3
ಸಭಾಧ್ಯಕ್ಷರೂ ಸಭಾಸೇವಕರೂ ಯೋಗ್ಯರಾಗಿರಬೇಕು
1 *ಅ. ಕೃ 20:28ಸಭಾಧ್ಯಕ್ಷನ ಉದ್ಯೋಗವನ್ನು ಪಡೆದುಕೊಳ್ಳಬೇಕೆಂದಿರುವವನು ಒಳ್ಳೆಯ ಕೆಲಸವನ್ನು ಅಪೇಕ್ಷಿಸುವವನಾಗಿದ್ದಾನೆಂಬ ಮಾತು ನಂಬತಕ್ಕದ್ದಾಗಿದೆ. 2 †ತೀತ 1:6-9ಸಭಾಧ್ಯಕ್ಷನು ದೋಷಾರೋಪಣೆಯಿಲ್ಲದವನೂ, ಏಕಪತ್ನಿಯುಳ್ಳವನೂ, ‡ವ. 11ಶಾಂತನೂ, ಜಿತೇಂದ್ರಿಯನೂ, ಮಾನಸ್ಥನೂ, §1 ಪೇತ್ರ 4:9ಅತಿಥಿಸತ್ಕಾರಮಾಡುವವನೂ, *2 ತಿಮೊ 2:24ಬೋಧಿಸಲು ಶಕ್ತನಾಗಿರಬೇಕು. 3 ಅವನು ಕುಡಕನು, ಜಗಳವಾಡುವವನೂ ಆಗಿರದೆ, †ತೀತ 3:2ಸಾತ್ವಿಕನೂ, ಹೊಡೆದಾಡದವನೂ ‡1 ತಿಮೊ 6:10; ಇಬ್ರಿ. 13:5ದ್ರವ್ಯಾಶೆಯಿಲ್ಲದವನೂ ಆಗಿರಬೇಕು. 4 ಪೂರ್ಣಗೌರವದಿಂದ ತನ್ನ ಮಕ್ಕಳನ್ನು ಅಧೀನದಲ್ಲಿಟ್ಟುಕೊಂಡು, ಸ್ವಂತ ಮನೆಯವರನ್ನು ಚೆನ್ನಾಗಿ ನಡೆಸುವವನಾಗಿರಬೇಕು. 5 §ವ 12ಸ್ವಂತ ಮನೆಯವರನ್ನು ನಡೆಸುವುದಕ್ಕೆ ತಿಳಿಯದವನು ದೇವರ ಸಭೆಯನ್ನು ಹೇಗೆ ಪರಾಂಬರಿಸುವನು? 6 ಅವನು ಹೊಸದಾಗಿ ಸಭೆಯಲ್ಲಿ ಸೇರಿದವನಾಗಿರಬಾರದು, ಅಂಥವನಾದರೆ ಉಬ್ಬಿಕೊಂಡು ಸೈತಾನನಿಗೆ ಪ್ರಾಪ್ತವಾದ ಶಿಕ್ಷಾವಿಧಿಗೆ ಒಳಗಾದಾನು. 7 ಇದಲ್ಲದೆ ಅವನು *ಮಾರ್ಕ 4:11; ಕೊಲೊ 4:5ಹೊರಗಣವರಿಂದ ಒಳ್ಳೆಯವನೆನ್ನಿಸಿಕೊಂಡಿರಬೇಕು, ಇಲ್ಲದಿದ್ದರೆ ನಿಂದೆಗೆ ಗುರಿಯಾಗುವನು ಮತ್ತು †2 ತಿಮೊ 2:26; 1 ತಿಮೊ 6:9ಸೈತಾನನ ತಂತ್ರಗಳೊಳಗೆ ಸಿಕ್ಕಿಬಿದ್ದಾನು.
8 ಅದೇ ರೀತಿಯಾಗಿ ‡1 ತಿಮೊ 6:9ಸಭಾಸೇವಕರು ಗೌರವವುಳ್ಳವರಾಗಿರಬೇಕು. ಅವರು ಎರಡು ಮಾತಿನವರೂ, §ತೀತ 2:3; 1 ತಿಮೊ 5:23ಮದ್ಯಾಸಕ್ತರೂ, *ತೀತ 1:7; 1 ಪೇತ್ರ 5:2ನೀಚಲಾಭವನ್ನು ಅಪೇಕ್ಷಿಸುವವರೂ ಆಗಿರದೆ, 9 ನಂಬಿಕೆಯಿಂದ ಪ್ರಕಟವಾಗಿರುವ †1 ತಿಮೊ 1:19ಸತ್ಯಾರ್ಥವನ್ನು ಶುದ್ಧ ಮನಸ್ಸಾಕ್ಷಿಯಿಂದ ಕೈಕೊಳ್ಳುವವರಾಗಿರಬೇಕು. 10 ಇದಲ್ಲದೆ ‡1 ತಿಮೊ 5:22ಅವರು ಮೊದಲು ಪರೀಕ್ಷಿಸಲ್ಪಡಬೇಕು, ತರುವಾಯ ಅವರ ಮೇಲೆ ಯಾರೂ ತಪ್ಪುಹೊರಿಸದಿದ್ದರೆ ಸಭಾಸೇವಕರ ಉದ್ಯೋಗವನ್ನು ನೆರವೇರಿಸಲಿ. 11 ಹಾಗೆಯೇ §ಅವರ ಹೆಂಡತಿಯರಾದಸಭಾಸೇವಕಿಯರಾದ ಸ್ತ್ರೀಯರೂ *ತೀತ 2:3ಗೌರವವುಳ್ಳವರಾಗಿರಬೇಕು, ಚಾಡಿಹೇಳುವವರಾಗಿರದೆ, ಸ್ವಸ್ಥಬುದ್ಧಿಯುಳ್ಳವರೂ, ಎಲ್ಲಾ ವಿಷಯಗಳಲ್ಲಿ ನಂಬಿಗಸ್ತರಾಗಿಯೂ ಇರಬೇಕು. 12 ಸಭಾಸೇವಕರು ಏಕಪತ್ನಿಯುಳ್ಳವರೂ, †1 ತಿಮೊ 3:2,4ತಮ್ಮ ಮಕ್ಕಳನ್ನೂ ಮನೆಯವರನ್ನೂ ಚೆನ್ನಾಗಿ ನಡಿಸುವವರೂ ಆಗಿರಬೇಕು. 13 ‡ಮತ್ತಾ 25:21ಸಭಾಸೇವಕರಾಗಿ ಚೆನ್ನಾಗಿ ಕೆಲಸ ಮಾಡಿರುವವರು ತಮಗೆ ಒಳ್ಳೆಯ ಪದವಿಯನ್ನೂ, ಕ್ರಿಸ್ತಯೇಸುವಿನಲ್ಲಿರುವ ನಂಬಿಕೆಯ ಸಂಬಂಧವಾಗಿ ಬಹುಧೈರ್ಯವನ್ನೂ ಸಂಪಾದಿಸಿಕೊಳ್ಳುತ್ತಾರೆ.
ಮಹಾ ರಹಸ್ಯ
14 ಬೇಗನೆ ನಿನ್ನ ಬಳಿಗೆ ಬರುವೆನೆಂಬ ನಿರೀಕ್ಷೆಯಿಂದಲೇ ನಿನಗೆ ಈ ವಿಷಯಗಳನ್ನು ಬರೆದಿದ್ದೇನೆ. 15 ಆದರೆ ಒಂದು ವೇಳೆ ನಾನು ತಡಮಾಡಿದರೂ, §ಎಫೆ 2:21; 2 ತಿಮೊ 2:20; ಇಬ್ರಿ 3:6ದೇವರ ಮನೆಯಲ್ಲಿ ಅಂದರೆ ಜೀವಸ್ವರೂಪನಾದ ದೇವರ ಸಭೆಯಲ್ಲಿ ನಡೆದುಕೊಳ್ಳಬೇಕಾದ ರೀತಿಯು ನಿನಗೆ ತಿಳಿದಿರಬೇಕೆಂದು ಈ ಸಂಗತಿಗಳನ್ನು ಬರೆದಿದ್ದೇನೆ. ಯಾಕೆಂದರೆ ಸಭೆಯು ಸತ್ಯಕ್ಕೆ ಸ್ತಂಭವೂ ಆಧಾರವೂ ಆಗಿದೆ.
