3
ಅಂತ್ಯ ದಿನಗಳು
1 ಆದರೆ *1 ತಿಮೊ 4:1ಕಡೆ ದಿನಗಳಲ್ಲಿ ಕಠಿಣಕಾಲಗಳು ಬರುವವೆಂಬುದನ್ನು ತಿಳಿದುಕೋ. 2 ಮನುಷ್ಯರು †ಫಿಲಿ 2:21ಸ್ವಾರ್ಥಚಿಂತಕರೂ, ‡ಲೂಕ 16:14; 1 ತಿಮೊ 6:10ಹಣದಾಸೆಯವರೂ, ಬಡಾಯಿಕೊಚ್ಚುವವರೂ, ಅಹಂಕಾರಿಗಳೂ, ದೂಷಕರೂ, ತಂದೆತಾಯಿಗಳಿಗೆ ಅವಿಧೇಯರೂ, ಉಪಕಾರ ನೆನಸದವರೂ, ದೇವಭಯವಿಲ್ಲದವರೂ, 3 §ರೋಮಾ. 1:31ಮಮತೆಯಿಲ್ಲದವರೂ, ಸಮಾಧಾನಹೊಂದದವರೂ, ಚಾಡಿಹೇಳುವವರೂ, ದಮೆಯಿಲ್ಲದವರೂ, ಕ್ರೂರರೂ, *ತೀತ 1:8ಒಳ್ಳೆಯದನ್ನು ದ್ವೇಷಿಸುವವರೂ, 4 ದ್ರೋಹಿಗಳೂ, ದುಡುಕುವವರೂ, †1 ತಿಮೊ 3:6; 6:4ದುರಹಂಕಾರವುಳ್ಳವರೂ, ‡ಫಿಲಿ 3:19ದೇವರನ್ನು ಪ್ರೀತಿಸುವುದಕ್ಕಿಂತ ಅಧಿಕವಾಗಿ ಭೋಗವನ್ನೇ ಪ್ರೀತಿಸುವವರೂ, 5 ಭಕ್ತಿಯ ವೇಷವಿದ್ದು ಅದರ ಬಲವನ್ನು ಬೇಡವೆನ್ನುವವರೂ ಆಗಿರುವರು. ಇಂಥವರ ಸಹವಾಸವನ್ನೂ ಮಾಡದಿರು. 6 ಅವರಲ್ಲಿ ಕೆಲವರು §ತೀತ 1:11ಮನೆಗಳಲ್ಲಿ ನುಸುಳಿ, ಪಾಪಗಳಿಂದ ತುಂಬಿದವರೂ, ನಾನಾ ವಿಧವಾದ ಆಸೆಗಳಿಂದ ಪ್ರೇರಿತರೂ ಆಗಿರುವ ಅವಿವೇಕಿಗಳಾದ ಸ್ತ್ರೀಯರನ್ನು ವಶಮಾಡಿಕೊಳ್ಳುವವರು ಆಗಿರುತ್ತಾರೆ. 7 ಆ ಸ್ತ್ರೀಯರು ಯಾವಾಗಲೂ ಉಪದೇಶ ಕೇಳುತ್ತಿದ್ದರೂ *1 ತಿಮೊ 2:4ಸತ್ಯದ ಪರಿಜ್ಞಾನವನ್ನು ಹೊಂದಲಾರದವರು. 8 †ವಿಮೋ 7:11ಯನ್ನ, ಯಂಬ್ರ ಎಂಬವರು ಮೋಶೆಯನ್ನು ವಿರೋಧಿಸಿದಂತೆಯೇ ಈ ಮನುಷ್ಯರು ಸಹ ಸತ್ಯಕ್ಕೆ ವಿರೋಧಿಗಳಾಗಿದ್ದು, ಬುದ್ಧಿಹೀನರೂ ನಂಬಿಕೆಯ ವಿಷಯದಲ್ಲಿ ನಿಷ್ಪ್ರಯೋಜಕರೂ ಆಗಿದ್ದಾರೆ. 9 ಆದರೆ ಅವರು ಹೆಚ್ಚು ಮುಂದುವರಿಯಲು ಸಾಧ್ಯವಿಲ್ಲ. ‡ವಿಮೋ 7:12; 8:18; 9:11ಆ ಯನ್ನ ಯಂಬ್ರರ ಮೂರ್ಖತನವು ಎಲ್ಲರಿಗೂ ಪ್ರಕಟವಾಗಿ ಬಂದ ಹಾಗೆಯೇ ಇವರದೂ ಪ್ರಕಟವಾಗುವುದು.
