಿನಾಂಕ ಮತ್ತು ಸ್ಥಳ
ಸರಿಸುಮಾರು ಕ್ರಿ.ಶ. 51 ರಲ್ಲಿ ಬರೆಯಲ್ಪಟ್ಟಿದೆ.
ಪೌಲನು ಕೊರಿಂಥ ಪಟ್ಟಣದಿಂದ ಥೆಸಲೋನಿಕದ ಸಭೆಗೆ ತನ್ನ ಮೊದಲ ಪತ್ರಿಕೆಯನ್ನು ಬರೆದನು.
ಸ್ವೀಕೃತದಾರರು
ಥೆಸಲೋನಿಕದವರಿಗೆ ಬರೆದ ಮೊದಲನೆಯ ಪತ್ರಿಕೆಯ ಉದ್ದೇಶಿತ ಓದುಗರು “ಥೆಸಲೋನಿಕದ ಸಭೆಯ” ಸದಸ್ಯರು ಎಂದು 1 ಥೆಸ. 1:1 ತಿಳಿಸುತ್ತದೆ, ಆದರೆ ಸಾಮಾನ್ಯವಾಗಿ ಎಲ್ಲೆಡೆಯಿರುವ ಕ್ರೈಸ್ತರೆಲ್ಲರಿಗೂ ಎಂದು ಇದು ಹೇಳುತ್ತದೆ.
ಉದ್ದೇಶ
ಹೊಸದಾಗಿ ರಕ್ಷಣೆಗೆ ಬಂದವರನ್ನು ಅವರು ಅನುಭವಿಸುವ ಶೋಧನೆಗಳಲ್ಲಿ ಉತ್ತೇಜಿಸುವುದು (3:3-5), ದೈವಭಕ್ತಿಯುಳ್ಳ ಜೀವನದ ಬಗ್ಗೆ ಆದೇಶ ನೀಡುವುದಕ್ಕೆ (4:1-12) ಮತ್ತು ಕ್ರಿಸ್ತನ ಪುನರಾಗಮನಕ್ಕಿಂತ ಮೊದಲು ಸತ್ತುಹೋದ ವಿಶ್ವಾಸಿಗಳ ಭವಿಷ್ಯದ ಬಗ್ಗೆ ಭರವಸೆ ನೀಡುವುದು (4:13-18), ಇನ್ನಿತರ, ನೈತಿಕ ಮತ್ತು ಪ್ರಾಯೋಗಿಕ ವಿಷಯಗಳನ್ನು ಸರಿಪಡಿಸುವುದು ಈ ಪತ್ರಿಕೆಯನ್ನು ಬರೆಯುವುದರ ಪೌಲನ ಉದ್ದೇಶವಾಗಿತ್ತು.
ಮುಖ್ಯಾಂಶ
ಸಭೆಯ ಕುರಿತಾದ ಕಾಳಜಿ
ಪರಿವಿಡಿ
1. ಕೃತಜ್ಞತಾಸ್ತುತಿ — 1:1-10
2. ಅಪೊಸ್ತಲಿಕ ಕ್ರಿಯೆಗಳ ಸಮರ್ಥನೆ — 2:1-3:13
3. ಥೆಸಲೋನಿಕದವರಿಗೆ ಪ್ರಬೋಧನೆಗಳು — 4:1-5:22
4. ಅಂತಿಮ ಪ್ರಾರ್ಥನೆ ಮತ್ತು ಆಶೀರ್ವಾದ — 5:23-28
1
ಪೀಠಿಕೆ
ತಂದೆಯಾದ ದೇವರಲ್ಲಿಯೂ ಕರ್ತನಾದ ಯೇಸು ಕ್ರಿಸ್ತನಲ್ಲಿಯೂ ಇರುವ *ಅ. ಕೃ. 17:1:ಥೆಸಲೋನಿಕದ ಸಭೆಗೆ ಪೌಲ ಅ. ಕೃ. 15:22; 2 ಕೊರಿ 1:19; 2 ಥೆಸ. 1:1; 1 ಪೇತ್ರ 5:12:ಸಿಲ್ವಾನ, ತಿಮೊಥೆಯ ಎಂಬ ನಾವು ಬರೆಯುವುದೇನಂದರೆ, ರೋಮಾ. 1:7; ಎಫೆ 1:2:ನಿಮಗೆ ಕೃಪೆಯೂ ಶಾಂತಿಯೂ ಉಂಟಾಗಲಿ.
ಪೌಲನು ಥೆಸಲೋನಿಕದವರ ನಂಬಿಕೆಗಾಗಿ ದೇವರಿಗೆ ಮಾಡಿದ ಕೃತಜ್ಞತಾಸ್ತುತಿ
2-3 ನಾವು §2 ಥೆಸ. 1:11; ಯೋಹಾ 6:29; ಗಲಾ. 5:6; ಯಾಕೋಬ 2:22:ನಂಬಿಕೆಯ ಫಲವಾದ ನಿಮ್ಮ ಕಾರ್ಯವನ್ನೂ, *2 ಥೆಸ. 1:3:ಪ್ರೀತಿಪೂರ್ವಕವಾದ ನಿಮ್ಮ ಪ್ರಯಾಸವನ್ನೂ ಮತ್ತು ನಮ್ಮ ಕರ್ತನಾದ ಯೇಸು ಕ್ರಿಸ್ತನ ಮೇಲಿನ ನೀವಿಟ್ಟಿರುವ ಅಚಲವಾದ ರೋಮಾ. 8:25; 15:4:ನಿರೀಕ್ಷೆಯನ್ನೂ ನಮ್ಮ ತಂದೆಯಾದ ದೇವರ ಮುಂದೆ ಎಡೆಬಿಡದೆ ಜ್ಞಾಪಕ ಮಾಡಿಕೊಂಡು, ರೋಮಾ. 1:9; 2 ತಿಮೊ. 