4
*ಯೆಹೆ. 1:ಸ್ವರ್ಗೀಯ ಆರಾಧನೆ
1 ಆನಂತರ ನಾನು ನೋಡಿದಾಗ, ಪರಲೋಕದಲ್ಲಿ ತೆರೆದಿರುವ ಒಂದು ಬಾಗಿಲು ಕಾಣಿಸಿತು. ಮೊದಲು ನನ್ನೊಡನೆ ಮಾತನಾಡಿದ ವಾಣಿಯು †ಪ್ರಕ 1:10; ವಿಮೋ 19:19, 20:ತುತ್ತೂರಿಯಂತೆ ಮಾತನಾಡುತ್ತದೋ ಎಂಬಂತೆ ನನಗೆ ಕೇಳಿಸಿತು. ಅದು, ‡ಪ್ರಕ 11:12:“ಇಲ್ಲಿಗೆ ಏರಿ ಬಾ,§ಪ್ರಕ 1:1, 19; 22:6:ಮುಂದೆ ಸಂಭವಿಸಬೇಕಾದವುಗಳನ್ನು ನಿನಗೆ ತೋರಿಸಿ ಕೊಡುವೆನು” ಎಂದು ಹೇಳಿತು. 2 ಕೂಡಲೆ ನಾನು *ಪ್ರಕ 1:10:ದೇವರಾತ್ಮವಶನಾದೆನು, ಆಗ ಇಗೋ ಪರಲೋಕದಲ್ಲಿ †ಕೀರ್ತ 11:14, 103, 19; ಯೆಶಾ 66:1; ಮತ್ತಾ 5:34; 23:22:ಒಂದು ಸಿಂಹಾಸನವಿತ್ತು. ಸಿಂಹಾಸನದ ಮೇಲೆ ಒಬ್ಬನು ಕುಳಿತಿದ್ದನು. 3 ಕುಳಿತಿದ್ದವನು ಕಣ್ಣಿಗೆ ‡ಅಥವಾ, ವಜ್ರ. ಪ್ರಕ 21:11:ಸೂರ್ಯಕಾಂತಿ ಪದ್ಮರಾಗ ಮಣಿಗಳಂತೆ ಕಾಣುತ್ತಿದ್ದನು. ಸಿಂಹಾಸನದ ಸುತ್ತಲೂ ಪಚ್ಚೆಯಂತೆ ತೋರುತ್ತಿದ್ದ §ಯೆಹೆ. 1:27, 28; ಪ್ರಕ 10:1; ಆದಿ 9:13-17.ಕಾಮನಬಿಲ್ಲು ಇತ್ತು. 4 ಇದಲ್ಲದೆ ಸಿಂಹಾಸನದ ಸುತ್ತಲೂ *ಪ್ರಕ 11:16:ಇಪ್ಪತ್ನಾಲ್ಕು ಸಿಂಹಾಸನಗಳಿದ್ದವು. ಆ ಸಿಂಹಾಸನಗಳ ಮೇಲೆ †ಪ್ರಕ 3:4:ಶುಭ್ರವಸ್ತ್ರ ಧರಿಸಿಕೊಂಡಿದ್ದ ‡1ಪೂರ್ವ 24:1-18; ಪ್ರಕ 5:8:ಇಪ್ಪತ್ನಾಲ್ಕು ಮಂದಿ ಹಿರಿಯರು ಕುಳಿತಿದ್ದರು. §ವ. 10; ಯಾಕೋಬ. 1:12:ಅವರ ತಲೆಗಳ ಮೇಲೆ ಚಿನ್ನದ ಕಿರೀಟಗಳಿದ್ದವು. 5 ಸಿಂಹಾಸನದಿಂದ *ಪ್ರಕ 8:5,11,19; 16:18. ವಿಮೋ 19:16:ಮಿಂಚು, ಗುಡುಗು, ಗರ್ಜನೆಗಳು ಹೊರ ಹೊಮ್ಮುತ್ತಿದ್ದವು. ಆ ಸಿಂಹಾಸನ ಮುಂದೆ †ಪ್ರಕ 1:4:ದೇವರ ಏಳು ಆತ್ಮಗಳನ್ನು ಸೂಚಿಸುವ ‡ಜೆಕ. 4:2:ಏಳು ದೀಪಗಳು ಉರಿಯುತ್ತಿದ್ದವು. 6 ಇದಲ್ಲದೆ ಸಿಂಹಾಸನದ ಮುಂದೆ ಸ್ಫಟಿಕಕ್ಕೆ ಸಮಾನವಾದ §ಪ್ರಕ 15:2; 1 ಅರಸು. 7:23, 39:ಗಾಜಿನ ಸಮುದ್ರವಿದ್ದ ಹಾಗೆ ಕಾಣಿಸಿತು. ಸಿಂಹಾಸನದ ಮಧ್ಯದಲ್ಲಿ ಅದರ ನಾಲ್ಕು ಕಡೆಗಳಲ್ಲಿ *ಯೆಹೆ. 1:5-14,18; 10:12:ನಾಲ್ಕು ಜೀವಿಗಳಿದ್ದವು. ಅವುಗಳಿಗೆ ಹಿಂದೆಯೂ ಮುಂದೆಯೂ ತುಂಬಾ ಕಣ್ಣುಗಳಿದ್ದವು. 7 ಮೊದಲನೆಯ ಜೀವಿಯು ಸಿಂಹದಂತಿತ್ತು, ಎರಡನೆಯ ಜೀವಿಯು ಹೋರಿಯಂತಿತ್ತು, ಮೂರನೆಯ ಜೀವಿಯ ಮುಖವು ಮನುಷ್ಯನ ಮುಖದಂತಿತ್ತು, ನಾಲ್ಕನೆಯ ಜೀವಿಯು ಹಾರುವ ಹದ್ದಿನಂತಿತ್ತು. 8 ಆ ನಾಲ್ಕು ಜೀವಿಗಳಿಗೆ †ಯೆಶಾ 6:2:ಒಂದೊಂದಕ್ಕೆ ಆರಾರು ರೆಕ್ಕೆಗಳಿದ್ದವು. ‡ವ. 6:ಸುತ್ತಲೂ ಒಳಗೂ ತುಂಬಾ ಕಣ್ಣುಗಳಿದ್ದವು. ಆ ಜೀವಿಗಳು ಹಗಲಿರುಳು ವಿಶ್ರಮಿಸಿಕೊಳ್ಳದೆ,
§ಯೆಶಾ 6:3:“ದೇವರಾದ ಕರ್ತನು ಪರಿಶುದ್ಧನು, ಪರಿಶುದ್ಧನು, ಪರಿಶುದ್ಧನು, ಆತನು ಸರ್ವಶಕ್ತನು,
*ಪ್ರಕ 1:4:ಇರುವಾತನು, ಇದ್ದಾತನು, ಬರುವಾತನು” ಎಂದು ಹೇಳುತ್ತಿದ್ದವು.