10 §ಫಿಲಿ 2:22ನೀನಾದರೋ ನನ್ನನ್ನು ಅನುಸರಿಸುವವನಾಗಿದ್ದು, ನನ್ನ ಬೋಧನೆ, ನಡತೆ, ಉದ್ದೇಶ, ನಂಬಿಕೆ, ದೀರ್ಘಶಾಂತಿ, ಪ್ರೀತಿ, ಸೈರಣೆ ಇವುಗಳನ್ನೂ, 11 *ಅ. ಕೃ 13:14; 45, 50ಅಂತಿಯೋಕ್ಯ, †ಅ. ಕೃ 14:1,2,5ಇಕೋನ್ಯ, ‡ಅ. ಕೃ 14:6,19ಲುಸ್ತ್ರ ಎಂಬ ಪಟ್ಟಣಗಳಲ್ಲಿ ನನಗೆ ಸಂಭವಿಸಿದ ಹಿಂಸೆಗಳನ್ನೂ, ಕಷ್ಟಾನುಭವಗಳನ್ನೂ ತಿಳಿದವನಾಗಿದ್ದೀ. ನಾನು ಎಂಥೆಂಥ ಹಿಂಸೆಗಳನ್ನು ಸಹಿಸಿಕೊಂಡೆನು, §ಕೀರ್ತ 34:19ಅವೆಲ್ಲವುಗಳೊಳಗಿನಿಂದ *2 ತಿಮೊ 4:17ಕರ್ತನು ನನ್ನನ್ನು ಬಿಡಿಸಿದನು. 12 †ಅ. ಕೃ 14:22ಕ್ರಿಸ್ತ ಯೇಸುವಿನಲ್ಲಿ ಸದ್ಭಕ್ತರಾಗಿ ಜೀವಿಸುವುದಕ್ಕೆ ಮನಸ್ಸು ಮಾಡುವವರೆಲ್ಲರೂ ಹಿಂಸೆಗೊಳಗಾಗುವರು. 13 ಆದರೆ ದುಷ್ಟರೂ, ವಂಚಕರೂ ಇತರರನ್ನು ಮೋಸಮಾಡುತ್ತಾ ತಾವೇ ಮೋಸಹೋಗುತ್ತಾ ‡ಪ್ರಕ 22:11ಹೆಚ್ಚಾದ ಕೆಟ್ಟತನಕ್ಕೆ ಹೋಗುವರು. 14 §2 ತಿಮೊ 1:13ನೀನಾದರೋ ಕಲಿತು ದೃಢವಾಗಿ ನಂಬಿದ ಬೋಧನೆಗಳಲ್ಲಿ ನೆಲೆಯಾಗಿರು. ಕಲಿಸಿಕೊಟ್ಟವರು ಯಾರೆಂಬುದನ್ನು ಆಲೋಚಿಸು. 15 *2 ತಿಮೊ 1:5ಚಿಕ್ಕಂದಿನಿಂದಲೂ ನಿನಗೆ †ಯೋಹಾ 5:39ಪರಿಶುದ್ಧ ಗ್ರಂಥಗಳ ಪರಿಚಯವಾಗಿದೆಯಲ್ಲಾ. ಆ ಗ್ರಂಥಗಳು ಕ್ರಿಸ್ತಯೇಸುವಿನಲ್ಲಿರುವ ನಂಬಿಕೆಯ ಮೂಲಕ ‡ಕೀರ್ತ 119:99ರಕ್ಷಣೆಹೊಂದುವ ಜ್ಞಾನವನ್ನು ನಿನಗೆ ಕೊಡುವುದಕ್ಕೆ ಶಕ್ತವಾಗಿವೆ. 16 ದೈವ ಪ್ರೇರಿತವಾದ §ರೋಮ 15:4; 2 ಪೇತ್ರ 1:20,21ಪ್ರತಿಯೊಂದು ಶಾಸ್ತ್ರವು ಉಪದೇಶಕ್ಕೂ, ಖಂಡನೆಗೂ, ತಿದ್ದುಪಡಿಗೂ, ನೀತಿಶಿಕ್ಷೆಗೂ ಉಪಯುಕ್ತವಾಗಿದೆ. 17 ಆದ್ದರಿಂದ *1 ತಿಮೊ 6:11ದೇವರ ಮನುಷ್ಯನು ಎಲ್ಲವನ್ನೂ ಬಲ್ಲವನಾಗಿದ್ದು ಸಕಲಸತ್ಕಾರ್ಯಗಳಿಗೆ ಸನ್ನದ್ಧನಾಗುವನು.
*3:1 1 ತಿಮೊ 4:1
†3:2 ಫಿಲಿ 2:21
‡3:2 ಲೂಕ 16:14; 1 ತಿಮೊ 6:10
§3:3 ರೋಮಾ. 1:31
*3:3 ತೀತ 1:8
†3:4 1 ತಿಮೊ 3:6; 6:4
‡3:4 ಫಿಲಿ 3:19
§3:6 ತೀತ 1:11
*3:7 1 ತಿಮೊ 2:4
†3:8 ವಿಮೋ 7:11
‡3:9 ವಿಮೋ 7:12; 8:18; 9:11
§3:10 ಫಿಲಿ 2:22
*3:11 ಅ. ಕೃ 13:14; 45, 50
†3:11 ಅ. ಕೃ 14:1,2,5
‡3:11 ಅ. ಕೃ 14:6,19
§3:11 ಕೀರ್ತ 34:19
*3:11 2 ತಿಮೊ 4:17
†3:12 ಅ. ಕೃ 14:22
‡3:13 ಪ್ರಕ 22:11
§3:14 2 ತಿಮೊ 1:13
*3:15 2 ತಿಮೊ 1:5
†3:15 ಯೋಹಾ 5:39
‡3:15 ಕೀರ್ತ 119:99
§3:16 ರೋಮ 15:4; 2 ಪೇತ್ರ 1:20,21
*3:17 1 ತಿಮೊ 6:11