1:6:ನಾವು ಪ್ರಾರ್ಥಿಸುವಾಗಲೆಲ್ಲಾ ನಿಮ್ಮನ್ನು ಸ್ಮರಿಸುತ್ತಾ, ನಿಮ್ಮೆಲ್ಲರಿಗಾಗಿ ದೇವರಿಗೆ ಯಾವಾಗಲೂ ಕೃತಜ್ಞತಾಸ್ತುತಿ ಮಾಡುತ್ತೇವೆ. §2 ಥೆಸ. 2:15:ದೇವರಿಂದ ಪ್ರೀತಿಸಲ್ಪಟ್ಟಿರುವ ಸಹೋದರರೇ, *2 ಪೇತ್ರ 1:10:ಆತನು ನಿಮ್ಮನ್ನು ಆರಿಸಿಕೊಂಡನೆಂಬದನ್ನೂ ಬಲ್ಲೆವು. ಯಾಕೆಂದರೆ ನಾವು ನಿಮ್ಮಲ್ಲಿ ಸಾರಿದ ಸುವಾರ್ತೆಯು ಬರೀ ಮಾತಾಗಿ ಬಾರದೆ ಶಕ್ತಿಯೊಡನೆಯೂ 2 ಕೊರಿ 6:6; 1 ಕೊರಿ 2:4:ಪವಿತ್ರಾತ್ಮದೊಡನೆಯೂ ಮತ್ತು ಸಿದ್ಧಿಪೂರ್ವಕವಾಗಿಯೂ. ಕೊಲೊ 2:2:ಬಹು ನಿಶ್ಚಯದೊಡನೆಯೂ ಬಂತೆಂಬುದನ್ನು ನೀವೂ ಬಲ್ಲಿರಿ. ಯಾಕೆಂದರೆ §1 ಥೆಸ. 2:10; 2 ಥೆಸ. 3:7; ಅ. ಕೃ. 20:18:ನಾವು ನಿಮ್ಮಲ್ಲಿದ್ದುಕೊಂಡು ನಿಮಗೋಸ್ಕರ ಹೇಗೆ ವರ್ತಿಸಿದ್ದೇವೆಂಬುದನ್ನು ನೀವು ಗಮನಿಸಿದ್ದೀರಿ. ಇದಲ್ಲದೆ *ಅ. ಕೃ. 17:5-10:ನೀವು ಬಹಳ ಹಿಂಸೆಯನ್ನು ಅನುಭವಿಸಬೇಕಾಗಿ ಬಂದಿದ್ದರೂ ಅ. ಕೃ. 13:52; ಗಲಾ. 5:22:ಪವಿತ್ರಾತ್ಮನಿಂದುಂಟಾದ ಆನಂದದೊಡನೆ ದೇವರ ವಾಕ್ಯವನ್ನು ಅಂಗೀಕರಿಸಿ, 1 ಥೆಸ. 2:14; 2 ಥೆಸ. 3:7, 9; 1 ಕೊರಿ 4:16; 11:1:ನಮ್ಮನ್ನು ಮತ್ತು ಕರ್ತನಾದ ಯೇಸುವನ್ನು ಅನುಸರಿಸುವವರಾದಿರಿ. ಹೀಗೆ ಮಕೆದೋನ್ಯದಲ್ಲಿಯೂ ಅಖಾಯದಲ್ಲಿಯೂ ಕ್ರಿಸ್ತನನ್ನು ನಂಬುವವರೆಲ್ಲರಿಗೆ ಮಾದರಿಯಾದಿರಿ.
ಕರ್ತನ ವಾಕ್ಯವು ನಿಮ್ಮಿಂದಲೇ ಮಕೆದೋನ್ಯದಲ್ಲಿಯೂ ಅಖಾಯದಲ್ಲಿಯೂ §ರೋಮಾ. 10:18; 2 ಥೆಸ. 3:1:ಘೋಷಿತವಾದದಲ್ಲದೆ, ದೇವರ ಮೇಲೆ ನೀವು ಇಟ್ಟಿರುವ ನಂಬಿಕೆಯು *ರೋಮಾ. 1:8; 16:19; 2 ಥೆಸ. 1:4:ಎಲ್ಲಾ ಸ್ಥಳಗಳಲ್ಲಿಯೂ ಪ್ರಸಿದ್ಧವಾಯಿತು. ಆದುದರಿಂದ ಆ ವಿಷಯದಲ್ಲಿ ನಾವು ಏನನ್ನೂ ಹೇಳಬೇಕಾಗಿಲ್ಲ. ನಾವು ನಿಮ್ಮಲ್ಲಿಗೆ ಬಂದಾಗ ನೀವು ನಮ್ಮನ್ನು ಹೇಗೆ ಸ್ವಾಗತಿಸಿದಿರಿ; ನೀವು 1 ಕೊರಿ 12:2; ಅ. ಕೃ. 14:15:ವಿಗ್ರಹಗಳನ್ನು ತೊರೆದು ದೇವರ ಕಡೆಗೆ ತಿರುಗಿಕೊಂಡು ಜೀವಸ್ವರೂಪನಾದ ಸತ್ಯ ದೇವರನ್ನು ಸೇವಿಸುವವರಾಗಿದ್ದೀರಿ 10 ಮತ್ತು ಆತನು ಅ. ಕೃ. 2:24:ಸತ್ತವರೊಳಗಿಂದ ಎಬ್ಬಿಸಿದ, ಆಕಾಶದೊಳಗಿಂದ ಬರಲಿಕ್ಕಿರುವಂಥ ಆತನ ಕುಮಾರನನ್ನು ಕಾದುಕುಳಿತಿರುವಿರೆಂತಲೂ ಆ ಜನರೇ ಹೇಳುತ್ತಾರೆ. ಈ ಯೇಸು ಮುಂದೆ ಬರುವ ದೈವಕೋಪದಿಂದ ನಮ್ಮನ್ನು ತಪ್ಪಿಸುವಾತನು.

*1:1 ಅ. ಕೃ. 17:1:

1:1 ಅ. ಕೃ. 15:22; 2 ಕೊರಿ 1:19; 2 ಥೆಸ. 1:1; 1 ಪೇತ್ರ 5:12:

1:1 ರೋಮಾ. 1:7; ಎಫೆ 1:2:

§1:2-3 2 ಥೆಸ. 1:11; ಯೋಹಾ 6:29; ಗಲಾ. 5:6; ಯಾಕೋಬ 2:22:

*1:2-3 2 ಥೆಸ. 1:3:

1:2-3 ರೋಮಾ. 8:25; 15:4:

1:2-3 ರೋಮಾ. 1:9; 2 ತಿಮೊ. 1:6:

§1:4 2 ಥೆಸ. 2:15:

*1:4 2 ಪೇತ್ರ 1:10:

1:5 2 ಕೊರಿ 6:6; 1 ಕೊರಿ 2:4:

1:5 ಸಿದ್ಧಿಪೂರ್ವಕವಾಗಿಯೂ. ಕೊಲೊ 2:2:

§1:5 1 ಥೆಸ. 2:10; 2 ಥೆಸ. 3:7; ಅ. ಕೃ. 20:18:

*1:6 ಅ. ಕೃ. 17:5-10:

1:6 ಅ. ಕೃ. 13:52; ಗಲಾ. 5:22:

1:6 1 ಥೆಸ. 2:14; 2 ಥೆಸ. 3:7, 9; 1 ಕೊರಿ 4:16; 11:1:

§1:8 ರೋಮಾ. 10:18; 2 ಥೆಸ. 3:1:

*1:8 ರೋಮಾ. 1:8; 16:19; 2 ಥೆಸ. 1:4:

1:9 1 ಕೊರಿ 12:2; ಅ. ಕೃ. 14:15:

1:10 ಅ. ಕೃ. 2:24: