4
ನಾನು ದೇವರ ಸಮಕ್ಷಮದಲ್ಲಿ ಮತ್ತು *ಅ. ಕೃ 10:42; 17:31; 24:25; ಯೋಹಾ 5:22, 27; 2 ಕೊರಿ 5:10; 1 ಪೇತ್ರ 4:5ಜೀವಿಸುವವರಿಗೂ ಸತ್ತವರಿಗೂ ನ್ಯಾಯತೀರಿಸುವುದಕ್ಕೆ ಬರುವ ಕ್ರಿಸ್ತ ಯೇಸುವಿನ ಪ್ರತ್ಯಕ್ಷತೆಯನ್ನೂ, ವ. 8; 2 ಥೆಸ. 2:8ಆತನ ರಾಜ್ಯವನ್ನೂ ಮುಂದಿಟ್ಟು ನಿನಗೆ ಖಂಡಿತವಾಗಿ ಹೇಳುವುದೇನಂದರೆ, ದೇವರ ವಾಕ್ಯವನ್ನು ಸಾರು, ಅನುಕೂಲವಾದ ಕಾಲದಲ್ಲಿಯೂ ಅನುಕೂಲವಿಲ್ಲದ ಕಾಲದಲ್ಲಿಯೂ ಅದರಲ್ಲಿ ಆಸಕ್ತನಾಗಿರು. ಪೂರ್ಣ ದೀರ್ಘಶಾಂತಿಯಿಂದ ಉಪದೇಶಿಸುತ್ತಾ 1 ತಿಮೊ 5:20; ತೀತ 1:13; 2:15ಖಂಡಿಸು, ಗದರಿಸು, ಎಚ್ಚರಿಸು. ಯಾಕೆಂದರೆ ಜನರು §1 ತಿಮೊ 1:10ಸ್ವಸ್ಥಬೋಧನೆಯನ್ನು ಒಪ್ಪಲಾರದ *2 ತಿಮೊ 3:1ಕಾಲವು ಬರುತ್ತದೆ. ಅದರಲ್ಲಿ ಅವರು ಕಿವಿಗೆ ಇಂಪಾಗುವ ಹಾಗೆ ತಮ್ಮ ದುರಾಶೆಗಳಿಗೆ ಅನುಕೂಲವಾದ ಉಪದೇಶಗಳನ್ನು ನೀಡುವ ಅನೇಕ ಉಪದೇಶಕರನ್ನು ಇಟ್ಟುಕೊಳ್ಳುವರು. ಅವರು ಸತ್ಯ ಬೋಧನೆಗೆ ಕಿವಿಗೊಡದೆ 1 ತಿಮೊ 1:4,6ಕಟ್ಟುಕಥೆಗಳನ್ನು ಕೇಳುವುದಕ್ಕೆ ಇಚ್ಛಿಸುವರು. ಆದರೆ ನೀನು ಎಲ್ಲಾ ವಿಷಯಗಳಲ್ಲಿಯೂ 1 ಪೇತ್ರ 1:13ಸ್ವಸ್ಥಚಿತ್ತನಾಗಿರು, §2 ತಿಮೊ 1:8; 2:3; 9ಹಿಂಸೆಯನ್ನು ತಾಳಿಕೋ, *ಅ. ಕೃ 21:8; ಎಫೆ 4:11ಸುವಾರ್ತಿಕನ ಕೆಲಸವನ್ನು ಮಾಡು, ನಿನಗೆ ನೇಮಿಸಿರುವ ಸೇವೆಯನ್ನು ಲೋಪವಿಲ್ಲದೆ ಮಾಡು. ಯಾಕೆಂದರೆ ನಾನಂತೂ ಫಿಲಿ 2:17ಈಗಲೇ ಪಾನದ್ರವ್ಯವಾಗಿ ಅರ್ಪಿತನಾಗುತ್ತಾ ಇದ್ದೇನೆ. ಫಿಲಿ 1:23ನನ್ನ ನಿರ್ಗಮನದ ಸಮಯವು ಸಮೀಪವಾಗುತ್ತಾ ಬಂದಿದೆ. §1 ತಿಮೊ 6:12ಶ್ರೇಷ್ಠ ಹೋರಾಟವನ್ನು ಮಾಡಿದ್ದೇನೆ, *ಅ ಕೃ 20:24ನನ್ನ ಓಟವನ್ನು ಓಡಿಮುಗಿಸಿದ್ದೇನೆ, ಕ್ರಿಸ್ತ ನಂಬಿಕೆಯನ್ನು ಕಾಪಾಡಿಕೊಂಡಿದ್ದೇನೆ. ಮೂಲ: ನೀತಿಯೆಂಬನೀತಿವಂತರಿಗೆ ದೊರಕುವ ಜಯಮಾಲೆಯು ಮುಂದೆ ನನಗಾಗಿ ಸಿದ್ಧವಾಗಿದೆ, ಅದನ್ನು ಕೀರ್ತ 7:11ನೀತಿವಂತನಾದ ನ್ಯಾಯಾಧಿಪತಿಯಾಗಿರುವ ಕರ್ತನು §2 ತಿಮೊ 1:12ಆ ದಿನದಲ್ಲಿ ನನಗೆ ಕೊಡುವನು, ನನಗೆ ಮಾತ್ರವಲ್ಲದೆ ತನ್ನ ಪ್ರತ್ಯಕ್ಷತೆಯನ್ನು ಪ್ರೀತಿಸುವವರೆಲ್ಲರಿಗೂ ಕೊಡುವನು.
ಪೌಲನ ವೈಯುಕ್ತಿಕ ಆದೇಶಗಳು
ನೀನು *2 ತಿಮೊ. 1:4ನನ್ನ ಬಳಿಗೆ ಬೇಗನೇ ಬರುವುದಕ್ಕೆ ಪ್ರಯತ್ನಪಡು, 10 ಯಾಕೆಂದರೆ ಕೊಲೊ 4:14; ಫಿಲಿ 24ದೇಮನು ಇಹಲೋಕವನ್ನು 1 ಯೋಹಾ 2:15ಪ್ರೀತಿಸಿ, §2 ತಿಮೊ 1:15ನನ್ನನ್ನು ಬಿಟ್ಟು ಥೆಸಲೋನಿಕಕ್ಕೆ ಹೋದನು. ಕ್ರೆಸ್ಕನು ಗಲಾತ್ಯಕ್ಕೂ *ತೀತ 3:12ತೀತನು ದಲ್ಮಾತ್ಯಕ್ಕೂ ಹೋದರು. 11 1 ತಿಮೊ 1:15ಲೂಕನು ಮಾತ್ರ ನನ್ನ ಜೊತೆಯಲ್ಲಿದ್ದಾನೆ. ಅ. ಕೃ 12:12ಮಾರ್ಕನನ್ನು ನಿನ್ನ ಸಂಗಡ ಕರೆದುಕೊಂಡು ಬಾ, ಅವನು ನನಗೆ ಸೇವೆಯಲ್ಲಿ ಉಪಯುಕ್ತನಾಗಿದ್ದಾನೆ. 12-13 §ಅ. ಕೃ 20:4; ಎಫೆ 6:21; ಕೊಲೊ 4:7; ತೀತ 3:12ತುಖಿಕನನ್ನು ಎಫೆಸಕ್ಕೆ ಕಳುಹಿಸಿದೆನು. ತ್ರೋವದಲ್ಲಿ ನಾನು ಕರ್ಪನ ಬಳಿಯಲ್ಲಿ ಬಿಟ್ಟು ಬಂದ ಮೇಲಂಗಿಯನ್ನೂ, ಪುಸ್ತಕಗಳನ್ನೂ, ಮುಖ್ಯವಾಗಿ ಚರ್ಮದ ಕಾಗದಗಳನ್ನೂ ನೀನು ಬರುವಾಗ ತೆಗೆದುಕೊಂಡು ಬಾ.
14 *1 ತಿಮೊ 1:20ಕಂಚುಗಾರನಾದ ಅಲೆಕ್ಸಾಂದ್ರನು ನನಗೆ ಬಹಳ ಕೇಡುಮಾಡಿದನು. ಕೀರ್ತ 62:12; ಜ್ಞಾ 24:12ಕರ್ತನು ಅವನ ಕೃತ್ಯಗಳಿಗೆ ತಕ್ಕ ಪ್ರತಿಫಲವನ್ನು ಅವನಿಗೆ ಕೊಡುವನು. 15 ನೀನು ಸಹ ಅವನ ವಿಷಯದಲ್ಲಿ ಎಚ್ಚರಿಕೆಯಾಗಿರು, ಅವನು ನಮ್ಮ ಮಾತುಗಳನ್ನು ಬಹಳವಾಗಿ ಎದುರಿಸಿದನು. 16 ನಾನು ಮೊದಲನೆ ಸಾರಿ ಪ್ರತಿವಾದ ಮಾಡಿದಾಗ ಯಾರೂ ನನ್ನ ಸಂಗಡ ಇರಲಿಲ್ಲ, ಎಲ್ಲರೂ ನನ್ನನ್ನು ಕೈಬಿಟ್ಟರು. ಅ. ಕೃ 7:60 ಇದು ಅವರಿಗೆ ದೋಷವಾಗಿ ಎಣಿಸಲ್ಪಡದೆ ಇರಲಿ. 17 §ಅ. ಕೃ 23:11; 27:23; ಮತ್ತಾ 10:19ಆದರೆ ಕರ್ತನು ನನ್ನ ಬಳಿಯಲ್ಲಿ ನಿಂತು ನನ್ನನ್ನು ಬಲಪಡಿಸಿ ನನ್ನ ಮೂಲಕ ಸುವಾರ್ತೆಯು ಸಂಪೂರ್ಣವಾಗಿ ಸಾರಲ್ಪಡುವಂತೆಯೂ, *ಅ. ಕೃ 9:15ಅನ್ಯ ಜನರೆಲ್ಲರೂ ಅದನ್ನು ಕೇಳುವಂತೆಯೂ ಮಾಡಿದನು. ಇದಲ್ಲದೆ ಆತನು ನನ್ನನ್ನು 1 ಪೇತ್ರ 5:8; ಕೀರ್ತ 22:21ಸಿಂಹದ ಬಾಯೊಳಗಿಂದ ತಪ್ಪಿಸಿದನು. 18 ಮತ್ತಾ 6:13ಪ್ರತಿಯೊಂದು ದುಷ್ಕೃತ್ಯದಿಂದ ಕರ್ತನು ನನ್ನನ್ನು ಕಾಪಾಡಿ ತನ್ನೊಂದಿಗೆ ಪರಲೋಕ ರಾಜ್ಯಕ್ಕೆ ಸೇರಿಸುವನು. §ರೋಮಾ 11:36ಯುಗಯುಗಾಂತರಗಳಲ್ಲಿಯೂ ಆತನಿಗೆ ಸ್ತೋತ್ರ. ಆಮೆನ್.
ಅಂತಿಮ ವಂದನೆಗಳು
19 *ಅ. ಕೃ. 18:2ಪ್ರಿಸ್ಕಿಲ್ಲಳಿಗೂ, ಅಕ್ವಿಲ್ಲನಿಗೂ, 2 ತಿಮೊ 1:16ಒನೇಸಿಪೊರನ ಮನೆಯವರಿಗೂ ವಂದನೆಹೇಳು. 20 ಅ. ಕೃ. 19:22; ರೋಮಾ 16:23 ಎರಸ್ತನು ಕೊರಿಂಥದಲ್ಲಿ ನಿಂತನು. §ಅ. ಕೃ 20:4; 21:29ತ್ರೊಫಿಮನು ಅಸ್ವಸ್ಥನಾಗಿದ್ದುದರಿಂದ ಅವನನ್ನು ಮಿಲೇತದಲ್ಲಿ ಬಿಟ್ಟೆನು. 21 *ವ. 9ಚಳಿಗಾಲಕ್ಕೆ ಮುಂಚೆಯೇ ಬರುವುದಕ್ಕೆ ಪ್ರಯತ್ನಿಸು. ಯುಬೂಲನು, ಪೊದೆಯನೂ, ಲೀನನೂ, ಕ್ಲೌದ್ಯಳೂ ಉಳಿದ ಸಹೋದರರೆಲ್ಲರೂ ನಿನಗೆ ವಂದನೆ ಹೇಳುತ್ತಾರೆ.
22 ಕರ್ತನು ಗಲಾ 6:18; ಫಿಲಿ 25ನಿನ್ನ ಆತ್ಮದೊಂದಿಗೆ ಇರಲಿ. ಆತನ ಕೊಲೊ 4:18ಕೃಪೆಯು ನಿಮ್ಮೊಂದಿಗಿರಲಿ.

*4:1 ಅ. ಕೃ 10:42; 17:31; 24:25; ಯೋಹಾ 5:22, 27; 2 ಕೊರಿ 5:10; 1 ಪೇತ್ರ 4:5

4:1 ವ. 8; 2 ಥೆಸ. 2:8

4:2 1 ತಿಮೊ 5:20; ತೀತ 1:13; 2:15

§4:3 1 ತಿಮೊ 1:10

*4:3 2 ತಿಮೊ 3:1

4:4 1 ತಿಮೊ 1:4,6

4:5 1 ಪೇತ್ರ 1:13

§4:5 2 ತಿಮೊ 1:8; 2:3; 9

*4:5 ಅ. ಕೃ 21:8; ಎಫೆ 4:11

4:6 ಫಿಲಿ 2:17

4:6 ಫಿಲಿ 1:23

§4:7 1 ತಿಮೊ 6:12

*4:7 ಅ ಕೃ 20:24

4:8 ಮೂಲ: ನೀತಿಯೆಂಬ

4:8 ಕೀರ್ತ 7:11

§4:8 2 ತಿಮೊ 1:12

*4:9 2 ತಿಮೊ. 1:4

4:10 ಕೊಲೊ 4:14; ಫಿಲಿ 24

4:10 1 ಯೋಹಾ 2:15

§4:10 2 ತಿಮೊ 1:15

*4:10 ತೀತ 3:12

4:11 1 ತಿಮೊ 1:15

4:11 ಅ. ಕೃ 12:12

§4:12-13 ಅ. ಕೃ 20:4; ಎಫೆ 6:21; ಕೊಲೊ 4:7; ತೀತ 3:12

*4:14 1 ತಿಮೊ 1:20

4:14 ಕೀರ್ತ 62:12; ಜ್ಞಾ 24:12

4:16 ಅ. ಕೃ 7:60

§4:17 ಅ. ಕೃ 23:11; 27:23; ಮತ್ತಾ 10:19

*4:17 ಅ. ಕೃ 9:15

4:17 1 ಪೇತ್ರ 5:8; ಕೀರ್ತ 22:21

4:18 ಮತ್ತಾ 6:13

§4:18 ರೋಮಾ 11:36

*4:19 ಅ. ಕೃ. 18:2

4:19 2 ತಿಮೊ 1:16

4:20 ಅ. ಕೃ. 19:22; ರೋಮಾ 16:23

§4:20 ಅ. ಕೃ 20:4; 21:29

*4:21 ವ. 9

4:22 ಗಲಾ 6:18; ಫಿಲಿ 25

4:22 ಕೊಲೊ 4:18