9 ಯುಗಯುಗಾಂತರಗಳಲ್ಲಿಯೂ ಜೀವಿಸುವವನಾಗಿ ಸಿಂಹಾಸನದ ಮೇಲೆ ಕುಳಿತಿರುವಾತನಿಗೆ ಆ ಜೀವಿಗಳು ಮಹಿಮೆ ಗೌರವ ಕೃತಜ್ಞತಾಸ್ತುತಿಗಳನ್ನು ಸಲ್ಲಿಸುತ್ತಿರುವಾಗ, 10-11 ಆ ಇಪ್ಪತ್ನಾಲ್ಕು ಮಂದಿ ಹಿರಿಯರು ಸಿಂಹಾಸನದ ಮೇಲೆ ಕುಳಿತಾತನ ಪಾದಕ್ಕೆ †ಪ್ರಕ 5:8, 14; 7:11; 11:16; 19:4:ಅಡ್ಡಬಿದ್ದು, ತಮ್ಮ ಕಿರೀಟಗಳನ್ನು ಸಿಂಹಾಸನದ ಮುಂದೆ ಹಾಕಿ, “ಕರ್ತನೇ ನಮ್ಮ ದೇವರೇ ‡ಪ್ರಕ 5:12:ನೀನು ಮಹಿಮೆಯನ್ನು, ಗೌರವವನ್ನು, ಬಲವನ್ನು ಹೊಂದುವುದಕ್ಕೆ ಯೋಗ್ಯನಾಗಿದ್ದೀ, §ಪ್ರಕ 10:6; 14:7; ಆದಿ 1:1; ಅ. ಕೃ. 14:15; ಎಫೆ 3:9: ಏಕೆಂದರೆ ಸಮಸ್ತವನ್ನು ಸೃಷ್ಟಿಸಿದಾತನು ನೀನೇ. *ಕೀರ್ತ 33:9-11:ಎಲ್ಲವೂ ನಿನ್ನ ಚಿತ್ತದಿಂದಲೇ ಇದ್ದವು ಮತ್ತು ನಿನ್ನ ಚಿತ್ತದಿಂದಲೇ ನಿರ್ಮಿತವಾದವು” ಎಂದು ಹೇಳುತ್ತಾ ಯುಗಯುಗಾಂತರಗಳಲ್ಲಿಯೂ ಜೀವಿಸುವಾತನನ್ನು ಆರಾಧಿಸುತ್ತಿದ್ದರು.
*^ ಯೆಹೆ. 1:
†4:1 ಪ್ರಕ 1:10; ವಿಮೋ 19:19, 20:
‡4:1 ಪ್ರಕ 11:12:
§4:1 ಪ್ರಕ 1:1, 19; 22:6:
*4:2 ಪ್ರಕ 1:10:
†4:2 ಕೀರ್ತ 11:14, 103, 19; ಯೆಶಾ 66:1; ಮತ್ತಾ 5:34; 23:22:
‡4:3 ಅಥವಾ, ವಜ್ರ. ಪ್ರಕ 21:11:
§4:3 ಯೆಹೆ. 1:27, 28; ಪ್ರಕ 10:1; ಆದಿ 9:13-17.
*4:4 ಪ್ರಕ 11:16:
†4:4 ಪ್ರಕ 3:4:
‡4:4 1ಪೂರ್ವ 24:1-18; ಪ್ರಕ 5:8:
§4:4 ವ. 10; ಯಾಕೋಬ. 1:12:
*4:5 ಪ್ರಕ 8:5,11,19; 16:18. ವಿಮೋ 19:16:
†4:5 ಪ್ರಕ 1:4:
‡4:5 ಜೆಕ. 4:2:
§4:6 ಪ್ರಕ 15:2; 1 ಅರಸು. 7:23, 39:
*4:6 ಯೆಹೆ. 1:5-14,18; 10:12:
†4:8 ಯೆಶಾ 6:2:
‡4:8 ವ. 6:
§4:8 ಯೆಶಾ 6:3:
*4:8 ಪ್ರಕ 1:4:
†4:10-11 ಪ್ರಕ 5:8, 14; 7:11; 11:16; 19:4:
‡4:10-11 ಪ್ರಕ 5:12:
§4:10-11 ಪ್ರಕ 10:6; 14:7; ಆದಿ 1:1; ಅ. ಕೃ. 14:15; ಎಫೆ 3:9:
*4:10-11 ಕೀರ್ತ 33:9-11: