4
ದುರ್ಬೋಧಕರು
1 ಆದರೂ *2 ಥೆಸ. 2:3-9; 2 ತಿಮೊ. 3:1; ಕೊರಿ 11:19ಮುಂಬರುವ ದಿನಗಳಲ್ಲಿ ಕೆಲವರು †1 ಯೊಹಾ. 4:6ವಂಚಿಸುವ ಆತ್ಮಗಳ ನುಡಿಗಳಿಗೂ, ದೆವ್ವಗಳ ಬೋಧನೆಗಳಿಗೂ ಲಕ್ಷ್ಯಕೊಟ್ಟು ಕ್ರಿಸ್ತ ನಂಬಿಕೆಯಿಂದ ಭ್ರಷ್ಟರಾಗುವರೆಂದು ದೇವರಾತ್ಮನು ಸ್ಪಷ್ಟವಾಗಿ ಹೇಳುತ್ತಿದ್ದಾನೆ. 2 ‡1 ಥೆಸ. 2:3; 2 ಥೆಸ. 2:11ಕಪಟದಿಂದ ಸುಳ್ಳಾಡುವವರು, ಸ್ವಂತ ಮನಸ್ಸಾಕ್ಷಿಯ ಮೇಲೆ ಬರೆಹಾಕಲ್ಪಟ್ಟವರಾಗಿದ್ದು, 3 ಅವರು ವಿಶ್ವಾಸಿಗಳಿಗೆ §ಇಬ್ರಿ. 13:4ಮದುವೆಯಾಗಬಾರದೆಂತಲೂ, ಯಾರು ನಂಬುವವರಾಗಿದ್ದು ಸತ್ಯವನ್ನು ಗ್ರಹಿಸಿದ್ದಾರೋ, *ರೋಮಾ. 14:6 14, 20ಅವರು ಕೃತಜ್ಞತಾಸ್ತುತಿಮಾಡಿ, ತಿನ್ನುವುದಕ್ಕೋಸ್ಕರ †ಆದಿ 1:29; 9:3ದೇವರು ಉಂಟುಮಾಡಿದ ‡ಕೊಲೊ 2:16ಆಹಾರವನ್ನು ತಿನ್ನಬಾರದೆಂತಲೂ ಹೇಳುವರು. 4 §ಆದಿ 1:31ದೇವರು ಉಂಟುಮಾಡಿದ್ದೆಲ್ಲವೂ ಒಳ್ಳೆಯದೇ, ನಾವು ಕೃತಜ್ಞತಾಸ್ತುತಿಮಾಡಿ ತೆಗೆದುಕೊಳ್ಳುವ ಯಾವ ಆಹಾರವನ್ನು *ಅ. ಕೃ. 10:15ತಿರಸ್ಕರಿಸಬೇಕಾಗಿಲ್ಲ. 5 ದೇವರ ವಾಕ್ಯದಿಂದಲೂ ಪ್ರಾರ್ಥನೆಯಿಂದಲೂ ಆ ಆಹಾರವು ಪವಿತ್ರವಾಗುತ್ತದಲ್ಲಾ.
6 †2 ತಿಮೊ. 3:14, 15ಈ ಸಂಗತಿಗಳನ್ನು ಸಹೋದರರಿಗೆ ತಿಳಿಸಿದರೆ, ನೀನು ಅನುಸರಿಸುತ್ತಿರುವ ಕ್ರಿಸ್ತ ನಂಬಿಕೆಯ ಮತ್ತು ಸುಬೋಧನೆಯ ವಾಕ್ಯಗಳಲ್ಲಿ ಅಭ್ಯಾಸಹೊಂದಿದವನಾಗಿ, ಕ್ರಿಸ್ತ ಯೇಸುವಿನ ಒಳ್ಳೆಯ ಸೇವಕನಾಗಿರುವಿ. 7 ಅಜ್ಜಿ ಕಥೆಗಳನ್ನೂ ‡1 ತಿಮೊ. 1:4ಪ್ರಾಪಂಚಿಕವಾದ ಆ ಕಥೆಗಳನ್ನೂ ತಳ್ಳಿಬಿಟ್ಟು, ನೀನು ದೇವಭಕ್ತಿಯ ವಿಷಯದಲ್ಲಿ §ಇಬ್ರಿ. 5:14ಸಾಧನೆಮಾಡಿಕೋ. 8 *ದೇಹದಂಡನೆ; ಕೊಲೊ 2:23ದೇಹಸಾಧನೆಯು ಸ್ವಲ್ಪಮಟ್ಟಿಗೆ ಪ್ರಯೋಜನವಾಗಿದೆ, †1 ತಿಮೊ. 6:6ಭಕ್ತಿಯಾದರೋ ಎಲ್ಲಾ ವಿಧದಲ್ಲಿ ಪ್ರಯೋಜನವಾದದ್ದು. ‡ಕೀರ್ತ 37:4,9,11; 84:11; 145:19; ಜ್ಞಾ. 19:23; ಮತ್ತಾ 6:33; ಮಾರ್ಕ 10:30ಅದಕ್ಕೆ ಇಹಪರಗಳಲ್ಲಿನ ಜೀವನಕ್ಕೆ ವಾಗ್ದಾನ ಉಂಟು. 9 §1 ತಿಮೊ. 1:15ಈ ವಾಕ್ಯವು ನಂಬತಕ್ಕದ್ದಾಗಿಯೂ ಸರ್ವಾಂಗೀಕಾರಕ್ಕೆ ಯೋಗ್ಯವಾದದ್ದಾಗಿಯೂ ಇದೆ. 10 ಇದಕ್ಕಾಗಿ ನಾವು ಕಷ್ಟಪಡುತ್ತಿದ್ದೇವೆ, ಪ್ರಯಾಸಪಡುತ್ತಿದ್ದೇವೆ, ಯಾಕೆಂದರೆ *1 ತಿಮೊ. 2:4; ಯೋಹಾ 4:42ಎಲ್ಲಾ ಮನುಷ್ಯರಿಗೂ, ವಿಶೇಷವಾಗಿ ನಂಬುವವರಿಗೆ, ರಕ್ಷಕನಾಗಿರುವ ಜೀವವುಳ್ಳ ದೇವರ ಮೇಲೆ ನಾವು ನಿರೀಕ್ಷೆಯನ್ನಿಟ್ಟುಕೊಂಡವರಾಗಿದ್ದೇವೆ.
11 †1 ತಿಮೊ. 5:7; 6:2ಈ ಸಂಗತಿಗಳನ್ನು ನೀನು ಆಜ್ಞಾಪಿಸಬೇಕು ಮತ್ತು ಬೋಧಿಸಬೇಕು. 12 ‡1 ಕೊರಿ 16:11; ತೀತ 2:15ನಿನ್ನ ಯೌವನವನ್ನು ಅಸಡ್ಡೆಮಾಡುವುದಕ್ಕೆ ಯಾರಿಗೂ ಆಸ್ಪದಮಾಡಿಕೊಡದೆ, ನಂಬುವವರಿಗೆ ನಡೆ, ನುಡಿ, ಪ್ರೀತಿ, ನಂಬಿಕೆ, ಶುದ್ಧತ್ವ ಇವುಗಳ ವಿಷಯದಲ್ಲಿ §ತೀತ 2:7; 1 ಪೇತ್ರ 5:3ನೀನೇ ಮಾದರಿಯಾಗಿರು. 13 ನಾನು ಬರುವ ತನಕ ವೇದವಾಕ್ಯವನ್ನು ಓದಿ ಹೇಳುವುದರಲ್ಲಿಯೂ, ಪ್ರಬೋಧಿಸುವುದರಲ್ಲಿಯೂ, ಉಪದೇಶಿಸುವುದರಲ್ಲಿಯೂ ಆಸಕ್ತನಾಗಿರು. 14 *2 ತಿಮೊ. 1:6; 1 ಥೆಸ. 5:19ನಿನ್ನಲ್ಲಿರುವ ಕೃಪಾವರವನ್ನು ಅಲಕ್ಷ್ಯಮಾಡಬೇಡ, ಆ ವರವು †ಅ. ಕೃ. 20:17ಸಭೆಯ ಹಿರಿಯರು ‡1 ತಿಮೊ. 1:18ಪ್ರವಾದನೆಯ ಸಹಿತವಾಗಿ ನಿನ್ನ ಮೇಲೆ §ಅ. ಕೃ. 6:6ಹಸ್ತಗಳನ್ನಿಟ್ಟಾಗ, ಅದು ನಿನಗೆ ಕೊಡಲ್ಪಟ್ಟಿತಲ್ಲಾ. 15 ಈ ಕಾರ್ಯಗಳನ್ನು ಸಾಧಿಸುತ್ತಾ, ಅವುಗಳಲ್ಲಿ ಮಗ್ನನಾಗಿರು. ಇದರಿಂದ ನಿನ್ನ ಅಭಿವೃದ್ಧಿಯು ಎಲ್ಲರಿಗೂ ಪ್ರಸಿದ್ಧವಾಗುವುದು*ಕಾಣಿಸುವುದು. 16 †ಅ. ಕೃ. 20:28ನಿನ್ನ ವಿಷಯದಲ್ಲಿಯೂ ನಿನ್ನ ಉಪದೇಶದ ವಿಷಯದಲ್ಲಿಯೂ ಎಚ್ಚರಿಕೆಯಾಗಿರು. ನೀನು ಈ ಕಾರ್ಯಗಳಲ್ಲಿ ನಿರತನಾಗಿರು, ಆಗ ನೀನು ‡ಯೆಹೆ. 33:9ನಿನ್ನನ್ನೂ ಮತ್ತು ನಿನ್ನ ಉಪದೇಶ ಕೇಳುವವರನ್ನೂ ರಕ್ಷಿಸುವಿ.
*4:1 2 ಥೆಸ. 2:3-9; 2 ತಿಮೊ. 3:1; ಕೊರಿ 11:19
†4:1 1 ಯೊಹಾ. 4:6
‡4:2 1 ಥೆಸ. 2:3; 2 ಥೆಸ. 2:11
§4:3 ಇಬ್ರಿ. 13:4
*4:3 ರೋಮಾ. 14:6 14, 20
†4:3 ಆದಿ 1:29; 9:3
‡4:3 ಕೊಲೊ 2:16
§4:4 ಆದಿ 1:31
*4:4 ಅ. ಕೃ. 10:15
†4:6 2 ತಿಮೊ. 3:14, 15
‡4:7 1 ತಿಮೊ. 1:4
§4:7 ಇಬ್ರಿ. 5:14
*4:8 ದೇಹದಂಡನೆ; ಕೊಲೊ 2:23
†4:8 1 ತಿಮೊ. 6:6
‡4:8 ಕೀರ್ತ 37:4,9,11; 84:11; 145:19; ಜ್ಞಾ. 19:23; ಮತ್ತಾ 6:33; ಮಾರ್ಕ 10:30
§4:9 1 ತಿಮೊ. 1:15
*4:10 1 ತಿಮೊ. 2:4; ಯೋಹಾ 4:42
†4:11 1 ತಿಮೊ. 5:7; 6:2
‡4:12 1 ಕೊರಿ 16:11; ತೀತ 2:15
§4:12 ತೀತ 2:7; 1 ಪೇತ್ರ 5:3
*4:14 2 ತಿಮೊ. 1:6; 1 ಥೆಸ. 5:19
†4:14 ಅ. ಕೃ. 20:17
‡4:14 1 ತಿಮೊ. 1:18
§4:14 ಅ. ಕೃ. 6:6
*4:15 ಕಾಣಿಸುವುದು
†4:16 ಅ. ಕೃ. 20:28
‡4:16 ಯೆಹೆ. 33:9