16 ದೇವಭಕ್ತಿಗೆ ಆಧಾರವಾಗಿರುವ ಸತ್ಯಾರ್ಥದ ರಹಸ್ಯವು ಗಂಭೀರವಾದದ್ದೆಂಬುದನ್ನು ನಾವೆಲ್ಲರೂ ಒಪ್ಪಿಕೊಳ್ಳುತ್ತೇವೆ, ಅದೇನಂದರೆ,
*ಯೋಹ 1:14; 1 ಪೇತ್ರ 1:20; 1 ಯೋಹಾ 1:2,3,4,5,8ಕ್ರಿಸ್ತನು ಶರೀರಧಾರಿಯಾಗಿ ಪ್ರತ್ಯಕ್ಷನಾದನು,
ಆತ್ಮಸಂಬಂಧವಾಗಿ ಕ್ರಿಸ್ತನೇ ನೀತಿವಂತನೆಂದು ಪರಿಗಣಿಸಲ್ಪಟ್ಟನು,
ದೇವದೂತರಿಗೆ ಕಾಣಿಸಿಕೊಂಡನು,
†ಗಲಾ 2:2ಅನ್ಯಜನರ ಮಧ್ಯದಲ್ಲಿ ಸಾರಲ್ಪಟ್ಟನು,
‡2 ಥೆಸ 1:10ಲೋಕದಲ್ಲಿ ನಂಬಲ್ಪಟ್ಟನು,
§ಅ. ಕೃ 1:2 ಮಹಿಮೆಯೊಂದಿಗೆ ಪರಲೋಕಕ್ಕೆ ಎತ್ತಲ್ಪಟ್ಟನು.
*3:1 ಅ. ಕೃ 20:28
†3:2 ತೀತ 1:6-9
‡3:2 ವ. 11
§3:2 1 ಪೇತ್ರ 4:9
*3:2 2 ತಿಮೊ 2:24
†3:3 ತೀತ 3:2
‡3:3 1 ತಿಮೊ 6:10; ಇಬ್ರಿ. 13:5
§3:5 ವ 12
*3:7 ಮಾರ್ಕ 4:11; ಕೊಲೊ 4:5
†3:7 2 ತಿಮೊ 2:26; 1 ತಿಮೊ 6:9
‡3:8 1 ತಿಮೊ 6:9
§3:8 ತೀತ 2:3; 1 ತಿಮೊ 5:23
*3:8 ತೀತ 1:7; 1 ಪೇತ್ರ 5:2
†3:9 1 ತಿಮೊ 1:19
‡3:10 1 ತಿಮೊ 5:22
§3:11 ಅವರ ಹೆಂಡತಿಯರಾದ
*3:11 ತೀತ 2:3
†3:12 1 ತಿಮೊ 3:2,4
‡3:13 ಮತ್ತಾ 25:21
§3:15 ಎಫೆ 2:21; 2 ತಿಮೊ 2:20; ಇಬ್ರಿ 3:6
*3:16 ಯೋಹ 1:14; 1 ಪೇತ್ರ 1:20; 1 ಯೋಹಾ 1:2,3,4,5,8
†3:16 ಗಲಾ 2:2
‡3:16 2 ಥೆಸ 1:10
§3:16 ಅ. ಕೃ 1:2