5
ಸುರುಳಿಯೂ ಕುರಿಮರಿಯೂ
ನಾನು*ಯೆಹೆ. 2:9, 10: ಸಿಂಹಾಸನದ ಮೇಲೆ ಕುಳಿತಿದ್ದಾತನ ಬಲಗೈಯಲ್ಲಿ ಒಂದು ಪುಸ್ತಕಸುರುಳಿಯನ್ನು ಕಂಡೆನು. ಅದರ ಒಳಭಾಗದಲ್ಲಿಯೂ ಮತ್ತು ಹೊರಭಾಗದಲ್ಲಿಯೂ ಬರೆಯಲ್ಪಟ್ಟಿತ್ತು. ಯೆಶಾ 29:11; ದಾನಿ. 12:4:ಅದು ಏಳು ಮುದ್ರೆಗಳಿಂದ ಮುದ್ರಿತವಾಗಿತ್ತು. ಇದಲ್ಲದೆ §ಪ್ರಕ 10:1; 18:21:ಬಲಿಷ್ಠನಾದ ಒಬ್ಬ ದೇವದೂತನು “ಈ ಸುರುಳಿಯನ್ನು ಬಿಚ್ಚುವುದಕ್ಕೂ ಇದರ ಮುದ್ರೆಗಳನ್ನು ಒಡೆಯುವುದಕ್ಕೂ ಯಾವನು ಯೋಗ್ಯನು?” ಎಂದು ಮಹಾಶಬ್ದದಿಂದ ಕೂಗುವುದನ್ನು ಕಂಡೆನು. ಆದರೆ ಆ ಸುರುಳಿಯನ್ನು ತೆರೆಯುವುದಕ್ಕಾದರೂ ಅದರೊಳಗೆ ನೋಡುವುದಕ್ಕಾದರೂ ಪರಲೋಕದಲ್ಲಿಯಾಗಲಿ, ಭೂಮಿಯಲ್ಲಿಯಾಗಲಿ, ಭೂಮಿಯ ಕೆಳಗಾಗಲಿ ಯಾರಿಂದಲೂ ಆಗಲಿಲ್ಲ. ಸುರುಳಿಯನ್ನು ತೆರೆಯುವುದಕ್ಕಾಗಲಿ ಅದನ್ನು ನೋಡುವುದಕ್ಕಾಗಲಿ ಯೋಗ್ಯನಾದವನು ಒಬ್ಬನೂ ಸಿಕ್ಕಲಿಲ್ಲವೆಂದು ನಾನು ಬಹಳವಾಗಿ ದುಃಖಿಸುತ್ತಿರುವಾಗ. ಹಿರಿಯರಲ್ಲಿ ಒಬ್ಬನು ನನಗೆ, “ಅಳಬೇಡ ನೋಡು, *ಇಬ್ರಿ. 7:14:ಯೂದ ಕುಲದಲ್ಲಿ ಜನಿಸಿದ ಅಥವಾ, ಸಿಂಹಪ್ರಾಯನೂ; ಆದಿ 49:9:ಸಿಂಹವೂ ಯೆಶಾ 11:1, 10; ರೋಮಾ. 15:12; ಪ್ರಕ 22:16:ದಾವೀದನ ವಂಶಜನೂ ಆಗಿರುವ ಒಬ್ಬನು, ಆ ಸುರುಳಿಯನ್ನು ಅದರ ಏಳು ಮುದ್ರೆಗಳನ್ನೂ ತೆರೆಯುವುದಕ್ಕೆ ಜಯವೀರನಾಗಿದ್ದಾನೆ” ಎಂದು ಹೇಳಿದನು.
ಸಿಂಹಾಸನವು, ನಾಲ್ಕು ಜೀವಿಗಳೂ ಇದ್ದ ಸ್ಥಳಕ್ಕೂ ಮತ್ತು ಹಿರಿಯರು ಇದ್ದ ಸ್ಥಳಕ್ಕೂ ಮಧ್ಯದಲ್ಲಿ §ಎಲ್ಲಾ ಸ್ಥಳಗಳಲ್ಲಿಯೂ ಹಾಗೆಯೇ; ಯೆಶಾ 53:7; ಯೋಹಾ 1:29, 36; 1 ಪೇತ್ರ. 1:19. ಪ್ರಕ 5:9, 12; 13:8:ಒಂದು ಕುರಿಮರಿಯು ವಧಿಸಲ್ಪಟಂತೆ ನಿಂತಿರುವುದನ್ನು ಕಂಡೆನು. ಅದಕ್ಕೆ ಏಳು ಕೊಂಬುಗಳೂ *ಜೆಕ. 3:9; 4:10:ಏಳು ಕಣ್ಣುಗಳೂ ಇದ್ದವು. ಅವು ಏನೆಂದರೆ ಭೂಮಿಯ ಮೇಲೆಲ್ಲಾ ಕಳುಹಿಸಲ್ಪಟ್ಟಿರುವ ದೇವರ ಏಳು ಆತ್ಮಗಳೇ. ಈತನು ಮುಂದೆ ಬಂದು ಸಿಂಹಾಸನದ ಮೇಲೆ ಕುಳಿತಿದ್ದಾತನ ಬಲಗೈಯೊಳಗಿಂದ ಆ ಸುರುಳಿಯನ್ನು ತೆಗೆದುಕೊಂಡನು. ಅದನ್ನು ತೆಗೆದುಕೊಂಡಾಗ ಆ ನಾಲ್ಕು ಜೀವಿಗಳೂ ಇಪ್ಪತ್ನಾಲ್ಕು ಮಂದಿ ಹಿರಿಯರೂ ಕುರಿಮರಿಯಾದಾತನ ಪಾದಕ್ಕೆ ಅಡ್ಡ ಪ್ರಕ 4:10:ಬಿದ್ದರು. ಹಿರಿಯರ ಕೈಗಳಲ್ಲಿ ಪ್ರಕ 14:2; 15:2:ವೀಣೆಗಳೂ §ಕೀರ್ತ 141:2; ಪ್ರಕ 8:3, 4:ದೇವಜನರ ಪ್ರಾರ್ಥನೆಗಳೆಂಬ ಧೂಪದಿಂದ ತುಂಬಿದ್ದ *ಪ್ರಕ 15:7:ಚಿನ್ನದ ಧೂಪಾರತಿಗಳೂ ಇದ್ದವು. ಅವರು ಕೀರ್ತ 40. 3; 96:1; ಯೆಶಾ 42:10; ಪ್ರಕ 14:3:ಹೊಸಹಾಡನ್ನು ಹಾಡುತ್ತಾ,
“ನೀನು ಸುರುಳಿಯನ್ನು ಸ್ವೀಕರಿಸಲು
ಅದರ ಮುದ್ರೆಯನ್ನು ಒಡೆಯಲು ನೀನು ಅರ್ಹನಾಗಿದ್ದಿ.
ನೀನು ವಧಿಸಲ್ಪಟ್ಟು, ವ. 6:ಯಜ್ಞಾರ್ಪಿತನಾಗಿ ನಿನ್ನ ರಕ್ತದಿಂದ
§ಪ್ರಕ 7:9; 11:9; 14:6; ದಾನಿ. 3:4:ಸಕಲ ಕುಲ, ಭಾಷೆ, ಜನ, ಜನಾಂಗಗಳನ್ನು *ಪ್ರಕ 14:3, 4; 2 ಪೇತ್ರ. 2:1:ದೇವರಿಗಾಗಿ ಕೊಂಡುಕೊಂಡಿರುವೆ.
10 ಅವರನ್ನು ನಮ್ಮ ದೇವರಿಗೋಸ್ಕರ ರಾಜ್ಯವನ್ನಾಗಿಯೂ, ವಿಮೋ 19:6; ಪ್ರಕ 1:6:ಯಾಜಕರನ್ನಾಗಿಯೂ ಮಾಡಿರುವೆ.
ಅವರು ಭೂಮಿಯನ್ನು ಆಳುವರು.”
11 ಇದಲ್ಲದೆ ನಾನು ನೋಡಲಾಗಿ ಸಿಂಹಾಸನದ, ಜೀವಿಗಳ ಹಾಗೂ ಹಿರಿಯರ ಸುತ್ತಲೂ ಬಹುಮಂದಿ ದೇವದೂತರ ಧ್ವನಿಯನ್ನು ಕೇಳಿದೆನು. ದಾನಿ. 7:19; ಇಬ್ರಿ. 12:22:ಅವರ ಸಂಖ್ಯೆಯು ಲಕ್ಷೋಪಲಕ್ಷವಾಗಿಯೂ ಕೋಟ್ಯಾನುಕೋಟಿಯಾಗಿಯೂ ಇತ್ತು. 12 ಅವರು
“ವಧಿಸಲ್ಪಟ್ಟ ಕುರಿಮರಿಯು
§ಪ್ರಕ 4:11:ಬಲ, ಐಶ್ವರ್ಯ, ಜ್ಞಾನ, ಸಾಮರ್ಥ್ಯ,
ಘನತೆ, ಮಹಿಮೆ ಸ್ತೋತ್ರಗಳನ್ನು ಹೊಂದುವುದಕ್ಕೆ ಯೋಗ್ಯನು”
ಎಂದು ಮಹಾಧ್ವನಿಯಿಂದ ಹಾಡಿದರು.
13 ಇದಲ್ಲದೆ *ಕೀರ್ತ 145:21; 150. 6:ಆಕಾಶದಲ್ಲಿಯೂ, ಭೂಮಿಯ ಮೇಲೆಯೂ, ಭೂಮಿಯ ಕೆಳಗಡೆಯೂ, ಸಮುದ್ರದಲ್ಲಿಯೂ ಇರುವ ಎಲ್ಲಾ ಸೃಷ್ಟಿಗಳೂ ಅಂದರೆ ಭೂಮ್ಯಾಕಾಶ ಸಮುದ್ರಗಳೊಳಗೆ ಇರುವುದೆಲ್ಲವೂ,
“ಸಿಂಹಾಸನದ ಮೇಲೆ ಕುಳಿತಿದ್ದಾತನಿಗೂ ಕುರಿಮರಿಯಾದಾತನಿಗೂ
ಸ್ತೋತ್ರ, ಗೌರವ, ಮಹಿಮೆ, ಅಧಿಪತ್ಯಗಳು
ಯುಗಯುಗಾಂತರಗಳಲ್ಲಿಯೂ ಇರಲಿ”
ಎಂದು ಹೇಳುವುದನ್ನು ಕೇಳಿದೆನು. 14 ಆಗ ನಾಲ್ಕು ಜೀವಿಗಳು ಪ್ರಕ 7:12; 19:4:“ಆಮೆನ್” ಅಂದವು ಮತ್ತು ವ. 8; ಪ್ರಕ 4:10:ಹಿರಿಯರು ಅಡ್ಡಬಿದ್ದು ಆರಾಧಿಸಿದರು.

*5:1 ಯೆಹೆ. 2:9, 10:

5:1 ಪುಸ್ತಕ

5:1 ಯೆಶಾ 29:11; ದಾನಿ. 12:4:

§5:2 ಪ್ರಕ 10:1; 18:21:

*5:5 ಇಬ್ರಿ. 7:14:

5:5 ಅಥವಾ, ಸಿಂಹಪ್ರಾಯನೂ; ಆದಿ 49:9:

5:5 ಯೆಶಾ 11:1, 10; ರೋಮಾ. 15:12; ಪ್ರಕ 22:16:

§5:6 ಎಲ್ಲಾ ಸ್ಥಳಗಳಲ್ಲಿಯೂ ಹಾಗೆಯೇ; ಯೆಶಾ 53:7; ಯೋಹಾ 1:29, 36; 1 ಪೇತ್ರ. 1:19. ಪ್ರಕ 5:9, 12; 13:8:

*5:6 ಜೆಕ. 3:9; 4:10:

5:8 ಪ್ರಕ 4:10:

5:8 ಪ್ರಕ 14:2; 15:2:

§5:8 ಕೀರ್ತ 141:2; ಪ್ರಕ 8:3, 4:

*5:8 ಪ್ರಕ 15:7:

5:9 ಕೀರ್ತ 40. 3; 96:1; ಯೆಶಾ 42:10; ಪ್ರಕ 14:3:

5:9 ವ. 6:

§5:9 ಪ್ರಕ 7:9; 11:9; 14:6; ದಾನಿ. 3:4:

*5:9 ಪ್ರಕ 14:3, 4; 2 ಪೇತ್ರ. 2:1:

5:10 ವಿಮೋ 19:6; ಪ್ರಕ 1:6:

5:11 ದಾನಿ. 7:19; ಇಬ್ರಿ. 12:22:

§5:12 ಪ್ರಕ 4:11:

*5:13 ಕೀರ್ತ 145:21; 150. 6:

5:14 ಪ್ರಕ 7:12; 19:4:

5:14 ವ. 8; ಪ್ರಕ 4:10: